13TH INTERNATIONAL FILM FESTIVAL: ವರ್ಷಾಂತ್ಯದಲ್ಲೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ:ಸರ್ಕಾರದ ಅನುಮತಿ ನಿರೀಕ್ಷೆಯಲ್ಲಿ ಚಲನಚಿತ್ರ ಅಕಾಡೆಮಿ:ಸುನೀಲ್ ಪುರಾಣಿಕ್

ಎಲ್ಲವೂ ನಿರೀಕ್ಷೆಯಂತಾದ್ರೆ ವರ್ಷಾಂತ್ಯದಲ್ಲೇ 13ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ- ದಿನಾಂಕ ನಿಗಧಿ-ಸರ್ಕಾರದ ಅನುಮತಿ ನಿರೀಕ್ಷೆಯಲ್ಲಿದೆ ರಾಜ್ಯ ಚಲನಚಿತ್ರ ಅಕಾಡೆಮಿ-ಅದ್ದೂರಿ ಚಲನಚಿತ್ರೋತ್ಸವ ಆಯೋಜನೆಗೆ ಮಾನಸಿಕವಾಗಿ ಸಿದ್ಧವಾಗಿರುವ ಅಕಾಡೆಮಿ

0
ಕಳೆದ ಬಾರಿ ನಡೆದ 12ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಝಲಕ್( ಸಂಗ್ರಹ ಚಿತ್ರ)
ಕಳೆದ ಬಾರಿ ನಡೆದ 12ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಝಲಕ್( ಸಂಗ್ರಹ ಚಿತ್ರ)

ಬೆಂಗಳೂರು: ಇಡೀ ಜಗತ್ತು ಕನ್ನಡ ಚಲನಚಿತ್ರರಂಗದತ್ತ ಮತ್ತೊಮ್ಮೆ ಬೆರಗುಗಣ್ಣಿನಿಂದ ನೋಡುವಂತೆ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ.ಇದಕ್ಕೆ ಕಾರಣ ಅಂತರಾಷ್ಟ್ರೀಯ ಚಲನಚಿತ್ರೋತ್ಸವ.ಹೌದು… ಎಲ್ಲವೂ ನಿರೀಕ್ಷೆಯಂತಾದ್ರೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ  ವರ್ಷಾಂತ್ಯದಲ್ಲಿ ನಡೆಯೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.ತನ್ನ ಸೇವಾವಧಿಯಲ್ಲಿ ಮೈಲಿಗಲ್ಲಾಗುವಂಥ ಚಲನಚಿತ್ರೋತ್ಸವದಂಥ ಬಿಗ್ ಇವೆಂಟ್ ನಡೆಸೊಕ್ಕೆ  ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತುಂಬಾ ಉತ್ಸುಕತೆಯಲ್ಲಿದ್ದಾರೆ.

ಕೊರೊನಾ ಜಗತ್ತನ್ನು ಬಾಧಿಸದಿದ್ದರೆ ಡಿಸೆಂಬರ್ ಅಥವಾ ಜನವರಿಯಲ್ಲಿ ಚಕನಚಿತ್ರೋತ್ಸವ ನಡೆಯೋದು ಪಕ್ಕಾ ಎನ್ನಲಾಗುತ್ತಿದೆ. ಸರ್ಕಾರ ದಿನಾಂಕ ಗೊತ್ತು ಮಾಡಿ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆ ಅಕಾಡೆಮಿ ಇದಕ್ಕಾಗಿ ನೀಲನಕ್ಷೆ ಸಿದ್ಧಪಡಿಸಿಕೊಳ್ಳಲಿದೆ.12ನೇ ಚಲನಚಿತ್ರೋತ್ಸವವನ್ನು ಯಶಸ್ವಿಯಾಗಿ ನಡೆಸಿರುವ ಅನುಭವದೊಂದಿಗೆ ಹೊಸದೊಂದು ಮೈಲಿಗಲ್ಲು ಸ್ಥಾಪಿಸ್ಲಿಕ್ಕೆ ಚಲನಚಿತ್ರ ಅಕಾಡೆಮಿ ಸನ್ನದ್ಧವಾಗಿದೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎನ್ನುವುದು ನಮ್ಮ ನಾಡಿನ ಹೆಮ್ಮೆ..ನಮ್ಮ ಚಲನಚಿತ್ರರಂಗದ ಬಗ್ಗೆ ಇಡೀ ಜಗತ್ತೇ ತಿರುಗಿ ನೋಡಿದಂತೆ ಮಾಡಿದ ಬಿಗ್ ಇವೆಂಟ್.ಫೆಬ್ರವರಿಯಲ್ಲಿ 12ನೇ ಚಲನಚಿತ್ರೋತ್ಸವವನ್ನು ಆಯೋಜಿಸುವ ಮೂಲಕ ಚಲನಚಿತ್ರ ಅಕಾಡೆಮಿ ಸರ್ಕಾರದ ಘನತೆಯನ್ನು ಎತ್ತಿ ಹಿಡಿದಿತ್ತು.ಇದರಿಂದ ಪ್ರೇರೇಪಣೆಗೊಂಡೇ 13 ನೇ ಚಲನಚಿತ್ರೋತ್ಸವದ ಆಯೋಜನೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ಸರ್ಕಾರದಿಂದ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ.

“ಚಲನಚಿತ್ರೋವನ್ನು ಹೀಗೆಯೇ ಆಯೋಜಿಸಬೇಕೆನ್ನುವುದರ ಬಗ್ಗೆ ಬಣ್ಣ ಬಣ್ಣದ ಕನಸನ್ನು ಇಟ್ಟುಕೊಂಡಿದ್ದೇನೆ. ವಿದೇಶಿ ಚಲನಚಿತ್ರಗಳು,ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಸೇರಿದಂತೆ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಲನಚಿತ್ರಗಳ ಆಯ್ಕೆ ನಡೆಯಬೇಕಿದ್ದು,ಈ ಎಲ್ಲಾ ಪ್ರಕ್ರಿಯೆಗಳು ಸರ್ಕಾರ ದಿನಾಂಕ ನಿಕ್ಕಿ ಮಾಡಿದ ಮೇಲೆ ಶುರುವಾಗಲಿವೆ.ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಲು ಸಮಯ ಕೇಳಿದ್ದೇನೆ.”

ಸುನೀಲ್ ಪುರಾಣಿಕ್-ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ದಿನಾಂಕ ಪಿಕ್ಸ್ ಆಗುತ್ತಿದ್ದಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳೊಕ್ಕೆ ಅಕಾಡೆಮಿ ಚಿಂತನೆ ನಡೆಸಿದೆ.ಕೊರೊನಾ ಸಂಕಷ್ಟಕ್ಕೆ ಡಿಸೆಂಬರ್ ವೇಳೆಗೆ ಪರಿಹಾರ ಸಿಗುತ್ತೆನ್ನುವ ವಿಶ್ವಾಸವೂ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರಿಗಿದೆ.ಕಳೆದ ಬಾರಿಯ ಫಿಲ್ಮ್ ಫೆಸ್ಟಿವಲ್ ಆಯೊಜನೆಯಿಂದ ಸಾಕಷ್ಟು ಕಲಿತಿರುವ ಅನುಭವವನ್ನೇ 13ನೇ ಚಲನಚಿತ್ರೋತ್ಸವ ಆಯೋಜನೆಗೆ ಬಳಸಿಕೊಳ್ಳೊಕ್ಕೆ ನಿರ್ಧರಿಸಿದ್ದಾರೆ.ಜಗತ್ತೇ ಕರ್ನಾಟಕದತ್ತ ಬೆರಗುಗಣ್ನಿನಿಂದ ನೋಡುವಂತೆ ಅದ್ದೂರಿ ಚಲನಚಿತ್ರೋತ್ಸವ ನಡೆಸಬೇಕೆನ್ನುವುದು ನನ್ನ ಕನಸೆನ್ನುತ್ತಾರೆ ಸುನೀಲ್ ಪುರಾಣಿಕ್.

ಚಲನಚಿತ್ರೋವನ್ನು ಹೀಗೆಯೇ ಆಯೋಜಿಸಬೇಕೆನ್ನುವುದರ ಬಗ್ಗೆ ಬಣ್ಣ ಬಣ್ಣದ ಕನಸನ್ನು ಸುನೀಲ್ ಪುರಾಣಿಕ್ ಇಟ್ಟುಕೊಂಡಿದ್ದಾರಂತೆ.ವಿದೇಶಿ ಚಲನಚಿತ್ರಗಳು,ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಸೇರಿದಂತೆ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ.ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಲನಚಿತ್ರಗಳ ಆಯ್ಕೆ ನಡೆಯಬೇಕಿದ್ದು,ಈ ಎಲ್ಲಾ ಪ್ರಕ್ರಿಯೆಗಳು ಸರ್ಕಾರ ದಿನಾಂಕ ನಿಕ್ಕಿ ಮಾಡಿದ ಮೇಲೆ ಶುರುವಾಗಲಿವೆಯಂತೆ.ಈ ವಿಷಯದಲ್ಲಿ ಮುಖ್ಯಮಂತ್ರಿಗಳನ್ನು ಮತ್ತೆ ಸಂಪರ್ಕಿಸುವುದಾಗಿ ಹೇಳ್ತಾರೆ ಸುನೀಲ್ ಪುರಾಣಿಕ್.

ಕಳೆದ ಬಾರಿ ಅಧಿಕಾರ ಸ್ವೀಕರಿಸಿದ  ಕೇವಲ 45 ದಿನಗಳಲ್ಲೇ ಅಂತರಾಷ್ಟ್ರೀಯ  ಚಲನಚಿತ್ರೋತ್ಸವದಂತ ಬಿಗ್ ಇವೆಂಟನ್ನು ಆಯೋಜಿಸಿ ಸರ್ಕಾರದಿಂದ ಶಹಬ್ಬಾಸ್ ಗಿರಿ ಪಡೆದ ಚಲನಚತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸರ್ಕಾರ ಗ್ರೀನ್ ಸಿಗ್ನ;ಲ್ ಕೊಡ್ತಿದ್ದಂಗೆ ಮತ್ತೊಂದು ಇತಿಹಾಸ ನಿರ್ಮಿಸುವ ಆತ್ಮವಿಶ್ವಾಸದಲ್ಲಿದ್ದಾರೆ.ಕರ್ನಾಟಕ ಚಲನಚಿತ್ರದ ಘನತೆ-ಗೌರವವನ್ನು ದುಪ್ಪಟ್ಟುಗೊಳಿಸುವ ಚಲನಚಿತ್ರೋತ್ಸವದಂತ ಮೆಗಾ ಇವೆಂಟ್ ನಿರೀಕ್ಷೆಯಂತೆ ನಿಗಧಿತ ದಿನಾಂಕದಲ್ಲಿ ನಡೆಯಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ಆಶಯ-ಹಾರೈಕೆ ಕೂಡ.

 

Spread the love
Leave A Reply

Your email address will not be published.

Flash News