Threat By Underworld Don Kaliyogesh: “ನಾನು ಅಂಡರ್ ವರ್ಲ್ಡ್ ಡಾನ್ ಕಲಿ ಯೋಗೇಶ್…” ಭೂಗತ ಪಾತಕಿಯಿಂದ ಸಾಮಾಜಿಕ ಕಾರ್ಯಕರ್ತ ರವಿ ಶೆಟ್ಟಿಗೆ ಜೀವ ಬೆದರಿಕೆ..

ನೀನೇನ್ ಧರ್ಮಸ್ಥಳದ ವೀರೆಂದ್ರ ಹೆಗ್ಡೆನಾ..ಸಮಸ್ಯೆ ಬಗೆಹರಿಸೋಕೆ..ನಿನ್ ಪಾಡಿಗೆ ಸುಮ್ಮನಿದ್ರೆ ಒಳ್ಳೇದು ಇಲ್ಲದಿದ್ರೆ ಹೆಣವಾಗ್ತೀಯ..

0
ಅಂಡರ್ ವರ್ಲ್ಡ್ ಡಾನ್ ಕಲಿ ಯೋಗೇಶ್
ಅಂಡರ್ ವರ್ಲ್ಡ್ ಡಾನ್ ಕಲಿ ಯೋಗೇಶ್

ಬೆಂಗಳೂರು: ತನ್ನನ್ನು ಭೂಗತ ಪಾತಕಿ ಎಂದು ಕರೆದುಕೊಂಡ ಕರಾವಳಿ ಮೂಲದ ಕಲಿ ಯೋಗೇಶ್ ಎಂಬಾತ   ಸಾಮಾಜಿಕ ಹೋರಾಟಗಾರ ಹಾಗೂ ಜೆಡಿಎಸ್ ಮುಖಂಡ ರವಿ ಶೆಟ್ಟಿ ಬೈಂದೂರು ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಹೈ ಗ್ರೌಂಡ್ಸ್  ಪೊಲೀಸರಿಗೆ ದೂರು ನೀಡಿದ್ದಾರೆ.

ನಿನ್ನೆ  ಅಂದರೆ ಶನಿವಾರ ಮಧ್ಯಾಹ್ನ ಮಂಗಳಮುಖಿಯರ ಪರವಾಗಿ ನೆಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರವಿಶೆಟ್ಟಿ ಅವರಿಗೆ  “ನಾನು  ಅಂಡರ್‌ವರ್ಲ್ಡ್ ಡಾನ್ ಕಲಿ ಯೋಗೇಶ್ ಎಂದು ಹೇಳಿಕೊಂಡ ವ್ಯಕ್ತಿ ಇಂಟರ್‌ನೆಟ್ ಕರೆ ಮೂಲಕ ಬೆದರಿಕೆ ಹಾಕಿದ್ದಾನೆ.ಪ್ರಕರಣವೊಂದರ ಬಗ್ಗೆ ನಡೆಸುತ್ತಿರುವ ಹೋರಾಟ ಕೈ ಬಿಡು..ಇಲ್ಲದಿದ್ದರೆ ಮುಗಿಸಿ ಹಾಕ್ತೇನೆ ಎಂದು ಅವಾಜ್ ಬಿಟ್ಟಿದ್ದಾರೆ  ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್  ಸಂಘಟನೆಯ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು  ಹೈಗೌಂಡ್ಸ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಕಾರ್ಮಿಕ ನಾಯಕ ರವಿ ಶೆಟ್ಟಿ‌ ಬೈಂದೂರ್
ಕಾರ್ಮಿಕ ನಾಯಕ ರವಿ ಶೆಟ್ಟಿ‌ ಬೈಂದೂರ್

ಘಟನೆ ಹಿನ್ನಲೆ:  ಕರಾವಳಿಯ ಬೋಳ ಸಹಕಾರಿ ವ್ಯವಸಾಯ ಸಂಘದ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಅಕ್ರಮ ಕಲ್ಲು ಕ್ವಾರಿಗಳ ವಿರುದ್ಧ ಹೋರಾಟದ ಸಂಬಂಧ ಈ ಬೆದರಿಕೆ ಕರೆ ಬಂದಿದೆಯಂತೆ. ಬೋಳ ಸೊಸೈಟಿ ವಿಷಯಕ್ಕೆ ಹೋದರೆ ಸರಿ ಇರುವುದಿಲ್ಲ. ನಿನ್ನಷ್ಟಕ್ಕೆ ನೀನಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಒಂದು ಗತಿ ಕಾಣಿಸುತ್ತೇನೆ. ನಾನು ಅಂಡರ್‌ವರ್ಲ್ಡ್ ಡಾನ್ ಕಲಿ ಯೋಗೇಶ್, ನಾನು ಯಾರು ಅಂತ ಗೊತ್ತಾಗಬೇಕು ಎಂದರೇ ಗೂಗಲ್‌ನಲ್ಲಿ ಸರ್ಚ್ ಮಾಡು ಎಂದು ಕರೆ ಮಾಡಿರುವ ವ್ಯಕ್ತಿ ಬೆದರಿಸಿರುವುದು ಕೂಡ ವಾಯ್ಸ್ ಕ್ಲಿಪ್‌ನಲ್ಲಿ ಸ್ಪಷ್ಟವಾಗಿದೆ ಎಂದು ರವಿ ಶೆಟ್ಟಿ ಬೈಂದೂರ್ ಳಿಸಿದ್ದಾರೆ.

ಸೊಸೈಟಿಯಲ್ಲಿ ಅವ್ಯವಹಾರ ನಡೆದಿರುವುದರಿಂದ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಮಧ್ಯಪ್ರವೇಶಿಸಿದ್ದೇನೆ ಎಂದು ರವಿ ಶೆಟ್ಟಿ ಹೇಳಿಕೊಂಡಿದ್ದಾರೆ.

ನೀನೊಬ್ನೆ  ಸಾಮಾಜಿಕ ಹೋರಾಟಗಾರ ಅಲ್ಲ, ಬೋಳ ಸೊಸೈಟಿ ತಂಟೆಗೆ ಹೋದರೆ ಹುಡುಗರನ್ನು ಕಳುಹಿಸಿ ಕಾಡಿನೊಳಗೆ ಹೊಡೆಸಿ ಬಿಡುತ್ತೇನೆ ಎಂಬುದು ಬೆದರಿಕೆ ಕರೆಯಲ್ಲಿ ದಾಖಲಾಗಿದ್ದು, ಈ ಸಂಭಂಧ ದೂರು ಸಲ್ಲಿಸಿದ್ದೇನೆ. ಈಗ ಪೊಲೀಸ್ ಭದ್ರತೆ ಕೂಡ ನೀಡಲಾಗಿದ್ದು, ಎರಡು ಮೂರು ದಿನ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ ಎಂದು ರವಿ ಶೆಟ್ಟಿ ಹೇಳಿದ್ದಾರೆ.

ಈ ಸಂಬಂಧ ರಕ್ಷಣೆ ಕೋರಿ ರವಿ ಶೆಟ್ಟಿ ನೀಡಿರುವ ದೂರಿನ ಹಿನ್ನಲೆಯಲ್ಲಿ  ಆರೋಪಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದೆ. ಹಲವರಿಗೆ ಬೆದರಿಸಿರುವ ಸಂಭಂದ ದೂರುಗಳು ದಾಖಲಾಗಿವೆ. ಈ ಬಗ್ಗೆ ನಿಗಾ ವಹಿಸಿದ್ದು ತನಿಖೆ ನೆಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಕರ್ನಾಟಕದ ನಾನಾಕಡೆ ಸಂಘಟನೆಯ ಮುಖಂಡರು ಬೆದರಿಕೆ ಹಾಕಿದವರ ವಿರುದ್ಧ ದೂರು ದಾಖಲಿಸುವ ಸಾಧ್ಯತೆ ಇದೆ ಮತ್ತು ಸಾಕಷ್ಟು ಮಠಾಧೀಶರು ಉದ್ಯಮಿಗಳು ಕಚೇರಿಗೆ ಮತ್ತು ರವಿ ಶೆಟ್ಟಿ ಅವರ ನಿವಾಸಕ್ಕೆ ತೆರಳಿ ರವಿ ಶೆಟ್ಟಿಯವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಅಂದ್ಹಾಗೆ ಕಲಿ ಯೋಗೇಶ್ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿಯಲ್ಲಿದೆ.ಹಣವಂತರು..ರಿಯಲ್ ಎಸ್ಟೇಟ್ ಉದ್ಯಮಿಗಳು,ರಾಜಕಾರಣಿಗಳನ್ನು ಹಣಕ್ಕಾಗಿ ಬೆದರಿಸೋದು ಕಲಿ ಯೋಗೇಶ್ ನ ಕೆಲಸ ಎನ್ನಲಾಗಿದೆ.ಮಂಗಳೂರು ಸೇರಿದಂತೆ ನಾನಾ ಕಡೆ ಆತನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.

Spread the love
Leave A Reply

Your email address will not be published.

Flash News