UPSC Result Announced,First Rank for Shubham:UPSC ಫಲಿತಾಂಶ ಪ್ರಕಟ, ಶುಭಂಗೆ ಮೊದಲ RANK -ಜಾಗೃತಿ ಅವಸ್ತಿ 2ನೇ RANK: ಅಂಕಿತ್ ಜೈನ್ ಗೆ 3ನೇ ರ್ಯಾಂಕ್..

ಕರ್ನಾಟಕದ ಅಕ್ಷಯ್ ಸಿಂಹಗೆ ಮೊದಲ 100 RANK ವಿಜೇತರಲ್ಲಿ ಸ್ಥಾನ,ಅಕ್ಷಯ್ ಸಿಂಹ ಗೆ 77ನೇ RANK

0
UPSC ಪರೀಕ್ಷೆಯಲ್ಲಿ ಪ್ರಥಮ RANK ಪಡೆದ ಬಿಹಾರ್ ಮೂಲದ ಶುಭಂ
UPSC ಪರೀಕ್ಷೆಯಲ್ಲಿ ಪ್ರಥಮ RANK ಪಡೆದ ಬಿಹಾರ್ ಮೂಲದ ಶುಭಂ
UPSC ಪರೀಕ್ಷೆಯಲ್ಲಿ ಎರಡನೇ RANK ಪಡೆದ ಜಾಗೃತಿ ಅವಸ್ತಿ
UPSC ಪರೀಕ್ಷೆಯಲ್ಲಿ ಎರಡನೇ RANK ಪಡೆದ ಜಾಗೃತಿ ಅವಸ್ತಿ

ಬೆಂಗಳೂರು:ದೇಶದ ಗಮನ ಸೆಳೆದಿದ್ದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ.

UPSC ಪರೀಕ್ಷೆಯಲ್ಲಿ 77ನೇ RANK ಪಡೆದ ಕರ್ನಾಟಕದ ಅಕ್ಷಯ್ ಸಿಂಹ
UPSC ಪರೀಕ್ಷೆಯಲ್ಲಿ 77ನೇ RANK ಪಡೆದ ಕರ್ನಾಟಕದ ಅಕ್ಷಯ್ ಸಿಂಹ

ಬಿಹಾರ್ ಮೂಲದ ಮುಂಬೈ ಐಐಟಿ ನ ಎಂಜಿನಿಯರಿಂಗ್ ಪದವೀಧರ ಶುಭಂ ಕುಮಾರ್ (ರೋಲ್ ನಂ .1519294) ಮೊದಲ ರ್ಯಾಂಕ್ ಪಡೆದಿದ್ದಾರೆ. ಮಧ್ಯಪ್ರದೇಶದ ಶ್ರೀಮತಿ ಜಾಗೃತಿ ಅವಸ್ಥಿ (ರೋಲ್ ಸಂಖ್ಯೆ. 0415262) ಎರಡನೇ ರ್ಯಾಂಕ್ ಪಡೆದಿದ್ದಾರೆ. ಮೂರನೇ ರ್ಯಾಂಕ್ ಅಂಕಿತ್ ಜೈನ್ ಪಡೆದಿದ್ದಾರೆ.ಕರ್ನಾಟಕದ ಅಕ್ಷಯ್ ಸಿಂಹ 77 ನೇ ರ್ಯಾಂಕ್ ಪಡೆದಿದ್ದಾರೆ.

ಅಕ್ಟೋಬರ್,4, 2020 ರಂದು ನಡೆಸಲಾದ ಪರೀಕ್ಷೆಗೆ 10,40,060 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ, ಅದರಲ್ಲಿ 4,82,770 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.05 ಜನವರಿ, 2021 ರಲ್ಲಿ ನಡೆದ ಲಿಖಿತ (ಮುಖ್ಯ) ಪರೀಕ್ಷೆಯಲ್ಲಿ 10564 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು.

ಪರ್ಸನಾಲಿಟಿ ಪರೀಕ್ಷೆಗೆ ಹಾಜರಾದ 2053 ಅಭ್ಯರ್ಥಿಗಳ ಪೈಕಿ 761 ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಯಾಗಿದ್ದಾರೆ.ಇವರಲ್ಲಿ 545 ಪುರುಷರು ಮತ್ತು 216 ಮಹಿಳೆಯರು ಸೇರಿದ್ದಾರೆ.ರ್ಯಾಂಕ್ ಗಳ ಆಧಾರದ ಮೇಲೆ  ವಿವಿಧ ಸೇವೆಗಳಿಗೆ ನೇಮಕಗೊಳ್ಳಲಿದ್ದಾರೆ.

ಮೊದಲ ರ್ಯಾಂಕ್ ಪಡೆದ ಶುಭಂ ಕುಮಾರ್ ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು.ಎರಡನೇ ರ್ಯಾಂಕ್ ಪಡೆದ ಜಾಗೃತಿ ಅವಸ್ಥಿ ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಪರೀಕ್ಷೆಗೆ ಅರ್ಹತೆ ಪಡೆದಳು.ಅಂದ್ಹಾಗೆ ಜಾಗೃತಿ  ಭೋಪಾಲ್‌ನಿಂದ ಬಿ ಟೆಕ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪದವಿ ಪಡೆದಿದ್ದಾರೆ.

25 ಅಗ್ರ 25 ಅಭ್ಯರ್ಥಿಗಳಲ್ಲಿ  13 ಪುರುಷರು ಮತ್ತು 12 ಮಹಿಳೆಯರಿರೋದು ವಿಶೇಷ. ಎಲ್ಲಕ್ಕಿಂತ ಹೆಚ್ಚಾಗಿ, ಅಂಗವೈಕಲ್ಯವನ್ನು ಮೆಟ್ಟಿನಿಂತು 25 ಪ್ರತಿಭಾನ್ವಿತರು ಈ ಬಾರಿಯ ಯುಪಿಎಸ್ ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುವುದು ವಿಶೇಷ. (ಈ ವಿಕಲಚೇತನ ಸಾಧಕರಲ್ಲಿ 7 ಮೂಳೆ ಅಂಗವೈಕಲ್ಯ; 04 ದೃಷ್ಟಿಹೀನ, 10 ವಯೋಮಾನದ ದುರ್ಬಲ ಮತ್ತು 04 ಬಹು ಅಂಗವೈಕಲ್ಯ ಹೊಂದಿದವರಾಗಿದ್ದಾರೆ..

Spread the love
Leave A Reply

Your email address will not be published.

Flash News