Breakinglock downMoreScrollTop NewsUncategorizedಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

ಕುಮಾರಕೃಪ ಗೆಸ್ಟ್ ಹೌಸ್ ನಲ್ಲಿ KSTDC ಅಧಿಕಾರಿಯ ಭರ್ಜರಿ “ಹೋಮಹವನ”…ದೇವರಾಜ್ “ದರ್ಬಾರ್” ಗೆ ವ್ಯಾಪಕ ಆಕ್ರೋಶ…

ಕುಟುಂಬದ ಸಮೇತ ಸಿಬ್ಬಂದಿ ಜತೆಗೆ ಹೋಮ-ಹವನದಲ್ಲಿ ಪಾಲ್ಗೊಂಡಿರುವ ಕುಮಾರಕೃಷ ಗೆಸ್ಟ್ ಹೌಸ್ ಅಧಿಕಾರಿ ದೇವರಾಜ್
ಕುಟುಂಬದ ಸಮೇತ ಸಿಬ್ಬಂದಿ ಜತೆಗೆ ಹೋಮ-ಹವನದಲ್ಲಿ ಪಾಲ್ಗೊಂಡಿರುವ ಕುಮಾರಕೃಷ ಗೆಸ್ಟ್ ಹೌಸ್ ಅಧಿಕಾರಿ ದೇವರಾಜ್

ಬೆಂಗಳೂರು:ನಮ್ಮದು ಜಾತ್ಯಾತೀತ ದೇಶ..ಇಲ್ಲಿ ಎಲ್ಲಾ ಧರ್ಮ-ಜಾತಿ-ಕೋಮುಗಳ ನಡುವೆ ಸಾಮರಸ್ಯ-ಸಮನ್ವಯ-ಸೌಹಾರ್ದತೆ ನೆಲೆಯೂರಿದೆ.ಅದನ್ನೇ ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ.ಆದರೆ ಬಹುತೇಕ ಸರ್ಕಾರಿ ಕಚೇರಿಗಳು ಆ ನಿಯಮವನ್ನೇ ಪಾಲಿಸುತ್ತಿಲ್ಲ.ಪೂಜೆ-ಹೋಮ-ಹವನವನ್ನು ರಾಜಾರೋಷವಾಗಿ ನಡೆಸುವ ಮೂಲಕ ಸರ್ಕಾರಕ್ಕೂ ಮುಜುಗರ ತರಿಸುತ್ತಿವೆ.. ಹಾಗೆಯೇ ಜಾತಿ-ಧರ್ಮಗಳ ನಡುವೆ ದ್ವೇಷದ ಭಾವನೆ ಬಿತ್ತೊಕ್ಕೆ ಕಾರಣವಾಗ್ತಿದೆ.ಗಣೇಶ ಹಬ್ಬದ ಸಂದರ್ಭದಲ್ಲಿ ಆಗಿರುವುದು ಇದೇ..

ಸರ್ಕಾರದ ಕುಮಾರಕೃಪ ಗೆಸ್ಟ್ ಹೌಸ್ ನಲ್ಲಿ ಅಲ್ಲಿನ ಅಧಿಕಾರಿಯೋರ್ವ ತಮ್ಮ ಕುಟುಂಬದ ಸಮೇತ ಹೋಮ ಹವನ ನಡೆಸುವ ಮೂಲಕ ಜಾತ್ಯಾತೀತ ಪರಿಕಲ್ಪನೆಗೆ ಧಕ್ಕೆ ತರುವ ಕೆಲಸ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.ಅಂದ್ಹಾಗೆ ಕುಮಾರಕೃಪ ಗೆಸ್ಟ್ ಹೌಸ್ ಗೆ ಅದರದೇ ಆದ ಮಹತ್ವ-ವಿಶೇಷತೆಗಳಿವೆ.

ಯಾರೇ ವಿಶೇಷ ಆಹ್ವಾನಿತರು ಬಂದರೂ ಅವರಿಗೆ ವಾಸ್ತವ್ಯ ಕಲ್ಪಿಸುವುದು ಇದೇ ಅತಿಥಿ ಗೃಹದಲ್ಲಿ.ಎಲ್ಲಾ ಜಾತಿ-ಸಮುದಾಯಗಳ ಗಣ್ಯರು ಅತಿಥಿಗಳಾಗಿ ಬಂದು ಇಲ್ಲಿನ ಆತಿಥ್ಯಕ್ಕೆ ಫಿದಾ ಆಗಿರುತ್ತಾರೆ.ಪರಿಸ್ಥಿತಿ ಹೀಗಿರುವಲ್ಲಿ ಇಂಥಾ ಅತಿಥಿಗೃಹದಲ್ಲಿ ಅಲ್ಲಿನ ಅಧಿಕಾರಿ ದೇವರಾಜ್ ಎನ್ನುವವರು ಗಣೇಶ ಹಬ್ಬದ ದಿನವಾದ ಇಂದು ಹೋಮಹವನ ನಡೆಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.ಇದೇ ಇಲಾಖೆಯಲ್ಲಿ ಕೆಲಸ ಮಾಡುವ ಇತರೆ ಧರ್ಮೀಯ ಸಿಬ್ಬಂದಿ ವಲಯದಲ್ಲಿ ಆಕ್ರೋಶ ಮೂಡೊಕ್ಕೆ ಕಾರಣವಾಗಿದ್ದಾರೆ.

ಜಾತ್ಯಾತೀತ ಪರಿಕಲ್ಪನೆಯ ನಮ್ಮ ದೇಶದ ಸಂಸ್ಕ್ರತಿಯನ್ನು ಸಂವಿಧಾನ ಗೌರವಿಸುತ್ತೆ.ಆದ್ರೆ ಕೆಲವೊಂದು ಕಾರಣಗಳಿಂದ ಕೆಲವಕ್ಕೆ ಮಿತಿ-ನಿರ್ಭಂಧ ಹೇರುವ ಕೆಲಸವನ್ನು ಮಾಡಿದೆ.ಸರ್ಕಾರಿ ಕಚೇರಿಗಳಲ್ಲಿ ಎಲ್ಲಾ ಧರ್ಮದವರು ಕೆಲಸ ಮಾಡುತ್ತಾರೆ..ವಿವಿಧ ಉದ್ದೇಶಗಳಿಗೆ ಸಾವಿರಾರು ಜನ ಬಂದು ಹೋಗುತ್ತಾರೆ.

ಎಲ್ಲಾ ಧರ್ಮಗಳನ್ನು ಒಂದೇ ದೃಷ್ಟಿಯಲ್ಲಿ ನೋಡಬೇಕಾದ ಕಾರಣಕ್ಕೆ ಯಾವುದೇ ಆಚರಣೆಗಳಿಗೂ ಅವಕಾಶ ನೀಡಬಾರದೆನ್ನುವ ಮಾತನ್ನು ಉಲ್ಲೇಖಿಸುತ್ತೆ.ಅದಕ್ಕೆ ಕಾನೂನಿನ ಮಾನ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ.ಆದ್ರೆ ಒಂದು ಧರ್ಮದ ಆಚರಣೆಗೆ ಸರ್ಕಾರಿ ಕಚೇರಿಗಳಲ್ಲಿ ಅವಕಾಶ ಕೊಟ್ಟರೆ,ಮತ್ತೊಂದು ಧರ್ಮದವರೂ ಅವಕಾಶ ಕೇಳುತ್ತಾರೆನ್ನುವ ಕಾರಣಕ್ಕೆ ಅಂಥಾ ಸನ್ನಿವೇಶಗಳೇ ನಿರ್ಮಾಣವಾಗದಿರಲು ಮುಂಜಾಗೃತೆ ವಹಿಸಿ ಮುನ್ನೆಚ್ಚರಿಕೆಯಿಂದ ಕೆಲಸ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದೆ ಎನ್ನುತ್ತಾರೆ ವಿಧಾನಸೌಧದಲ್ಲಿ ಕೆಲಸ ಮಾಡುವ ಅಧಿಕಾರಿಗಳು.

ಒಂದು ಕೋಮಿನವರು ಅಥವಾ ಧರ್ಮದವರು ಧಾರ್ಮಿಕ ವಿಧಿವಿಧಾನಗಳನ್ನು ಮಾಡಿದರೆ ಇನ್ನೊಂದು ಧರ್ಮದವರಿಗೆ ಮುಜುಗರವಾಗಬಹುದೆನ್ನುವ ಒಂದೇ ಒಂದು ಕಾರಣಕ್ಕೆ ಇಂಥಾ ವಿಚಾರಗಳಿಗೆ ಅವಕಾಶ ಕಲ್ಪಿಸಿದರ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಅನೇಕ ಇಲಾಖೆಗಳಲ್ಲಿ ಅಲ್ಲಿನ ಅಧಿಕಾರಿ ಸಿಬ್ಬಂದಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ತೀವ್ರ ಟೀಕೆ-ಖಂಡನೆಗೆ ಗುರಿಯಾಗಿರುವ ನಿದರ್ಶನಗಳು ನಮ್ಮಲ್ಲಿವೆ.

ಇದಕ್ಕೆ ಪುಷ್ಟಿ ನೀಡುವಂತೆ ಕುಮಾರಕೃಪದಲ್ಲಿಂದು ಅಲ್ಲಿನ ಉಸ್ತುವಾರಿ ಅಧಿಕಾರಿಯಾಗಿರುವ ದೇವರಾಜ್ ತಮ್ಮ ಕುಟುಂಬ ಸಮೇತ ಅಲ್ಲಿನ ಸಿಬ್ಬಂದಿಯನ್ನು ಕೂಡಿಸಿಕೊಂಡು ಹೋಮಹವನ ನಡೆಸಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.ಇದು ಎಷ್ಟರ ಮಟ್ಟಿಗೆ ಸರಿ ಎಂದು ಅನೇಕರು ಪ್ರಶ್ನಿಸಿದ್ದಾರೆ.ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿದ್ದಂತೆ” ನಮಗೂ ನಮ್ಮ ಪವಿತ್ರ ದಿನ-ಹಬ್ಬಗಳಂದು ಕಚೇರಿಗಳಲ್ಲಿ ಅದರ ಆಚರಣೆ-ಸಂಭ್ರಮಕ್ಕೆ ಅವಕಾಶ ಕೊಡ್ತೀರಾ..” ಎಂದು ಬೇರೆ ಧರ್ಮಿಯರು ಒತ್ತಾಯ ಮಾಡಿದ್ದಾರೆ..

ಧರ್ಮದ ಆಚರಣೆಗೆ ಅವಕಾಶ ನೀಡಬಾರದೆನ್ನುವ ನಿಯಮಗಳಿದ್ದರೂ ಅನೇಕ ಸರ್ಕಾರಿ ಕಚೇರಿಗಳಲ್ಲಿ ಕದ್ದುಮುಚ್ಚಿ ಹೋಮ ಹವನ ನಡೆಸಲಾಗುತ್ತಿದೆ.ಧರ್ಮ ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ ಅದನ್ನು ಖಂಡಿಸಲು ಆಗೊಲ್ಲ.ಆದ್ರೆ ಜಾತ್ಯಾತೀತ ವ್ಯವಸ್ಥೆಯ ನ್ನೇ ಪ್ರತಿಪಾದಿಸುವ ನಮ್ಮ ಸಂವಿಧಾನದ ಆಶಯಗಳು ಇಂಥಾ ಹೋಮಹವನಗಳಿಂದಾಗಿ ಸಾಯಲ್ಪಡುತ್ತಿವೆ..ಇದಕ್ಕೆ ಅವಕಾಶ ನೀಡಿರುವುದು ಸರಿಯಲ್ಲ.ಇವತ್ತು ಇವ್ರು ಮಾಡಿದ್ದಾರೆ.ನಾಳೆ ಮುಸಲ್ಮಾನ ಬಂಧುಗಳು ಶುಕ್ರವಾರ ನಮಾಜ್ ಗೆ ಸರ್ಕಾರಿ ಕಚೇರಿಯಲ್ಲಿ ಅವಕಾಶ ಕೇಳ್ತಾರೆ.ಬೇರೆ ಧರ್ಮದ ಬಂಧುಗಳು ತಮ್ಮ ತಮ್ಮ ಧರ್ಮದ ಆಚರಣೆ ಮಾಡಿಕೊಳ್ಳಲು ಅವಕಾಶ ಕೇಳ್ತಾರೆ.ನಿರಾಕರಿಸಲಿಕ್ಕೆ ಆಗುತ್ತಾ..ಇವೆಲ್ಲಾ ಧರ್ಮ ಸೂಕ್ಷ್ಮ ವಿಷಯಗಳಾಗಿರುವುದರಿಂದ ಇವುಗಳ ಆಚರಣೆ ಮಾಡುವುದು ಸರಿಯಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.

ಈ ಬಗ್ಗೆ ಸ್ವತಃ ಅಧಿಕಾರಿ ದೇವರಾಜ್ ಅವರನ್ನೇ ಕೇಳಿದ್ರೆ,ಮೌಖಿಕವಾಗಿ ಆದೇಶ ಕೊಡಲಾಗಿದೆ.ಇದಕ್ಕೆ ಪರ್ಮಿಷನ್ ಕೊಡಲಾಗಿದೆ.ಆ ಮೇರೆಗೆ ಪೂಜೆ ಮಾಡಿದ್ದೇವೆ ಎನ್ತಾರೆ.ಅನ್ಯ ಧರ್ಮಿಯರಿಗೆ ಆಗುವ ಮುಜುಗರದ ಬಗ್ಗೆ ಕೇಳುದ್ರೆ ಅದಕ್ಕೆ ಆನ್ಸರ್ ಕೊಡದೆ ಮೌನಿಯಾಯ್ತಾರೆ. ಪ್ರವಾಸೋದ್ಯಮ ಇಲಾಖೆಗೆ ಒಳಪಡುವ ಕುಮಾರಕೃಷ ಗೆಸ್ಟ್ ಹೌಸ್ ನಲ್ಲಿ ನಡೆದಿರುವ ಈ ಪ್ರಮಾದದ ಬಗ್ಗೆ ಪ್ರವಾಸೋದ್ಯಮ ಮುಖ್ಯಸ್ಥರಾಗಿರುವ ಅಧಿಕಾರಿ ವಿಜಯ್ ಶರ್ಮಾ ಅವರನ್ನು ಸಂಪರ್ಕಿಸಲು ಯತ್ನಿಸಿದ್ರೂ ಸಾಹೇಬ್ರ ಫೋನ್( 9480887193 ,9868229520) ನಾಟ್ ರೀಚಬಲ್ ಆಗಿತ್ತು.

ಪರಿಸರ ಸಚಿವ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಖಾತೆಯೂ  ಒಳಪಡುವುದರಿಂದ ಅವರು ನಿರ್ಲಕ್ಷ್ಯ ಬಿಟ್ಟು ಗಣೇಶ ಹಬ್ಬದ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಹೋಮ  ಹವನ ನಡೆಸಿರುವ ಅಧಿಕಾರಿ ದೇವರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.ಇಲ್ಲವಾದಲ್ಲಿ ಮನೆ ಯಜಮಾನನೇ ಸರಿ ಇಲ್ಲ ಎನ್ನುವ ಸಂದೇಶ ರವಾನೆಯಾದಂತಾಗುತ್ತದೆ.ಇದೊಂದು ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ರೆ ಉಳಿದ ಅಧಿಕಾರಿ ಸಿಬ್ಬಂದಿಯೂ ಹೊಣೆಗೇಡಿಗಳಾಗಿಬಿಡುತ್ತಾರೆ.ಜಡತ್ವ ಬಿಟ್ಟು ಮೈ ಕೊಡವಿ ಕೆಲಸ ಮಾಡಲು ಸಚಿವರು ಮುಂದಾಗಬೇಕಿದೆ.

“ಸಂವಿಧಾನದ ಆಶಯ ಜಾತ್ಯಾತೀತತೆಯನ್ನು ಎತ್ತಿ ಹಿಡಿಯುವುದು..ಧಾರ್ಮಿಕ ಶೃದ್ಧೆ ಎನ್ನುವ ಕಾರಣಕ್ಕೆ ಇಂಥಾ ಆಚರಣೆಗಳನ್ನು ಒಪ್ಪಿಕೊಳ್ಳಬಹುದಾದರೂ ಒಬ್ಬರಿಗೆ ಕೊಟ್ಟು,ಇನ್ನೊಬ್ಬರಿಗೆ ನಿರಾಕರಿಸುವಂಥ ಬೆಳವಣಿಗೆ ದೃಷ್ಟಿಯಿಂದ ಇಂಥಾ ಆಗುಹೋಗುಗಳನ್ನು  ಒಪ್ಪಿಕೊಳ್ಳೊಕ್ಕೆ ಬರೊಲ್ಲ..ಆದರೂ ಇದೆಲ್ಲಾ ನಡೆಯುತ್ತಿದೆ.ಇದಕ್ಕೆ ಸರ್ಕಾರ ಸ್ಪಷ್ಟವಾದ ರೂಪುರೇಷೆ ರೂಪಿಸುವವರೆಗೂ ಇದನ್ನೆಲ್ಲಾ  ಒಪ್ಪಿಕೊಳ್ಳಲೇಬೇಕಾಗುತ್ತೆ,,”

-ಸಾಯಿದತ್ತಾ-ಸಾಮಾಜಿಕ ಕಾರ್ಯಕರ್ತ

 

“ಹಾಗೆ ನೋಡಿದ್ರೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ,ಮಹಾತ್ಮ ಗಾಂಧೀ, ನಮ್ಮ ರಾಷ್ಟ್ರಪತಿ,ಪ್ರಧಾನ ಮಂತ್ರಿಗಳ ಚಿತ್ರಗಳನ್ನು ಬಿಟ್ಟರೆ ಬೇರೆ ಯಾರದೇ ಫೋಟೊಗಳ್ನು ಹಾಕುವಂತಿಲ್ಲ ಎನ್ನುವ ನಿಯಮವಿದೆ.ಆದ್ರೆ ಅದು ಪಾಲನೆಯಾಗುತ್ತಿದೆಯೇ..? ಖಂಡಿತಾ ಇಲ್ಲ. ಧರ್ಮದ ಬಗ್ಗೆ ಮಾತನಾಡುವುದು ಅತ್ಯಂತ ಸೂಕ್ಷ್ಮವಾದ  ವಿಚಾರ..ಆದರೆ ಸಂವಿಧಾನಿಕವಾಗಿ ನೋಡುದ್ರೆ ಅಷ್ಟು ಸಮಂಸಜವಲ್ಲ ಎನ್ನುವುದು ನನ್ನಂತೆ ಹಲವು ಸಾಮಾಜಿಕ ಕಾರ್ಯಕರ್ತರ ಆರೋಪ”

-ಟಿ.ಜೆ ಅಬ್ರಹಾಂ-ಸಾಮಾಜಿಕ ಕಾರ್ಯಕರ್ತರು

 

“ಸರ್ಕಾರಿ ಅಧಿಕಾರಿಗಳಾಗಿ ನಮಗೆ ಈ ಎಲ್ಲಾ ಬೆಳವಣಿಗೆಗೆ ಅವಕಾಶಗಳೇ ಇರೋದಿಲ್ಲ..ಏಕೆಂದರೆ ಪ್ರತಿಯೊಂದು ಕಚೇರಿಯಲ್ಲೂ ಎಲ್ಲಾ ಧರ್ಮದ ನೌಕರರಿರುತ್ತಾರೆ.ಒಂದು ಸಮುದಾಯದವರಿಗೆ ಇಂಥಾ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಟ್ಟರೆ, ಇನ್ನೊಂದು ಧರ್ಮಿಯರಿಗೂ ಅವಕಾಶ ಕೇಳೊಕ್ಕೆ ಕಾರಣ ಸಿಕ್ಕಂಗಾಗುತ್ತೆ.ಇದಕ್ಕೆಲ್ಲಾ ಪರ್ಮಿಷನ್ ಕೊಡುವಂತದ್ದಕ್ಕೆ ನಮ್ಮ ಸಂವಿಧಾನ ಅವಕಾಶ ನೀಡೊಲ್ಲ..ಆದರೂ ಇದೆಲ್ಲಾ ಪಾರ್ಟ ಆಫ್ ದಿ ಡಿಪಾರ್ಟ್ಮೆಂಟ್ ಆಗೋಗಿದೆ”

-ಕೆ.ಮಥಾಯಿ-ನಿವೃತ್ತ ಕೆ.ಎ.ಎಸ್ ಅಧಿಕಾರಿ

Spread the love

Related Articles

Leave a Reply

Your email address will not be published.

Back to top button
Flash News