ಬಿಬಿಎಂಪಿ ಮಸಾಜ್ ಟೀಚರ್ ಸಸ್ಪೆಂಡ್..ತನಿಖೆ ವೇಳೆ ಮುಖ್ಯ ಶಿಕ್ಷಕನ ವಿಕೃತಿ ಪ್ರೂವ್..

ಮಗುವಿನ ಅಡ್ಮಿಷನ್ ಗೆ ಬಂದ ಪೋಷಕಿಯೋರ್ವರಿಂದ ಶಾಲೆ ಕೊಠಡಿಯಲ್ಲೇ ಮಸಾಜ್ ಮಾಡಿಸಿಕೊಂಡಿದ್ದ ಲೋಕೇಶಪ್ಪ..

0

ಬೆಂಗಳೂರು:ಮಗುವಿನ ಅಡ್ಮಿಶನ್ ಗೆಂದು ಬಂದಂತಹ ತಾಯಿಯಿಂದ ಮಸಾಜ್ ಮಾಡಿಸಿಕೊಂಡಂಥ  ಕೋದಂಡರಾಮಪುರ ಬಿಬಿಎಂಪಿ ಶಾಲೆಯ “ವಿಕೃತ”ಪ್ರಭಾರ ಮುಖ್ಯ ಶಿಕ್ಷಕ ಲೋಕೇಶಪ್ಪ ನನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ಅಮಾನತುಗೊಳಿಸಿದ್ದಾರೆ.

ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಬಾಬುಶಂಕರ್ ರೆಡ್ಡಿಯವರು ಮುಖ್ಯಶಿಕ್ಷಕನ ವಿಷಯದಲ್ಲಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಕೂಲಂಕುಷವಾಗಿ ಅವಲೋಕಿಸಿ ಇದಕ್ಕಾಗಿ ತಂಡ ರಚಿಸಿದ್ದರು.

ವಿಶೇಷ ತನಿಖಾ ತಂಡವು ತನಿಖೆ ನಡೆಸಿದ ಸಂದರ್ಭದಲ್ಲಿ ತಾನು ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡಿದ್ದು  ಸತ್ಯ ಎನ್ನುವುದನ್ನು ಲೋಕೇಶಪ್ಪ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ತನಿಖೆಯ ವೇಳೆ ಮುಖ್ಯಶಿಕ್ಷಕ ತಾನು ಮಾಡಿದ್ದು ತಪ್ಪು ಎನ್ನುವುದನ್ನು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಶಿಕ್ಷಕನ ವಿಕೃತಿ ಸಾಕ್ಷ್ಯ ಸಮೇತ ಬಯಲಾದಂತಾಗಿದೆ.ಈ ಕಾರಣದಿಂದ ತಕ್ಷಣಕ್ಕೆ ಅವರನ್ನು ಅಮಾನತುಗೊಳಿಸಲಾಗಿದ್ದು,ಮುಂದಿನ ಆದೇಶದವರೆಗೂ ಅವರನ್ನು ಅಮಾನತಿನಲ್ಲಿಡಲಾಗಿದೆ..

Spread the love
Leave A Reply

Your email address will not be published.

Flash News