KUVEMPU UNIVERSITY CONVOCATION:NIRMALA SEETARAMA GUEST: ಕುವೆಂಪು ವಿವಿ 31 ನೇ ಘಟಿಕೋತ್ಸವಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯ ಅತಿಥಿ..

ಅಕ್ಟೋಬರ್ ಕೊನೇ ವಾರದಲ್ಲಿ ನಡೆಯಲಿರುವ ಘಟಿಕೋತ್ಸವ:ದೆಹಲಿಗೆ ತೆರಳಿ ಸಚಿವರನ್ನು ಆಮಂತ್ರಿಸಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ನೇತೃತ್ವದ ವಿಶ್ವವಿದ್ಯಾಲಯದ ನಿಯೋಗ

0
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ನೇತೃತ್ವದ ವಿಶ್ವವಿದ್ಯಾಲಯದ ನಿಯೋಗ ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಘಟಿಕೋತ್ಸವಕ್ಕೆ ಆಹ್ವಾನ ನೀಡಿದ ಸಂದರ್ಭ. ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಎಸ್. ಎನ್. ಯೋಗೀಶ್, ಕುವೆಂಪು ವಿಶ್ವವಿದ್ಯಾಲಯದ ದೆಹಲಿ ಪ್ರತಿನಿಧಿ ರಾಜಶೇಖರ್ ಸವಣೂರು ಹಾಜರಿದ್ದರು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ನೇತೃತ್ವದ ವಿಶ್ವವಿದ್ಯಾಲಯ ದ ನಿಯೋಗ ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಘಟಿಕೋತ್ಸವಕ್ಕೆ ಆಹ್ವಾನ ನೀಡಿದ ಸಂದರ್ಭ. ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಎಸ್. ಎನ್. ಯೋಗೀಶ್, ಕುವೆಂಪು ವಿಶ್ವವಿದ್ಯಾಲಯದ ದೆಹಲಿ ಪ್ರತಿನಿಧಿ ರಾಜಶೇಖರ್ ಸವಣೂರು ಹಾಜರಿದ್ದರು.

ಬೆಂಗಳೂರು: ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಕುವೆಂಪು ವಿಶ್ವವಿದ್ಯಾಲಯದ 31ನೇ ವಾರ್ಷಿಕ ಘಟಿಕೋತ್ಸವಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯ ಅತಿಥಿಯಾಗಿ ಭಾಗವಹಿಸುವುದು ಬಹುತೇಕ ನಿಕ್ಕಿಯಾಗಿದೆ ಎಂದು ವಿವಿಯ ಮೂಲಗಳು ತಿಳಿಸಿವೆ.

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ನೇತೃತ್ವದ ವಿಶ್ವವಿದ್ಯಾಲಯದ ನಿಯೋಗ ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಘಟಿಕೋತ್ಸವಕ್ಕೆ ಆಹ್ವಾನ ನೀಡಿದ ವೇಳೆ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವರು ಸಮ್ಮತಿಸಿದ್ದಾರಂತೆ.ಸಚಿವರಿಗೆ ಅನುಕೂಲವಾಗಲಿರುವ ದಿನಾಂಕವನ್ನು ನಿಗಧಿಪಡಿಸಿ ಅಕ್ಟೋಬರ್ ನಲ್ಲಿ ಘಟಿಕೋತ್ಸವ ನಡೆಸಲಾಗುವುದು ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ,ಮಾನ್ಯ ಹಣಕಾಸು ಸಚಿವರು ಅಕ್ಟೋಬರ್ 15ರ ನಂತರ ಘಟಿಕೋತ್ಸವದಲ್ಲಿ ಭಾಗವಹಿಸುವುದಾಗಿ ಒಪ್ಪಿಗೆ ನೀಡಿದ್ದಾರೆ. ಕೋವಿಡ್ ನಿಬಂಧನೆಗಳು ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಘಟಿಕೋತ್ಸವ ಆಫ್‌ಲೈನ್ ಮಾದರಿಯಲ್ಲಿಯೇ ನಡೆಯಲಿದ್ದು, ಸಚಿವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿರುವುದು ಸಂತಸದ ವಿಷಯ” ಎಂದು ತಿಳಿಸಿದ್ದಾರೆ.ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾದ ವೇಳೆ ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಎಸ್. ಎನ್. ಯೋಗೀಶ್, ಕುವೆಂಪು ವಿಶ್ವವಿದ್ಯಾಲಯದ ದೆಹಲಿ ಪ್ರತಿನಿಧಿ ರಾಜಶೇಖರ್ ಸವಣೂರು ಹಾಜರಿದ್ದರು.

Spread the love
Leave A Reply

Your email address will not be published.

Flash News