BBMP Headmaster massaged by parent:BBMP ಶಾಲೆಯಲ್ಲೇ “ಹೆಡ್ ಮಾಸ್ಟರ್”ಗೆ ಮಸ್ತ್ ಮಸ್ತ್ “ಮಸಾಜ್”…ಶಿಕ್ಷಕನ “ವಿಕೃತಿ”ಗೆ ಶಿಕ್ಷಕ ಸಮುದಾಯವೇ ಕಕ್ಕಾಬಿಕ್ಕಿ…

ಇದು ಬಿಬಿಎಂಪಿ ಶಾಲಾ ಮುಖ್ಯ ಶಿಕ್ಷಕನ ಮಸ್ತ್ ಮಸ್ತ್ ಮಸಾಜ್ ಕಹಾನಿ-ಮಗುವಿನ ಅಡ್ಮಿಷನ್ ಗೆ ಬಂದ ಪೋಷಕಿಯಿಂದಲೇ ಮಸಾಜ್ ಮಾಡಿಸಿಕೊಂಡ ಹೆಡ್ ಮಾಸ್ಟರ್..

0

ಬೆಂಗಳೂರು: ಬಿಬಿಎಂಪಿ ಶಾಲೆಗಳೇನು ಸರಸ್ವತಿ ದೇಗುಲಗಳೋ..ಕಾಮಚೇಷ್ಟೆಯ ಮಸಾಜ್ ಪಾರ್ಲರ್ ಗಳೋ..

ಮಕ್ಕಳಿಗೆ ಪಾಠ ಹೇಳಿಕೊಡೋ ಶಿಕ್ಷಕನನ್ನು ದೇವ್ರು ಎನ್ತೇವೆ..ಬದುಕನ್ನು ತಿದ್ದಿ ತೀಡಿ ಭವಿಷ್ಯ ರೂಪಿಸೋ ಶಿಲ್ಪಿ ಎನ್ತೇವೆ.ಆದ್ರೆ ಶಿಕ್ಷಕರೇ..ಹಾದಿ ತಪ್ಪಿದ್ರೆ…ಅಸಹ್ಯ ಹುಟ್ಟಿಸೋ ಕೆಲಸ ಮಾಡಿದ್ರೆ..ಹೇಗ್ಹೇಳಿ..ಯಾವ್ ನಂಬಿಕೆ ಇಟ್ಟುಕೊಂಡು ಮಕ್ಕಳ ಹೊಣೆಯನ್ನು ಶಿಕ್ಷಕರ ಹೆಗಲಿಗೇರಿಸಿ ಪೋಷಕರು ಹಾಗು ನಮ್ಮ ಸಮಾಜ ಸುಮ್ಮನಿರಲು ಸಾಧ್ಯವೇಳಿ..? ಸರಸ್ವತಿ ದೇಗುಲವನ್ನು ಅಪವಿತ್ರಗೊಳಿಸಿದ್ರೆ…ನಿಜಕ್ಕು ಅದನ್ನು ಒಪ್ಪೊಕ್ಕಾಗುತ್ತಾ.. ಖಂಡಿತಾ ಇಲ್ಲ..ಬಿಬಿಎಂಪಿ ಶಾಲೆಯಲ್ಲಿಯೂ ಇಂತದ್ದೇ ಒಂದು ಅಚಾತುರ್ಯ ನಡೆದೋಗಿದೆ.

ಕೋದಂಡರಾಮಪುರ ಬಿಬಿಎಂಪಿ ಶಾಲೆಯಲ್ಲಿ  ಕಾಮಚೇಷ್ಟೆಯ  ಶಿಕ್ಷಕನೊಬ್ಬ ತನ್ನ ಕಚ್ಚೆ ಹರಕುತನದಿಂದಲೇ ಸುದ್ದಿಯಲ್ಲಿದ್ದಾನೆ. ಪ್ರಭಾರಿ ಮುಖ್ಯ ಶಿಕ್ಷಕನಾಗಿರುವ ಲೋಕೇಶಪ್ಪ ಎಂಬಾತ ತನ್ನ ಮಗುವನ್ನು ಅಡ್ಮಿಷನ್ ಮಾಡಿಸಲಿಕ್ಕಂಥ ಬಂದ ಪೋಷಕಿಯೊಬ್ಬಳಿಂದ್ಲೇ ಶಾಲಾ ರೂಂ ಒಂದರಲ್ಲಿ ಮಸಾಜ್ ಮಾಡಿಸಿಕೊಂಡಿರುವ ಗುರುತರ ಆರೋಪಕ್ಕೆ ತುತ್ತಾಗಿದ್ದಾನೆ.ಆತನ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಂದ್ಹಾಗೆ ಈ ಘಟನೆ ಕಳೆದ ಶನಿವಾರ ನಡೆದಿದೆ ಎನ್ನಲಾಗ್ತಿದೆ.ಮಗುವಿನ ಅಡ್ಮಿಷನ್ ಗೆಂದು ಮಹಿಳೆಯೊಬ್ಬಳು ಶಾಲೆಗೆ ಬಂದಿದ್ದಾಳೆ.ಆ ವೇಳೆ ಈತ ಆಕೆಯ ಪೂರ್ವಾಪರ ವಿಚಾರಿಸಿದ್ದಾನೆ.ಜೀವನ ನಿರ್ವಹಣೆಗೆ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದೇನೆ ಎಂದಿದ್ದಾಳಂತೆ.ನೀಯತ್ತು ನೆಟ್ಟಗಿದಿದ್ದರರೆ ಇದನ್ನು ಕೇಳಿ ಸುಮ್ಮನಾಗಬೇಕಿತ್ತು,.ಆದ್ರೆ ಈ ಗಢವ ಎಂಥಾ ನೀಚ ಕೆಲಸಕ್ಕೆ ಕೈ ಹಾಕಿದ್ದಾನೆಂದ್ರೆ,ಆಕೆಯನ್ನು ಮಸಾಜ್ ಮಾಡುವಂತೆ ಒತ್ತಾಯಿಸಿದ್ದಾನೆ.

ಪೋಷಕರೋರ್ವರಿಂದ ಮಸಾಜ್ ಮಾಡಿಸಿಕೊಂಡ ವಿಕೃತ ಮನಸ್ತಿತಿಯ ಮುಖ್ಯ ಶಿಕ್ಷಕ ಲೋಕೇಶಪ್ಪ
ಪೋಷಕರೋರ್ವರಿಂದ ಮಸಾಜ್ ಮಾಡಿಸಿಕೊಂಡ ವಿಕೃತ ಮನಸ್ತಿತಿಯ ಮುಖ್ಯ ಶಿಕ್ಷಕ ಲೋಕೇಶಪ್ಪ
ಮಗುವಿನ ಅಡ್ಮಿಷನ್ ಗೆ ಬಂದ ಪೋಷಕಿಯಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯ( ಶನಿವಾರ ನಡೆದಿದೆ ಎನ್ನುವುದಕ್ಕೆ ಫೋಟೋದ ಕೆಳಗೆ ಡೇಟ್ ಕೂಡ ಉಲ್ಲೇಖವಾಗಿದೆ)
ಮಗುವಿನ ಅಡ್ಮಿಷನ್ ಗೆ ಬಂದ ಪೋಷಕಿಯಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯ( ಶನಿವಾರ ನಡೆದಿದೆ ಎನ್ನುವುದಕ್ಕೆ ಫೋಟೋದ ಕೆಳಗೆ ಡೇಟ್ ಕೂಡ ಉಲ್ಲೇಖವಾಗಿದೆ)

ಮಗುವಿನ ಅಡ್ಮಿಷನ್ ಆದ್ರೆ ಸಾಕೆನ್ನುವ ಮನಸ್ತಿತಿಯಲ್ಲಿದ್ದ  ಆ ಪಾಪ ಬಡ ಮಹಿಳೆ ಇಷ್ಟವಿಲ್ಲದಿದ್ದರೂ ಓ.ಕೆ ಅಂದಿದ್ದಾಳೆ.ಆ ಕ್ಷಣ ಆತ ಶಿಕ್ಷಕರನ್ನೆಲ್ಲಾ ಹೊರಗೆ ಕಳುಹಿಸಿ ಮಸ್ತ್ ಮಸ್ತ್ ಮಸಾಜ್ ಮಾಡಿಸಿಕೊಂಡಿದ್ದಾನೆ. ಶಾಲಾ ಸಿಬ್ಬಂದಿಯೋರ್ವ ತನ್ನ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ.ಆ ಫೋಟೋ ಎಕ್ಸ್ ಕ್ಲ್ಯೂಸಿವ್ ಆಗಿ ಕನ್ನಡ ಫ್ಲಾಶ್ ನ್ಯೂಸ್ ಗೆ ಲಭ್ಯವಾಗಿದೆ.

ಇಷ್ಟವಿಲ್ಲದಿದ್ದರೂ ಆತನ ಮೈ ಮಸಾಜ್ ಮಾಡುವಾಗ ಆಕೆಯೊಂದಿಗೆ ಅಸಭ್ಯ-ಅಶ್ಲೀಲವಾಗಿಯೂ ಮಾತನಾಡಿದ್ದಾನೆನ್ನಲಾಗಿದೆ.ನೀನು ಮನಸ್ಸು ತಣಿಯುವಂತೆ ಮಸಾಜ್ ಮಾಡಿದ್ರೆ ನಿನಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡ್ತೇನೆ.ನಿನ್ನ ಮಗುವಿನ ಎಜುಕೇಷನ್ ಖರ್ಚನ್ನೆಲ್ಲಾ ನಾನೇ ನೋಡಿಕೊಳ್ಳುತ್ತೇನೆ ಎಂದೆಲ್ಲಾ ಪುಸಲಾಯಿಸಿದ್ದಾನೆ.ಆದ್ರೆ ಇದಕ್ಕೆಲ್ಲಾ ಒಪ್ಪದೆ ಅವಸರವರವಾಗಿ ಮಸಾಜ್ ಮುಗಿಸಿ ಹೊರಬಿದ್ದಿದ್ದಾಳೆ.

ಶಾಲೆ ಕೊಠಡಿಯಲ್ಲಿ ಮಸಾಜ್ ನಡೆಯುತ್ತಿದ್ರೆ ಶಿಕ್ಷಕರೆಲ್ಲಾ ಹೊರಗೆ ನಿಂತು ಲೋಕೇಶಪ್ಪನ ಕೃತ್ಯಕ್ಕೆ ಹಿಡಿಶಾಪ ಹಾಕುತ್ತಿದ್ದರೆನ್ನಲಾಗಿದೆ. ಬೇರೆ ವಿಧಿಯಿಲ್ಲದೆ ಶಿಕ್ಷಕನ ಅನುಚಿತ ವರ್ತನೆ ವಿರುದ್ಧ ಸೊಲ್ಲೆತ್ತದೆ ಮೌನವಾಗಿದ್ದಾರೆ.ಅಲ್ಲಿ ಕೆಲಸ ಮಾಡೋರು  ಬಹುತೇಕ ಹೊರಗುತ್ತಿಗೆ ಶಿಕ್ಷಕರೇ ಆಗಿರುವುದರಿಂದ,ಪ್ರಶ್ನಿಸಿದ್ರೆ ಕೆಲಸಕ್ಕೆ ಕುತ್ತು ತರುತ್ತಾನೆನ್ನುವ ಆತಂಕಕ್ಕೆ ಮೌನ ವಹಿಸಿದ್ದಾರೆ.ಬಹುಷಃ ಅಲ್ಲಿನ ಸಿಬ್ಬಂದಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಡ್ರೆ ಅವರು ಸತ್ಯವನ್ನು ಹೊರಹಾಕಬಹುದೇನೊ..

ಅಂದ್ಹಾಗೆ ಈ ಲೋಕೇಶಪ್ಪನ ಬಗ್ಗೆ ಅನೇಕ ಕಥೆಗಳಿವೆ.ಈ ಹಿಂದಿನ ಶಾಲೆಗಳಲ್ಲೂ ಈತ ಇಂತದ್ದೇ ಅನುಚಿತ ವರ್ತನೆ ಮಾಡಿದ್ದನೆನ್ನುವ ಆರೋಪವಿದೆ. ಪೋಷಕರು-ಶಿಕ್ಷಕರು-ಸ್ವಚ್ಛತಾ ಸಿಬ್ಬಂದಿ ಜತೆಗೂ ಅನುಚಿತವಾಗಿ ವ್ಯವಹರಿಸಿದ್ದಕ್ಕೆ ಸರಿಯಾಗಿ ತಟ್ಟಿಸಿಕೊಂಡಿದ್ದನಂತೆ.ಕೆಲಸ ಮಾಡೋ ಶಾಲೆಯ ಸೆಕ್ಯೂರಿಟಿ ಮಗಳೊಂದಿಗೂ ಕಾಮಚೇಷ್ಟೆ ಮಾಡಲು ಹೋಗಿ ತದುಕಿಸಿಕೊಂಡಿದ್ದನೆನ್ನುವ ಮಾತಿದೆ.ಹಾಲುಣಿಸುತ್ತಿದ್ದ ಆಕೆಯ  ಅಂಗಾಂಗ ಮುಟ್ಟಿ ಕಾಮಚೇಷ್ಟೆ ಮಾಡಿದ್ದನೆನ್ನುವ ಆರೋಪವಿದೆ.

ಮೊದಲೇ ಬಿಬಿಎಂಪಿ ಶಾಲೆಗಳೆಂದ್ರೆ ಒಳ್ಳೆ ಹೆಸರಿಲ್ಲ..ಒಳ್ಳೆಯ ವಾತಾವರಣವಿಲ್ಲ..ಅಗತ್ಯ ಸೌಲಭ್ಯಗಳಿಲ್ಲ..ಗುಣಮಟ್ಟದ ಶಿಕ್ಷಣವಿಲ್ಲ ಎನ್ನುವ ಕಾರಣಕ್ಕೆ ಆರ್ಥಿಕವಾಗಿ ಹಿಂದುಳಿದವರು ಕೂಡ ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸುವುದಕ್ಕಿಂತ ಕಷ್ಟವಾದರೂ ಪರ್ವಾಗಿಲ್ಲ,ಖಾಸಗಿ ಶಾಲೆಗಳಿಗೆ ಸೇರಿಸುವುದು ಉತ್ತಮ ಎನ್ನುವ ಸ್ತಿತಿಯಿದೆ.ಅಂತದ್ದರ ನಡುವೆ ಇಂಥಾ ಕೃತ್ಯ ನಡೆದಿರುವುದು ಶಾಲೆಗಳ ಬಗ್ಗೆ ಇನ್ನಷ್ಟು ಕೆಟ್ಟದಾಗಿ ಮಾತನಾಡೊಕ್ಕೆ ಕಾರಣವಾಗಬಹುದು..ಶಿಕ್ಷಕರ ಘನತೆ-ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿರುವ ಲೋಕೇಶಪ್ಪನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಕರಾದಿಯಾಗಿ ಬೆಂಗಳೂರಿನ ನಾಗರಿಕರು ಒತ್ತಾಯಿಸಿದ್ದಾರೆ.

Spread the love
Leave A Reply

Your email address will not be published.

Flash News