Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

Mysterious Explosive-Body Rupture: ಬೆಂಗಳೂರಿನಲ್ಲಿ ನಿಗೂಢ ಸ್ಪೋಟಕ್ಕೆ ಇಬ್ಬರು ನಿಷ್ಪಾಪಿಗಳು ಬಲಿ..ಮೃತದೇಹಗಳು ಛಿದ್ರಛಿದ್ರ-ಘಟನೆಗೆ ದಿಗ್ಬ್ರಾಂತಗೊಂಡ ಚಾಮರಾಜಪೇಟೆ..

ಸಮಯ: ಬೆಳಗ್ಗೆ ಸುಮಾರು 11:40

ಸ್ಥಳ.ಚಾಮರಾಜಪೇಟೆಯ ನ್ಯೂ ತರಗುಪೇಟೆ

ದುರಂತ:ಸ್ಪೋಟ-ಇಬ್ಬರ ದುರ್ಮರಣ

ಬೆಂಗಳೂರು:ರಾಜಧಾನಿ ಬೆಂಗಳೂರಿಗೆ ಅದ್ಹೇನ್ ಬಂದಿದೆಯೋ ಗೊತ್ತಿಲ್ಲ..ಅದ್ಯಾರ ಶಾಪ ತಟ್ಟಿದೆಯೋ ತಿಳೀತಿಲ್ಲ..ಒಂದ್ ಮುಗೀತು ಎನ್ನುವಷ್ಟರಲ್ಲೇ ಮತ್ತೊಂದು ಟ್ರ್ಯಾಜಿಡಿ ಸಂಭವಿಸುತ್ತಲೇ ಇದೆ.ಹಲವಾರು ರೂಪದಲ್ಲಿ ಒಂದಲ್ಲಾ ಒಂದು ಅವಘಡಗಳು ಘಟಿಸುತ್ತಲೇ ಇವೆ.ಇದಕ್ಕೆ ರಾಜಧಾನಿ ಬೆಂಗಳೂರಲ್ಲಿ ಇಂದು ನಡೆದೋದ ಅಗ್ನಿ ಅವಘಡ, ಇಬ್ಬರು ನಿಷ್ಪಾಪಿಗಳ ಸಾವೇ ಸಾಕ್ಷಿ.ದೇವರಚಿಕ್ಕನಹಳ್ಳಿ ಅಗ್ನಿ ದುರಂತದ ಕಹಿ ನೆನಪಿನ್ನು ಮಾಸೇ ಇಲ್ಲ.ಮಾದ್ಯಮಗಳಲ್ಲಿ ವರದಿಯಾದ ಸಜೀವದಹನದ ದೃಶ್ಯಗಳಿನ್ನು ಕಣ್ಣಿಂದ ಕದಲಿಯೇ ಇಲ್ಲ..ಅಷ್ಟರಲ್ಲಾಗಲೇ ಮತ್ತೊಂದು ದುರಂತ ಸಂಭವಿಸೋದಾಗಿದೆ.ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಸಾಕಷ್ಟು ಜನ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಂದ್ಹಾಗೆ ಈ ದುರಂತ ಸಂಭವಿಸಿದ್ದು ಬೆಂಗಳೂರಿನ ಚಾಮರಾಜಪೇಟೆಯ ನ್ಯೂ ತರಗುಪೇಟೆಯಲ್ಲಿ. ಬೆಳಗ್ಗೆ 11:40 ರ ಸುಮಾರಿಗೆ ನಿಗೂಢ ಸ್ಪೋಟ ಸಂಭವಿಸಿತ್ತು. ಸ್ಪೋಟದಲ್ಲಿ ಅಲ್ಲೇ ಇದ್ದ ಪಂಕ್ಟರ್‌ ಅಂಗಡಿ ಮಾಲೀಕ ಅಶ್ಲಾಂ ಪಾಷಾ ಹಾಗೂ ಮನೋಹರ್‌  ಸಾವನ್ನಪ್ಪಿದ್ದಾರೆ.ಈ ಪೈಕಿ ಗಾಯಗೊಂಡ  ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗಾಯಗೊಂಡಿರುವ ಸ್ಥಿತಿ ಗಂಭೀರವಾಗಿದೆ.

ಆರಂಭದಲ್ಲಿ ಸಿಲಿಂಡರ್‌ ಸ್ಪೋಟ ಅಥವಾ ಪಂಚರ್‌ ಅಂಗಡಿಯಲ್ಲಿರುವ ಏರ್‌ ಕಂಪ್ರೆಸರ್‌ ಸ್ಪೋಟಗೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದ್ರೆ ಅವು ಬ್ಲಾಸ್ಟ್‌ ಆಗಿರಲಿಲ್ಲ. ಹೀಗಾಗಿ ಪಕ್ಕದಲ್ಲಿಯೇ ದೊಡ್ಡಮಟ್ಟದಲ್ಲಿ ಪಟಾಕಿಯನ್ನು ಸಂಗ್ರಹಿಸಿ ಇಡಲಾಗಿದ್ದು, ಪವರ್‌ ಪಾಟ್‌ ರೀತಿಯ ಪಟಾಕಿ ಸಿಡಿದಿರಬಹುದು ಎಂದು ಶಂಕಿಸಲಾಗುತ್ತಿದೆ. ಘಟನೆಯಿಂದಾಗಿ ಅಕ್ಕ ಪಕ್ಕದಲ್ಲಿರುವ ಮನೆ, ಅಂಗಡಿಗಳಿಗೆ ಹಾನಿಯುಂಟಾಗಿದೆ. ಜನರು ಘಟನೆಯಿಂದಾಗಿ ಬೆಚ್ಚಿಬಿದ್ದಿದ್ದಾರೆ.

ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ,ಇಡೀ ವಾತಾವರಣವೇ  ರಕ್ತಸಿಕ್ತವಾಗಿತ್ತು.ಪಟಾಕಿ ಸಾಮಾಗ್ರಿಗಳು ಚಲ್ಲಾಪಿಲಿಯಾಗಿದ್ವು ಛಿದ್ರಗೊಂಡ ಮೃತ ದೇಹ ಕಂಡು ಸಂಬಂಧಿಕರು  ರೋದಿಸುತ್ತಿದ್ದರು.ಗಾಯಗೊಂಡವರ ಕೈ ,ಕಾಲು ಕಟ್ ಆಗಿತ್ತು.  ಮೇಲ್ನೋಟಕ್ಕೆ ಪಟಾಕಿ ಸ್ಪೋಟದಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಪಟಾಕಿ ಸ್ಪೋಟದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇರೆ ಯಾವುದಾದರೂ ಸ್ಪೋಟಕ ಸಂಗ್ರಹಿಸಡಲಾಗಿದೆಯೇ ಅನ್ನೋ ಬಗ್ಗೆ ತನಿಖೆ ಮುಂದುವರಿದಿದೆ.

ದುರಂತದಲ್ಲಿ ದುರ್ಮರಣಕ್ಕೀಡಾದ ತಮಿಳ್ನಾಡು ಮೂಲದ ಮನೋಹರ್
ದುರಂತದಲ್ಲಿ ದುರ್ಮರಣಕ್ಕೀಡಾದ ತಮಿಳ್ನಾಡು ಮೂಲದ ಮನೋಹರ್
ಸ್ಪೋಟದ ತೀವ್ರತೆಗೆ ಛಿದ್ರ ಛಿದ್ರವಾದ ಪಂಚರ್ ಅಂಗಡಿಯ ಅಸ್ಲಂ ಪಾಷಾ
ಸ್ಪೋಟದ ತೀವ್ರತೆಗೆ ಛಿದ್ರ ಛಿದ್ರವಾದ ಪಂಚರ್ ಅಂಗಡಿಯ ಅಸ್ಲಂ ಪಾಷಾ

ಸ್ಪೋಟದ ಹಿಂದಿನ ಕಾರಣ ನಿಗೂಢವಾಗಿದೆ. ಘಟನಾ ಸ್ಥಳಕ್ಕೆ ವಿದಿವಿಜ್ಞಾನ ಪ್ರಯೋಗಾಲಯದ ತಜ್ಞರು, ಬಾಂಬ್‌ ನಿಷ್ಕ್ರೀಯ ದಳದ ಅಧಿಕಾರಿಗಳು ಹಾಗೂ ಶ್ವಾನ ದಳ ಕೂಡ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನಾ ಕಾರ್ಯ ನಡೆಯುತ್ತಿದೆ. ಸ್ಪೋಟ ಯಾವ ಕಾರಣಕ್ಕೆ ನಡೆದಿದೆ ಅನ್ನೋ ಬಗ್ಗೆಯೂ ತನಿಖೆ ಮುಂದುವರಿದಿದೆ.

 ದುರ್ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಓಡೋಡಿ ಬಂದ ಜಮೀರ್:ಮೃತರಿಗೆ 2 ಲಕ್ಷ ಪರಿಹಾರ : ಬಾಂಬ್‌ ಸ್ಪೋಟದ ವಿಚಾರ ತಿಳಿಯುತ್ತಿದ್ದಂತೆ ವಿಧಾನಸೌಧದಲ್ಲಿ ಕಲಾಪದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಶಾಸಕ ಅಧಿವೇಶನ ಬಿಟ್ಟು ಘಟನಾಸ್ಥಳಕ್ಕೆ ಭೇಟಿ ಕೊಟ್ಟು ಸಂತಾಪ ವ್ಯಕ್ತಪಡಿಸಿದರು..ಘಟನೆಯಲ್ಲಿ ಮೃತ ಪಟ್ಟವರಿಗೆ 2 ಲಕ್ಷ ಪರಿಹಾರ ಘೋಷಿಸಿದ್ರು.ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ಮೃತ ಮನೋಹರ್‌ ಮೃತದೇಹವನ್ನು ತಮಿಳುನಾಡಿಗೆ ಕೊಂಡೊಯ್ಯಲು ಅಂಬ್ಯುಲೆನ್ಸ್‌ ವ್ಯವಸ್ಥೆಯನ್ನೂ ಮಾಡಿದ್ರು.

 ಪಟಾಕಿ ಅಂಗಡಿ ಮಾಲೀಕ ಅರೆಸ್ಟ್:ಪಟಾಕಿ ಸ್ಪೋಟದಿಂದಲೇ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಪಟಾಕಿ ಅಂಗಡಿಯ ಮಾಲೀಕ ಬಾಬು ಎಂಬಾತನನ್ನು ವಿವಿ ಪುರಂ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಪೋಟದ ಕುರಿತು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.  ಇನ್ನು ಘಟನೆ ನಡೆದಿರುವ ಎನ್‌ಟಿ ಪೇಟೆಗೆ ಹಿರಿಯ ಪೊಲೀಸ್‌ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್‌ ಆಯುಕ್ತ  ಸೌಮೆಂದು ಮುಖರ್ಜಿ ಅವರು ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಸದ್ಯ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು,ಗೋದಾಮು ಮಾಲೀಕ ಗಣೀಶ್ ಬಾಬುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ..ಇನ್ನು ಮನೋಹರ್ ,ಅಸ್ಲಂಪಾಷ ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ,ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ..ಒಟ್ನಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಅಗ್ನಿ ದುರಂತಗಳು ಹೆಚ್ಚಾಗುತ್ತಿದ್ದು,ದಿನ ನಿತ್ಯ ಸಾವು ನೋವು ಸಂಭವಿಸುತ್ತಲೇ ಇವೆ..ಅಕ್ರಮಗಳಿಗೆ ಸರ್ಕಾರ ಕಡಿವಾಣ ಹಾಕದೇ ಹೋದ್ರೆ,ಇಂತಹ ದುರಂತಗಳು ಮರುಕಳಿಸುತ್ತಲೇ ಇರುತ್ತವೆ.

 

Spread the love

Related Articles

Leave a Reply

Your email address will not be published.

Back to top button
Flash News