Drink and Drive:ಕುಡಿದು ಗಾಡಿ ಓಡಿಸೀರಿ ಜೋಕೆ..ಪೊಲೀಸ್ರು ಕೈಗೆ ಸಿಕ್ರೆ ದಂಡ ಗ್ಯಾರಂಟಿ..

ಇಂದು ರಾತ್ರಿಯಿಂದಲೇ ಡಿಂಕ್ ಅಂಡ್ ಡ್ರೈವ್ ತಪಾಸಣೆ ಶುರು‌..ರಸ್ತೆಗಿಳಿಯಲಿದ್ದಾರೆ ಸಂಚಾರಿ ಪೊಲೀಸ್ರು

0

ಬೆಂಗಳೂರು:ಇಂದಿನಿಂದ ಆಲ್ಕೋಮೀಟರ್ ಮೂಲಕ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಪ್ರಾರಂಭಿಸುವುದಾಗಿ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಒಂದೂವರೆ ವರ್ಷದ ಬಳಿಕ ಸಂಚಾರ  ಪೊಲೀಸರು ಆಲ್ಕೋಮೀಟರ್ ಬಳಸಲು ಮುಂದಾಗಿದ್ದಾರೆ.ಇಂದು ರಾತ್ರಿಯಿಂದಲೇ ರಸ್ತೆಗಿಳಿದು ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ.ಇದರಿಂದಾಗಿ ಹೊಸ ಆಲ್ಕೋಮೀಟರ್ ಗಳ ಮೂಲಕ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಮರುಚಾಲನೆ ದೊರೆತಂತಾಗಲಿದೆ.ಅಂದ್ಹಾಗೆ ಕೋವಿಡ್ ಕಾರಣದಿಂದ ಒಂದೂವರೆ ವರ್ಷದಿಂದ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು.

ಈ ಕೆಲಸಕ್ಕೆ ಪ್ರತೀ ಠಾಣೆಗೆ ತಲಾ 10 ಆಲ್ಕೋಮೀಟರ್ ನೀಡಲಾಗುತ್ತೆ. 1 ಆಲ್ಕೋಮೀಟರ್ ನಲ್ಲಿ ಓರ್ವ ವ್ಯಕ್ತಿಗೆ ಮಾತ್ರ ತಪಾಸಣೆ ಮಾಡುವ ಅವಕಾಶವಿರುತ್ತದೆ.
1 ಬಾರಿ ಬಳಸಿದ ಆಲ್ಕೋಮೀಟರ್ ಸ್ಯಾನಿಟೈಸ್ ಮಾಡಿ ಶುಚಿಗೊಳಿಸಿ 48 ಗಂಟೆಗಳ ಬಳಿಕ ಮರು ಬಳಕೆ ಮಾಡಬಹುದಾಗಿರುತ್ತದೆ.

ಪ್ರತೀ ಠಾಣೆಗೆ 10 ಬೆಂಗಳೂರು ನಗರದಾದ್ಯಂತ 600 ಆಲ್ಕೋಮೀಟರ್ ಇರಲಿವೆ.ತಪಾಸಣೆ ನಡೆಸುವ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಕಡ್ಡಾಯವಾಗಿರಲಿದೆ.ಆಲ್ಕೋಮೀಟರ್ ಪರೀಕ್ಷೆಗೆ ಇಚ್ಚಿಸದವರಿಗೆ ರಕ್ತ ಪರೀಕ್ಷೆಗೊಳಪಡುವ ಆಯ್ಕೆ ಇರಲಿದೆ.

ಸಂಚಾರಿ ವಿಭಾಗದ ಡಿಸಿಪಿ ರವಿಕಾಂತೇಗೌಡ
ಸಂಚಾರಿ ವಿಭಾಗದ ಡಿಸಿಪಿ ರವಿಕಾಂತೇಗೌಡ

ರಕ್ಷಣಾತ್ಮಕವಾಗಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಈ ಮಾದರಿ ಅನುಸರಿಸಲಾಗುತ್ತಿದೆ.ಪೊಲೀಸರೊಂದಿಗೆ ಘರ್ಷಣೆಗಿಳಿಯದೆ ಸಹಕರಿಸುವಂತೆ ಜಂಟಿ ಆಯುಕ್ತ ರವಿಕಾಂತೇ ಗೌಡ ಮನವಿ ಮಾಡಿದ್ದಾರೆ.

ಮಾ.2020ರ ಕೊನೆಯ ವಾರ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು.ತಜ್ಞರ ಸಲಹೆಯಂತೆ ತಾತ್ಕಾಲಿಕವಾಗಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು.ಇದನ್ನೇ ದುರುಪಯೋಗಪಡಿಸಿಕೊಳ್ಳು ತ್ತಿರುವ ಘಟನೆಗಳು ನಡೆಯುತ್ತಿವೆ.ಇತ್ತೀಚಿಗೆ ಕೆಲ ಅಪಘಾತಗಳಾಗಿರುವುದನ್ನ ನಾವು ಗಮನಿಸಿದ್ದೇವೆ.

ದೇಶದ ಕೆಲ ಮಹಾನಗರಗಳಲ್ಲಿ ಕೋವಿಡ್ 2ನೇ ಅಲೆ ಬಳಿಕ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಶುರುವಾಗಿದೆ.
ನಾವೂ ಸಹ ತಜ್ಞರ ಸಲಹೆ ಪಡೆದು ತಪಾಸಣೆ ಆರಂಭಿಸಿದ್ದೇವೆ.

ಕಳೆದ 2 ವಾರ ಕೂಡಾ ಆಲ್ಕೋ ಮೀಟರ್ ರಹಿತವಾಗಿ ತಪಾಸಣೆ ಮಾಡಲಾಗಿದೆ.ಅನುಮಾನಿತರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.ಇಂದಿನಿಂದ ವಿತ್ ಆಲ್ಕೋಮೀಟರ್ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಲಿದ್ದೇವೆ ಎಂದು ವಿವರಿಸಿದರು.

Spread the love
Leave A Reply

Your email address will not be published.

Flash News