BreakingScrollTop NewsUncategorizedಜಿಲ್ಲೆರಾಜಕೀಯ

ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡೀಸ್ ನಿಧನ-ಕಳಚಿದ ಕಾಂಗ್ರೆಸ್ ನ ಹಿರಿಯ ಕೊಂಡಿ…

ಕಾಂಗ್ರೆಸ್ ನ ಹಿರಿಯ ಮುತ್ಸದ್ಧಿ,ಗಾಂಧೀ ಕುಟುಂಬದ ಅತ್ಯಾಪ್ತ,ಮಾಜಿ  ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಕೊನೆಯುಸಿರೆಳೆದಿದ್ದಾರೆ.

80 ವರ್ಷ ವಯಸ್ಸಿನ ಆಸ್ಕರ್ ಫರ್ನಾಂಡೀಸ್,ಜೀವನ್ಮರಣಗಳ ಹೋರಾಟದಲ್ಲಿ ಮಂಗಳೂರಿನ ಎನಪೋಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.5 ಬಾರಿ ಸಂಸದ,3 ಬಾರಿ ರಾಜ್ಯಸಭಾ ಸದಸ್ಯ,ಎರಡು ಬಾರಿ ಕೇಂದ್ರ ಸಚಿವರಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದ ಆಸ್ಕರ್ ಫೆರ್ನಾಂಡಿಸ್ ಅನೇಕ ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದರು.

ಮಾರ್ಚ್ 1941  ರಲ್ಲಿ ಉಡುಪಿ ಜಿಲ್ಲೆಯ 12 ಮಕ್ಕಳ ಕ್ರೈಸ್ತ ಕುಟುಂಬದಲ್ಲಿ ಜನ್ಮತಳೆದ ಆಸ್ಕರ್ ಫರ್ನಾಂಡೀಸ್ ತಂದೆ ರೂಕ್‌ ಫೆರ್ನಾಂಡಿಸ್‌ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಮುಖ್ಯಸ್ಥರಾಗಿದ್ದರಷ್ಟೇ ಅಲ್ಲದೆ manipal technical university ದ ಮೊದಲ ಅಧ್ಯಕ್ಷರಾಗಿದ್ದರು. ತಾಯಿ ಲಿಯೋನಿಸ್ಸಾ ಎಮ್‌ ಫೆರ್ನಾಂಡಿಸ್‌,ಮ್ಯಾಜೀಸ್ಟ್ರೇಟ್‌ ಆಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದರು.

ಆಸ್ಕರ್‌ ಬಾಲ್ಯದಿಂದಲೇ ಚರ್ಚ್‌ನ ಚಟುವಟಿಕೆಗಳಲ್ಲೆ ಮುಂಚೂಣಿಯಲ್ಲಿದ್ದರು. ಬಾಲ್ಯದಲ್ಲಿ ಚರ್ಚಿನ ಆಲ್ಟರ್‌ ಬಾಯ್‌ ಆಗಿದ್ದ ಇವರು, ಯೌವ್ವನದಲ್ಲಿ ಚರ್ಚಿನ ಎಲ್ಲಾ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. 2002 ರಲ್ಲಿ ತಮ್ಮ ತಂದೆ ರೂಕ್‌ ಅವರ ಸ್ಮರಣಾರ್ಥ ಉಡುಪಿಯ ಅಂಬಲಪಾಡಿಯಲ್ಲಿ ಗ್ಲೊವಿನ್‌ ಸ್ಟಾರ್‌ ಅಕಾಡೆಮಿ ಎಂಬ ಸಂಸ್ಥೆ ಹುಟ್ಟಾಕಿ ಶೈಕ್ಷಣಿಕ-ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

1980 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾದ ಆಸ್ಕರ್  1984, 1989, 1991 ಹಾಗೂ 1999ರ ವರೆಗೂ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 1998 ರಲ್ಲಿ  ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಭಾರತ ಸರ್ಕಾರದ ಕೆಂದ್ರ ಸಂಪುಟದಲ್ಲಿ   ಸಾರಿಗೆ ಖಾತೆ,ಅಂಕಿ ಅಂಶ ಖಾತೆ, ಯುವಜನ ಮತ್ತು ಕ್ರೀಡಾ ಖಾತೆ, ಕಾರ್ಮಿಕ ಸಚಿವಾಲಯ, ಅನಿವಾಸಿ ಭಾರತೀಯರ ಸಚಿವಾಲಯಗಳ ಸಚಿವರಾಗಿದ್ದರು. ಎರಡು ಅವಧಿಗಳ ಕಾಲಭಾರತೀಯ ವಿಜ್ಞಾನ ಸಂಸ್ಥೆ ಯಲ್ಲಿಯೂ ಸದಸ್ಯರಾಗಿದ್ದರು.

ಬಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರಿಗೆ ಆಪ್ತರಾಗಿದ್ದ ಆಸ್ಕರ್ , ರಾಜೀವ್ ಗಾಂಧಿ ಯವರ ಸಂಸದೀಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಾಂಗ್ರಸ್‌ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅಧ್ಯಕ್ಷರಾಗಿದ್ದರು, ಜೊತೆಗೆ ಒಂದು ಅವಧಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು 1981  ಆಗಸ್ಟ್‌ 26 ರಂದು ಬ್ಲಾಸಮ್‌ ಮಥಾಯಿಸ್‌ ಪ್ರಭು ಜತೆ  ವಿವಾಹವಾದ ಆಸ್ಕರ್ ದಂಪರಿಗೆ ಓಶನ್ ಎಂಬ ಪುತ್ರ, ಓಶಾನಿ ಎಂಬ ಪುತ್ರಿಯರಿದ್ದಾರೆ.

ಆಸ್ಕರ್ ಫರ್ನಾಂಡೀಸ್ ಸಾವಿಗೆ ರಾಷ್ಟ್ರಪತಿ ಕೋವಿಂದ್,ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು,ಪ್ರಧಾನಿ ಮೋದಿ,ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ,ಕಾಂಗ್ರೆಸ್  ನ ಸೋನಿಯಾ ಗಾಂಧೀ, ರಾಹುಲ್ ಗಾಂಧೀ, ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಮಾಜಿ ಸಿಎಂಗಳಾದ ಸಿದ್ಧರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಂಬನಿ  ಮಿಡಿದಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News