EXCLUSIVE: ILLEGAL RELIGIOUS STRUCTURES: ಬೆಂಗಳೂರಿನ 6404 ಅನಧೀಕೃತ ಧಾರ್ಮಿಕ ಕೇಂದ್ರಗಳಿಗೆ ಕುತ್ತು..! BBMPಯಲ್ಲಿ ಸಿದ್ದವಾಯ್ತು “ಫೈನಲ್ ಲೀಸ್ಟ್”…..

ಮೈಸೂರಿನಷ್ಟು ಧೈರ್ಯವಾಗಿ ಬೆಂಗಳೂರಿನ ಅನಧೀಕೃತ ಧಾರ್ಮಿಕ ಕೇಂದ್ರಗಳಿಗೆ ಕೈ ಹಾಕುತ್ತಾ ಸರ್ಕಾರ:ಪ್ರತಿಭಟನೆಗೆ ರೆಡಿಯಾಗ್ತಿದ್ದಾರೆ ಬೆಂಗಳೂರಿಗರು.

0

ಬೆಂಗಳೂರು:ನಿಮಗೆ ಇದನ್ನು ಕೇಳಿ ಅಚ್ಚರಿಯಾದ್ರೂ ನಂಬಲೇಬೇಕು..ಏಕಂದ್ರೆ ಅಂತಹದೊಂದು ಲೆಕ್ಕ ಕೊಟ್ಟಿದ್ದಾರೆ ನಮ್ಮ ಬಿಬಿಎಂಪಿ  ಆಡಳಿತ ನಡೆಸೋರು.ಗಲ್ಲಿ ಗಲ್ಲಿಗಳಲ್ಲಿ ದೇಗುಲ-ಮಸೀದಿ-ಚರ್ಚ್-ಗುರುದ್ವಾರಗಳಂಥ ಧಾರ್ಮಿಕ ಕೇಂದ್ರಗಳು ಕಾಣಸಿಗುವ ಸನ್ನಿವೇಶದಲ್ಲಿ ಬಿಬಿಎಂಪಿ ಕೊಟ್ಟಿರೋ ಅಂಕಿಅಂಶಗಳು “ಹೌದಾ..? ಇಷ್ಟೆನಾ..? ನಂಬೊಕ್ಕಾಗುತ್ತಾ..? ಏನೋ..? ಎನ್ನುವಂಥ ಶಂಕೆ ಮೂಡಿಸಿದೆ.ಕನ್ನಡ ಫ್ಲ್ಯಾಶ್ ನ್ಯೂಸ್ ಅಂತಹದೊಂದು ಅಂಕಿಅಂಶದ ಮೇಲೆ ಬೆಳಕು ಚೆಲ್ಲುತ್ತಿದೆ..

198 ವಾರ್ಡ್ ಗಳ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಟ್ಟು ವಿಸ್ತೀರ್ಣದ ವ್ಯಾಪ್ತಿ 741 ಕಿಮೀ.ಇಷ್ಟೊಂದು ಬೃಹತ್ತಾಗಿ ಬೆಳೆದಿರೋ ಬೆಂಗಳೂರಿನಲ್ಲಿ ಅಕ್ರಮವಾಗಿ ಇರೋದು 6406 ದಾರ್ಮಿಕ ಶೃದ್ಧಾ ಕೇಂದ್ರಗಳಂತೆ.ಬಿಬಿಎಂಪಿ ಇಂಜಿನಿಯರಿಂಗ್ ಚೀಫ್ ಅವರ ಕಚೇರಿಗೆ ಎಲ್ಲಾ 8 ವಲಯಗಳ ಜಂಟಿ ಆಯುಕ್ತರು ಸಲ್ಲಿಸಿರುವ ರಿಪೋರ್ಟ್ ಇದು.ಈ ಪೈಕಿ ಸರ್ಕಾರಿ ಜಾಗದಲ್ಲಿ 2,111 ಧಾರ್ಮಿಕ ಕೇಂದ್ರಗಳು ಅನಧೀಕೃತವಾಗಿ ತಲೆ ಎತ್ತಿದ್ದರೆ, ಖಾಸಗಿ ಭೂಮಿಯಲ್ಲಿ 4295 ಶೃದ್ಧಾಕೇಂದ್ರಗಳು ಅಕ್ರಮವಾಗಿ ನಿರ್ಮಾಣವಾಗಿವೆ.ಇಷ್ಟೊಂದು ದೊಡ್ಡ ಬೆಂಗಳೂರಿನಲ್ಲಿ ಇರೋದು ಇಷ್ಟೆನಾ ಅನಧೀಕೃತ ಧಾರ್ಮಿಕ ಕೇಂದ್ರಗಳು ಎನ್ನುವ ಪ್ರಶ್ನೆ ಮೂಡಿದ್ರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಕೋರ್ಟ್ ಗೆ ಸಲ್ಲಿಸಲು ಸಿದ್ಧಪಡಿಸಿರೋ ಲೀಸ್ಟ್ ನ್ನು ಪ್ರಾಮಾಣಿಕವಾಗಿಯೇ ರೆಡಿ ಮಾಡಿರುವುದಾಗಿ ಹೇಳ್ತಾರೆ..

ಅಂದ್ಹಾಗೆ ಬಿಬಿಎಂಪಿ ಅಧಿಕಾರಿಗಳು ಹೈ ಕೋರ್ಟ್ ಆದೇಶದ ಮೇರೆಗೆ ಅನಧೀಕೃತ ಧಾರ್ಮಿಕ ಕೇಂದ್ರಗಳನ್ನು 2009ಕ್ಕೆ ಮುನ್ನ ನಿರ್ಮಾಣಗೊಂಡ ಧಾರ್ಮಿಕ ಕೇಂದ್ರಗಳು,2009ರ ನಂತರ ನಿರ್ಮಾಣಗೊಂಡ ಧಾರ್ಮಿಕ ಕೇಂದ್ರಗಳೆಂದು ಎರಡು ಕೆಟಗರಿ ಮಾಡಲಾಗಿದೆ.ಆ ಪೈಕಿ ಸರ್ಕಾರಿ ಜಾಗದಲ್ಲಿ 2009ಕ್ಕೂ ಮುನ್ನ 1870 ಧಾರ್ಮಿಕ ಕೇಂದ್ರಗಳು ಅಕ್ರಮವಾಗಿ ನಿರ್ಮಾಣಗೊಂಡಿವೆಯಂತೆ.2009ರ ನಂತರದಲ್ಲಿ 241 ಧಾರ್ಮಿಕ ಕೇಂದ್ರಗಳು ಅನಧೀಕೃತವಾಗಿ ತಲೆ ಎತ್ತಿವೆಯಂತೆ. ಇನ್ನು ಖಾಸಗಿ ಭೂಮಿಯಲ್ಲಿ 3916 ಧಾರ್ಮಿಕ ಕೇಂದ್ರಗಳು 2009ಕ್ಕೂ ಮುನ್ನ ಅಕ್ರಮವಾಗಿ ನಿರ್ಮಾಣವಾಗಿದ್ದರೆ,379 ಧಾರ್ಮಿಕ ಕೇಂದ್ರಗಳು 2009ರ ನಂತರ ನಿರ್ಮಾಣಗೊಂಡಿವೆ ಎನ್ನುವುದು ಬಿಬಿಎಂಪಿ ಸಿದ್ಧಪಡಿಸಿರುವ ರಿಪೋರ್ಟ್ ನಲ್ಲಿದೆ.

2009ರ ಕ್ಕೂ ಮುನ್ನ ಸರ್ಕಾರಿ ಭೂಮಿಯಲ್ಲಿ ನಿರ್ಮಾಣಗೊಂಡ ಅನಧೀಕೃತ ಧಾರ್ಮಿಕ ಕೇಂದ್ರಗಳು:2ವಲಯವಾರು ಇಷ್ಟು ಅನಧೀಕೃತ ಧಾರ್ಮಿ ಕೇಂದ್ರಗಳಿವೆ..: ಬಿಬಿಎಂಪಿ ವ್ಯಾಪ್ತಿಯ 8 ವಲಯಗಳ ಲೆಕ್ಕಾಚಾರ ಗಮನಿಸಿದ್ರೆ,ಸರ್ಕಾರಿ ಭೂಮಿಯಲ್ಲಿ 2009ಕ್ಕೂ ಮುನ್ನ ನಿರ್ಮಾಣ ಗೊಂಡ ಅನಧೀಕೃತ ಶೃದ್ಧಾಕೇಂದ್ರಗಳು ಯಾವುದಾದರೂ ವಲಯದಲ್ಲಿ ಹೆಚ್ಚಿವೆ ಎಂದ್ರೆ ಅದು ಪೂರ್ವ ವಲಯ.485 ಧಾರ್ಮಿ ಕ ಕೇಂದ್ರಗಳು ಇಲ್ಲಿವೆ.ಆ ನಂತರ ಮಹಾದೇವಪುರ ವಲಯದಲ್ಲಿ 337, ಪಶ್ಚಿಮ ವಲಯದಲ್ಲಿ 230, ದಕ್ಷಿಣ ವಲಯದಲ್ಲಿ 285,ಆರ್ ಆರ್ ನಗರದಲ್ಲಿ 209, ಬೊಮ್ಮನಹಳ್ಳಿ ವಲಯದಲ್ಲಿ 109,ಯಲಹಂಕದಲ್ಲಿ 125 ಹಾಗೂ ಅತೀ ಕಡಿಮೆ ಧಾರ್ಮಿಕ ಕೇಂದ್ರಗಳು ದಾಸರಹಳ್ಳಿ ವಲಯದಲ್ಲಿವೆ.ಅಂದ್ಹಾಗೆ ಈ ವಲಯದಲ್ಲಿ ಪತ್ತೆ ಮಾಡಿರೋದು 90 ಧಾರ್ಮಿಕ ಕೇಂದ್ರಗಳಂತೆ.

2009ರ ನಂತರ ಸರ್ಕಾರಿ ಭೂಮಿಯಲ್ಲಿ ನಿರ್ಮಾಣಗೊಂಡ ಅನಧೀಕೃತ ಧಾರ್ಮಿಕ ಕೇಂದ್ರಗಳು:2009ರ ನಂತರ ಸರ್ಕಾರಿ ಭೂಮಿಯಲ್ಲಿ ಅನಧೀಕೃತವಾಗಿ  ನಿರ್ಮಾಣಗೊಂಡ ಧಾರ್ಮಿಕ ಕೇಂದ್ರಗಳ ಪಟ್ಟಿಯ ಪ್ರಕಾರ ಪೂರ್ವ ವಲಯದಲ್ಲಿ 112, ಮಹಾದೇವಪುರದಲ್ಲಿ 36, ಆರ್ ಆರ್ ನಗರದಲ್ಲಿ 42,ದಕ್ಷಿಣ ವಲಯದಲ್ಲಿ 17, ಪಶ್ಚಿಮ ವಲಯದಲ್ಲಿ 16, ಬೊಮ್ಮನಹಳ್ಳಿಯಲ್ಲಿ 11 ಅನದೀಕೃತ ಧಾರ್ಮಿಕ ಕೇಂದ್ರಗಳಿವೆ.ಅತೀ ಕಡಿಮೆ ಅಂದ್ರೆ 4 ಧಾರ್ಮಿಕ ಕೇಂದ್ರಗಳು ದಾಸರಹಳ್ಳಿಯಲ್ಲೂ,3 ಕೇಂದ್ರಗಳು ಯಲಹಂಕದಲ್ಲಿರುವುದಾಗಿ ವರದಿ ನೀಡಿವೆ.

2009ಕ್ಕೂ ಮುನ್ನ  ಖಾಸಗಿ ಭೂಮಿಯಲ್ಲಿ ನಿರ್ಮಾಣಗೊಂಡ ಅನಧೀಕೃತ ಧಾರ್ಮಿಕ ಕೇಂದ್ರಗಳು:ಇನ್ನು ಖಾಸಗಿ ಭೂಮಿಯಲ್ಲಿ 2009ಕ್ಕೂ ಮುನ್ನ ನಿರ್ಮಾಣಗೊಂಡ ಅನಧೀಕೃತ ಶೃದ್ಧಾಕೇಂದ್ರಗಳ ಮಾಹಿತಿ ಗಮನಿಸುವುದಾದ್ರೆ, ಪೂರ್ವ ವಲಯದಲ್ಲಿ 976 ಧಾರ್ಮಿಕ ಶೃದ್ದಾಕೇಂದ್ರಗಳಿದ್ದರೆ ,ದಕ್ಷಿಣದಲ್ಲಿ 778 ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮಹದೇವಪುರದಲ್ಲಿ 498 ಧಾರ್ಮಿಕ ಶ್ರದ್ಧಾ ಕೇಂದ್ರಗಳು,ಪಶ್ಚಿಮದಲ್ಲಿ‌ 453 ಶೃದ್ದಾಕೇಂದ್ರಗಳು,ಯಲಹಂಕ ವ್ಯಾಪ್ತಿಯಲ್ಲಿ 414 ಶ್ರದ್ಧಾಕೇಂದ್ರಗಳು, ಆರ್ ಆರ್ ನಗರ ವ್ಯಾಪ್ತಿಯಲ್ಲಿ 365 ಶ್ರದ್ಧಾಕೇಂದ್ರಗಳು, ಬೊಮ್ಮನಳ್ಳಿ ವ್ಯಾಪ್ತಿಯಲ್ಲಿ  262 ಶ್ರದ್ಧಾ ಕೇಂದ್ರಗಳು, ಹಾಗೂ ದಾಸರಹಳ್ಳಿ ವಲಯದಲ್ಲಿ 179 ಶ್ರದ್ಧಾಕೆಂದ್ರಗಳು,

ಎಂಟು ವಲಯಗಳಲ್ಲಿನ ಮಾಹಿತಿ ಕ್ರೋಢಿಕರಿಸಿ ಮುಖ್ಯ ಅಭಿಯಂತರರ ಕಚೇರಿಯಲ್ಲಿ ಸಿದ್ದಪಡಿಸಲಾಗಿರುವ ಬಿಬಿಎಂಪಿ 198 ವಾರ್ಡ್ ಗಳಲ್ಲಿರುವ ಅನಧೀಕೃತ ಧಾರ್ಮಿಕ ಕೇಂದ್ರಗಳ ಫೈನಲ್ ಲೀಸ್ಟ್..
ಎಂಟು ವಲಯಗಳಲ್ಲಿನ ಮಾಹಿತಿ ಕ್ರೋಢಿಕರಿಸಿ ಮುಖ್ಯ ಅಭಿಯಂತರರ ಕಚೇರಿಯಲ್ಲಿ ಸಿದ್ದಪಡಿಸಲಾಗಿರುವ ಬಿಬಿಎಂಪಿ 198 ವಾರ್ಡ್ ಗಳಲ್ಲಿರುವ ಅನಧೀಕೃತ ಧಾರ್ಮಿಕ ಕೇಂದ್ರಗಳ ಫೈನಲ್ ಲೀಸ್ಟ್..

2009ರ ನಂತರ ಖಾಸಗಿ ಭೂಮಿಯಲ್ಲಿ ನಿರ್ಮಾಣಗೊಂಡ ಅನಧೀಕೃತ ಧಾರ್ಮಿಕ ಕೇಂದ್ರಗಳು: ಇನ್ನು 2009 ರ ನಂತರದಲ್ಲಿ ಬಿಬಿಎಂಪಿಯ 198  ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳ ಲೆಕ್ಕ ನೋಡುವುದಾದರೆ,ಅತೀ ಹೆಚ್ಚಿನ ಅನಧೀಕೃತ ಧಾರ್ಮಿಕ ಕಟ್ಟಡ ಅಂದ್ರೆ 106  ಧಾರ್ಮಿಕ ಕೇಂದ್ರಗಳು ಮಹದೇವಪುರ ವಲಯದಲ್ಲಿ ದಾಖಲಾಗಿದೆ.81ಧಾರ್ಮಿಕ ಕೇಂದ್ರಗಳು ಪೂರ್ವ ವಲಯದಲ್ಲಿ,77  ಧಾರ್ಮಿಕ ಕೇಂದ್ರಗಳು ಆರ್ ಆರ್  ನಗರದಲ್ಲಿ, ಮಹಾದೇವಪುರದಲ್ಲಿ 46 ಧಾರ್ಮಿಕ ಕೇಂದ್ರಗಳು, 28  ಧಾರ್ಮಿಕ ಕೇಂದ್ರಗಳು ಪಶ್ಚಿಮ ವಲಯದಲ್ಲಿ, 24 ಬೊಮ್ಮನಹಳ್ಳಿಯಲ್ಲಿ,17 ದಕ್ಷಿಣ ವಲಯದಲ್ಲಿ ಪತ್ತೆಯಾಗಿದೆ.ಆಶ್ಚರ್ಯ ಎಂದ್ರೆ ದಾಸರಹಳ್ಳಿ ವಲಯದಲ್ಲಿ ಒಂದೇ ಒಂದು ಅನಧೀಕೃತ ಧಾರ್ಮಿಕ ಕೇಂದ್ರಗಳು‌  ಖಾಸಗಿ ಜಾಗದಲ್ಲಿ ನಿರ್ಮಾಣವಾಗಿಲ್ಲವಂತೆ.

ತೆರವು-ಅಧೀಕೃತ-ರಿಲೊಕೇಟ್ ಮಾಡಲಾದ  ಅನಧೀಕೃತ ಧಾರ್ಮಿಕ ಕೇಂದ್ರಗಳ ವಿವರ:ಸರ್ಕಾರಿ ಜಾಗದಲ್ಲಿ ನಿರ್ಮಾಣವಾದಂತಹ 1870  ಅನಧಿಕೃತ ಧಾರ್ಮಿಕ ಕೇಂದ್ರಗಳ ಪೈಕಿ 223 ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗಿದೆ.1544 ಧಾರ್ಮಿಕ ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದೆ.103 ಧಾರ್ಮಿಕ ಕೇಂದ್ರಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆಯಂತೆ.

ಇನ್ನೂ 2009ರ ನಂತರದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಾಣ ವಾದ 241 ಧಾರ್ಮಿಕ ದೇಗುಲಗಳ ಪೈಕಿ 180  ತೆರವು ಮಾಡಲಾಗಿದೆ.52 ನ್ನು  ಅಧಿಕೃತಗೊಳಿಸಲಾಗಿದೆ.ಹಾಗೆಯೇ 8 ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆಯಂತೆ.ಖಾಸಗಿ ಭೂಮಿಯಲ್ಲಿ 200 9ಕ್ಕೂ ಮುನ್ನ ನಿರ್ಮಾಣ ಮಾಡಲಾದಂತಹ  3916 ಧಾರ್ಮಿಕ ಕೇಂದ್ರಗಳ ಪೈಕಿ 42  ನ್ನು  ತೆರವು ಮಾಡಲಾಗಿದೆ.3845 ನ್ನು  ಅಧಿಕೃತಗೊಳಿಸಲಾಗಿದೆ ಹಾಗೆಯೇ 29ಧಾರ್ಮಿಕ ಕೇಂದ್ರಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆಯಂತೆ.ಖಾಸಗಿ ಭೂಮಿಯಲ್ಲಿ 200 9ಕ್ಕೂ ಮುನ್ನ ನಿರ್ಮಾಣ ಮಾಡಲಾದಂತಹ  3916 ಧಾರ್ಮಿಕ ಕೇಂದ್ರಗಳ ಪೈಕಿ 42  ನ್ನು  ತೆರವು ಮಾಡಲಾಗಿದೆ.3845 ನ್ನು  ಅಧಿಕೃತಗೊಳಿಸಲಾಗಿದೆ ಹಾಗೆಯೇ 29ಧಾರ್ಮಿಕ ಕೇಂದ್ರಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆಯಂತೆ.

ಒಟ್ಟಿನಲ್ಲಿ ಸರ್ಕಾರಿ ಭೂಮಿಯಲ್ಲಿ 2009ಕ್ಕಿಂತ ಮುನ್ನ ಹಾಗೆಯೇ 2009ರ ನಂತರ ನಿರ್ಮಾಣವಾದಂತಹ 2111 ಅನಧಿಕೃತ ಧಾರ್ಮಿಕ ಕೇಂದ್ರಗಳ ಪೈಕಿ 404 ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗಿದೆ 1596 ಧಾರ್ಮಿಕ ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದೆ. ಹಾಗೆಯೇ ಉಳಿದ 111 ಧಾರ್ಮಿಕ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ.ಇನ್ನು ಖಾಸಗಿ ಭೂಮಿಯಲ್ಲಿ‌ ನಿರ್ಮಾಣವಾಗಿದ್ದ  4295  ಅನಧಿಕೃತ ಧರ್ಮಿಕ ಕೇಂದ್ರಗಳಲ್ಲಿ 52 ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗಿದೆ. 4204ಕ್ಕೂ ಧಾರ್ಮಿಕ ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದೆ.39   ಧಾರ್ಮಿಕ ಕೇಂದ್ರಗಳನ್ನು ರಿಲೋಕೇಟ್ ಮಾಡಲಾಗಿದೆ ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದೆ.

2009ರ  “ಮುನ್ನ-ನಂತರ” ಸರ್ಕಾರಿ ಭೂಮಿಯಲ್ಲಿ ನಿರ್ಮಾಣಗೊಂಡ ಅನಧೀಕೃತ ಧಾರ್ಮಿಕ ಕೇಂದ್ರಗಳು

ಒಟ್ಟು 2111

ತೆರವು-404

ಅಧೀಕೃತ-1596

ಸ್ಥಳಾಂತರ(Relocate)-111

 

2009ರ  “ಮುನ್ನ-ನಂತರ” ಖಾಸಗಿ ಭೂಮಿಯಲ್ಲಿ ನಿರ್ಮಾಣಗೊಂಡ ಅನಧೀಕೃತ ಧಾರ್ಮಿಕ ಕೇಂದ್ರಗಳು

ಒಟ್ಟು -4295

ತೆರವು-52

ಅಧೀಕೃತ-4204

ಸ್ಥಳಾಂತರ (Relocate)-39

Spread the love
Leave A Reply

Your email address will not be published.

Flash News