ಬೆಂಗಳೂರಲ್ಲಿ ಔಟ್ ಆಫ್ ಕಂಟ್ರೋಲ್ ಆಗ್ತಿದೆಯಾ ಕ್ರೈಂ ರೇಟ್ಸ್-ಹಾಡಹಗಲೇ ಮರ್ಡರ್ ಮಾಡೋದು ರೌಡಿಗಳಿಗೆ ಅಷ್ಟೊಂದು ಸಲೀಸ್ ಆಗೋಯ್ತಾ..?! ಕಮಿಷನರ್ ಕಮಲ್ ಪಂತ್ ಸಾಹೇಬ್ರ ಬಗ್ಗೆ ನಂಬಿಕೆ ಕಳೆದುಕೊಳ್ತಿದ್ದಾರಾ ನಾಗರಿಕರು..?!

ಮಾಜಿ ಕಮಿಷನರ್ಸ್ ಭಾಸ್ಕರ್ ರಾವ್,ಅಲೋಕ್ ಕುಮಾರ್-ಶಂಕರ ಬಿದರಿ ಟೈಂ ಮಿಸ್ ಮಾಡ್ಕೊಳ್ತಿದ್ದಾರಂತೆ ಬೆಂಗಳೂರಿಗರು..

0

ಬೆಂಗಳೂರು: ಏನ್ ಮಾಡ್ತಿದಿರಾ, ಕಮಿಷನರ್ ಕಮಲ್ ಪಂತ್ ಸರ್..ಸಾಹೇಬ್ರೇ..? ಏನಾಗ್ತಿದೆ ಬೆಂಗ್ಳೂರಲ್ಲಿ..?

ಬೆಂಗಳೂರಿನ ಪುಡಿ ರೌಡಿಗಳಿಗೆ ಲಂಗು ಲಗಾಮಿಲ್ಲದಂತಾಗಿರೋ ಹಿನ್ನಲೆಯಲ್ಲಿ ದಿನನಿತ್ಯ ಹೆಚ್ಚುತ್ತಿರುವ ಕ್ರೈಂ ರೇಟ್ಸ್ ನಿಂದ ಭಯಭೀತರಾ ಗಿರುವ ರಾಜಧಾನಿಯ ಮಂದಿ ಕೇಳ್ತಿರೋ ಪ್ರಶ್ನೆಯಿದು.ಹಿಂದಿನ ಕಮಿಷನರ್ ಗಳ ಅಧಿಕಾರವಧಿಯಲ್ಲಿ ಕಂಟ್ರೋಲ್ ನಲ್ಲಿದ್ದ ರೌಡಿಗಳು ಹಾಗೂ ರೌಡಿಯಿಸಂ ಚಟುವಟಿಕೆಗೆಳು ಕಮಲ್ ಪಂತ್ ಅವರ  ಅವಧಿಯಲ್ಲಿ ಹೆಚ್ಚಿರುವುದು ಪೊಲೀಸರ ಕಾರ್ಯದಕ್ಷತೆಯನ್ನೇ ಅನುಮಾನಿಸು ವಂತಿದೆ.ಕಮಲ್ ಪಂತ್ ಅವರ ಹೊಣೆಗಾರಿಕೆಯೂ ಪ್ರಶ್ನಾರ್ಥಕವಾಗುತ್ತಿದೆ.

ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ರೌಡಿ ಶೀಟರ್ ನನ್ನು ಅಟ್ಟಾಡಿಸಿಕೊಂಡು ಹೊಡೆಯುವಷ್ಟು ಪಾತಕಿಗಳಿಗೆ ಪರಿಸ್ಥಿತಿ ಅನುಕೂಲಕರವಾಗಿದೆ ಎಂದ್ರೆ ಪ್ರತಿಯೋರ್ವರು ನಮ್ಮ ಬೆಂಗಳೂರು ಪೊಲೀಸರ ಕಾರ್ಯದಕ್ಷತೆಯನ್ನು ಪ್ರಶ್ನಿಸಲೇಬೇಕಿದೆ.ಬಾಲ ಮುದುಡಿಕೊಂಡಿದ್ದ ರೌಡಿಗಳು ಯಾವುದೇ ಭಯವಿಲ್ಲದೆ ಲಾಂಗು ಮಚ್ಚುಗಳನ್ನು ಝಳಪಿಸ್ತಾ..ಕಿರುಚ್ತಾ..ಕೂಗಾಡ್ತಾ ತಮ್ಮ ದ್ವೇಷದ ಪ್ರತೀಕಾರ ತೀರಿಸಿಕೊಳ್ತಾರೆಂದ್ರೆ ಇದಕ್ಕೆ ಹಳಿತಪ್ಪಿರುವ ನಮ್ಮ ಪೊಲೀಸ್ ದಕ್ಷತೆಯೇ ಕಾರಣ ಎನ್ನುವುದನ್ನು ಬೇಸರದ ನಡುವೆಯೂ ಹೇಳಲೇಬೇಕಾಗುತ್ತೆ.

ಫುಟ್‌ಬಾಲ್‌ ಆಟವಾಡಲು ಬಂದಿದ್ದ ವೇಳೆ ಮಚ್ಚಿನೇಟಿಗೆ ಬಲಿಯಾದ  ರೌಡಿಶೀಟರ್‌ ಅರವಿಂದ್ ಅಲಿಯಾಸ್ ಲೀ ಸಮಾಜಘಾತುಕ ಶಕ್ತಿನೇ ಇರಬಹುದು..ಹಾಗಂತ ನಮ್ಮ ಪೊಲೀಸರು ರೌಡಿಗಳು ರೌಡಿಗಳಿಂದಲೇ ಸಾಯಲಿ ಎಂದು ಸುಮ್ಮನೆ ಕೂರೊಕ್ಕೆ ಆಗೊಲ್ವಲ್ಲ..ರೌಡಿಗಳು ಬಾಲ ಮುದುಡಿಕೊಂಡು,ಕ್ರೈಂ ಮಾಡೊಕ್ಕೆ ನೂರಾರು ಬಾರಿ ಆಲೋಚಿಸುವಂತೆ ಮಾಡಬೇಕಾದ ಭಯದ ವಾತಾವರಣ ಸೃಷ್ಟಿಸುವುದು ಪೊಲೀಸ್ ವ್ಯವಸ್ಥೆಯ ಆದ್ಯ ಕರ್ತವ್ಯವವಾಗಿರುತ್ತೆ..ಆದ್ರೆ ಕಮಲ್ ಪಂತ್ ಅವರು ಕಮಿಷನರ್ ಆದ್ಮೇಲೆ ಅದ್ಹೇಕೋ ರೌಡಿ ಚಟುವಟಿಕೆಗಳು ಹೆಚ್ಚಾದ್ವು..ರೌಡಿಗಳು ಭಯವಿಲ್ಲದೆ ಪಾತಕ ಚಟುವಟಿಕೆ ವ್ಯವಸ್ಥಿತವಾಗಿ ಮುಂದುವರೆಸೊಕ್ಕೆ ಅವಕಾಶವಾಯ್ತೆನ್ನುವುದು ಬಹುತೇಕ ಬೆಂಗಳೂರಿಗರ ಬೇಸರದ ಅಭಿಪ್ರಾಯಗಳು.

ಹಾಡಹಗಲೇ ಕೊಲೆಯಾದ ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ
ಹಾಡಹಗಲೇ ಕೊಲೆಯಾದ ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ
ಫುಟ್ಬಾಲ್ ಸ್ಟೇಡಿಯಂ ನಲ್ಲಿ ಪ್ರಾಕ್ಟೀಸ್ ಮಾಡಿಸುವ ವೇಳೆ ನಿಂತಿದ್ದ ರೌಡಿ ಶೀಟರ್ ನನ್ನು ಬರ್ಭರವಾಗಿ ಕೊಂದ ಅಶೋಕನಗರ ಸ್ಟೇಡಿಯಂ ಸ್ಥಳ
ಫುಟ್ಬಾಲ್ ಸ್ಟೇಡಿಯಂ ನಲ್ಲಿ ಪ್ರಾಕ್ಟೀಸ್ ಮಾಡಿಸುವ ವೇಳೆ ನಿಂತಿದ್ದ ರೌಡಿ ಶೀಟರ್ ನನ್ನು ಬರ್ಭರವಾಗಿ ಕೊಂದ ಅಶೋಕನಗರ ಸ್ಟೇಡಿಯಂ ಸ್ಥಳ

ಪುಲಿಕೇಶಿನಗರದ ಅರವಿಂದ್‌ ಅಲಿಯಾಸ್‌ ಲೀ ಕಮಿಷನರೇಟ್‌ ರಸ್ತೆಯ ಶಾಂತಲಾನಗರದಲ್ಲಿರುವ ರಾಜ್ಯ ಫುಟ್‌ಬಾಲ್‌ ಅಸೋಸಿಯೇಷನ್‌(ಕೆಎಸ್‌ಎಫ್‌ಎ) ಆವರಣದಲ್ಲಿ ನಿನ್ನೆ ನಡೆಯುತ್ತಿದ್ದ ಫುಟ್ಬಾಲ್ ನೋಡೊಕ್ಕೆ  ಬಂದಿದ್ದ.ಆ ವೇಳೆ ಆತನನ್ನು ಹಿಂಬಾಲಿಸಿಕೊಂಡು ಬಂದ ಪಾತಕಿಗಳ ತಂಡ ಮಧ್ಯಾಹ್ನ 4 ಗಂಟೆ ವೇಳೆ ಅಟ್ಟಾಡಿಸಿಕೊಂಡು ಕೊಂದಿದೆ.ಈ ಘಟನೆಗೆ ಫುಟ್ಬಾಲ್ ಸ್ಟೇಡಿಯಂನಲ್ಲಿದ್ದ ಆಟಗಾರರು,ಪ್ರೇಕ್ಷಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

ಘಟನೆಯನ್ನು ಕಣ್ಣಾರೆ ಕಂಡ ಪ್ರತಿಯೋರ್ವರು ಬೈಯ್ದುಕೊಂಡಿದ್ದು ರೌಡಿಗಳನ್ನಲ್ಲ..ಅವರು ಯಾವುದೇ ಭಯವಿಲ್ಲದೆ ಹಾಗೊಂದು ಕೃತ್ಯ ಮಾಡೊಕ್ಕೆ ಅವಕಾಶ ಮಾಡಿಕೊಟ್ಟ ನಮ್ಮ ಪೊಲೀಸ್ ಆಡಳಿತನ ಅವ್ಯವಸ್ಥೆಯನ್ನು. ಹಳೇ ವೈಷಮ್ಯದ ಹಿನ್ನಲೆಯಲ್ಲಿ ನಡೆದಿದೆ ಎನ್ನಲಾದ ಕೊಲೆ ಸಿನಿಮೀಯ ರೀತಿಯಲ್ಲಿ ನಡೆದೋಗಿದೆ.

ಐದಾರು ಮಂದಿಯ ಗ್ಯಾಂಗ್‌ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ ಎಂದಿರುವ ಪೊಲೀಸರು  ಆರೋಪಿಗಳ ಬಂಧನಕ್ಕೆ ಎರಡು ವಿಶೇಷ  ತಂಡ ರಚಿಸಿದ್ದಾರೆ.ಶೀಘ್ರದಲ್ಲೇ  ಅವರ ಬಂಧನವೂ ಆಗಲಿದೆ ಎಂಬ ಸವಕಲು ಹೇಳಿಕೆ ಕೊಟ್ಟಿರುವುದು ಬೆಂಗಳೂರಿಗರನ್ನು ಕೆಂಡಾಮಂಡಲಗೊಳಿಸಿದೆ.

ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಅರವಿಂದ್‌ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಅಲ್ಲದೆ, ಭಾರತೀನಗರ ಪೊಲೀಸರು ಗೂಂಡಾ ಕಾಯಿದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗೆ ಜಾಮೀನು ಪಡೆದು ಹೊರಬಂದ ಅರವಿಂದ್‌, ಫುಟ್‌ಬಾಲ್‌ ತಂಡವೊಂದರ ವ್ಯವಸ್ಥಾಪಕನಾಗಿದ್ದ. ಭಾನುವಾರ ಫುಟ್‌ಬಾಲ್‌ ಪಂದ್ಯವಿದ್ದ ಕಾರಣಕ್ಕೆ ಸ್ನೇಹಿತರ ಜತೆ ಕೆಎಸ್‌ಎಫ್‌ಎ ಮುಂಭಾಗದ ಬಿಬಿಎಂಪಿ ಮೈದಾನಕ್ಕೆ ಬಂದಿದ್ದ.

ಮಾಜಿ ಕಮಿಷನರ್ ಅಲೋಕ್ ಕುಮಾರ್,
ಮಾಜಿ ಕಮಿಷನರ್ ಅಲೋಕ್ ಕುಮಾರ್,

ಪಂದ್ಯ ಮುಗಿದ ಮೇಲೆ ಪಕ್ಕದಲ್ಲಿದ್ದ ಅಂಗಡಿಯಲ್ಲಿಜ್ಯೂಸ್‌ ಕುಡಿಯುತ್ತಿದ್ದಾಗ ಏಕಾಏಕಿ ಐದಾರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸಿದ್ದರು. ಪ್ರಾಣ ಭಯದಿಂದಾಗಿ ಹಂತಕರಿಂದ ತಪ್ಪಿಸಿಕೊಂಡ ಅರವಿಂದ್‌, ಕೆಎಸ್‌ಎಫ್‌ಎ ಆವರಣಕ್ಕೆ ತೆರಳಿ ರೆಫ್ರಿ ಕೊಠಡಿ ಒಳ ಪ್ರವೇಶಿಸಿ ಲಾಕ್‌ ಮಾಡಿಕೊಂಡಿದ್ದ. ಆದರೂ ಬಿಡದ ಆರೋಪಿಗಳು ಬಾಗಿಲು ಮುರಿದು ಒಳನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವ ಉಂಟಾಗಿ ಅರವಿಂದ್‌ ಸ್ಥಳದಲ್ಲೇ ಅಸುನೀಗಿದ್ದಾನೆ.

ಕೊಲೆ ಪ್ರಕರಣಗಳು ಯಾವುದೋ ಕುರಿ-ಕೋಳಿಯನ್ನು ಕೊಂದಷ್ಟೇ ಅನಾಯಾಸವಾಗಿ,ಕ್ಷಿಪ್ರವಾಗಿ ನಡೆದೋಗುತ್ತಿರುವುದು ಆತಂಕಕಾರಿ.ನಗರದಲ್ಲಿ ಜೂಜು ಅಡ್ಡೆಗಳು, ಸ್ಕಿಲ್ ಗೇಂಗಳು..ಡ್ಯಾನ್ಸ್ ಬಾರ್ ಗಳೆಲ್ಲಾ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಪೊಲೀಸರು ಅದರಿಂದ ಸಿಗುವ ಪರ್ಸಂಟೇಜ್ ಗೆ ಸದಾ ಹಾತೊರೆದು ಕೂತಿರುತ್ತಾರೆನ್ನುವ ಗಂಭೀರ ಆಪಾದನೆ ಹೆಚ್ಚೆಚ್ಚು ಕೇಳಿಬರುತ್ತಿದೆ.

ವೈಯುಕ್ತಿಕವಾಗಿ ಕಮಲ್ ಪಂತ್ ಒಳ್ಳೆಯ ಮನಸಿನ ಅಧಿಕಾರಿ,ಮಾನವೀಯ ಸಂವೇದನೆಯುಳ್ಳ ವ್ಯಕ್ತಿ..ಅಧಿಕಾರ ನಿರ್ವಹಣೆಯಲ್ಲೂ ಖಡಕ್ ಎನಿಸಿಕೊಂಡಿರುವುದನ್ನು ಅವರ ಟ್ತ್ಯಾಕ್  ರೆಕಾರ್ಡ್ ನೋಡಿದಾಗ ಗೊತ್ತಾಗುತ್ತೆ.ಆದ್ರೆ ಅವರ ಒಳ್ಳೆತನ ಅದ್ಹೇಕೋ ಅವರ ಕಾರ್ಯನಿರ್ವಹಣೆಗೆ ತೊಡಕಾಗುತ್ತಿದೆಯೇನೋ ಎಂದೆನಿಸುತ್ತದೆ.ದಿನೇ ದಿನೇ ಹೆಚ್ಚುತ್ತಿರುವ ಕ್ರೈಂ ರೇಟ್ ನಿಂದ ಜನ ಭಯಗ್ರಸ್ಥ ವಾತಾವರಣದಲ್ಲಿ ಬದುಕುವುದರ ಜತೆಗೆ ಪೊಲೀಸ್ ವ್ಯವಸ್ಥೆ ಬಗ್ಗೆ ನಂಬಿಕೆ ಕಳೆದುಕೊಳ್ಳುವಂತಾಗಿದೆ.

ಮಾಜಿ ಕಮಿಷನರ್ ಶಂಕರ್ ಬಿದರಿ
ಮಾಜಿ ಕಮಿಷನರ್ ಶಂಕರ್ ಬಿದರಿ
ಮಾಜಿ ಕಮಿಷನರ್ ಭಾಸ್ಕರ್ ರಾವ್
ಮಾಜಿ ಕಮಿಷನರ್ ಭಾಸ್ಕರ್ ರಾವ್

ಮನೆ ಯಜಮಾನ ಹೇಗಿರುತ್ತಾನೋ..ಎಷ್ಟು ಖಡಕ್ ಆಗಿ ಇರ್ತಾನೋ..ಮನೆಯ ಇತರೆ ಸದಸ್ಯರು ಕೂಡ ಹಾಗೆ ಇರುತ್ತಾರೆನ್ನುವುದಕ್ಕೆ ಪುಷ್ಟಿ ನೀಡುವಂತೆ ಅನೇಕ ಪೊಲೀಸ್ ಅಧಿಕಾರಿಗಳು ದಕ್ಷತೆ-ಪ್ರಾಮಾಣಿಕತೆಯಿಂದ ಕೆಲಸ ಮಾಡೋದನ್ನು ಮರೆತೋಗಿದ್ದಾರೆ.ಅವರ ರಿವಾಲ್ವರ್ ಗಳು ಸದ್ದು ಮಾಡದೇ ಅದೆಷ್ಟೋ ದಿನಗಳೇ ಆಗಿವೆ..

ಏಕಂದ್ರೆ ಅವರ ಬಂದೂಕುಗಳ ಮೊರೆತವೇ ರೌಡಿಗಳ ಮನಸಲ್ಲಿ ಭಯವನ್ನು ಸೃಷ್ಟಿಸಿ ಯಾಕ್ ಬೇಕಪ್ಪಾ ಸಹವಾಸ ಎಂದು ಬಾಲ ಮುದುಡಿಕೊಳ್ಳೊಕ್ಕೆ ಕಾರಣವಾಗಿತ್ತು.

ಕಮಲ್ ಪಂತ್ ಅವರ ಆಡಳಿತದ ಬಗ್ಗೆ  ಬೇಸರ-ನೋವು-ಅಸಹನೆ-ಅಸಮಾಧಾನದಿಂದ ಮಾತನಾಡುವ ಜನ ಹಿಂದಿನ ಕಮಿಷನರ್ ಗಳಾದ ಅಲೋಕ್ ಕುಮಾರ್,ಭಾಸ್ಕರ್ ರಾವ್,ಶಂಕರ್ ಬಿದರಿ ಅವರ ಟೈಂನಲ್ಲೇ ಎಷ್ಟೋ ಕ್ರೈಂ ರೇಟ್ ಕಡ್ಮೆಯಾಗಿತ್ತು.ರೌಡಿಗಳು ಹೆದರುತ್ತಿದ್ದರು.ಜನ ಕೂಡ ನೆಮ್ಮದಿಯಾಗಿದ್ದರು ಎಂದು ಹೋಲಿಸಿ ಮಾತನಾಡುವಂತಾಗಿರುವುದು ನಿಜಕ್ಕೂ ವಿಪರ್ಯಾಸ.

ಮಲ್ ಪಂತ್ ಅವರು ಎಚ್ಚೆತ್ತುಕೊಂಡ್ರೆ ಇಡೀ ಬೆಂಗಳೂರಿನಲ್ಲಿರುವ ಪೊಲೀಸ್ ಆಧಿಕಾರಿಗಳು ಬೆಲ್ಟ್ ಬಿಗಿ ಮಾಡಿಕೊಂಡು ಕಾರ್ಯಪ್ರವೃತ್ತರಾಗುತ್ತಾರೆನ್ನುವುದು ಕೂಡ ಅಷ್ಟೇ ಸತ್ಯ.

Spread the love
Leave A Reply

Your email address will not be published.

Flash News