EX-POLICE COMMISSINOR BHASKAR RAO GUDBYE..?!.:”ಪೊಲೀಸ್” ಸೇವೆಗೆ “ಮಾಜಿ ಕಮಿಷನರ್” ಭಾಸ್ಕರ್ ರಾವ್ “ಗುಡ್ ಬೈ”..?! ಬಸವನಗುಡಿಯಿಂದ ಸ್ಪರ್ಧೆ ಸಾಧ್ಯತೆ..?! ಬಿಜೆಪಿಗೆ ಠಕ್ಕರ್ ಗ್ಯಾರಂಟಿ..?!

ಕಾಂಗ್ರೆಸ್ ನಿಂದ ಬಹುತೇಕ ಸ್ಪರ್ಧೆ..ಕೈ ಟಿಕೆಟ್ ನಿರಾಕರಿಸಿದ್ರೆ ಆಮ್ ಆದ್ಮಿಯಿಂದ ಸ್ಪರ್ಧಿಸುವುದು ಪಕ್ಕಾ..?!

0

ಬೆಂಗಳೂರು:ಶೀಘ್ರದಲ್ಲೇ ಮತ್ತೋರ್ವ ಖಡಕ್ ಪೊಲೀಸ್ ಅಧಿಕಾರಿ ಇಲಾಖೆಗೆ ಗುಡ್ ಬೈ ಹೇಳುವ ಸಾಧ್ಯತೆಗಳಿವೆ ಎನ್ನಲಾಗಿದೆ.ಪೊಲೀಸ್ ಇಲಾಖೆಯ ಕೆಲವು ಮೂಲಗಳಲ್ಲೇ ಇಂತದ್ದೊಂದು ಸುದ್ದಿ ಹರಿದಾಡುತ್ತಿದೆ.ಅಂದ್ಹಾಗೆ ಆ ಪೊಲೀಸ್ ಅಧಿಕಾರಿ ಯಾರು..? ಯಾವ ಉದ್ದೇಶಕ್ಕೆ ಗುಡ್ ಬೈ ಹೇಳೊಕ್ಕೆ ನಿರ್ಧರಿಸಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಹೌದು.. ಬಹುತೇಕ ಮೂಲಗಳಿಂದ ಕೇಳಿಬರುತ್ತಿರುವ ಆ ಹೆಸರೇ ಭಾಸ್ಕರ್ ರಾವ್.ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್,  ರೈಲ್ವೆ ಇಲಾಖೆಯ ಹಾಲಿ ಎಡಿಜಿಪಿ ಭಾಸ್ಕರ್ ರಾವ್ ಅವರೇ ಗುಡ್ ಬೈ ಹೇಳೊಕ್ಕೆ ನಿರ್ಧರಿಸಿದ್ದಾರೆನ್ನಲಾಗಿದೆ.ಅಂದ್ಹಾಗೆ ಗುಡ್ ಬೈ ಹೇಳೊಕ್ಕೆ ಕಾರಣ ಚುನಾವಣೆ ಎನ್ನಲಾಗ್ತಿದೆ.

ಕೇಳೊಕ್ಕೆ ಆಶ್ಚರ್ಯವಾದ್ರೂ ಬಹುತೇಕರು ಹೇಳುವ ಪ್ರಕಾರ ಇದು ಸತ್ಯವಂತೆ..ಮೊದಲಿಂದಲೂ ಚುನಾವಣಾ ರಾಜಕಾರಣದ ಬಗ್ಗೆ ಉತ್ಸುಕತೆ-ಆಸಕ್ತಿ ಹೊಂದಿದ್ದರೆನ್ನಲಾಗುವ ಭಾಸ್ಕರ್ ರಾವ್ ಅವರನ್ನು ಈಗಾಗಲೇ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಸಂಪರ್ಕ ಮಾಡಿ,ಅವರ ಮನವೊಲಿಸುವಂಥ ಕೆಲಸ ಮಾಡಿವೆ ಎನ್ನಲಾಗ್ತಿದೆ.

ಭಾಸ್ಕರ್ ರಾವ್ ಹುಟ್ಟಿದ್ದು ಚೆನ್ನೈ ಆದರೂ,ಬಹುತೇಕ ಶಿಕ್ಷಣವನ್ನು ಪೂರೈಸಿದ್ದು  ಬೆಂಗಳೂರಿನಲ್ಲಿ.ಹಾಗಾಗಿ ಅವರು ಬೆಂಗಳೂರಿನವರೇ ಆಗಿದ್ದಾರೆ.ಬೆಂಗಳೂರು ದಕ್ಷಿಣ ಭಾಗವಾದ ಬಸವನಗುಡಿಯಲ್ಲೇ ಅವರ ಕುಟುಂಬ ನೆಲೆಸಿದ್ದರಿಂದ ಅವರಿಗೆ ಬಸವನಗುಡಿ ಹಾಗು ಸುತ್ತಮುತ್ತವೇ ಹೆಚ್ಚಿನ ಒಡನಾಟ-ಸಂಪರ್ಕ ಬೆಳೆದಿತ್ತು.ಈಗಲೂ ಅದೇ ವಿಶ್ವಾಸ-ಆತ್ಮೀಯತೆಯ ನಂಟನ್ನು ಬಸವನಗುಡಿ ಜತೆ ಹೊಂದಿದ್ದಾರೆ.

ಬಸವನಗುಡಿಯನ್ನು ಚೆನ್ನಾಗಿ ಬಲ್ಲಂಥ,ಅಲ್ಲಿನ ಜನರೊಂದಿಗೆ ಒಡನಾಟ ಹೊಂದಿರುವ ಭಾಸ್ಕರ್ ರಾವ್ ಅವರು ಬಸವನಗುಡಿಯಿಂದಲೇ ಸ್ಪರ್ಧಿಸಬೇಕೆನ್ನುವ ಇಚ್ಛೆ ಹೊಂದಿದ್ದಾರೆನ್ನಲಾಗಿದೆ.ಕಾಂಗ್ರೆಸ್ ಮುಖಂಡರೊಂದಿಗೆ ಉತ್ತಮ ಸಂಪರ್ಕ,ಬಾಂಧವ್ಯ ಇರುವುದರಿಂದ ಕೈ ಪಕ್ಷದಿಂದಲೇ ಟಿಕೆಟ್ ಕೇಳಿದ್ದಾರೆನ್ನಲಾಗಿದೆ.ಅನೇಕ ಸುತ್ತಿನ ಮಾತುಕತೆಯು ನಡೆದಿದೆಯಂತೆ.ಒಂದ್ವೇಳೆ ಕಾಂಗ್ರೆಸ್ ಅದಕ್ಕೆ ಒಪ್ಪಿದರೆ ರಾಜಿನಾಮೆ ನೀಡಿ ಚುನಾವಣಾ ಸಿದ್ಧತೆ ಮಾಡಿಕೊಳ್ಳಬಹುದೆನ್ನಲಾಗಿದೆ.

ಒಂದ್ವೇಳೆ ಕೈ ಪಕ್ಷ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ನಿರಾಕರಿಸಿದ್ರೆ ಆಮ್ ಆದ್ಮಿಯಿಂದ ಸ್ಪರ್ಧೆಗಿಳಿಯೋದು ಪಕ್ಕಾ ಎನ್ನಲಾಗಿದೆ.ಈ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷದ ವರಿಷ್ಠರು ಕೂಡ ಅವರೊಂದಿಗೆ ಸಂಪರ್ಕದಲ್ಲಿದ್ದಾರೆನ್ನಲಾಗಿದೆ.ಬಸವನಗುಡಿಯಿಂದಲೇ ಭಾಸ್ಕರ್ ರಾವ್ ಸ್ಪರ್ಧಿಸಬಹುದೆನ್ನುವ ಸುದ್ದಿ ಹರಿದಾಡೊಕ್ಕೆ ಕಾರಣ ಅವರುಇ ಜಾತಿಯಲ್ಲಿ  ಬ್ರಾಹ್ಮಣರಾಗಿರುವುದು.ಬಸವನಗುಡಿ ಬ್ರಾಹ್ಮಣ ಸಮುದಾಯದ ಭದ್ರಕೋಟೆ..ಬ್ರಾಹ್ಮಣ ಬಾಂಧವರೇ ಅಲ್ಲಿ ನಿರ್ಣಾಯಕ ಆಗಿರುವುದರಿಂದ ಅಲ್ಲಿಂದಲೇ ಸ್ಪರ್ಧಿಸುವುದು ಸೂಕ್ತ ಎನ್ನುವ ಆಲೋಚನೆ  ಭಾಸ್ಕರ್ ರಾವ್ ಅವರಿಗೆ ಬಂದಿರಬಹುದೆನ್ನಲಾಗಿದೆ.

ಭಾಸ್ಕರ್ ರಾವ್ ಅವರ ನಿವೃತ್ತಿಗೆ ಇನ್ನೂ ಒಂದು ವರ್ಷ ಕಾಲವಿದೆ..ಚುನಾವಣೆನು ಹತ್ತಿರವಿದೆ.ಒಂದ್ವೇಳೆ ಎಲ್ಲಾ ನಿರೀಕ್ಷೆಯಂತಾದ್ರೆ ಸರ್ವಿಸ್ ಮುಗಿಯುವುದರೊಳಗೆ ಭಾಸ್ಕರ್ ರಾವ್ ಸ್ವಯಂನಿವೃತ್ತಿ ಪಡೆದು ರಾಜಕೀಯಕ್ಕೆ ಧುಮುಕುವ ಸಾಧ್ಯತೆಗಳಿವೆ.ಅದಾಗದಿದ್ದರೆ ನಿವೃತ್ತಿ ನಂತರವಾದ್ರೂ ಭಾಸ್ಕರ್ ರಾವ್ ರಾಜಕೀಯ ಪ್ರವೇಶಿಸುವುದು ಪಕ್ಕಾ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿದೆ.ಒಂದ್ವೇಳೆ,ನಿರೀಕ್ಷೆಯಂತೆ ಭಾಸ್ಕರ್ ರಾವ್ ಸ್ವಯಂನಿವೃತ್ತಿ ಪಡೆದು ರಾಜಕೀಯಕ್ಕೆ ಎಂಟ್ರಿಯಾಗಲಿ..ಅಥವಾ ನಿವೃತ್ತಿ ನಂತರವೇ ರಾಜಕೀಯಕ್ಕೆ ಧುಮುಕಿ ಬಸವನಗುಡಿಯಿಂದ ಸ್ಪರ್ಧಿಸುವುದಾಗಿ ಘೋಷಿಸಲಿ ಬಿಜೆಪಿ ಹಾಗೂ ಎಮ್ಮೆಲ್ಲೆ ರವಿಸುಬ್ರಹ್ಮಣ್ಯ ಅವರ ಎದೆಯಲ್ಲಿ ಸಣ್ಣದೊಂದು ನಡುಕ ಈಗಿನಿಂದ್ಲೇ ಶುರುವಾಗಿರುವುದಂತೂ ಸತ್ಯ..

Spread the love
Leave A Reply

Your email address will not be published.

Flash News