Oscar Fernandes Funeral: ಧಾರ್ಮಿಕ ವಿಧಿವಿಧಾನ-ಸರ್ಕಾರಿ ಗೌರವದೊಂದಿಗೆ “ಕ್ರಿಸ್ತೈಕ್ಯ”ರಾದ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್..

ಪಕ್ಷಾತೀತವಾಗಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ರಾಜಕೀಯ ಗಣ್ಯರು-ವಿವಿಧ ಕ್ಷೇತ್ರಗಳ ಗಣ್ಯರು

0

ಬೆಂಗಳೂರು:ಕಾಂಗ್ರೆಸ್ ಪಕ್ಷದ  ಚಿಂತಕರ ಚಾವಡಿಯ ಹಿರಿಯ ಕೊಂಡಿಯೊಂದೇ ಕರೆಯಿಸಿಕೊಂಡಿದ್ದ ಹಿರಿಯ ಮುತ್ಸದ್ಧಿ ನಾಯಕ ಆಸ್ಕರ್ ಫರ್ನಾಂಡಿಸ್ ಅಂತ್ಯಕ್ರಿಯೆ ಕ್ರಿಶ್ಚಿಯನ್ ಸಂಪ್ರದಾಯ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.ಕೆಪಿಸಿಸಿ ಕಚೇರಿಯಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಕಾಂಗ್ರೆಸ್ ಕಾರ್ಯಕರ್ತರು, ತಮ್ಮ‌ನೆಚ್ಚಿನ ನಾಯಯಕನಿಗೆ ಕಣ್ಣೀರ ವಿದಾಯ ಹೇಳಿದ್ರು. ಬಳಿಕ ಸೇಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಹಿರಿ-ಕಿರಿಯ ಮುಖಂಡರು ಭಾಗಿಯಾಗಿದ್ರು.

ಕಾಂಗ್ರೆಸ್ ಕಂಡ ಸಂಭಾವಿತ ರಾಜಕಾರಣಿ ಎಂದೇ ಕರೆಯಿಸಿಕೊಂಡಿದ್ದ ಆಸ್ಕರ್ ಫರ್ನಾಂಡಿಸ್ ಅವರ ಅಂತ್ಯಸಂಸ್ಕಾರ ಇವತ್ತು ಅತ್ಯಂತ ಭಾವನಾತ್ಮಕವಾದ ಸನ್ನಿವೇಶವಾಗಿ ಮಾರ್ಪಾಡಾಗಿತ್ತು.ಪಕ್ಷಾತೀತವಾಗಿ ಅವರ ಅಂತಿಮ ದರ್ಶನ ಪಡೆದ ರಾಜಕೀಯ ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ದಿಗ್ಗಜರು ಫರ್ನಾಂಡೀಸ್ ಅವರ ರಾಜಕೀಯ ಅನುಭವ- ಸೈದ್ದಾಂತಿಕ ಬದ್ಧತೆ ಹಾಗೂ ರಾಜಿರಹಿತ ಮನೋಧರ್ಮವನ್ನು ಸ್ಮರಿಸಿದರು.

ಆಸ್ಕರ್ ಫರ್ನಾಂಡೀಸ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದವರಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್, ರಂದೀಪ್ ಸುರ್ಜೆವಾಲ, ಡಿ.ಕೆ.ಶಿವಕುಮಾರ್, ವೀರಪ್ಪ ಮೋಯ್ಲಿ, ಎಸ್. ಆರ್. ಪಾಟೀಲ್, ಎಚ್. ಕೆ ಪಾಟೀಲ್ ಪ್ರಮುಖವಾಗಿದ್ದರು.ಕೆಪಿಸಿಸಿಯಲ್ಲಿ ಅಂತಿಮ ದರ್ಶನ ಪಡೆದ ನಾಯಕರು, ಫೆರ್ನಾಂಡಿಸ್ ಉತ್ತಮ ರಾಜಕಾರಣಿ,  ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದವರು. ಪಕ್ಷದ ಎಲ್ಲ ಕಾರ್ಯಕರ್ತರನ್ನು ಅಣ್ಣ ತಮ್ಮಂದಿರಂತೆ ಕಂಡವರು. ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಯನ್ನು ಸುಲಭವಾಗಿ ನಿಭಾಯಿಸಿದವರು. ಅವರನ್ನು ಕಳೆದುಕೊಂಡ ಕಾಂಗ್ರೇಸ್ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ ಎಂದ್ರು.

ಆಸ್ಕರ್ ಅವರ ಅಂತಿಮ ದರ್ಶನ ಪಡೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ರು. ಬ್ರಿಗೇಡ್ ರಸ್ತೆಯಲ್ಲಿರುವ ಸಂತ ಪ್ಯಾಟ್ರಿಕ್ಸ್ ಚರ್ಚ್ ನಲ್ಲಿ ರಾಹುಲ್ ಗಾಂಧಿ ಅಂತಿಮ ದರ್ಶನ ಪಡೆದ್ರು. ಇನ್ನು ಅವರ ಕೊನೆಯ ಪ್ರಾರ್ಥನೆಯಲ್ಲಿಯೂ ಸಹ ಅವರು ಭಾಗಿಯಾದ್ರು. ಪ್ರಾರ್ಥನೆ ಬಳಿಕ ಸಕಲ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯ್ತು. ಬಳಿಕ ಅವರ ಪಾರ್ಥಿವ ಶರೀರವನ್ನು ಹೊಸೂರು ರಸ್ತೆಯಲ್ಲಿರುವ ಕ್ರಿಶ್ಚಿಯನ್ ಸಮಾಧಿ ಸ್ಥಳದಲ್ಲಿ ಕ್ರೈಸ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಯ್ತು.

ಇನ್ನು ಆಸ್ಕರ್ ಫರ್ನಾಂಡಿಸ್ ಅವರ ನಿಧನ ಕಾಂಗ್ರೆಸ್ ಪಕ್ಷಕ್ಕೆ  ತುಂಬಲಾಗದ ನಷ್ಟ ಉಂಟು ಮಾಡಿದೆ. ಕೈ ಕಾರ್ಯಕರ್ತರು ಮತ್ತೆ ಹುಟ್ಟಿ ಬನ್ನಿ ಆಸ್ಕರ್ ಜೀ. ಅಮರ್ ರಹೆ ಅಮರ್ ರಹೆ ಪರ್ನಾಂಡಿಸ್ ಅನ್ನುವ ಘೋಷಣೆ ಮೂಲಕ ವಿದಾಯ ಹೇಳಿದ್ರು.ಖುದ್ದು ಅತ್ಯುತ್ತಮ ಯೋಗಪಟುವಾಗಿದ್ದ ಆಸ್ಕರ್ ಕೆಲ ದಿನಗಳ ಹಿಂದೆ ಮನೆಯಲ್ಲಿ  ಯೋಗ ಮಾಡುವಾಗ ಆಯತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.ಅನೇಕ ದಿನಗಳವರೆಗೂ ಮಂಗಳೂರಿನ ಎನೆಪೋಯಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ  ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದರು. ಮಂಗಳೂರಿನಿಂದ ಬೆಂಗಳೂರಿನ ಕೆಪಿಸಿಸಿ ಕಛೇರಿಗೆ ಪಾರ್ಥಿವ ಶರೀರ ತಂದು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

Spread the love
Leave A Reply

Your email address will not be published.

Flash News