“ಒಮ್ಮತದ ಸೆಕ್ಸ್” ನಲ್ಲಿ ವ್ಯತ್ಯಾಸವಾದ್ರೆ “ರೇಪ್” ಹೇಗಾಗುತ್ತೆ..ಏನೆಲ್ಲಾ ತಿರುವು ಪಡೆಯುತ್ತೆ..ಕೊನೆಗೆ ಎಂಥಾ ತೀರ್ಪು ಬರುತ್ತೆ..? ತಿಳಿದುಕೊಳ್ಳೋ ಕುತೂಹಲವಿದ್ದರೆ ಮಿಸ್ ಮಾಡದೆ ನೋಡಿ “ಸೆಕ್ಷನ್ 375” ಚಿತ್ರ..

ಪ್ರತಿಯೋರ್ವ ವಕೀಲ-ಕಾನೂನು ವಿದ್ಯಾರ್ಥಿಗಂತೂ ಪ್ರಯೋಗಶೀಲ-ಅಧ್ಯಯನದ ವಿಷಯ "ಸೆಕ್ಷನ್ 375"

0

ಸೆಕ್ಷನ್ 375..

ಸಾಕಷ್ಟು ಸಂದರ್ಭದವರೆಗೂ ಪರಸ್ಪರ ಒಪ್ಪಿಗೆ ಮೂಲಕ ಲೈಂಗಿಕ ಕ್ರಿಯೆ ನಡೆದಿದ್ದರೂ  ರೇಪ್ ನ್ನು ಉಲ್ಲೇಖಿಸುವ ಅಪರಾಧದ ಸುತ್ತ ಕೇಂದ್ರೀಕೃತವಾದ ಚಿತ್ರವಿದು.ನಿರ್ದೇಶಕ ಅಜಯ್ ಬೆಹಲ್ ಅವರ ಅತ್ಯದ್ಭುತ ಕಲಾಕುಸುರಿಯಲ್ಲಿ ಅರಳಿರುವ  2 ಗಂಟೆಯ ಚಿತ್ರ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗುತ್ತದೆ.

ಶ್ರೇಣೀಕೃತ ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿರುವ ವ್ಯಕ್ತಿಯೋರ್ವ ಬದುಕಿನಲ್ಲಿ ಏನಾದರೊಂದು ಸಾಧಿಸಬೇಕೆನ್ನುವ ಉಮೇದಿನಲ್ಲಿರುವ ಮಹತ್ವಾಕಾಂಕ್ಷಿ ಯುವತಿಯೋರ್ವಳನ್ನು ರೇಪ್ ಮಾಡಿದ ಆರೋಪದ ಸುತ್ತ ಹೆಣೆದಿರುವ ಕಥೆ,  ಅದೇ ಹುಡುಗಿ ತನ್ನ ಪ್ರತಿಕಾರಕ್ಕೆ ಸೆಕ್ಷನ್ 375 ನ್ನು ಹೇಗೆ  ದುರ್ಬಳಕೆ ಮಾಡಿಕೊಳ್ಳುತ್ತಾಳೆ ಎನ್ನುವ ಸತ್ಯ ಪ್ರತಿಪಾದಿಸುವ ಮೂಲಕ ಕೊನೆಗೊಳ್ಳುತ್ತದೆ.ಅದು ಒಮ್ಮತದ ಸೆಕ್ಸೇ ಆಗಿದ್ದರೂ ಯುವತಿ ಕೋರ್ಟ್ ನಲ್ಲಿ ರೇಪ್ ಬಗ್ಗೆ ಆರೋಪ ಮಾಡಿದ್ರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ.ಕಾನೂನುಪ್ರಕಾರ ಅದು ಅಕ್ಷಮ್ಯವಾಗುತ್ತೆ ಎನ್ನುವುದರ ಮೂಲಕ ನಮ್ಮ ನೆಲದ ಕಾನೂನಿನ ಘನತೆಯನ್ನು ಎತ್ತಿ ಹಿಡಿಯುತ್ತದೆ ಈ ಚಿತ್ರ.ಅಲ್ಲದೇ ರೇಪ್ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಚಿತ್ರದ ಕೊನೆಯಲ್ಲಿ ಆತನಿಗೆ 10 ವರ್ಷ ಕಠಿಣ ಸಜೆ ಕೂಡ ಆಗುತ್ತದೆ .

ನಿರ್ದೇಶಕ ಅಜಯ್ ಬೆಹಲ್
ಸೆಕ್ಷನ್ 375 ನಿರ್ದೇಶಕ ಅಜಯ್ ಬೆಹಲ್

ರೇಪ್ ಸಂತ್ರಸ್ಥೆ ಎಂದು ದೂರು ದಾಖಲಿಸಿ ಕಾನೂನಾತ್ಮಕ ಸಮರಕ್ಕೆ ನಿಲ್ಲುವ ಅಂಜಲಿ ದಾಂಘ್ಲೆ ಪರ ಸರ್ಕಾರಿ ವಕೀಲೆಯಾಗಿ ಹಿರಾಲ್ ಗಾಂಧೀ  ಪಾತ್ರದಲ್ಲಿ ರಿಚಾ ಚಡ್ಡಾ,ಆರೋಪಿತ ರೋಹನ್ ಖುರಾನ ನಿರಪರಾಧಿ ಎಂದು ಪ್ರೂವ್ ಮಾಡೊಕ್ಕೆ ಆತನ ಪರ ನಿಲ್ಲುವ ವಕೀಲ ತರುಣ್ ಸಲುಜಾ ಪಾತ್ರದಲ್ಲಿ ಅಕ್ಷಯ್ ಖನ್ನಾ ಅವರ ಜುಗಲ್ ಬಂಧಿ ಚಿತ್ರಕ್ಕೆ ರೋಚಕತೆಯ ಓಘ ನೀಡುತ್ತದೆ.ಲೇಖಕ ಮನೀಷ್ ಗುಪ್ತಾ ಅವರ ಸಂಶೋನಾತ್ಮಕ ಹಾಗೂ ಹರಿತವಾದ ಸಂಭಾಷಣೆ ಚಿತ್ರದ ಪ್ರತಿಯೊಂದು ಫ್ರೇಮ್ ಅತ್ಯದ್ಭುತವಾಗಿ ಮೂಡಿ ಬರೊಕ್ಕೆ ಕಾರಣವಾಗಿದೆ.

ಎಲ್ಲಾ ರೇಪ್ ಗಳು ರೇಪ್ ಆಗಿರುವುದಿಲ್ಲ..ಅದಕ್ಕೆ ಇನ್ನೊಂದು ಮುಖವಿರುತ್ವೆ.ಸತ್ಯವೇ ಬೇರೆಯಾಗಿರಬಹುದು.ಅದು ಒಪ್ಪಿತ ಸೆಕ್ಸ್ ಆಗಿದ್ದು ಇಬ್ಬರ ನಡುವಿನ ಕಮಿಟ್ಮೆಂಟ್  ಗಳು,ಒಪ್ಪಂದಗಳಲ್ಲಿ ಏರುಪೇರುಗಳಾದಾಗ ಮಾತ್ರ ವ್ಯತ್ಯಾಸವಾಗಬಹುದು. ಅಷ್ಟು ದಿನ ಸ್ವ ಇಚ್ಛೆಯಿಂದಲೇ ಹಾಸಿಗೆ ಹಂಚಿಕೊಂಡ ಯುವತಿ ಯಾವುದೋ ಸನ್ನಿವೇಶದಲ್ಲಿ ತನ್ನ ಮೇಲೆ ರೇಪ್ ಆಗಿದೆ ಎಂದು ಯೂ ಟರ್ನ್ ಹೊಡೆದಾಗ  ಏನೆಲ್ಲಾ ಆಗುತ್ತೆ..ಕಾನೂನು ಅದಕ್ಕೆ ಹೇಗೆ ಮಾನ್ಯತೆ ಕೊಡುತ್ತೆ.ಕಾನೂನು ಹೇಗೆಲ್ಲಾ ಗಂಭೀರವಾಗಿ ಪರಿಗಣಿಸುತ್ತೆ.ಈ ನಡುವೆ ವ್ಯಕ್ತಿಗತ ಸಂಬಂಧಗಳಲ್ಲಿ ಹೇಗೆಲ್ಲಾ ವೈರುದ್ಧ್ಯಗಳು ಸೃಷ್ಟಿಯಾಗುತ್ತವೆ ಎನ್ನುವುದನ್ನೆಲ್ಲಾ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ ಈ ಚಿತ್ರ.

ಕೋರ್ಟ್ ಹಾಲ್ ನೊಳಗೆ ನಡೆಯುವ ಕಲಾಪಗಳು-ವಾದಪ್ರತಿವಾದಗಳು,ರೇಪ್ ಆಗಿರುವುದನ್ನು ಉಲ್ಲೇಖಿಸುವ ಸಾಕ್ಷ್ಯಗಳನ್ನು ರುಜುವಾತುಪಡಿಸಲು ಸಂತ್ರಸ್ಥೆ ಪರ ವಕೀಲೆ ಯತ್ನಿಸುವ ರೀತಿ,ಅದು ರೇಪ್ ಅಲ್ಲ,ಒಮ್ಮತದ ಸೆಕ್ಸ್ ನಲ್ಲಿ ಉಂಟಾದ ಬಿರುಕಿನ ಪ್ರತೀಕಾರದ ಆಯಾಮ ಎನ್ನುವುದನ್ನು ಅಚ್ಚರಿಯ ಸಾಕ್ಷ್ಯಗಳನ್ನು ಪ್ರಸ್ತುತಪಡಿಸುವ ಮೂಲಕ ರೋಚಕ ತಿರುವನ್ನು ನೀಡುವ ಆರೋಪಿಪರ ವಕೀಲ ಅಕ್ಷಯ್ ಖನ್ನಾ ಮ್ಯಾನರಿಸಂ,ವಾದ ಪ್ರತಿವಾದದ  ಝಲಕ್ ಗಳು ಎಂಥವರನ್ನೂ ಕೌತುಕ ಸೃಷ್ಟಿಸುತ್ತದೆ.ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತೆ.ಮುಂದೇನಾಗಬಹುದು ಎನ್ನುವ ಕುತೂಹಲ ಮೂಡಿಸುತ್ತದೆ.ಅಷ್ಟೊಂದು ತಿರುವುಗಳನ್ನು ಪಡೆಯುತ್ತಾ ಸಾಗುತ್ತೆ ಸೆಕ್ಷನ್ 375 ಚಿತ್ರ.

ವಕೀಲಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡ ಪ್ರತಿಯೋರ್ವರು ನೋಡಲೇಬೇಕಾದ ಚಿತ್ರ 375. ಈ ಸೆಕ್ಷನ್ ಸುತ್ತ ಕಲಾಪಗಳ ವೇಳೆ ಏನೆಲ್ಲಾ ನಡೆಯುತ್ತೆ..ನಡೆಯಬಹುದು..ಏನೆಲ್ಲಾ ಅಂಶಗಳನ್ನು ಇಟ್ಟುಕೊಂಡು ವಾದಿ-ಪ್ರತಿವಾದಿಗಳು ತಮ್ಮ ವಾದ ಮಂಡಿಸುತ್ತಾರೆ.ಅಲ್ಲಿ ಏನೆಲ್ಲಾ ಸಾಕ್ಷ್ಯಗಳ ಮೇಲೆ ವಾದಗಳು ನಡೆಯುತ್ವೆ..ಇಬ್ಬರು ವಕೀಲರು ತಮ್ಮ ಕಕ್ಷಿದಾರರನ್ನು ಬಚಾವು ಮಾಡಲು,ಅವರನ್ನು ನಿರಪರಾಧಿಗಳನ್ನಾಗಿಸಲು ಏನೆಲ್ಲಾ ಸರ್ಕಸ್-ಎಷ್ಟೆಲ್ಲಾ ಹರಸಾಹಸ ಮಾಡುತ್ತಾರೆನ್ನುವುದನ್ನು ಚಿತ್ರ ರಸವತ್ತಾಗಿ ವಿಸ್ತರಿಸುತ್ತಾ ಹೋಗುತ್ತೆ.ಪ್ರತಿಯೋರ್ವರನ್ನು ಕುತೂಹಲದ ತುದಿಗಾಲಲ್ಲಿ ನಿಲ್ಲಿಸುತ್ತೆ.375 ಸೆಕ್ಷನ್ ಸುತ್ತ ಏನೆಲ್ಲಾ ವಾದ-ಪ್ರತಿವಾದಗಳು ನಡೆಯುತ್ತವೆ ಎನ್ನುವ ಕುತೂಹಲ ಇರುವವರಿಗಂತೂ 375 ಚಿತ್ರ ಅತ್ಯುತ್ತಮ ಅಧ್ಯಯನದ ವಸ್ತು.

ರೇಪ್ ಎನ್ನುವುದು ಅಕ್ಷಮ್ಯ,ಒಮ್ಮತದ ಸೆಕ್ಸ್ ನಲ್ಲಿ ವ್ಯತ್ಯಾಸವಾಗಿ ಅದನ್ನು ಸಂತ್ರಸ್ಥೆ ಅತ್ಯಾಚಾರ ಎಂದು ದೂರಿತ್ತರೆ, ನ್ಯಾಯಾಲಯದಲ್ಲಿ ಹೇಳಿಕೆ ಕೊಟ್ಟರೆ ಅದು ಕಾನೂನಾತ್ಮಕವಾಗಿ ಗಂಭೀರ ಪ್ರಕರಣವಾಗುತ್ತೆ. ಯುವತಿಯನ್ನು ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡರೂ ಆಕೆ ಉಲ್ಟಾ ಹೊಡೆದು ಅದರ ಹಿಂದೆ ಆರೋಪಿಯ ಲಾಭ-ಸ್ವಾರ್ಥ-ಆಮಿಷ ಇತ್ತೆನ್ನುವುದರ ಬಗ್ಗೆ ಸಂತ್ರಸ್ಥೆ ಅಳಲು ತೋಡಿಕೊಂಡ್ರೂ ಅದು ಕಾನೂನು ಪ್ರಕಾರ ಗಂಭೀರ ಆರೋಪ ಎನ್ನುವುದನ್ನು ಚಿತ್ರ ಮಾರ್ಮಿಕವಾಗಿ ಸಾರುತ್ತೆ.

ರೇಪ್ ಆರೋಪಿ ಪರ ವಕೀಲರಾಗಿ ಅಕ್ಷಯ್ ಖನ್ನಾ ತಮ್ಮ ಮಾಗಿದ ಅನುಭವ ನೀಡಿದ್ದಾರೆ.ಅವರ ವೃತ್ತಿಜೀವನದಲ್ಲಿ ಇಷ್ಟೊಂದು ಗಂಭೀರವಾದ ಪಾತ್ರ ಅವರು ನಿರ್ವಹಿಸಿದಂತಿಲ್ಲ.ಚಿತ್ರದುದ್ದಕ್ಕೂ ಅಷ್ಟೊಂದು ಡಿಗ್ನಿಫೈಡ್ ಆಗಿ ನಟಿಸಿದ್ದಾರೆ.ಮಾದಕ ಪಾತ್ರಗಳಿಗೆ ಸೀಮಿತವಾಗಿದ್ದ ರಿಚಾ ಚಡ್ಡಾ ಸಂತ್ರಸ್ಥೆ ಪರ ವಕೀಲೆಯಾಗಿ ಅಷ್ಟೇ ಪೈಪೋಟಿ ನೀಡಿದ್ದಾರೆ.ಈ ಎರಡು ಪಾತ್ರಗಳೇ  ಚಿತ್ರದ ಪ್ರಮುಖ ಹೈಲೈಟ್ಸ್.

ಒಟ್ಟಿನಲ್ಲಿ ಚಿತ್ರರಂಗದಲ್ಲಿ ಇತ್ತೀಚೆಗೆ ಸೆಕ್ಷನ್ 375 ನಂಥ  ಪ್ರಯೋಗಶೀಲ ಚಿತ್ರಗಳು ಬರುತ್ತಿರುವುದು ಸ್ವಾಗತಾರ್ಹ.ಕೇವಲ ಮನರಂಜನಾತ್ಮಕವಾಗಿಯಷ್ಟೇ ಅಲ್ಲ, ಸಂದೇಶಾತ್ಮಕವಾಗಿಯೂ ಸೆಕ್ಷನ್ 375 ಎಲ್ಲರ ಮನಸನ್ನು ಗೆಲ್ಲುತ್ತೆ.ರೇಪ್ ಮಾಡಿಯೂ ಅವರಿವರ ಶಿಫಾರಸ್ಸಿನಿಂದ-ಲಾಭಿಯಿಂದ ಬಚಾವ್ ಆಗಬಹುದು ಎಂದು ಆಲೋಚಿಸುವ ಹೀನಸುಳಿಯ ಮನಸುಗಳಿಗೆ ಈ ಚಿತ್ರ ನಿಜಕ್ಕೂ ಎಚ್ಚರಿಕೆಯ ಕರೆಗಂಟೆಯಂತಿದೆ.

ಅಂದ್ಹಾಗೆ 2019ರಲ್ಲಿ ಚಿತ್ರ ರಿಲೀಸ್ ಆಗಿ ಸಾಕಷ್ಟು ಯಶಸ್ಸನ್ನು ಕೂಡ ಪಡೆದಿತ್ತು.ಅದೇನೇ ಆದರೂ ಸೆಕ್ಷನ್ 375 ನೋಡಲೇಬೇಕೆನಿಸುವ ಚಿತ್ರ ಎನಿಸುತ್ತದೆ.ಮನರಂಜನೆ ಜತೆಗೆ ಒಂದಷ್ಟು ಕಾನೂನಿನ ಅರಿವು ಹಾಗೂ ಮಾಹಿತಿ ಸಿಗೋದ್ರಲ್ಲಿ ಮೋಸವೇ ಇಲ್ಲ..

Spread the love
Leave A Reply

Your email address will not be published.

Flash News