6000 Transport Workers Re-Employed:6 ಸಾವಿರ ಸಾರಿಗೆ ಕಾರ್ಮಿಕರಿಗೆ ಮರು ನೌಕರಿ ಭಾಗ್ಯ..ಸರ್ಕಾರದ ನಿರ್ದಾರವನ್ನು ಪ್ರಕಟಿಸಿದ ಸಚಿವ ಶ್ರೀರಾಮುಲು

ಸರ್ಕಾರದ ನಿರ್ದಾರಕ್ಕೆ ಸಾರಿಗೆ ಕಾರ್ಮಿಕರು ತೀವ್ರ ಸಂತಸ-ಹಂತಹಂತವಾಗಿ ಉಳಿದವರಿಗು ನೌಕರಿ ಭಾಗ್ಯ

0

ಬೆಂಗಳೂರು:ಕೊಟ್ಟ ಮಾತಿನಂತೆಯೇ ಸಾರಿಗೆ ಸಚಿವ ಶ್ರೀರಾಮುಲು ನಡೆದುಕೊಂಡಿದ್ದಾರೆ ಸಾರಿಗೆ ನೌಕರರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದ ಅವರು ಮೊದಲ ಹಂತದ ವರೆಗೆ ಮುಷ್ಕರ ವೇಳೆ ಅಮಾನತುಗೊಂಡಿದ್ದ 6ಸಾವಿರ ನೌಕರರನ್ನು ತಕ್ಷಣ ಕೆಲಸಕ್ಕೆ ನಿಯೋಜಿಸಿ ಕೈಗೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ ಇದರಿಂದ ಸಾರಿಗೆ ನೌಕರರ ವಲಯದಿಂದ ತೀವ್ರ ಸಂತಸ ವ್ಯಕ್ತವಾಗಿದೆ.

ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಹತ್ವದ ನಿರ್ಧಾರವನ್ನು ಶ್ರೀರಾಮುಲು ಪ್ರಕಟಿಸಿದ್ದು, ಮೊದಲ ಹಂತದಲ್ಲಿ 6ಸಾವಿರ ನೌಕರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಲಾಗಿದೆ ಮುಂದಿನ ಹಂತಗಳಲ್ಲಿ ವಜಾಗೊಂಡಿರುವ ನೌಕರರು  ಕೆಲಸದ ಭಾಗ್ಯವನ್ನು ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದಿದ್ದಾರೆ.

ಹಂತ ಹಂತವಾಗಿ ಸರ್ಕಾರ ಸಾರಿಗೆ ನೌಕರರ ವಿಷಯದಲ್ಲಿ ಸ್ಪಂದಿಸಲು ಸಿದ್ಧವಾಗಿದೆ ವಜಾಗೊಂಡಿರುವ ಅಂತ ನೌಕರರ ವಿಷಯದಲ್ಲಿ ಒಂದಷ್ಟು ತಾಂತ್ರಿಕ ತೊಂದರೆಗಳಿದ್ದು ಅದನ್ನು ಸಂಬಂಧಿಸಿದ ತಜ್ಞರೊಂದಿಗೆ ಸಮಾಲೋಚಿಸಲಾಗುವುದು. ಅವರನ್ನು ಕೂಡ ಕೆಲಸದ ಮೇಲೆ ನೇಮಿಸಿಕೊಳ್ಳುವಂತೆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈಗ  6ಸಾವಿರ ನೌಕರರು ತಕ್ಷಣಕ್ಕೆ ಕೆಲಸಕ್ಕೆ ನಿಯೋಜನೆ ಗೊಳ್ಳುವ ಅವಕಾಶವಿದೆ ಎಂದು ಹೇಳಿದ್ದಾರೆ.

ಶ್ರೀರಾಮುಲು ಅವರ ಈ ಘೋಷಣೆಯಿಂದಾಗಿ ನಿರೀಕ್ಷೆಯನ್ನೇ ಕಾಣಿಸಿಕೊಂಡಿದ್ದ ಸಾರಿಗೆ ನೌಕರರ ವಲಯದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ 6ಸಾವಿರ ನೌಕರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿ ಇರುವಂತದ್ದು ಕೆಲಸದ ನಿರೀಕ್ಷೆಯಲ್ಲಿರುವ ಮತ್ತೊಂದಷ್ಟು ನೌಕರರ ಮನ0ಸಂತಸವನ್ನು ಮೂಡಿಸಿದೆ.

Spread the love
Leave A Reply

Your email address will not be published.

Flash News