Breakinglock downScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜ್ಯ-ರಾಜಧಾನಿ

Fake Corona Test from BBMP Health Staff: BBMP ಆರೋಗ್ಯ ಸಿಬ್ಬಂದಿಯಿಂದಲೇ “ನಕಲಿ” ಕೊರೊನಾ ಟೆಸ್ಟ್ ದಂಧೆ..:”ಟಾರ್ಗೆಟ್ ರೀಚ್” ಗೆ ಬೋಗಸ್ ಲೀಸ್ಟ್..?!

ಬೆಂಗಳೂರು:ಕೊರೊನಾ ಮಹಾಮಾರಿಯ ಕಂಟಕ ತಪ್ಪಿದ್ರೂ ಅದರ ನೆವದಲ್ಲಿ ಲೂಟಿ ನಡೆಸುತ್ತಿರುವ-ಅಕ್ರಮ ಎಸಗುತ್ತಿರುವವರ ಉಪಟಳ ಮಾತ್ರ ನಿಂತಿಲ್ಲ.ಏಕಂದ್ರೆ ಕೊರೊನಾ ಜನಸಾಮಾನ್ಯನನಿಗೆ ಮಾರಣಾಂತಿಕವಾದ್ರೂ, ಬಿಬಿಎಂಪಿ ಆಡಳಿತಕ್ಕೆ ಕೊಳ್ಳೆ ಹೊಡೆಯಲು ಹುಲುಸಾದ ಹುಲ್ಲುಗಾವಲಿನಂತಾಗಿದೆ.ಕೊರೊನಾ ಬಾಧೆ ಕಡಿಮೆಯಾದ್ರೂ ಅದರ  ಹೆಸ್ರಲ್ಲಿ ಈ ಕ್ಷಣಕ್ಕೂ ವ್ಯವಸ್ಥಿತ ಹಾಗೂ ಅವ್ಯಾಹತವಾಗಿ ನಡೆಯುತ್ತಿರುವ ಹಗರಣ-ಅಕ್ರಮಗಳೇ ಇದಕ್ಕೆ ಸಾಕ್ಷಿ.

ಕೊರೊನಾ ನೆವದಲ್ಲಿ ಸರ್ಕಾರ ಯೋಜನೆ ಮಾಡಿದ್ರೆ ಅದರಲ್ಲೇ  ಹಣ ಹೊಡೆಯೊಕ್ಕೆ ಬೇಕಾದಷ್ಟು ಪ್ಲ್ಯಾನ್ ಮಾಡಿಟ್ಟುಕೊಳ್ಳುತ್ತಿದ್ದಾರೆ ಬಿಬಿಎಂಪಿಯ ಕೆಲವು ಭ್ಷರಟ-ಖದೀಮ ಸಿಬ್ಬಂದಿ.ಇಷ್ಟು ಟೆಸ್ಟ್ ಮಾಡಿದ್ರೆ ಇಷ್ಟು ಲಾಭ ಎಂದುಕೊಂಡು  ಅದಕ್ಕೆಂದೇ ಟಾರ್ಗೆಟ್ ಫಿಕ್ಸ್ ಮಾಡ್ಕೊಂಡು ಫೇಕ್ ಲೀಸ್ಟ್ ನಡೆಸುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ..ಆದ್ರೆ ಕ್ರಮ ಕೈಗೊಳ್ಳೊಕ್ಕೆ ಮಾತ್ರ ಸಾಧ್ಯವೇ ಆಗಿಲ್ಲ. ಯಲಹಂಕದ ಅಗ್ರಹಾರ ಬಡಾವಣೆಯಲ್ಲಿ ಇಂತಹುದೇ ಹಗರಣ ಸಾಕ್ಷ್ಯ ಸಮೇತ ಪತ್ತೆಯಾಗಿದೆ.

ಕನ್ನಡ ಫ್ಲ್ಯಾಶ್ ನ್ಯೂಸ್ ಹೇಳೊಕ್ಕೆ ಹೊರಟಿರುವ  ಈ ಅಕ್ರಮದ ಸುದ್ದಿ ನಿಜಕ್ಕೂ ಬಿಬಿಎಂಪಿ ಆಡಳಿತ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸುತ್ತೆ. ಪಾಸಣೆಗೊಳಪಡದೇನೆ ನಕಲಿ ಲೀಸ್ಟ್ ಸಿದ್ಧಪಡಿಸುತ್ತಿರುವ ಅಕ್ರಮದಲ್ಲಿ ಸ್ವಾಬ್ ಕಲೆಕ್ಟರ್ಸ್ ಗಳೇ ಶಾಮೀಲಾಗಿರುವ  ಅಕ್ರಮದ ಕಥೆ ಇದು. ಇವರಿಗೆ ಹೇಳೋರಿಲ್ಲ..ಕೇಳೋರಿಲ್ಲದಂತಾಗಿದೆ. ಜನರಿಗೆ ಕರೆ ಮಾಡಿ ಅವರಿಂದ ಓಟಿಪಿ ಪಡೆದು ಟೆಸ್ಟ್ ಮಾಡಿಸದೇನೇ ಅವರ ಲೀಸ್ಟ್ ರೆಡಿ ಮಾಡಿ ಟಾರ್ಗೆಟ್ ರೀಚ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಎಲ್ಲಾ ಸಾಕ್ಷ್ಯ ಲಭ್ಯವಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೀಸ್ಟ್ ಸಿದ್ದಪಡಿಸುವಲ್ಲಿ ನಿರತವಾಗಿರುವ ಸಿಬ್ಬಂದಿ..?!
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೀಸ್ಟ್ ಸಿದ್ದಪಡಿಸುವಲ್ಲಿ ನಿರತವಾಗಿರುವ ಸಿಬ್ಬಂದಿ..?!

ಅಂದ್ಹಾಗೆ ಯಲಹಂಕ ವ್ಯಾಪ್ತಿಯ  ಅಗ್ರಹಾರ ಬಡಾವಣೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಬಿಎಂಪಿ ಸಿಬ್ಬಂದಿಯಲ್ಲಿ ಕೆಲವರು ಫೇಕ್ ಲೀಸ್ಟ್ ರೆಡಿ ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಿ ವಂಚಿಸುತ್ತಿದ್ದಾರೆ..ಆ ಏರಿಯಾದ ನಂಬರ್ ಗಳನ್ನು ಕಲೆಕ್ಟ್ ಮಾಡಿ ಅವರಿಗೆ ಕರೆ ಮಾಡಿ ಅವರಿಂದ ಓಟಿಪಿ ಕಲೆಕ್ಟ್ ಮಾಡಿ ಅವರೆಲ್ಲಾ ಟೆಸ್ಟ್ ಮಾಡಿಸಿದ್ದಾರೆನ್ನುವ ರೀತಿಯಲ್ಲಿ ಲೀಸ್ಟ್ ರೆಡಿ ಮಾಡ್ತಿದ್ದಾರೆ.ಈ ಅಕ್ರಮವನ್ನು ಸ್ವಾಬ್ ಕಲೆಕ್ಟರ್ಸ್ ಗಳಾದ ಮಾನಸ,ಮಹೇಶ್ ಮಾಡುತ್ತಿದ್ದಾರೆನ್ನುವುದಕ್ಕೆ ಪುರಾವೆಗಳಿವೆ.ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿರುವ  ಈ ವಂಚನೆ ಸಾರ್ವಜನಿಕರ ಗಮನಕ್ಕೆ ಬಂದಿದೆ.ಕರೆ ಮಾಡಿ ಓಟಿಪಿ ಪಡೆಯುತ್ತಿರುವ ಸಿಬ್ಬಂದಿ ಟೆಸ್ಟ್ ಗೆ ಮಾತ್ರ ನಮ್ಮನ್ನೇಕೆ ಕರೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.ಒಂದೊಂದು ಫೇಕ್ ನೇಮನ್ನು ಲೀಸ್ಟ್ ಗೆ ಸೇರಿಸಿದಾಗಲೂ ಅನುಮಾನ ಬಾರದಿರುವಂತಾಗಲು ಸ್ವಾಬ್ ಟೆಸ್ಟ್ ನ ಕಡ್ಡಿಗಳನ್ನು ಮುರಿದು ಲೆಕ್ಕ ಪಕ್ಕಾ ಇದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.

ಅಗ್ರಹಾರ ಲೇ ಔಟ್ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ.ಮುರುಳೀಧರ್ ಗೆ ಇದೇನೂ ಗೊತ್ತೇ ಇಲ್ಲವಂತೆ..
ಅಗ್ರಹಾರ ಲೇ ಔಟ್ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ.ಮುರುಳೀಧರ್ ಗೆ ಇದೇನೂ ಗೊತ್ತೇ ಇಲ್ಲವಂತೆ..

ಈ ಅಕ್ರಮದಲ್ಲಿ ಕೇಂದ್ರದ ಡಿಇಗಳಾದ ಉದಯ್-ಪುರುಷೋತ್ತಮ್ ಶಾಮೀಲಾಗಿದ್ದಾರೆನ್ನಲಾಗಿದೆ. ಕೇಂದ್ರದ ಉಸ್ತುವಾರಿ ಡಾ.ಮುರುಳಿ ಕೂಡ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆಯಿದೆ.ಇದೆಲ್ಲದರ ಹಿಂದೆ ಪ್ರಮುಖವಾಗಿ ಕೇಳಿಬರುತ್ತಿರುವುದು ಬಿಬಿಎಂಪಿ ವೈದ್ಯರಾದ ಡಾ.ಇಂದು,ಡಾ.ಮಧುರಾ ಅವರುಗಳ ಹೆಸರು.ಅಕ್ರಮದ ಸಂಬಂಧ ಮಾದ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಕ್ರಮಕ್ಕೆ ಕಡಿವಾಣ ಹಾಕುವುದರ  ಜತೆಗೆ ಅಕ್ರಮದಲ್ಲಿ ಭಾಗಿಯಾದವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದೆ.

“ಇದು ನಿಜಕ್ಕೂ ಗುರುತರ ಹಾಗು ಗಂಭೀರವಾದ ಆರೋಪ.ಕೊರೊನಾ ಟೆಸ್ಟ್ ಗಳನ್ನು ನಕಲಿ ಮಾಡಲಾಗುತ್ತಿದೆ ಎನ್ನುವುದು ಬೆಚ್ಚಿಬೀಳಿಸಿದೆ.ಕೊರೊನಾ ಟೆಸ್ಟ್ ಟಾರ್ಗೆಟ್ ಎನ್ನುವ ಸಂಪ್ರದಾಯವೇ ನಮ್ಮಲ್ಲಿಲ್ಲ.ಅಲ್ಲಿರುವ ಸಿಬ್ಬಂದಿ ಅದ್ಯಾವ ಉದ್ದೇಶದಲ್ಲಿ ಹೀಗೆ ಮಾಡ್ತಿದ್ದಾರೆನ್ನುವುದು ಗೊತ್ತಾಗ್ತಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ.ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಲು ನಾವು ಬದ್ಧ”

ಡಾ.ವಿಜಯೇಂದ್ರ-ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ

ಮಾದ್ಯಮಗಳಲ್ಲಿ ಬಿತ್ತರವಾದ ಸುದ್ದಿಯಿಂದ ವಿಚಲಿತವಾಗಿರುವ ಯಲಹಂಕ ಆರೋಗ್ಯಾಧಿಕಾರಿಗಳು ಅಕ್ರಮ ಮುಚ್ಚಾಕಲು ಯತ್ನಿಸಿದ್ದಾರೆ.ಅಕ್ರಮಕ್ಕೆ ಕಾರಣವಾದವರ ವಿರುದ್ದ ಕ್ರಮ ಕೈಗೊಳ್ಳಲು  ಪೊಲೀಸ್ ಠಾಣೆಗೆ ದೂರು ಕೊಡುವ ಬದಲು,ಅಲ್ಲಿರುವ ಸಿಬ್ಬಂದಿಗೆ ಟಾರ್ಚರ್ ಕೊಟ್ಟು ಸುದ್ದಿ ಪಸರ್ ಅಗೊಕ್ಕೆ ಕಾರಣರ್ಯಾರು ಹೇಳಿ ಎಂದು ಸಿಬ್ಬಂದಿಯನ್ನು ಗೋಳೋಯ್ದುಕೊಳ್ಳಲಾರಂಭಿಸಿದ್ದಾರಂತೆ.ಅಂದ್ಹಾಗೆ ಇದು ಕೇವಲ ಅಗ್ರಹಾರ ಬಡಾವಣೆಯಲ್ಲಿ ನಡೆಯುತ್ತಿರುವ ಅಕ್ರಮವಲ್ಲ.ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ಇಂತಹುದೇ ಹಗರಣ ನಡೆಯುತ್ತಿರುವ ಸಾಧ್ಯತೆಗಳಿವೆ.ಇದಕ್ಕೆಲ್ಲಾ ಮುಖ್ಯ ಆಯುಕ್ತರು ಯಾವಾಗ ಕ್ರಮ ಕೈಗೊಳ್ತಾರೋ ಅ ದೇವ್ರೇ ಬಲ್ಲ.

ಮುಖ್ಯ ಆಯುಕ್ತ ಗೌರವ್ ಗುಪ್ತಾ ಕೇವಲ ಶೋ ಅಪ್ ಕೊಡೋದನ್ನು ನಿಲ್ಲಿಸದಿದ್ರೆ,ಆರೋಗ್ಯಾಧಿಕಾರಿಗಳು ಕಚೇರಿಯಲ್ಲೇ ಕುತ್ಕೊಂಡು ಚೇರ್ ಬಿಸಿ ಮಾಡೋದನ್ನು ಬಿಡದಿದ್ರೆ  ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಫೇಕ್ ಲೀಸ್ಟ್ ರೆಡಿ ಮಾಡಿ ವಂಚನೆ ಮಾಡುವಂಥ ಅಕ್ರಮ ಹೀಗೆಯೇ ಮುಂದುವರೆಯುತ್ತೆ.

“ನಮ್ಮ ಕೇಂದ್ರದಲ್ಲಿರುವ ಕೆಲವು ದೊಡ್ಡವರೇ ಇಂತದ್ದೊಂದು ಅಕ್ರಮಕ್ಕೆ ನಮ್ಮನ್ನು ಪ್ರಚೋದಿಸುತ್ತಿದ್ದಾರೆ.ನಮಗೆ ಇಷ್ಟವಿಲ್ಲದಿದ್ದರೂ ಇಂಥಾ ಕೆಲಸವನ್ನು ಮಾಡಿಸುತ್ತಿದ್ದಾರೆ.ಸ್ವಾಬ್ ಸ್ಯಾಂಪಲ್ಸ್ ಗಳ ದಾಸ್ತಾನನ್ನು ಮಾನಿಟರ್ ಮಾಡುವ ಕೆಲಸವೇ ನಡೆಯುತ್ತಿಲ್ಲ.ಎಷ್ಟು ಸ್ವಾಬ್ ಸ್ಯಾಂಪಲ್ಸ್ ಗಳು ಬರುತ್ವೆ..ಎಷ್ಟು ಹೋಗುತ್ವೆ ಎನ್ನುವುದಕ್ಕೆ ಅಕೌಂಟಬಿಲಿಟಿನೇ ಇಲ್ಲವಾಗಿದೆ.ಸಿಸಿ ಕ್ಯಾಮೆರಾಗಳನ್ನು ಹಾಳು ಮಾಡಲಾಗಿದೆ.ವೈದ್ಯರುಗಳೇ ಸ್ವಾಬ್ ಸ್ಯಾಂಪಲ್ಸ್ ಗಳನ್ನು ತೆಗೆದುಕೊಂಡು ಹೋಗಿ ಹೊರಗೆ ಮಾರಾಟ ಮಾಡುತ್ತಿದ್ದಾರೆನ್ನುವ ಬಗ್ಗೆಯು ನಮಗೆ ಅನುಮಾನಗಳಿವೆ”

-ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಆರೋಗ್ಯ ಸಿಬ್ಬಂದಿ

Spread the love

Related Articles

Leave a Reply

Your email address will not be published.

Back to top button
Flash News