ಲಾಸ್‌..ಲಾಸ್…ಬಿಎಂಟಿಸಿ “ವೋಲ್ವೋ‌” ಬಸ್ ಗಳ “ಆಟ”ಕ್ಕೆ ಬೀಳಲಿದೆಯೇ “ಪರದೆ‌”…?!

2500 ವೋಲ್ವೋ‌ ಬಸ್ ಗಳಲ್ಲಿ ರಸ್ತೆಗಿಳಿಯುತ್ತಿರುವುದು ಕೇವಲ 75..ಅವುಗಳಿಂದಲೂ ನಿತ್ಯ ಲಕ್ಷಾಂತರ ನಷ್ಟ..

0

ಬೆಂಗಳೂರು:ಇನ್ನು ಕೆಲವೇ ಕೆಲವು ದಿನಗಳಷ್ಟೆ…ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ರಾಜ”ಗಾಂಭೀರ್ಯ”..”ಗತ್ತು…ಗೈರತ್ತು”..ಗಳಿಂದ ದಶಕಗಳ ಕಾಲ ದರ್ಬಾರ್ ಮಾಡಿದ್ದ ವೋಲ್ವೋ ಬಸ್ ಗಳು ಸ್ಕ್ರಾಪ್ ವಸ್ತುವಾಗಿ ಗುಜರಿಗೆ ಸೇರೋದ್ರೂ ಆಶ್ಚರ್ಯವಿಲ್ಲ..

ಏಕೆಂದ್ರೆ ತೀವ್ರ ಆರ್ಥಿಕ ಮುಗ್ಗಟ್ಟಿನ ಸನ್ನಿವೇಶದಲ್ಲಿ ವೋಲ್ವೋ ಬಸ್ ಗಳನ್ನು ಉಳಿಸಿಕೊಳ್ಳೋದು ಸೆರಗಿನಲ್ಲಿ ಕೆಂಡ ಇಟ್ಟುಕೊಂಡಂತಾಗಿದೆ..ಹಾಗಾಗಿನೇ ವೋಲ್ವೋ‌ ಬಸ್ ಗಳ ಸಂಚಾರಕ್ಕೆ ಬ್ರೇಕ್ ಹಾಕೋದೇ ಸೂಕ್ತ ಎನ್ನುವ ಬಲವಾದ ಚಿಂತನೆ ಆಡಳಿತ ಮಂಡಳಿಯ ವಲಯದಲ್ಲಿ ನಡೆಯುತ್ತಿದೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಹೌದು…ಇದು ಕೇಳೊಕ್ಕೆ ವಿಚಿತ್ರ ಎನಿಸಿದರೂ ಸತ್ಯ ಎನ್ನಲಾಗುತ್ತಿದೆ.ಏಕೆಂದರೆ ಲಾಕ್ ಡೌನ್ ಹಾಗೂ ನಂತರದ ಸನ್ನಿವೇಶದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ದುಸ್ಥಿತಿ‌ ಅನಿವಾರ್ಯವಾಗಿ ಇಂತದ್ದೊಂದು ಚಿಂತನೆಗೆ ಮುಂದಾಗುವಂತೆ ಮಾಡಿದೆಯಂತೆ.

ವರ್ಷಕ್ಕಿಂತಲೂ ಹೆಚ್ಚಿನ‌ ಸಮಯದಿಂದಲೂ ಡಿಪೋಗಳಲ್ಲಿ ತುಕ್ಕು ಹಿಡಿಯುತ್ತಾ ನಿಂತಿರುವ ವೋಲ್ವೋ ಬಸ್ ಗಳಿಗೆ ಕೈ ಹಾಕಿದ್ರೆ ಮತ್ತಷ್ಟು ಕೋಟಿಗಳಷ್ಟು ಹೊರೆ ಗ್ಯಾರಂಟಿ ಎನ್ನುವ ಎಚ್ಚರಿಕೆಯ ಸಲಹೆಯೂ ನಿಗಮದ ತಜ್ಞರಿಂದ ಕೇಳಿಬಂದಿದೆ.ಹಾಗಾಗಿನೇ ಅನಿವಾರ್ಯವಾಗಿ‌ ವೋಲ್ವೋ ಬಸ್ ಗಳ ಬಳಕೆಗೆ ನಿರ್ಬಂಧ ಹೇರುವ ಪ್ರಯತ್ನಗಳಾಗುತ್ತಿವೆ ಎನ್ನಲಾಗಿದೆ.

ಬ್ಯಾಟರಿಗಳೆಲ್ಲಾ ಡೆಡ್..ಟೈರ್ ಗಳೆಲ್ಲಾ ಬಸ್ಟ್..-
ಬಿಎಂಟಿಸಿ ವೋಲ್ವೋ ಬಸ್ ಗಳದ್ದು ಎಂಥಾ ಸಂಕಷ್ಟದ ಸ್ಥಿತಿ ಎಂದ್ರೆ, ಎಲ್ಲಾ ಬಸ್ ಗಳ ಬ್ಯಾಟರಿ ಡೆಡ್ ಆಗಿದೆ.ಟೈರ್ ಗಳು ಬಸ್ಟ್ ಆಗಿವೆಯಂತೆ.
ಹೊಸ ಬ್ಯಾಟರಿ..ಟೈರ್ ಗಳಿಗೆ ಕೈ ಹಾಕಿದ್ರೆ ಕೈ ಕಚ್ಚೋದಂತೂ ಗ್ಯಾರಂಟಿ.

ಏಕೆಂದರೆ ಪ್ರತಿಯೊಂದು ಹೊಸ ಬ್ಯಾಟರಿ ವೆಚ್ಚ ಅದೆಷ್ಟೋ ಲಕ್ಷ..ಟೈರ್ ಗಳಿಗೂ ಅಷ್ಟೇ ಖರ್ಚಾಗಬಹುದು..ಅದು ಮತ್ತಷ್ಟು ಕೋಟಿ ಹೊರೆಗೆ ಕಾರಣ ಆಗಬಹುದು‌.ಇಂಥಾ ಪ್ರಯತ್ನ ಮಾಡೋಕ್ಕಿಂತ ವೋಲ್ವೋ ಬಸ್ ಗಳ ತಂಟೆಗೆ ಹೋಗದಿರೋದೇ ಸೂಕ್ತ ಸಲಹೆಯೂ ತಜ್ಞರಿಂದ ಸರ್ಕಾರಕ್ಕೆ ರವಾನೆಯಾಗಿದೆ ಎನ್ನಲಾಗಿದೆ.

ವೋಲ್ವೋ ಬಸ್ ಚಾಲಕ ಸಿಬ್ಬಂದಿಗೆಲ್ಲಾ ಬೇರೆಡೆ ವರ್ಗ-
ಪರಿಸ್ಥಿತಿ ದಿನೇ ದಿನೇ ಶೋಚನೀಯವಾಗುತ್ತಿ ರುವುದರಿಂದ ಈ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಚಾಲಕರು,ನಿರ್ವಾಹಕರು,ವರ್ಕ್ ಶಾಪ್ ನ ಸಾವಿರಾರು ಸಿಬ್ಬಂದಿ ಪೈಕಿ ಸಾಕಷ್ಟು ವೋಲ್ವೋ‌ ಚಾಲಕ ಸಿಬ್ಬಂದಿಗೆ ವರ್ಗಾವಣೆ ಮಾಡಲಾಗುತ್ತಿದೆಯಂತೆ.ಈ ಪೈಕಿ ವರ್ಗಾವಣೆ ಪ್ರತಿ ಕೂಡ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.

ವೋಲ್ವೋ ಸಿಬ್ಬಂದಿಯನ್ನು ಹಾಗೇ ಉಳಿಸೋದಕ್ಕಿಂತ ಬೇರೆಡೆ ವರ್ಗ ಮಾಡುವುದು ಸೂಕ್ತ ಎನ್ನುವ ನಿರ್ಧಾರ ಮಾಡಲಾಗಿದೆಯಂತೆ..ಈವರೆಗೂ ಸಾವಿರಾರು ವೋಲ್ವೋ ಸಿಬ್ಬಂದಿ ಬೇರೆ ಡಿಪೋಗಳಲ್ಲಿ ಡ್ಯೂಟಿ ರಿಪೋರ್ಟ್ ಕೂಡ ಮಾಡಿಕೊಂಡಿದ್ದರೆನ್ನಲಾಗಿದೆ.

ಏನ್ ಮಾಡ್ತಾರೆ..ಸಾರಿಗೆ ಸಚಿವ ಶ್ರೀರಾಮುಲು-ಸಾರಿಗೆ ಸಚಿವ ಶ್ರೀರಾಮುಲುಗೆ ವೋಲ್ವೋ‌ ಸಂಕಷ್ಟ ದೊಡ್ಡ ತಲೆಬೇನೆ ತಂದಿದೆ.ಬಿಎಂಟಿಸಿ ಪಾಲಿಗೆ ಕಳಶಪ್ರಾಯವಾಗಿರೋ  ವೋಲ್ವೋ ಬಸ್ ಗಳನ್ನು ಸ್ಥಗಿತಗೊಳಿಸುವಂತದ್ದು ಸವಾಲಿನ ಸಂಗತಿ.ಹಾಗೆ ಮಾಡಿದ್ರೆ ಭವಿಷ್ಯದಲ್ಲಿ ಆಗಬಹುದಾದ ಸಮಸ್ಯೆಗಳನ್ನು  ತಜ್ಞರು ಗಮನಕ್ಕೆ ತಂದಿದ್ದಾರಂತೆ..

ಹಾಗಾಗಿ ದಿಢೀರ್ ನಿರ್ಧಾರಕ್ಕೆ ಕೈ ಹಾಕೋದಕ್ಕಿಂತ ಏನಾದ್ರೂ ಪರಿಹಾರ ಇದೆಯೇ ಆಲೋಚನೆ ಮಾಡಿ ಎಂಬ ಸೂಚನೆ ನೀಡಿದ್ದಾರಂತೆ‌. ವೋಲ್ವೋ ಬಸ್ ಗಳ ವಿಚಾರದಲ್ಲಿ ಏನು ಮಾಡಬೇಕು ಎನ್ನುವ ವಿಚಾರದಲ್ಲಿ ಸಚಿವರಿಗೇನೆ ಗೊಂದಲ ಸೃಷ್ಟಿಯಾಗಿರುವುದಂತೂ ಸತ್ಯ..

ಒಟ್ಟಿನಲ್ಲಿ ಬಿಎಂಟಿಸಿ ಪಾಲಿಗೆ ಒಂದು ಕಾಲದಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿದ್ದ ವೋಲ್ವೋ ಇಂದು ನಷ್ಟದ ಕಾರಣದಿಂದ ನೇಪಥ್ಯಕ್ಕೆ ಸರಿಯುವಂತ ಸ್ಥಿತಿಗೆ ಬಂದಿರೋದಂತೂ ವಿಪರ್ಯಾಸ.

Spread the love
Leave A Reply

Your email address will not be published.

Flash News