EXCLUSIVE…..BBMP COMMISSINOR PUT UNDER DARK: BBMP ಕಮಿಷನರ್ ಅನುಮತಿ ಇಲ್ಲದೆ “ಅಧಿಕಾರಿ”ಗಳಿಂದ ಶಾಲೆಗಳ ಅನಪಯುಕ್ತ (Wastage) ಸಾಮಾಗ್ರಿಗಳ ವಿಲೇವಾರಿ ಪ್ಲ್ಯಾನ್..?!

ಬಿ.ಕೇರ್ ಫುಲ್ BBMP ಕಮಿಷನರ್ ಗೌರವ್ ಗುಪ್ತಾ ಸಾಹೇಬ್ರೇ...ನಿಮ್ಮನ್ನೇ ಕತ್ತಲಲ್ಲಿಟ್ಟು "ಅಕ್ರಮ" ನಡೆಸುವ ಹುನ್ನಾರ ನಡೆಯುತ್ತಿದೆ..?!

0

ಬೆಂಗಳೂರು:ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಅವರೇ ಈಗಲೂ ನೀವು ಎಚ್ಚೆತ್ತುಕೊಳ್ಳದೇ ಹೋದರೆ  ನಿಮ್ಮಲ್ಲಿರುವ ಅಧಿಕಾರಿಗಳು ನಿಮ್ಮನ್ನು ಯಾವ್ ರೀತಿ ಯಾಮಾರಿಸಬಹುದು ಎನ್ನುವುದಕ್ಕೆ ಇದೊಂದು ಜಸ್ಟ್ ಸ್ಯಾಂಪಲ್ ಅಷ್ಟೆ..ನಿಮ್ಮ ಅದೇಶ-ಅನುಮತಿ ಇಲ್ಲದೆ ಅಧಿಕಾರಿಗಳು ಮಾಡಲಿಕ್ಕೆ ಹೊರಟಿದ್ದು ಎಂಥಾ ಘನಕಾರ್ಯ ಗೊತ್ತಾ..? ಕೇಳಿದ್ರೆ ಒಂದ್ ಕ್ಷಣ ನೀವೇ ಬೆಚ್ಚಿ ಬೀಳ್ತೀರಿ..ಆ ಸ್ಟೋರಿನಾ ನಾವ್ ಹೇಳ್ತೇವಿ ಕೇಳಿ..ಇದರಿಂದ ಎಚ್ಚೆತ್ತುಕೊಂಡು ಅಧಿಕಾರಿಗಳ ಮೇಲೆ ಕಂಟ್ರೋಲ್ ತಗೊಂಡ್ರೆ ನಿಮಗೆ ಒಳ್ಳೇದು..ಇಲ್ಲಾಂದ್ರೆ ಅದು ನಿಮ್ಮ ಗ್ರಹಚಾರ..ದುರಾದೃಷ್ಟ ಅಷ್ಟೇ..

ಶಾಲೆಗಳಲ್ಲಿರುವ ಅನಪಯುಕ್ತ ಸಾಮಾಗ್ರಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಸಹಾಯಕ ಆಯುಕ್ತ ಉಮೇಶ್ ಅವರು 16-08-2021 ರಂದು ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆ
ಶಾಲೆಗಳಲ್ಲಿರುವ ಅನಪಯುಕ್ತ ಸಾಮಾಗ್ರಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಸಹಾಯಕ ಆಯುಕ್ತ ಉಮೇಶ್ ಅವರು 16-08-2021 ರಂದು ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆ

ಬಿಬಿಎಂಪಿಯಲ್ಲಿ ಯಾವುದೇ ಒಂದು ಯೋಜನೆ-ಕೆಲಸ ಕೈಗೆತ್ತಿಕೊಳ್ಳಬೇಕೆಂದರೆ ಅದಕ್ಕೆ ಇಡೀ ಬಿಬಿಎಂಪಿಯ ಕಸ್ಟೋಡಿಯನ್ ಆಗಿರುವ ಕಮಿಷನರ್ ಅವರ ಆದೇಶ-ಅನುಮತಿ ಮುಖ್ಯ.ಇದು ಸಂಪ್ರದಾಯ ಮಾತ್ರ ಅಲ್ಲ,ನಿಯಮ ಕೂಡ.ಇದು ಇಲ್ಲಿ ಕೆಲಸ ಮಾಡುವ ಪ್ರತಿಯೋರ್ವರಿಗೂ ಗೊತ್ತಿರುವ ವಿಚಾರ.ಆದ್ರೂ ಒಂದಷ್ಟು ಅಧಿಕಾರಿಗಳು ಉಡಾಫೆತನದಿಂದಲೋ.. ನಿರ್ಲಕ್ಷ್ಯ ದಿಂದಲೋ ಅಂತದ್ದೊಂದು ಪ್ರಮಾದಗಳಿಗೆ ಕೈ ಹಾಕ್ತಾರೆ..ವರ್ಕೌಟ್ ಆದ್ರೆ ಲಾಭ ಮಾಡ್ಕೊತಾರೆ..ಯಾಮಾರಿದ್ರೆ ಬುಡಕ್ಕೆ  ತಂದ್ಕೋತಾರೆ..ಅದೆಲ್ಲದರ ಉದ್ದೇಶ ಹಣ..ಪರ್ಸಂಟೇಜ್,..ಕಿಕ್ ಬ್ಯಾಕ್ ಎನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಬಿಡಿ..

ನಾವ್ ಹೇಳೊಕ್ಕೆ ಹೊರಟಿರುವ ಸುದ್ದಿ ಕೂಡ ಮೇಲ್ನೋಟಕ್ಕೆ ಇಂತದ್ದೇ ಒಂದಷ್ಟು ಅನುಮಾನ ಮೂಡಿಸುವಂತಿದೆ.ಇಲ್ಲಿ ಯಾವ ಉದ್ದೇಶಕ್ಕೆ-ಕಾರಣಕ್ಕೆ ಮುಖ್ಯ ಕಮಿಷನರ್ ಗೌರವ್ ಗುಪ್ತಾ ಅವರಿಗೆ ಮಾಹಿತಿ ತಿಳಿಸಲಿಲ್ವೋ..ಅವರಿಂದ ಪರ್ಮಿಷನ್ ಪಡೀಲಿಲ್ವೋ ಗೊತ್ತಾಗ್ತಿಲ್ಲ.ಬಹುಷಃ ಗೌರವ್ ಗುಪ್ತಾರನ್ನು ಸುಲಭವಾಗಿ ಯಾಮಾರಿಸ್ವೋದು ಎನ್ನುವ ಆಲೋಚನೆ ಗೋ..ಅಥವಾ ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತು ಅವರಿಗೆಲ್ಲಿದೆ ಎನ್ನುವ ಭಾವನೆನೋ ಗೊತ್ತಾಗ್ತಿಲ್ಲ.ಆದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಿದ ಕೆಲಸ ಮಾತ್ರ ನಿಯಮಬಾಹೀರ ಎನ್ನುವುದಂತೂ ಸ್ಪಷ್ಟ.

ಅಂದ್ಹಾಗೆ ಶಿಕ್ಷಣ ಇಲಾಖೆಯಲ್ಲಿ ಆಯಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಗಳು ಮಾಡಿರುವ ಕೆಲಸ..ಮಾಡಿಕೊಂಡಿರುವ ಯಡವಟ್ಟು ಸಾಕಷ್ಟು ಚರ್ಚೆ-ವಿವಾದ ಸೃಷ್ಟಿಸಿದೆ.ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತ ಉಮೇಶ್ ಅವರ ಕಚೇರಿಯಿಂದ 16-08-2021 ರಂದು “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಲಾ-ಕಾಲೇಜುಗಳಲ್ಲಿ ಶೇಖರಣೆ ಮಾಡಿರುವ ಅನಪಯುಕ್ತ ಕಬ್ಬಿಣ,ಮರದ ಸಾಮಾಗ್ರಿ,ಗಾಡ್ರೇಜ್,ಕ್ರೀಡಾ ಸಾಮಾಗ್ರಿಗಳು ಹಾಗೂ ಇನ್ನಿತರೆ ಅನಪಯುಕ್ತ ಸಾಮಾಗ್ರಿಗಳನ್ನು ತಮ್ಮ ಹಂತದಲ್ಲಿಯೇ ಬಹಿರಂಗ ಹರಾಜು ಮಾಡಲು ಕೆಳಕಂಡ ಷರತ್ತುಗಳ ಅನ್ವಯ ಉದ್ದೇಶಿಸಲಾಗಿದೆ” ಎಂದು  ಎಲ್ಲಾ ಶಾಲೆಗಳ ಮುಖ್ಯೋಪಧ್ಯಾಯರಿಗೆ ಸೂಚನೆ ನೀಡಲಾಗಿರುತ್ತದೆ.

BBMP ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತ ಉಮೇಶ್
BBMP ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತ ಉಮೇಶ್
ವಿಲೇವಾರಿ ಆದೇಶ ರದ್ದುಪಡಿಸಲಾಗಿದೆ ಎಂದು ಶಾಲಾ ಮುಖ್ಯೋಪಧ್ಯಾಯರುಗಳ ಮೊಬೈಲ್ ಗೆ ರವಾನೆಯಾದ ಸಂದೇಶ
ವಿಲೇವಾರಿ ಆದೇಶ ರದ್ದುಪಡಿಸಲಾಗಿದೆ ಎಂದು ಶಾಲಾ ಮುಖ್ಯೋಪಧ್ಯಾಯರುಗಳ ಮೊಬೈಲ್ ಗೆ ರವಾನೆಯಾದ ಸಂದೇಶ

ಇದು ಬಿಬಿಎಂಪಿಯಲ್ಲಿರುವ 166 ಶಾಲೆಗಳು,ಇದರಲ್ಲಿ 89 ನರ್ಸರಿ ಶಾಲೆಗಳು, ಪ್ರೈಮರಿ-15,ಹೈಸ್ಕೂಲ್-35,ಕಾಲೇಜ್-15, 04 ಡಿಗ್ರಿ ಕಾಲೇಜ್ ಗಳ ಮುಖ್ಯಸ್ಥರಿಗೆ ರವಾನೆಯಾಗುತ್ತದೆ.ಆದೇಶದ ಹಿನ್ನಲೆಯಲ್ಲಿ ಕಾರ್ಯಯೋಜನೆ ಕೂಡ ರೂಪುಗೊಳ್ಳುತ್ತದೆ. ಆದರೆ ಇಂತದ್ದೊಂದು ಆದೇಶ ಹೊರಡಬೇಕಾದ್ರೆ ಅದಕ್ಕೆ ಮುಖ್ಯ ಆಯುಕ್ತರ ಅನುಮತಿ ಕಡ್ಡಾಯವಾಗಿರುತ್ತದೆ.

ಆದ್ರೆ ಮುಖ್ಯ ಆಯುಕ್ತರ ಗಮನಕ್ಕೆ ಬಾರದೆ ಇದೆಲ್ಲವೂ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.ಏಕೆಂದ್ರೆ ಮುಖ್ಯ ಆಯುಕ್ತರ ಕಚೇರಿ ಮೂಲಗಳೇ ಇಂತದ್ದೊಂದು ಕೆಲಸ ಮಾಡಲಿಕ್ಕೆ ಬೇಕಿರುವ ಅನುಮತಿಗಾಗಿ ಶಿಕ್ಷಣ ಇಲಾಖೆ ತಮ್ಮನ್ನು ಸಂಪರ್ಕಿಸಿಯೂ ಇಲ್ಲ,ನಾವು ಆದೇಶ ಕೊಟ್ಟಿಯೂ  ಇಲ್ಲ ಎನ್ನುವುದನ್ನು ಒಪ್ಪಿಕೊಂಡಿವೆ.ಇಷ್ಟೇ ಸಾಕಲ್ವೇ ಶಿಕ್ಷಣ ಇಲಾಖೆ ಕೈಗೆತ್ತಿಕೊಂಡ ಕೆಲಸ ಆಡಳಿತಾತ್ಮಕ ಹಾಗು ತಾಂತ್ರಿಕವಾಗಿ ದೋಷಪೂರಿತ ಎನ್ನೋದಕ್ಕೆ.

ನೀವೇ ಲೆಕ್ಕ ಹಾಕಿ,ಬಿಬಿಎಂಪಿಯಲ್ಲಿ 166 ಶಾಲೆಗಳಿದ್ದು,ಅಲ್ಲಿ ಪೀಠೋಪಕರಣ,ಕಬ್ಬಿಣ ಸಾಮಾಗ್ರಿ,ಕ್ರೀಡಾ ಸಾಮಾಗ್ರಿಗಳ ದಾಸ್ತಾನನ್ನು ಹರಾಜಾಕಿದ್ರೆ ಕಡ್ಮೆ ಎಂದ್ರೂ ಲಕ್ಷದಷ್ಟು ಹಣ ಬರುತ್ತೆ.ಕೆಲವು ಹಾಜರಾತಿ ಹೆಚ್ಚಿರುವ ದೊಡ್ಡ ದೊಡ್ಡ ಶಾಲೆಗಳಿಂದ ಇನ್ನೂ ಹೆಚ್ಚಿನ ಹಣ ಬರಬಹುದು.ಕನಿಷ್ಟ 1 ಲಕ್ಷದಂತೆ ತೆಗೆದುಕೊಂಡ್ರೂ 166 ಶಾಲೆಗಳಿಂದ 1 ಕೋಟಿ 66 ಲಕ್ಷದಷ್ಟು ಹಣ ಬಹಿರಂಗ ಹರಾಜಿನಿಂದಲೇ ಬರುತ್ತೆ.ಆ ಹಣವನ್ನೆಲ್ಲಾ ವಿಶೇಷ ಆಯುಕ್ತರ ಅಕೌಂಟ್ ಗೆ ಹಾಕಲಾಗುತ್ತೆ ಎಂದ್ಹೇಳುತ್ತಿದ್ದರೂ ಅಷ್ಟೂ ಡಿಪಾಸಿಟ್ ಆಗುತ್ತೆನ್ನುವುದಕ್ಕೆ ಖಾತ್ರಿ ಏನು ಎನ್ನುವುದು ಬಿಬಿಎಂಪಿ ಶಾಲೆಗಳಲ್ಲಿರುವ ಅನೇಕ ಶಿಕ್ಷಕರ ಪ್ರಶ್ನೆ,ಖರೀದಿದಾರನ ಜತೆ ಪರ್ಸಂಟೇಜ್ ಫಿಕ್ಸ್ ಮಾಡ್ಕೊಂಡು ಅಧಿಕಾರಿಗಳು ಅವ್ಯವಹಾರ ಮಾಡಬಹುದೆನ್ನುವುದು ಹೆಸರು ಹೇಳಲಿಚ್ಛಿಸದ ಅನೇಕ ಮುಖ್ಯ ಶಿಕ್ಷಕರ ಆರೋಪ.ಅವರ ಆರೋಪದಲ್ಲಿ ಸತ್ಯವೂ ಇರಬಹುದೇನೋ ಗೊತ್ತಿಲ್ಲ.

ಹಿರಿಯ ಸಹಾಯ ನಿರ್ದೇಶಕ ಹನುಮಂತಯ್ಯ
BBMP  ಹಿರಿಯ ಸಹಾಯ ನಿರ್ದೇಶಕ ಹನುಮಂತಯ್ಯ

ಆದ್ರೆ ಇಲ್ಲಿರುವ ಆಡಳಿತಾತ್ಮಕ-ತಾಂತ್ರಿಕ ಪ್ರಶ್ನೆ,ಇದೆಲ್ಲವೂ ಮುಖ್ಯ ಆಯುಕ್ತರ ಆದೇಶದ ಅನ್ವಯ ಆಗಿದೆಯಾ ಎನ್ನುವುದು.. ಈ ಬಗ್ಗೆ ಮಾದ್ಯಮಗಳು ಕೇಳಿದ ಪ್ರಶ್ನೆಗೆ ಸಹಾಯಕ ಆಯುಕ್ತ ಉಮೇಶ್ ,ಹಿಂದಿನ ಆಯುಕ್ತರ ಆದೇಶದ ಮೇಲೆ ಮಾಡಿದ್ದೇವೆ ಎಂದಿದ್ದಾರೆ.ಆದ್ರೆ ಗೌರವ್ ಗುಪ್ತಾ ಅವರ ಅನುಮತಿಯೂ ಕಡ್ಡಾಯವಲ್ಚೇ ಎಂದು ಕೇಳಿದ್ದಕ್ಕೆ ಅದೇನ್ ಅನ್ನಿಸಿತೋ ಗೊತ್ತಿಲ್ಲ,ಸಂಜೆ ವೇಳೆಗೆ ಎಲ್ಲಾ ಮುಖ್ಯೋಪಧ್ಯಾಯರುಗಳ ಮೊಬೈಲ್ ನಂಬರ್ ಗಳಿಗೆ ವಿಲೇವಾರಿ ಪ್ರಕ್ರಿಯೆ ಆದೇಶವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.ಮುಂದಿನ ದಿನಾಂಕ ತಿಳಿಸುತ್ತೇವೆ ಎಂಬ ಸಂದೇಶ ರವಾನೆಯಾಗಿದೆ.ಮುಜುಗರದಿಂದ ತಪ್ಪಿಸಿಕೊಳ್ಳೊಕ್ಕೆ ಸೋಮವಾರ ಬೆಳಗ್ಗೆ ಎಲ್ಲರೂ ತಮ್ ತಮ್ ಶಾಲೆಗಳಲ್ಲಿರುವ ಅನಪಯುಕ್ತ ಸಾಮಾಗ್ರಿಗಳ ಲೀಸ್ಟ್ ನೀ ಡುವಂತೆ ಆದೇಶಿಸಿದ್ದಾರೆ.

ತಾವ್ ಹೊರಡಿಸಿರುವ ಆದೇಶ ಸರಿಯಾಗಿದೆ ಎನ್ನುವುದೇ ಸತ್ಯವಾಗಿದ್ರೆ,ಅದರ ಬಗ್ಗೆ ಕನ್ಫರ್ಮೇಷನ್ ಇದ್ರೆ ಸಹಾಯಕ ಆಯು ಕ್ತರೇಕೆ ತಮ್ಮ ಆದೇಶ ರದ್ದುಪಡಿಸುವಂಥ ಸಂದೇಶವೊಂದನ್ನು ಶಾಲಾ ಮುಖ್ಯಸ್ಥರುಗಳಿಗೆ ರವಾನೆ ಮಾಡಿದ್ರು.. ಎನ್ನುವುದು ಸಾಮಾನ್ಯವಾಗಿ ಕಾಡುವಂಥ ಪ್ರಶ್ನೆ.ಮಾದ್ಯಮಗಳ ಪ್ರಶ್ನೆಯಿಂದಲೇ ಎಚ್ಚೆತ್ತುಕೊಂಡು ಉಮೇಶ್ ಅವರು ತಮ್ಮ ಆದೇಶ ರದ್ದುಪಡಿಸುವ ಮೂಲಕ ತಾವು ಮಾಡಿರುವ ತಪ್ಪನ್ನು ಸಾರಿ ಹೇಳಿದಂತಿದೆ ಎನ್ನುತ್ತಾರೆ ಬಿಬಿಎಂಪಿಯ ನಿವೃತ್ತ ಮುಖ್ಯೋಪಧ್ಯಾಯರು.

ಅನಪಯುಕ್ತ ಸಾಮಾಗ್ರಿಗಳ ವಿಲೇವಾರಿಯನ್ನು ಅಕ್ರಮವಾಗಿ ಮಾಡಲೊರಟ ಆದೇಶ ರದ್ದುಪಡಿಸಿದಾಕ್ಷಣ ಎಲ್ಲವೂ ಸರಿ ಹೋಯ್ತು ಎಂದು ಸುಮ್ಮನಾಗೋದು ಸರಿಯಲ್ಲ..ಇಂತದ್ದೊಂದು  ಆದೇಶ ಹೊರಡಿಸಿದ್ದು ಕೂಡ ತಪ್ಪು..ಇದಕ್ಕೆ ವಿಶೇಷ ಆಯುಕ್ತ ಬಾಬು ಶಂಕರ ರೆಡ್ಡಿ ಕುಮ್ಮಕ್ಕು ನೀಡಿದ್ರೆ ಅದು ಕೂಡ ತಪ್ಪೇ..ಹಾಗಾಗಿ ಸಹಾಯಕ ಆಯುಕ್ತ ಉಮೇಶ್, ವಿಶೇಷ ಆಯುಕ್ತ ಬಾಬು ರೆಡ್ಡಿ ಹಾಗೂ ಸಹಾಯಕ ನಿರ್ದೇಶಕ ಹನುಮಂತಯ್ಯ ವಿರುದ್ದ ಕಠಿಣ ಕ್ರಮ ಜಾರಿಯಾಗಬೇಕೆನ್ನುವುದು ಅನೇಕ ಸಂಘಟನೆಗಳ ವಾದ ಹಾಗೂ ಒತ್ತಾಯ.

ಮುಖ್ಯ ಆಯುಕ್ತ ಗೌರವ್ ಗುಪ್ತಾ ತಮಗಿರುವ ಒತ್ತಡ ಕಾರ್ಯಗಳಲ್ಲೇ ಮುಳುಗಿ ಹೋದ್ರೆ ಅವರ ಕಾರ್ಯ ಒತ್ತಡವನ್ನೇ ಮಿಸ್ಯೂಸ್ ಮಾಡಿಕೊಂಡು ಇನ್ನೊಂದಷ್ಟು ಅವರದೇ ಅಧಿಕಾರಿಗಳು ವಂಚನೆ ಮಾಡೋದಿಲ್ಲ ಎನ್ನುವುದಕ್ಕೇನು ಗ್ಯಾರಂಟಿ.ಇನ್ನಾದ್ರೂ ಗೌರವ್ ಗುಪ್ತಾ ತಮ್ಮ  ಕಣ್ಣಿನ ಅಳತೆಯಲ್ಲಿ ಏನೇನ್ ನಡೀತಿದೆ ಎನ್ನುವುದನ್ನು ಗಮನಿಸುವ ಜತೆಗೆ ಅದನ್ನು ಅವಲೋಕಿಸಲೂ ಬೇಕಿದೆ..ಇಲ್ಲವಾದಲ್ಲಿ ಅವರ ಹೆಸರಿನ ನೀರಿನಲ್ಲೇ ಸಾಕಷ್ಟು ಅಧಿಕಾರಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಾಧ್ಯತೆಯಂತೂ ಇದ್ದೇ ಇರುತ್ತದೆ.ಸೋ..ಬೀ ಕೇರ್  ಫುಲ್ ಕಮಿಷನರ್ ಗೌರವ್ ಗುಪ್ತಾ ಸಾಹೇಬ್ರೇ..

Spread the love
Leave A Reply

Your email address will not be published.

Flash News