“ಶಾಸಕ” ಶಂಕರ್ ಬರೋಬ್ಬರಿ 150 ಕೋಟಿ ಕುಳವಾಗಿ ಬೆಳೆದಿದ್ದು ಹೇಗೆ ಗೊತ್ತಾ..? ವಿವರಗಳನ್ನು ಕೇಳಿದ್ರೆ ಬೆಚ್ಚಿ ಬೀಳೊದು ಗ್ಯಾರಂಟಿ..?!

ಪತ್ರಿಕಾ ಸಂಪಾದಕ ಹಲ್ಲೆಗೆರೆ ಶಂಕರ್ ಕೋಟ್ಯಾಧೀಶನಾಗಿದ್ದು ಹೇಗೆ..? ಮನೆ ತುಂಬಾ ಹಣ-ಕಪಾಟು ತುಂಬೆಲ್ಲಾ ಬಂಗಾರ-ಮನೆ-ಕಾರು-ಸೈಟು-ಬಾರ್ ಲೈಸೆನ್ಸ್-ಬ್ಯಾಂಕ್ ಡೆಪಾಸಿಟಿ ಬಂದಿದ್ದಾದ್ರೂ ಹೇಗೆ..?

0

ಬೆಂಗಳೂರು: ಕಷ್ಟಪಟ್ಟು ದುಡಿದ್ರು  ತಿಂಗಳಾಂತ್ಯಕ್ಕೆ ಜೀವನ ನಡೆಸಲು ಅವರಿವರ ಬಳಿ ಸಾಲ ಮಾಡಿ  ಬದುಕಿನ ಬಂಡಿ ಎಳೆಯಬೇಕಾದ ಸ್ತಿತಿಯಲ್ಲಿ ಇವತ್ತು ಶೇಕಡಾ 60 ರಷ್ಟು ಪತ್ರಕರ್ತರಿದ್ದಾರೆ.ಬಹುತೇಕ ಪತ್ರಕರ್ತರಿಗೆ ಜೀವನಪೂರ್ತಿ ದುಡಿದದ್ದನ್ನೆಲ್ಲಾ ಕೂಡಾಕಿದ್ರೂ ಒಂದು ಸೈಟ್ ಕೊಂಡುಕೊಳ್ಳೊಕ್ಕಾಗೊ ಲ್ಲ.ಆಸ್ಪತ್ರೆಗಳಿಗೆ ಬಿಲ್ ಕಟ್ಟಲಾಗದೆ ಸಾವನ್ನಪ್ಪಿದ ಅದೆಷ್ಟೋ ಪ್ರಾಮಾಣಿಕ ಪತ್ರಕರ್ತರ ಉದಾಹರಣೆಗಳು ನಮ್ಮಲ್ಲಿವೆ..

ಅಂತದ್ದರ ನಡುವೆ ವಾಮಮಾರ್ಗಗಳ ಮೂಲಕ ಹಣ ಸಂಪಾದಿಸಿ ಕೋಟಿ ಕುಳಗಳಾಗಿ,ಚಾನೆಲ್ ಗಳನ್ನು ನಡೆಸುವಷ್ಟರ, ಬೇನಾಮಿ ಆಸ್ತಿ ಗಳಿಸಿಡುವ  ಮಟ್ಟಿಗೆ ಬೆಳೆದ ಪತ್ರಕರ್ತರೂ ನಮ್ಮ ನಡುವಿದ್ದಾರೆ..ಇನ್ ಫ್ಯಾಕ್ಟ್ ಅಂಥವರೇ ಸಂಖ್ಯೆಯೇ ಪ್ರಾಮಾಣಿಕರನ್ನು ಅಲ್ಪಸಂಖ್ಯಾತರನ್ನಾಗುಳಿಸುವ ಮಟ್ಟಿಗೆ ಹೆಚ್ಚಾಗಿರುವುದು ನಿಜಕ್ಕೂ ಪತ್ರಿಕೋದ್ಯಮದ ದುರಂತವೇ ಬಿಡಿ..

ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಹಲ್ಲೆಗೆರೆ ಶಂಕರ್ ಎನ್ನುವ ಪತ್ರಿಕಾ ಸಂಪಾದಕನ ಕುಟುಂಬ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು ಎಲ್ಲರಿಗೂ ಗೊತ್ತು.ಈ ಸನ್ನಿವೇಶದಲ್ಲಿ ಆತ್ಮಹತ್ಯೆಗೆ ಕಾರಣವಾದ ನಿಗೂಢ ಸಂಗತಿಗಳಷ್ಟೇ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಆತನ ಆಸ್ತಿ ಸಂಪಾದನೆ. ಮುಖ್ಯವಾಹಿನಿಯಲ್ಲಿ ಇಲ್ಲದ ಪತ್ರಿಕೆಯೊಂದರ ಸಂಪಾದಕ ಹತ್ತಿಪ್ಪತ್ತು ಕೋಟಿಗಳ ಒಡೆಯನಾಗಿದ್ದು ಹೇಗೆ..?

ಆತನ ಪತ್ರಿಕೆಗೆ ನಿಜಕ್ಕೂ ಅಂತದ್ದೊಂದು ತಾಕತ್ತಿತ್ತಾ..? ಆತ ಸೈದ್ದಾಂತಿಕ ಹಾದಿ ಯಲ್ಲಿ ನಡೆದಿದ್ದರೆ ಇಷ್ಟೆಲ್ಲಾ ಸಾಧ್ಯವಾಗುತ್ತಿತ್ತಾ..? ಆತನಿಗೆ ಇಷ್ಟೊಂದು ಗಳಿಸಲು ಸಾಧ್ಯವಾಗಿದ್ದು  ವಾಮಮಾರ್ಗನಾ..?ಹಾಗಾದ್ರೆ ವಾಮಮಾರ್ಗದ ಪತ್ರಿಕೋದ್ಯಮಕ್ಕೆ ಅಷ್ಟೊಂದು ತಾಕತ್ತಿದೆಯಾ..? ಎನ್ನು ವಂಥ ಸಾಕಷ್ಟು ಪ್ರಶ್ನೆಗಳು ಸ್ಟೋರಿಯ ಆಳಕ್ಕಿಳಿದಷ್ಟು ಸೃಷ್ಟಿಯಾಗುತ್ತಾ ಹೋಗುತ್ತಿರುವುದು ಸ್ಪಷ್ಟ.

ಶಂಕರ್ ಅಲಿಯಾಸ್ ಹಲ್ಲೆಗೆರೆ ಶಂಕರ್…ನಡೆಸುತ್ತಿದ್ದುದು ಶಾಸಕ ಪತ್ರಿಕೆ ಎನ್ನುವಂಥ ಟ್ಯಾಬ್ಲಾಯ್ಡ್ ನ್ನು.ಪತ್ರಿಕೋದ್ಯಮದಲ್ಲಿ ಹಳಬರನ್ನು ಬಿಟ್ಟರೆ ಹೊಸ ತಲೆಮಾರಿನ ಯಾರೊಬ್ಬರಿಗೂ ಇಂತದ್ದೊಂದು ಪತ್ರಿಕೆ ಇದೆ ಎನ್ನುವ ಮಾಹಿತಿಯೇ ಇಲ್ಲ..ಏಕೆಂದ್ರೆ ಇಂಥ ಪತ್ರಿಕೆಗಳದ್ದು ಒಂದು ಪ್ರತ್ಯೇಕ ಗುಂಪೇ ಇದೆ. ಆ ಪತ್ರಿಕೆಗಳ ಉದ್ದೇಶವೂ ಬೇರೆ ಇರುತ್ತದೆ.ಆಗೊಮ್ಮೆ..ಹೀಗೊಮ್ಮೆ…ಸಂಪಾದಕನ ಮೂಡ್ ಮೇಲೆ ಡಿಪೆಂಡ್ ಆಗಿ ಮುದ್ರಣವಾಗುವ ಪತ್ರಿಕೆಗಳು ಇವೆ..ಶಾಸಕ ಪತ್ರಿಕೆ ಬಗ್ಗೆಯೂ ಅಂತದ್ದೇ ಆರೋಪಗಳಿವೆ.ಆದ್ರೆ ತುಂಬಾ ಪತ್ರಕರ್ತರಿಗೆ ಆಶ್ಚರ್ಯ ಹಾಗೆಯೇ ಆತಂಕ ಮೂಡಿಸಿದ್ದು ಏನಂದ್ರೆ, ಶಾಸಕ ಪತ್ರಿಕೆ ಸಂಪಾದಕ ಹಲ್ಲೆಗೆರೆ ಶಂಕರ್ ಅಷ್ಟೊಂದು ಗಳಿಸಿದ್ನಾ…ಅಷ್ಟೊಂದು ಗಳಿಸಲಿಕ್ಕೆ ಸಾಧ್ಯವಾಗಿದ್ದು ಹೇಗೆ..? ಅಷ್ಟೊಂದು ತಾಕತ್ತಿತ್ತಾ ಆ ಪತ್ರಿಕೆಗೆ..? ಅದಕ್ಕಾಗಿ ಆತ ಏನೆಲ್ಲಾ ಮಾಡಿದ್ನೋ..? ಎನ್ನುವುದು..

ಹೌದು… ಹಲ್ಲೆಗೆರೆ ಶಂಕರ್ ಅಸಲಿಯತ್ತು ಆತ್ಮಹತ್ಯೆ ಘಟನೆಯಿಂದ ಬಹಿರಂಗವಾಗಿದೆ.ಮಾದ್ಯಮಗಳಲ್ಲಿ ಪತ್ರಕರ್ತನ ಕುಟುಂಬದ ಆತ್ಮಹತ್ಯೆ ಸುದ್ದಿ ಬಂದಾಗ ಪಾಪ ಬಡತನದಿಂದಲೇ ಕುಟುಂಬ ಸಾವನ್ನಪ್ಪಿರ ಬಹುದು ಎಂದು ಊಹಿಸಿದವರೇ ಹೆಚ್ಚು..ಆದ್ರೆ ಮಾದ್ಯಮಗಳಲ್ಲಿ ಅದೇ ರಾತ್ರಿ ಯಾವಾಗ ಭವ್ಯಬಂಗಲೆ ಯ ಚಿತ್ರಗಳು ಪ್ರಸಾರವಾದವೋ ಹುಬ್ಬೇರಿಸಿದವರೇ ಹೆಚ್ಚು.ಅದು ಕೇವಲ ಮನೆಯಲ್ಲ,ಭವ್ಯ ಬಂಗಲೆ ಎನ್ನುವುದು ಬಿಂಬಿತವಾದ ಮೇಲೆ ಪತ್ರಕರ್ತರ ಗಳಿಕೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ-ಟೀಕೆಗಳು ಶುರುವಾಗಿದ್ದೂ ಸತ್ಯ.

ಅಂದ್ಹಾಗೆ ಶಂಕರ್ ಬಗ್ಗೆ ಸಾಕಷ್ಟು ಮಾತುಗಳು ಚರ್ಚೆಯಲ್ಲಿವೆ..ಬಹುತೇಕರು ಕೇಳಿಯೇ ಇಲ್ಲದ “ಶಾಸಕ ಪತ್ರಿಕೆ”ಯನ್ನು ಅನೇಕ ವರ್ಷಗಳಿಂದಲೂ ಶಂಕರ್ ನಡೆಸಿಕೊಂಡು ಬರುತ್ತಿದ್ದರಂತೆ.ಶಾಸಕ ಟೈಟಲ್ ಇಟ್ಟುಕೊಂಡಿದ್ದರಿಂದ ಬಹುತೇಕ ಸುದ್ದಿಗಳು ಶಾಸಕರ ಸುತ್ತಲೇ ಕೇಂದ್ರಿಕೃತವಾಗಿದ್ವಂತೆ.ಆದರೆ ಸಾಕಷ್ಟು ವರ್ಷಗಳ ಹಿಂದೆ ಅಂದ್ರೆ ಇವತ್ತಿನಂತೆ ನಾಯಿಕೊಡೆಗಳಂತೆ ಪತ್ರಿಕೆಗಳು ಇಲ್ಲದೆ ಬೆರಳೆಣಿಕೆಯಷ್ಟು ಪತ್ರಿಕೆಗಳಿದ್ದ ಸನ್ನಿವೇಶದಲ್ಲಿ ಶಾಸಕ ಪತ್ರಿಕೆ ಹವಾ ಸೃಷ್ಟಿಸಿತ್ತೆನ್ನುವ ಮಾತುಗಳಿವೆ.ಶಾಸಕರ ಸುತ್ತ ಕೇಂದ್ರೀಕೃತವಾಗಿರುತ್ತಿದ್ದ ಸುದ್ದಿಗಳು ಅವರ ಹಗರಣ, ಅನೈತಿಕ ಸಂಬಂಧ, ಅಕ್ರಮ ಗಳಿಕೆ..ದೂರುಗಳ ಸುತ್ತಲೇ ಗಿರಕಿ ಹೊಡೆಯುತ್ತಿ ದ್ದವಂತೆ.ಅವು ಸಾಕಷ್ಟು ಶಾಸಕರನ್ನು ಶೇಕ್ ಮಾಡಿದ್ದೂ ಇದೆಯಂತೆ.. ಅದರ ಪರಿಣಾಮವಾಗಿ ಸುದ್ದಿಗಳು ಪ್ರಸಾರವಾಗುವ ಮುನ್ನವೇ ಬೇರೆ ರೀತಿಯಲ್ಲಿ ಹ್ಯಾಂಡಲ್ ಆಗಿ ಬಿಡ್ತಿದ್ದವಂತೆ.ಇದನ್ನೇ ಅಸ್ತ್ರವಾಗಿಟ್ಟುಕೊಂಡು ಶಂಕರ್ ಹಣ ಗಳಿಸಿದರಂತೆ ಎನ್ನುವುದು ಆ ಕಾಲಘಟ್ಟದ ಹಿರಿಯ ಪತ್ರಕರ್ತರ ಮಾತುಗಳು.

ಇದು ನಿಜವೂ ಆಗಿರಬಹುದು,ಸುದ್ದಿಗಳ ಮೂಲಕ ಹಣ ಯಾವಾಗ ಕೈ ಸೇರುತ್ತಾ ಹೋಯ್ತೋ,ಅದನ್ನೇ ದಂಧೆಯನ್ನಾಗಿಸಿಕೊಂಡಿರಬಹುದು ಶಂಕರ್,ಏಕೆಂದ್ರೆ ಈ ಸಂಪಾದಕನ ಬಗ್ಗೆ ಹೇಳಿಕೊಳ್ಳುವಂಥ  ಒಳ್ಳೆಯ ಮಾತುಗಳಿಲ್ಲ.. ರಾಜಕೀಯದಲ್ಲಿ ರುವವರು,..ಅಧಿಕಾರಿಗಳು..ಸರ್ಕಾರದ ವಿವಿಧ ಇಲಾಖೆಗಳ ಹಗರಣ-ಅಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರನ್ನೇ ಟಾರ್ಗೆಟ್ ಮಾಡುತ್ತಿದ್ದುದ್ದರಿಂದ ಸಹಜವಾಗಿಯೇ ಹಣ ಹರಿದುಬರುತ್ತಿತ್ತು.ಶಂಕರ್ ಇದೇ ವಾಮಮಾರ್ಗವನ್ನು ಅನುಸರಿಸಿಯೇ ಕೋಟಿ ಕೋಟಿ ಸಂಪಾದಿಸಿದರೆನ್ನುವುದು ಅನೇಕರ ಮಾತು.

ಕೆಲವು ಮೂಲಗಳ ಪ್ರಕಾರ ಶಂಕರ್ ಹತ್ತಿರತ್ತಿರ  150 ಕೋಟಿ ಆಸ್ತಿ ಒಡೆಯನಂತೆ.ಬೆಂಗಳೂರಿನಲ್ಲಿ ಸಾಕಷ್ಟು ಕಡೆ ಸೈಟ್-ಮನೆಗಳಿವೆಯಂತೆ.ರಿಯಲ್ ಎಸ್ಟೇಟ್ ಮೇಲೆ ಹಣ ಹೂಡಿದ್ದಾರಂತೆ.ಬೆಂಗಳೂರನ್ನು ಬಿಟ್ಟೂ ಅನೇಕ ಕಡೆ ಆಸ್ತಿ ಮಾಡಿದ್ದಾರಂತೆ.ಬ್ಯಾಂಕ್  ಬ್ಯಾಲೆನ್ಸೇ ಅದೆಷ್ಟೋ ಕೋಟಿಗಳಿವೆಯಂತೆ.ಬಾ್ರ್ ಲೈಸೆನ್ಸ್ ಕೂಡ ಪಡೆದಿದ್ದರಂತೆ.ಮಕ್ಕಳ ಮದುವೆಗೆ ಕೋಟ್ಯಾಂತರ ಖರ್ಚು ಮಾಡಿದ್ದರಂತೆ. ಹೆಂಡತಿ-ಮಕ್ಕಳಿಗೂ ಕೋಟಿ ಕೋಟಿ ಆಸ್ತಿ ಮಾಡಿಕೊಟ್ಟಿದ್ದಾರಂತೆ.ಅನೇಕರಿಗೆ ಕೋಟ್ಯಾಂತರ ಸಾಲ ಕೊಟ್ಟಿದ್ದಾರಂತೆ.ಅವರಿಂದಲೇ ಸಾಲವಾಗಿ ಬರಬೇಕಿರುವುದು ಅದೆಷ್ಟೋ ಕೋಟಿಗಳಿವೆಯಂತೆ.

ಹೀಗೆ ಇಷ್ಟೊಂದು ಹಣವನ್ನು “ಶಾಸಕ” ಎನ್ನುವ ಪತ್ರಿಕೆ ಮೂಲಕ ಸಂಪಾದಿಸಿದ್ದು ಸೋಜಿಗವೇ ಸರಿ..ಆದ್ರೆ ಇಷ್ಟೊಂದು ಹಣ ಮಾಡಿದ್ರೂ ಶಂಕರ್ ನೆಮ್ಮದಿಯಿಂದ ಮಾತ್ರ ಇರಲಿಲ್ಲ.ಕೋಟಿ ಒಡೆಯನಾದರೂ ಕೌಟುಂಬಿಕವಾಗಿ ಸಂತೋಷ ಇರಲಿಲ್ಲ.ತುಂಬಾ ನಿರೀಕ್ಷೆ ಇಟ್ಟುಕೊಂಡ್ರೂ ಉತ್ತಮ ಮಕ್ಕಳು ಹುಟ್ಟಲಿಲ್ಲ ಎನ್ನುವ ಕೊರಗಿತ್ತು. ಅಳಿಯಂದಿರು ಒಳ್ಳೆಯವರು ಸಿಗಲಲ್ಲವಲ್ಲ ಎನ್ನುವ ಬೇಸರವಿತ್ತು.ಕೋಟಿ ಕೋಟಿ ಕೂಡಿಟ್ಟರೂ ದಿನನಿತ್ಯದ ಖರ್ಚಿಗೆ ಹೆಂಡತಿ ಮುಂದೆ ಬಿಕ್ಷುಕನಂತೆ ನಿಲ್ಲಬೇಕಿತ್ತು. ಹೆಂಡತಿ-ಮಕ್ಕಳಿಂದ ನೆಮ್ಮದಿ ಸಿಗದೆ ಆಶ್ರಮ ಸ್ಥಾಪಿಸಲು ನಿರ್ಧರಿಸಿದ್ದರಂತೆ.ಅದನ್ನು ಮಾಡಲಿಕ್ಕೆ ಬೇಕಿದ್ದ ಒಂದಷ್ಟು ಲಕ್ಷ ಹಣಕ್ಕೂ ಹೆಂಡತಿ ಮುಂದೆ ಅಂಗಲಾಚಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದು ಮಾತ್ರ ವಿಪರ್ಯಾಸ.

ಆತ್ಮಹತ್ಯೆ ಎನ್ನುವುದು ಯಾವ ಕಾರಣಗಳಿಗೆ ಆಯ್ತೊ ಎನ್ನುವುದರ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.ಆದ್ರೆ ಶಂಕರ್ ನಂಥ ಒಬ್ಬ ಪತ್ರಕರ್ತ ಒಂದು ಪತ್ರಿಕೆಯಿಂದಲೇ ಹಲವಾರು ಕೋಟಿ ತೂಗುವಂಥ ಕುಳವಾಗಿ ಬೆಳೆದುನಿಂತಿದ್ದು ಅವರ ವೈಯುಕ್ತಿಕ ತಾಕತ್ತೆಂದು ಹೇಳಬಹುದಾದ್ರೂ ಅವರ ಬೆಳವಣಿಗೆ ಹಾಗೂ ಗಳಿಕೆ ರೀತಿ ಬಗ್ಗೆ ಸೈದ್ಧಾಂತಿಕವಾಗಿ ವಿರೋದಾಭಾಸಗಳಿವೆ.ಶಂಕರ್ ಗಳಿಕೆ ನಿಜಕ್ಕೂ ಪ್ರಾಮಾಣಿಕ-ದಕ್ಷರಾಗಿ ಉಳಿದಿರುವ ಸಾಕಷ್ಟು ಪತ್ರಕರ್ತರ ನೈತಿಕ ಪ್ರಜ್ಞೆಯನ್ನು ಕಾಡುತ್ತಿದೆ. ಪತ್ರಕರ್ತರ “ನಿಷ್ಠೆ-ಪಾರದರ್ಶಕತೆ”ಯು ಸಾರ್ವಜನಿಕವಾಗಿಯೂ  ಪ್ರಶ್ನೆಗೀಡಾಗುತ್ತಿದೆ.

Spread the love
Leave A Reply

Your email address will not be published.

Flash News