ACB ARRESTS “CORONA WARRIOR” INSPECTOR RAGHAVENDRA: ACB ಖೆಡ್ಡಾಕ್ಕೆ “ಕೊರೊನಾ ವಾರಿಯರ್” ಇನ್ಸ್ ಪೆಕ್ಟರ್: TRAP ಹಿಂದೆ ರಾಜಕೀಯ ಸಂಚಿನ ಶಂಕೆ..?

ಜಮೀನು ವಿವಾದ ಬಗೆಹರಿಸೊಕ್ಕೆ 10 ಲಕ್ಷ ಲಂಚದ ಬೇಡಿಕೆ ಇಟ್ಟಿದ್ರಾ..? ಕುತಂತ್ರಿಗಳ ಪಿತೂರಿಗೆ ಬಲಿಯಾಗಿದ್ದೇನೆ ಎಂದ ರಾಘವೇಂದ್ರ

0
ಎಸಿಬಿ ಬಲೆಗೆ ಬಿದ್ದ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎಸ್.ಆರ್.ರಾಘವೇಂದ್ರ
ಎಸಿಬಿ ಬಲೆಗೆ ಬಿದ್ದ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎಸ್.ಆರ್.ರಾಘವೇಂದ್ರ

ಬೆಂಗಳೂರು: ಮತ್ತೊಬ್ಬರ ಖಾಕಿ ಎಸಿಬಿ ಖೆಡ್ಡಾಕ್ಕೆ ಬಿದ್ದಿದ್ದಾರೆ.ಕೊರೊನಾ ಸನ್ನಿವೇಶದಲ್ಲಿ ಜನರಿಗೆ ಆಹಾರದ ಪೊಟ್ಟಣಗಳನ್ನು ವಿತರಿ ಸಿದ್ದಲ್ಲದೇ, ಶಾಲಾ ಮಕ್ಕಳಿಗೆ ಅವರ ಶೈಕ್ಷಣಿಕ ಬೆಳವಣಿಗೆಗೆ ಸಹಾಯ ಹಸ್ತ ಚಾಚಿ ಅವರ ಪಾಲಿನ ಕರುಣಾಮಯಿ ಎನಿಸಿಕೊಂ ಡಿದ್ದ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎಸ್.ಆರ್ ರಾಘವೇಂದ್ರ ಜಮೀನು ವಿವಾದ ಪ್ರಕರಣದಲ್ಲಿ 10 ಲಕ್ಷ ಲಂಚ ಪಡೆದ ಆರೋಪದ ಹಿನ್ನಲೆಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತುಮಕೂರು ಜಿಲ್ಲೆ  ಪಾವಗಡ ತಾಲೂಕಿನ ಜನರ ಪಾಲಿನ ಆರಾಧ್ಯದೈವ ಎನಿಸಿಕೊಂಡಿದ್ದ ರಾಘವೇಂದ್ರ ಅಲ್ಲಿನ ಜನರಿಗಾಗಿ ಟ್ರಸ್ಟ್ ಸ್ಥಾಪಿಸಿ ಸೇವೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದವರು.ಆದ್ರೆ ಜಮೀನು ವಿವಾದ ಪ್ರಕರಣದಲ್ಲಿ  ಹತ್ತು ಲಕ್ಷ ರೂ. ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮಕ್ಕಳೆಂದ್ರೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ರಾಘವೇಂದ್ರೆ ಮಕ್ಕಳಿಗೆ ಯಾವುದೇ ಕಷ್ಟಬಂದರೂ ಅದಕ್ಕೆ ಸ್ಪಂದಿಸುತ್ತಿದ್ದರು.
ಮಕ್ಕಳೆಂದ್ರೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ರಾಘವೇಂದ್ರೆ ಮಕ್ಕಳಿಗೆ ಯಾವುದೇ ಕಷ್ಟಬಂದರೂ ಅದಕ್ಕೆ ಸ್ಪಂದಿಸುತ್ತಿದ್ದರು.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೆಕಿದ್ದ ರಾಘವೇಂದ್ರ ಪ್ರಕರಣ ಖುಲಾಸೆಗೊಳಿಸೊಕ್ಕೆ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.10 ಲಕ್ಷದ ಪೈಕಿ 8 ಲಕ್ಷ ಮೊದಲೇ ಸಂಗ್ರಹಿಸಿದ್ದರಂತೆ.ಈ ವಿಷಯವನ್ನು ಎಸಿಬಿ ಗಮನಕ್ಕೆ ತರಲಾಗಿದೆ.ಉಳಿದ 2 ಲಕ್ಷ ನೀಡುವ ಸನ್ನಿವೇಶದಲ್ಲಿ ಎಸಿಬಿ ಕೈಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರಂರತೆ.ರಾಘವೇಂದ್ರ ಎಸಿಬಿ ಬಲೆಗೆ ಸಿಕ್ಕಿಬೀಳುತ್ತಿದ್ದಂತೆ ಪಾವಗಡದಲ್ಲಿ ಜನ ಆಕ್ರೋಶಗೊಂಡಿದ್ದಾರೆ.ಸದಾ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದ ರಾಘವೇಂದ್ರ ಇಂತದ್ದೊಂದು ಕೆಲಸ ಮಾಡಲು ಸಾಧ್ಯವಿಲ್ಲ.ಯಾರೋ ಆಗದವರು ಅವರನ್ನು ಸಿಲುಕಿಸಲು ಷಡ್ಯಂತ್ರ ಮಾಡಿದ್ದಾರೆ ಅಷ್ಟೇ..ಆದ್ರೆ ರಾಘವೇಂದ್ರ ಆರೋಪ ಮುಕ್ತರಾಗಿ ಹೊರ ಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ರ್ಯಾಪ್ ಆದ ಹಿನ್ನೆಲೆಯಲ್ಲಿ ರಾಘವೇಂದ್ರ ಅವರ ಫೇಸ್ ಬುಕ್ ಅಕೌಂಟ್ ನಿಂದ ಹೊರಬಂದ ಕಾಮೆಂಟ್
ಟ್ರ್ಯಾಪ್ ಆದ ಹಿನ್ನೆಲೆಯಲ್ಲಿ ರಾಘವೇಂದ್ರ ಅವರ ಫೇಸ್ ಬುಕ್ ಅಕೌಂಟ್ ನಿಂದ ಹೊರಬಂದ ಕಾಮೆಂಟ್

ಈ ಬಗ್ಗೆ ರಾಘವೇಂದ್ರ ಅವರಿಗೆ ಸೇರಿದ ಫೇಸ್ ಬುಕ್ ಅಕೌಂಟ್ ನಲ್ಲಿ “ನಾನು ಆರೋಪಮುಕ್ತನಾಗಿ ಹೊರಬರುತ್ತೇನೆ.ನಿಮ್ಮ್ಗಗಳ ಈ ಷಡ್ಯಂತ್ರಕ್ಕೆ ನಾನು ಬಲಿಯಾಗುವುದಿಲ್ಲ.ನನ್ನನ್ನು ಪ್ರೀತಿಸುವವರು ನನ್ನ ಅಭಿಮಾನಿಗಳು ಯಾರೂ ಕೂಡ ಎದೆಗುಂದಬಾರದು.ಆರೋಪಮುಕ್ತನಾಗಿ ಬರುತ್ತೇನೆ.ನಿಮ್ಮ SRR ಎಂಬ ಸಂದೇಶ ರವಾನಿಸಿದ್ದಾರೆ.

ರಾಘವೇಂದ್ರ ತಮ್ಮ ಪೊಲೀಸ್ ಸೇವೆಯ ನಡುವೆಯೇ ಪಾವಗಡ ತಾಲೂಕು ಸಮಗ್ರ ಸೇವಾಭಿವೃದ್ದಿ ಟ್ರಸ್ಟ್ ಎನ್ನುವ ಹೆಸರಲ್ಲಿ ಸಂಘ ಮಾಡಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು.ತಮ್ಮ ಪತ್ನಿ ಜತೆ ಸೇರಿಕೊಂಡು ಅನೇಕ ಕಷ್ಟದ ಸನ್ನಿವೇಶದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು.ಅವರ  ಈ ಸೇವಾ ಮನೋಭಾವದ ಕೆಲಸಕ್ಕೆ ಇಡೀ ಪಾವಗಡ ಫಿದಾ ಆಗೋಗಿತ್ತು.

ತಾವು ಕೆಲಸ ಮಾಡುವ ಠಾಣೆಯ ವ್ಯಾಪ್ತಿಯಲ್ಲಿ ಜನರೊಂದಿಗೆ ಬೆರೆಯುತ್ತಿದ್ದ ರೀತಿಗೆ ಇದು ನಿದರ್ಶನ.
ತಾವು ಕೆಲಸ ಮಾಡುವ ಠಾಣೆಯ ವ್ಯಾಪ್ತಿಯಲ್ಲಿ ಜನರೊಂದಿಗೆ ಬೆರೆಯುತ್ತಿದ್ದ ರೀತಿಗೆ ಇದು ನಿದರ್ಶನ.

ಪಾವಗಡ ಸಮಗ್ರ ಅಭಿವೃದ್ಧಿ ಸೇವಾ ಸಂಸ್ಥೆ ಎಂಬ ಸ್ವಯಂ ಸೇವಾ ಸಂಸ್ಥೆ ಮೂಲಕ ಪರೋಕ್ಷವಾಗಿ ರಾಘವೇಂದ್ರ ಧಾರೆ ಎರೆಯುತ್ತಿದ್ದರು. ಕೊರೊನಾ ಸಂಕಷ್ಟ ಕಾಲದಲ್ಲಿ ನೂರಾರು ಮೂಟೆ ಅಕ್ಕಿ ಮತ್ತು ಆಹಾರ ಸಾಮಗ್ರಿ ವಿತರಣೆ ಮಾಡಿದ್ದರು. ಈ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಮಿಂಚುತ್ತಿದ್ದರು. ಇತ್ತೀಚೆಗೆ ಎಸ್ಎಸ್ಎಲ್ ಸಿ ಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟು ಸುದ್ದಿಯಾಗಿದ್ದರು.

ಕೆಲ ದಿನಗಳ ಹಿಂದಷ್ಟೇ ಪಾವಗಡ ಜನರಿಗಾಗಿ ಡಿಜಿಟಲ್ ಸೇವಾ ವಾಹನವನ್ನು ಲೋಕಾರ್ಪಣೆ ಮಾಡಿದ್ದರುರಾಘವೇಂದ್ರ ಪಾವಗಡ  ಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಪಡೆಯುತ್ತಿರುವುದು ರಾಜಕೀಯ ಪ್ರವೇಶದ ಮುನ್ಸೂಚನೆಯನ್ನು ನೀಡಿತ್ತು,ಪಾವಗಡದಿಂದಲೇ ಅವರು ಸ್ಪರ್ದಿಸಬಹುದೆನ್ನುವ ಮಾತುಗಳು ಕೇಳಿಬಂದಿದ್ವು.ರಾಘವೇಂದ್ರ ಇದನ್ನು ನಿರಾಕರಿಸಿರಲಿಲ್ಲ..ಇದು ಅವರ ರಾಜಕೀಯ ಪ್ರವೇಶದ ಸಾಧ್ಯತೆಗಳನ್ನು ದಟ್ಟಗೊಳಿಸಿತ್ತು.

ಘಟನೆ ನಡೆದಿರುವುದನ್ನು ಗಮನಿಸಿದ್ರೆ,ರಾಘವೇಂದ್ರ ಹಾಗೂ ಅವರ ಅಭಿಮಾನಿಗಳು ಆಪಾದಿಸುತ್ತಿರುವುದನ್ನು ನೋಡಿದ್ರೆ ಅವರ ರಾಜಕೀಯ ಪ್ರವೇಶದ ಮುನ್ಸೂಚನೆನೇ ಅವರ ವಿರೋಧಿಗಳಿಗೆ ಸಹಿಸಿಕೊಳ್ಳಲಾಗಲಿಲ್ಲವೇನೋ..ಆ ಕಾರಣದಿಂದಲೇ ಅವರ ಹೆಸರನ್ನು ಹಾಳು ಮಾಡೊಕ್ಕೆ ಎಸಿಬಿ ರೇಡ್ ಷಡ್ಯಂತ್ರ ಮಾಡಿರಬಹುದು ಎನ್ನಲಾಗಿದೆ.ಮೇಲ್ನೋಟಕ್ಕೆ ರಾಘವೇಂದ್ರ ಹಣ ಪಡೆದಿರುವುದಕ್ಕೆ ಎಲ್ಲಾ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗಿದೆ.ಸಧ್ಯ ಎಸಿಬಿ ಪೊಲೀಸ್ ವಶದಲ್ಲಿರುವ ರಾಘವೇಂದ್ರ ಅವರ ವೃತ್ತಿ ಜೀವನಕ್ಕೆ ಈ ರೇಡ್ ಕಪ್ಪು ಚುಕ್ಕೆ ಆಗಿದೆಯಷ್ಟೇ  ಅಲ್ಲ, ರಾಜಕೀಯ ಪ್ರವೇಶದ ಆಸೆಗೂ ತಣ್ಣಿರೆರಚಿದೆ

Spread the love
Leave A Reply

Your email address will not be published.

Flash News