PUC STUDENT SUCIDE BY HIS FATHER REVOLVER: ಅಪ್ಪ,500 ರೂ ಕೊಡಲಿಲ್ಲ ಎಂದು ಗುಂಡು ಹಾರಿಸಿಕೊಂಡು ರ್ಯಾಂಕ್ ಸ್ಟೂಡೆಂಟ್ ಸೂಸೈಡ್..!?

ಶಿಸ್ತಿನ ಸಿಪಾಯಿಯಾಗಿದ್ದ ತಂದೆಯ ಏರುಧ್ವನಿಯ ಗದರಿಕೆಗೆ ಬದುಕನ್ನೇ ಕೊನೆಗಾಣಿಸಿಕೊಂಡ ಪಿಯು ವಿದ್ಯಾರ್ಥಿ-ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣವಾಗಿತ್ತಾ..?!

0
ಪ್ರತಿಭಾವಂತ ವಿದ್ಯಾರ್ಥಿ ರಾಹುಲ್ ಭಂಡಾರಿ
ರಾಹುಲ್ ಭಂಡಾರಿ..

ಬೆಂಗಳೂರು: ಅಪ್ಪ..ಆ 500 ರೂ ಕೊಟ್ಟಿದಿದ್ದರೆ ಮಗ ಬದುಕುಳಿದುಬಿಡ್ತಿದ್ದನೇನೋ..ಪೋಷಕರ  ಅತಿಯಾದ “ಶಿಸ್ತೇ” ಕೆಲವೊಮ್ಮೆ ಮಕ್ಕಳ ಪಾಲಿಗೆ ಹೇಗೆ ಉರುಳಾಗುತ್ತೆನ್ನುವುದಕ್ಕೆ ದುರಂತ ನಿದರ್ಶನ ಇದು..

ಆತ ಪ್ರತಿಭಾನ್ವಿತ ವಿದ್ಯಾರ್ಥಿ-ಶಿಸ್ತಿಗೆ ಹೇಳಿ ಮಾಡಿಸಿದ ಆರ್ಮಿ ಅಧಿಕಾರಿಯ ಮಗ..ಪೋಷಕರು ಕೂಡ ತಮ್ಮಂತೆ ಮಗ ಶಿಸ್ತುಬದ್ಧ ವ್ಯಕ್ತಿತ್ವ-ಬದುಕು ರೂಪಿಸಿಕೊಳ್ಳಬೇಕೆನ್ನುವ ಮಹದಾಸೆಯಲ್ಲಿ ಆರ್ಮಿ ಸ್ಕೂಲ್ ಗೆ ಹಾಕಿದ್ರು.ಎಸ್ ಎಸ್ ಎಲ್ ಸಿಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕವನ್ನೂ ಪಡೆದು ಪೋಷಕರ ನಿರೀಕ್ಷೆ ತಲುಪಿದ್ದ….ಆದರೆ ಹೆತ್ತವರ ಗದರಿಕೆ-ಏರುದ್ವನಿಯ ಬುದ್ದಿವಾದವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆನ್ನುವ ತಪ್ಪು ಪರಿಗ್ರಹಿಕೆಯಲ್ಲಿ ತಂದೆಯ ಸರ್ವಿಸ್ ರಿವಾಲ್ವರ್ ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡೇ ಬಿಟ್ಟ..

ಹೌದು..ಬೆಂಗಳೂರಿನ ಆರ್ ಟಿ ನಗರದ ಗಂಗಾನಗರದ ವ್ಯಾಪ್ತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯೋರ್ವ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಉತ್ತರಾಕಾಂಡ ಮೂಲದ ನಿವೃತ್ತ ಯೋಧ  ಭಗತ್ ಸಿಂಗ್-ಬಾಬ್ನಾ ದಂಪತಿಯ ಪುತ್ರ ಎಂದು ಗುರುತಿಸಲಾಗಿರುವ ಯುವಕನನ್ನು ರಾಹುಲ್ ಎನ್ನಲಾಗಿದೆ.ಮಾನಸಿಕ ಖಿನ್ನತೆಯೇ ಆತ ತನ್ನ ತಂದೆಯ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದೆ.

ಬೆಂಗಳೂರಿನಲ್ಲಿ 20 ವ ರ್ಷಗಳಿಂದ ವಾಸವಾಗಿರುವ  ಭಗತ್ ಸಿಂಗ್-ಬಾಬ್ನಾ ದಂಪತಿ ಮಗ ರಾಹುಲ್ ಭಂಡಾರಿಯನ್ನು ಹೆಚ್ಚು ಮುದ್ದಿನಿಂದ ಸಾಕಿದ್ದರು.ಓದುವುದರಲ್ಲೂ ಪ್ರತಿಭಾನ್ವಿತವಾಗಿದ್ದ ರಾಹುಲ್ ಹತ್ತನೇ ತರಗತಿಯಲ್ಲಿ ಶೇ.90% ರಷ್ಟು ಅಂಕ‌ ಪಡೆದಿದ್ದ.ಆರ್ಮಿ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಇತ್ತೀಚಿನ ದಿನಗಳಲ್ಲಿ ಅನ್ಯಮನಸ್ಕನಾಗಿದ್ದುಬಿಡುತ್ತಿದ್ದನಂತೆ.ಪೋಷಕರು ಓದುವ ಟೆನ್ಷನ್ ಇರಬೇಕು ಎಂದಕೊಂಡು ಸುಮ್ಮನಾಗಿದ್ದರಂತೆ.ಆದ್ರೆ ಆತನಿಗೆ ಸರಿಯಾದ ರೀತಿಯ ಚಿಕಿತ್ಸೆ ಕೊಡಿಸಿದ್ದೇ ಆದಲ್ಲಿ ಇಂಥದ್ದೊಂದು ದುರಂತ ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ.

ಸಧ್ಯ ದ್ವಿತೀಯ ಪಿಯುಸಿ ಓದುತ್ತಿದ್ದ ರಾಹುಲ್,ಬೆಳಗ್ಗೆ ಎಂದಿನಂತೆ ವಾಕಿಂಗ್ ಗೆ ಬಂದಿದ್ದಾನೆ.ಪ್ರತಿ ರಾತ್ರಿ 3ಕ್ಕೆ ಎದ್ದು ಓದುತ್ತಿದ್ದ ಆತ ಸ್ವಲ್ಪ ರಿಲ್ಯಾಕ್ಸೇಷನ್ ಗೆ ವಾಕ್ ಗೆ ಬರುತ್ತಿದ್ದನಂತೆ.ನಿನ್ನೆ ರಾತ್ರಿಯೂ ಹಾಗೆ ಹೊರ ಬಂದಿದ್ದಾನೆ.ಆದ್ರೆ ಹಾಗೆ ಹೊರಬಂದವನು ಮತ್ತೆ ವಾಪಸ್ಸಾಗಲೇ ಇಲ್ಲ.ಮಗ ಬಾರದೇ ಇದ್ದುದ್ದರಿಂದ ವಿಚಲಿತರಾದ ಪೋಷಕರು ಆತನ ಮೊಬೈಲ್ ಗೆ ಕರೆ ಮಾಡಿದ್ದಾರೆ.ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ..ಆತನ ಸ್ನೇಹಿತರು,ಪರಿಚಯಸ್ಥರನ್ನೆಲ್ಲಾ ಕೇಳಿದ್ರೂ ಅವರಿಂದಲೂ ಯಾವುದೇ ಉತ್ತರ ಸಿಕ್ಕಿಲ್ಲ.ಆಗ ಗಾಬರಿಗೊಂಡವರು ಮನೆಯಿಂದ ಹೊರಬಂದು ಮಗನಿಗಾಗಿ ಹುಚ್ಚರಂತೆ ಅಲೆದಾಡಿದ್ದಾರೆ.

ಸ್ವಲ್ಪ ಸಮಯದ  ನಂತರ ಪೊಲೀಸರಿಂದ ಕರೆ ಬಂದಿದೆ.ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡಿರುವ ಸುದ್ದಿ ಹೇಳುತ್ತಿದ್ದಂತೆ ಕುಸಿದೋದ ಪೋಷಕರು ಘಟನಾಸ್ಥಳಕ್ಕೆ ಬಂದು ಕಣ್ಣೀರಿಟ್ಟಿದ್ದಾರೆ.ಪೊಲೀಸ್ ಮಾಹಿತಿಗಳ ಪ್ರಕಾರ ಮುಂಜಾನೆ ಐದು ಗಂಟೆ ಸುಮಾರಿಗೆ ಎಡಭಾಗದಲ್ಲಿ ಶೂಟ್ ಮಾಡಿಕೊಂಡು‌ ಸಾವನ್ನಪ್ಪಿರಬಹುದು ಎನ್ನಲಾಗಿದೆ.  ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಆಗಮಿಸಿಸ್ಥಳ‌ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ಪ್ರಾಥಮಿಕ ತನಿಖೆಯ ವೇಳೆ ಗೊತ್ತಾಗಿರುವ ಸಂಗತಿ ಎಂದ್ರೆ ತಂದೆ ಆರ್ಮಿಯಲ್ಲಿದ್ದುದ್ದರಿಂದ ತುಂಬಾ ಸ್ಟ್ರಿಕ್ಸ್ ಆಗಿದ್ದರಂತೆ.ಮಗ ಕಾಲೇಜ್ ಓದುತ್ತಿದ್ದುದ್ದರಿಂದ ಸ್ನೆಹಿತರ ಜತೆ ತಿರುಗುವುದು,ಶಾಪಿಂಗ್ ಗೆ ಹೋಗುವ ಖಯಾಲಿ ಇತ್ತಂತೆ.ಅದರಂತೆ ನಿನ್ನೆ ಖರ್ಚಿಗೆ 500 ರೂ ಕೇಳಿದ್ದನಂತೆ ತಂದೆ ಪ್ರಜ್ಞಾಪೂರ್ವಕವಾಗಿಯೇನೂ ನಿರಾಕರಿಸಿಲ್ಲ.ತಮಾಷೆಗೆ ಕೊಡೊಕ್ಕಾಗೊಲ್ಲ..ಸುಮ್ನೆ ಓದಿಕೋ ಎಂದು ಗದರಿದ್ದಾರೆ.ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ದಾರಕ್ಕೆ ಬಂದು ಬದುಕನ್ನು ಕೊನೆಗಾಣಿಸಿಕೊಂಡಿರಬೇಕು ಎನ್ನಲಾಗಿದೆ.

ಪೊಲೀಸರು ಘಟನೆ ಹಿನ್ನಲೆಯಲ್ಲಿ ಪೋಷಕರು ಹಾಗೂ ಸ್ನೇಹಿತರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.ಆನಂತರವೇ ರಾಹುಲ್ ಎನ್ನುವ ಪ್ರತಿಭಾನ್ವಿತ ವಿದ್ಯಾರ್ಥಿಯ ಆತ್ಮಹತ್ಯೆಗೆ ನೈಜ ಕಾರಣವೇನೆನ್ನುವುದು ತಿಳಿದುಬರಲಿದೆ.

Spread the love
Leave A Reply

Your email address will not be published.

Flash News