KIDNAP HYDRAMA:SON CHEATED HIS FATHER:ಮೋಜು ಮಸ್ತಿಗೆ ಮಾಡಿಕೊಂಡ ಸಾಲ ತೀರಿಸಲು “”ಕಿಡ್ನ್ಯಾಪ್”” ಡ್ರಾಮ ಮಾಡಿದ್ದ ಖತರ್ನಾಕ್ ಮಗ ಅಂದರ್

ಲವ್ವರ್ ಜತೆಗಿನ ಸುತ್ತಾಟ-ಫ್ರೆಂಡ್ಸ್ ಜತೆಗಿನ ಪಾರ್ಟಿಗೆ 5 ಲಕ್ಷ ಸಾಲ ಮಾಡಿಕೊಂಡಿದ್ದ ಮುಕ್ರಮ್-ಫೈನಾನ್ಸರ್ ಕಾಟ ಹೆಚ್ಚುತ್ತಿದ್ದಂತೆ ತಿರುಪತಿಗೆ ಎಸ್ಕೇಪ್..

0

ಬೆಂಗಳೂರು:ತನ್ನ ಚಟಗಳಿಗೆ ದುಂದುವೆಚ್ಚ ಮಾಡುತ್ತಾ ಕಾಲ ಕಳೆಯುತ್ತಿದ್ದ ಯುವಕನೊಬ್ಬ ಮಾಡಿದ ಸಾಲ ತೀರಿಸುವ ಸಲುವಾಗಿ ಕಿಡ್ನ್ಯಾಪ್ ನಾಟಕವಾಡಿ ತಂದೆಯಿಂದಲೇ ಲಕ್ಷಾಂತರ ಹಣ ಸುಲಿಗೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

ಮುಕ್ರಮ್ ಎನ್ನುವ ಯುವಕನೇ ಕಿಡ್ನ್ಯಾಪ್ ಮಾಡಿ ತಾನು ತೋಡಿದ ಖೆಡ್ಡಾಕ್ಕೆ ತಾನೇ ಬಿದ್ದಿರುವ ಮಿಕ.ಐಷಾರಾಮಿಯಾಗಿ ಬದುಕಬೇಕೆನ್ನುವ ಕಾರಣಕ್ಕೆ ಅವರಿವರ ಬಳಿ ಸಾಲ ಮಾಡಿಕೊಂಡಿದ್ದೇ ಅಲ್ಲದೇ ಫೈನಾನ್ಸ್ ಕಂಪೆನಿಯಿಂದಲೂ 5 ಲಕ್ಷ ಹಣ ಪಡೆದಿದ್ದ. ಫೈನಾನ್ಸ್ ನವರು ಯಾವಾಗ ಹಣಕ್ಕಾಗಿ ಇವನ ಬೆನ್ ಬಿದ್ದರೋ ಬೇರೆ ದಾರಿ ಕಾಣದೆ ಕಿಡ್ನ್ಯಾಪ್ ಪ್ಲ್ಯಾನ್ ಮಾಡಿದ್ದಾನೆ.

ಕುರುಬರಹಳ್ಳಿ ನಿವಾಸಿಯಾಗಿರುವ ಘನಿ ಎನ್ನುವವರ ಪುತ್ರನೇ ಈ ಮುಕ್ರಮ್.ತಂದೆ ಸಣ್ಣಪುಟ್ಟ ಕಾಂಟ್ರ್ಯಾಕ್ಟ್ ಮಾಡಿಕೊಂಡು ಕುಟುಂಬವನ್ನು ಮುನ್ನಡೆಸುತ್ತಿದ್ದರು.ಮಗ ಕಾಲೇಜಿಗೆ ಹೋಗುತ್ತಿದ್ದುದ್ದರಿಂದ ಆತನಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದರು.ಮನೆಯಲ್ಲಿ ಕೇಳಿದಾಗಲೆಲ್ಲಾ ಹಣ ಕೊಡುತ್ತಿದ್ದುದ್ದರಿಂದ ಕೆಟ್ಟ ಸಹವಾಸ ಮಾಡಿಕೊಂಡ.ಸದಾ ಮನೆಯಿಂದ ಹೊರಗೆ ಇರುತ್ತಿದ್ದ ಮುಕ್ರಮ್ ಏನ್ ಮಾಡ್ತಿದ್ದಾನೆ ಎಂದು ವಿಚಾರಿಸುವ ಗೋಜಿಗೂ ಪೋಷಕರು ಹೋಗಲಿಲ್ಲ.

ಮನೆಯಲ್ಲಿ ಕೊಟ್ಟ ಸಲಿಗೆಯನ್ನೇ ದುರುಪಯೋಗಪಡಿಸಿಕೊಂಡ ಮುಕ್ರಮ್ ,ಲವ್ ನಲ್ಲಿ ಬಿದ್ದ.ಆಕೆಯನ್ನು ಚೆನ್ನಾಗಿ ಸುತ್ತಾಡಿಸ್ತಿದ್ದ.ಆಕೆಗೆ ಖರ್ಚು ಮಾಡಲು ಅಲ್ಲಲ್ಲಿ ಸಾಲ ಮಾಡಿಕೊಂಡ.ಅದು ಲಕ್ಷದಷ್ಟು ಬೆಳೆದೋಯ್ತು.ಕೆಲ ದಿನಗಳ ಹಿಂದೆ ಆತನ ಲವರ್ ರೋಡ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ಲು.ಈ ನಡುವೆ ಮಾಡಿಕೊಂಡ ಸಾಲ 5 ಲಕ್ಷದಷ್ಟಾಗಿತ್ತು.ಫೈನಾನ್ಸ್ ನವರ ಕಾಟ ಹೆಚ್ಚಾಯ್ತು.ಮನೆಯಲ್ಲಿ ಹಣ ಕೇಳಿದ್ರೆ ಗ್ರಹಚಾರ ಬಿಡಿಸ್ತಾರೆ ಎಂದುಕೊಂಡವನೇ ಸ್ನೇಹಿತರ ಬಳಿ ಅಳಲು ತೋಡಿಕೊಂಡಿದ್ದಾನೆ.ಆ ಖತರ್ನಾಕ್ ಗಳು ಕೊಟ್ಟ ಐಡ್ಯಾನೇ ಕಿಡ್ನ್ಯಾಪ್.

ಇದ್ದಕ್ಕಿದ್ದಂತೆ ಒಂದು ದಿನ ತಂದೆ ಘನಿ ಸಾಹೇಬ್ರಿಗೆ ಮಗನೇ ಫೋನ್ ಮಾಡಿ ನನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ.5 ಲಕ್ಷಕ್ಕೆ ಬೇಡಿಕೆ ಇಡ್ತಿದ್ದಾರೆ.ಕೊಡದಿದ್ದರೆ ಸಾಯಿಸಿಬಿಡ್ತಾರೆ ಎಂದು ಕಣ್ಣೀರಿಟ್ಟಿದ್ದಾನೆ..ಕರಗಿದ ತಂದೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು.ತಂದೆ ಕೊಟ್ಟ ದೂರನ್ನು ಆಧರಿಸಿ ಪೊಲೀಸರು ಮುಕ್ರಮ್ ನ ಮೊಬೈಲ್ ನಂಬರ್ ಟವರ್ ಲೋಕೆಷನ್ ಪತ್ತೆ ಮಾಡಿದ್ರು.

ಆತ ಎಲ್ಲಿ ಹೋಗಿದ್ದ, ಯಾರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ, ಹಾಗೂ ಆತನ ಸ್ನೇಹಿತರ ಬಳಿ ಮಾಹಿತಿ ಪಡೆಲಾಯ್ತು.ಈ ವೇಳೆ ಆತ ಜೂಮ್ ಕಾರನ್ನ ಬಾಡಿಗೆ ಪಡೆದು ಆಂಧ್ರ ಗೆ ಕಡೆಗೆ ಹೋಗಿರೋದು ಗೊತ್ತಾಗಿತ್ತು. ಜೂಮ್ ಕಾರಿನ ಡಿಟೈಲ್ಸ್ ಪಡೆದು ತನಿಖೆ ನಡೆಸಿದ್ರು. ಆತ ತಿರುಪತಿಯ ಲಾಡ್ಜ್ ನಲ್ಲಿ ಕಾರು ಬಿಟ್ಟು ಲಾಡ್ಜ್ ರೂಂ ನಲ್ಲಿದ್ರು ಎನ್ನುವುದು ಗೊತ್ತಾಗಿದೆ.ಅಲ್ಲಿಂದ್ಲೇ ಆತನನ್ನು ಕರೆತಂದು ಸಧ್ಯ ಪೋಷಕರಿಗೆ ಒಪ್ಪಿಸಲಾಗಿದೆ.

ಸ್ನೇಹಿತರ ಜೊತೆ ಪಾರ್ಟಿ ಮಾಡಲು ಹಾಗೂ ಪ್ರೇಯಸಿಗೆ ಗಿಫ್ಟ್ ಕೊಡಲು ಸಾಲ ಮಾಡಿಕೊಂಡಿದ್ದ ಮುಕ್ರಮ್ ಅದಕ್ಕಾಗಿ ಒಂದು ಕಾರು ಹಾಗೂ ಕೆಟಿಎಂ ಬೈಕ್ ಅಡವಿಟ್ಟಿದ್ದನಂತೆ. ಅಲ್ಲದೆ ತನ್ನ ಸ್ನೇಹಿತರಿಂದ 3 ಲಕ್ಷ ಹಣ ಸಾಲ ಪಡೆದಿದ್ದ. ಸಾಲ ತಿರಿಸೊಕೆ ತಂದೆ ಬಳಿ ಹಣ ಪಡೆಯೋಕೆ ಈ ರೀತಿ ಪ್ಲಾನ್ ಮಾಡಿರೋದು ತನಿಖೆ ವೇಳೆ ಗೊತ್ತಾಗಿದೆ.

Spread the love
Leave A Reply

Your email address will not be published.

Flash News