ಬೆಂಗಳೂರು, ರಾಜಧಾನಿ ಬೆಂಗಳೂರು ದಿನಕಳೆದಂತೆಲ್ಲಾ ಮರ್ಡರ್-ಕ್ರೈಂ ಸಿಟಿಯಾಗುತ್ತಿದೆ.ಪಾತಕಿಗಳಿಗೆ ಕೊಂಚ ಭಯವೂ ಇಲ್ಲದಂತೆ ಎಲ್ಲಿ ಬೇಕೆಂದರಲ್ಲಿ ಅಲ್ಲಿ ಸಿಗಿದು ಹಾಕ್ತಿದ್ದಾರೆ.
ಹಾಡುಹಗಲಲ್ಲೂ ಮರ್ಡರ್ ಗಳಾಗ್ತಿವೆ.ಕೊಲೆಗೆ ದೊಡ್ಡ ಕಾರಣಗಳೇ ಬೇಕಾಗುತ್ತಿಲ್ಲ..ಅಂತದ್ದೇ ಒಂದು ಕ್ಷುಲ್ಲಕ ಕಾರಣಕ್ಕೆ ರಾಜಧಾನಿ ಬೆಂಗಳೂರಲ್ಲಿ ಸ್ನೇಹಿತರೇ ಯುವಕನನ್ನು ಕೊಂದು ಮುಗಿಸಿದ್ದಾರೆ.ಅಂದ್ಹಾಗೆ ಈ ಮರ್ಡರ್ ನಡೆದಿದ್ದು ಕೇವಲ 20 ರೂಗೆ ಎಂದ್ರೆ ನಂಬ್ತೀರಾ..
ಬೊಮ್ಮನಹಳ್ಳಿಯ 1ನೇ ಕ್ರಾಸ್ ನಲ್ಲಿ ಸೆಪ್ಟೆಂಬರ್ 13 ರಂದು ಮರ್ಡರ್ ನಡೆದೋಗಿತ್ತು.ಸತ್ತವನು ಚಿಂದಿ ಹಾಯೋ ಸಂಜಯ್ ಅಲಿಯಾಸ್ ನೇಪಾಳಿ ಎನ್ನುವ 30 ವರ್ಷದ ಯುವಕ ಎನ್ನುವುದನ್ನು ಬಿಟ್ಟರೆ ಬೊಮ್ಮನಹಳ್ಳಿ ಪೊಲೀಸರಿಗೆ ಯಾವುದೆ ಮಾಹಿತಿ ಇರಲಿಲ್ಲ.ತಲೆ ಕೆಡಿಸಿಕೊಂಡ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದು ವಲಯ ಡಿಸಿಪಿ ಡಾ.ಶ್ರೀನಾಥ್ ಜೋಷಿ.

ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಆರಂಭಿಸಿದ್ರು.ಆಗ ಅವರಿಗೆ ನೆರವಾಗಿದ್ದು ಸಿಸಿ ಟಿವಿ ದೃಶ್ಯಾವಳಿಗಳು.ಪೊಲೀಸರು ನಗರದ ವಿವಿಧ ಭಾಗದಲ್ಲಿ ಚಿಂದಿ ಆಯುವವರನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ..
ತನಿಖೆ ವೇಳೆ ಅನುಮಾನದ ಮೇಲೆ ದೀಪಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.

ಹತ್ಯೆಯಾದ ಸಂಜಯ್ ಜೊತೆ ಅದೇ ದಿನ ಆರೋಪಿ ದೀಪಕ್ ಮದ್ಯ ಖರೀದಿಸಿದ್ದನಂತೆ. ಈ ಹಿಂದೆ ದೀಪಕ್ ನಿಂದ ಊಟದ ವಿಚಾರವಾಗಿ ಸಂಜಯ್ 20 ರೂ ಪಡೆದಿದ್ದನಂತೆ.
ಕಾರಣಾಂತರಗಳಿಂದ ಅದನ್ನು ಹಿಂತಿರುಗಿಸಲು ಆಗಿರಲಿಲ್ಲ.ಇದನ್ನು ಆ ನಿಷ್ಪಾಪಿ ಹೇಳಿಕೊಂಡಿದ್ದನಂತೆ.ಆದ್ರೆ ವೈನ್ ಶಾಪ್ ನಲ್ಲಿ ಮದ್ಯ ಖರೀದಿಸುವ ವೇಳೆ ಸಿಕ್ಕ ದೀಪಕ್ ಎಣ್ಣೆ ಹೊಡೆಯಕ್ಕೆ ದುಡ್ಡಿರುತ್ತೆ,
ತಿನ್ನೊಕ್ಕೆ ಕೊಟ್ಟ ಹಣ ವಾಪಸ್ ಕೊಡ್ಬೇಕಂಥ ಗೊತ್ತಾಗಲ್ವೇನೋ ಎಂದು ಗದರಿಸಿದ್ದಾನೆ.ಆ ಸ್ಥಳದಲ್ಲಿ ಅವರಿಬ್ಬರ ನಡುವೆ ಗಲಾಟೆಗಳಾಗಿವೆ. ವ್ಯಗ್ರಗೊಂಡ ದೀಪಕ್ ತನ್ನಿಬ್ಬರು ಸ್ನೇಹಿತರಾದ ಹೇಮಂತ್ ಗೋಪ್ ಹಾಗೂ ಮಾದೇಶ್ ರನ್ನು ಒಟ್ಟಿಗೆ ಹಾಕ್ಕೊಂಡು ಸ್ಕೆಚ್ ಹಾಕಿದ್ದಾನೆ.
ಬೊಮ್ಮನಹಳ್ಳಿ ಕ್ರಾಸ್ ನಲ್ಲಿ ರಾತ್ರಿ ಸ್ಕೆಚ್ ಪ್ರಕಾರ ಕಾದಿದ್ದು ಸಂಜಯ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.ಹಲ್ಲೆಯ ತೀವ್ರತೆಗೆ ಸಂಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಘಟನೆಗೆ ಸಂಬಂಧಿಸಿದಂತೆ ಮದ್ಯ ಖರೀದಿಸಲು ಬಂದಿದ್ದನ್ನ ಪೊಲೀಸರಿಗೆ ವೈನ್ ಶಾಫ್ ಕ್ಯಾಶಿಯರ್ ತಿಳಿಸಿದ್ದಾನೆ.
ನಂತರ ವೈನ್ ಶಾಫ್ ನ ಸಿಸಿಟಿವಿ ದೃಶ್ಯಗಳನ್ನಾಧರಿಸಿ ತನಿಖೆ ಶುರುಮಾಡಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಕೊಲೆಗಾರರ ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣವನ್ನು ಬೇಧಿಸಿದ ಬೊಮ್ಮನಹಳ್ಳಿ ಪೊಲೀಸರ ಕಾರ್ಯಕ್ಷಮತೆಯನ್ನು ಡಿಸಿಪಿ ಡಾ.ಶ್ರೀನಾಥ್ ಜೋಷಿ ಪ್ರಶಂಶಿಸಿದ್ದಾರೆ.