ILLEGAL AND DILAPIDATED BUILDING COLLAPSE:“ಶಿಥಿಲ-ಅಕ್ರಮ ಕಟ್ಟಡ ಮಾಫಿಯಾ..”ವಿರುದ್ಧ BBMP ಯ ನಿರ್ಲಜ್ಜ ಆಡಳಿತ ತೊಡೆ ತಟ್ಟುವುದು ಯಾವಾಗ..?

BBMP ಎಚ್ಚೆತ್ತುಕೊಳ್ಳಲು, ಬೆಂಗಳೂರಲ್ಲಿ ಇನ್ನೆಷ್ಟು ಕಟ್ಟಡಗಳು ಧರೆಗುರುಳಬೇಕೋ..?! ಇನ್ನೆಷ್ಟು ದುರಂತಗಳಾಗಬೇಕೋ..?!

0

ಬೆಂಗಳೂರು: ಬಿಬಿಎಂಪಿಯಲ್ಲಿರುವಂಥ ಕೆಲವು ನಾಲಾಯಕ್.. ನಿರ್ಲಜ್ಜ..ಅಪ್ರಾಮಾಣಿಕ..ಭ್ರಷ್ಟ ಅಧಿಕಾರಿ ಸಿಬ್ಬಂದಿಯಿಂದಲೇ ಕಟ್ಟಡ ದುರಂತದಂಥ ದುರಂತಗಳು ಸಂಭವಿಸುತ್ತಲೇ ಇರುತ್ವೆ..ಮಾದ್ಯಮಗಳು ಸುದ್ದಿ ಮಾಡುತ್ತಲೇ ಇರುತ್ವೆ…ಆಡಳಿತಯಂತ್ರ ಆ ಕ್ಷಣಕ್ಕೆ ಎಚ್ಚೆತ್ತುಕೊಳ್ಳುವಂಥ ನಾಟಕ ಆಡುತ್ತೆ..ನಂತರ ತೆರೆಮರೆಯಲ್ಲಿ ನಡೆಯೋ ಅಡ್ಜೆಸ್ಟ್ ಮೆಂಟ್ ವ್ಯವಹಾರದಿಂದಾಗಿ ಎಲ್ಲವೂ ಮುಚ್ಚಿ ಹೋಗುತ್ತೆ..ಇದು ಬಿಬಿಎಂಪಿಯಲ್ಲಿ ನಡೆದುಕೊಂಡು ಬಂದಿರುವ ಮಾಮೂಲು ಸಂಪ್ರದಾಯ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಬಿಟಿಎಂ ಲೇ ಔಟ್ ವಿಧಾನಸಭಾ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವಂಥ ಲಕ್ಕಸಂದ್ರ( ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮನೆಯಿರುವ ರಸ್ತೆ) ರಸ್ತೆಯೊಂದರಲ್ಲಿ ಇವತ್ತು ಸಂಭವಿಸಿದ ಕಟ್ಟಡ ದುರಂತವೂ ಇಂತದ್ದೇ ದುರಂತಗಳ ಸಾಲಿಗೆ ಸೇರೋಯ್ತು.ಇಲ್ಲಿ ಅಕ್ರಮ ಕಣ್ಣಿಗೆ ರಾಚುವಂತಿದ್ದರೂ ಶಾಸಕ ಉದಯ ಗರುಡಾಚಾರ್ ಆದಿಯಾಗಿಯೂ ಬಿಬಿಎಂಪಿ ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತೇವೆ ಎನ್ನುತ್ತಾರಲ್ಲಾ ಇದಕ್ಕಿಂತ ದೊಡ್ಡ ಮೂರ್ಖತನದ ವಿಷಯ ಮತ್ತೊಂದಿದೆಯೇ..?

1960ರಲ್ಲಿ ನಿರ್ಮಾಣಗೊಂಡ ಹಳೆಯ ಕಟ್ಟಡ  ಶಿಥಿಲಾವಸ್ಥೆಗೆ ತಲುಪಿತ್ತು. ಅದನ್ನು ಹೊಡೆದುರುಳಿಸಲು ಮುಹೂರ್ತನೂ ಫಿಕ್ಸ್ ಆಗಿತ್ತು.ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳ ಜಂಟಿ ಸರ್ವೆ ಮಾಡಿ ಹೋಗಿದ್ದರು.ಇವತ್ತೇ ಅದೆಲ್ಲಾ ಮುಗೀಬೇಕಿತ್ತು.ಆದ್ರೆ ಭಾರತ್ ಬಂದ್ ಬ್ಯುಸಿಯಲ್ಲಿ ಇದ್ದುದ್ದರಿಂದ ಏರಿಯಾಗೆ ಬರಲಿಕ್ಕಾಗಲಿಲ್ಲ..ಆದ್ರೆ ಈ ನಡುವೆಯೇ ಮೂರಂತಸ್ತಿನ ಕಟ್ಟಡ ಧರೆಗುರುಳಿದೆ.

ಅದೃಷ್ಟವಶಾತ್, ಕೆಲವೇ ನಿಮಿಷಗಳ ಮುನ್ನ ಕಟ್ಟಡ ಬಿಟ್ಟು ತೆರಳಿದ್ದರಿಂದ 50ರಷ್ಟು ಮೆಟ್ರೋ ಕಾರ್ಮಿ ಕರು ಬದುಕುಳಿದಿದ್ದಾರೆ.ಆದ್ರೆ ಇಂಥಾ ಶಿಥಿಲ ಕಟ್ಟಡದಲ್ಲೂ ಮೆಟ್ರೋ ಗುತ್ತಿಗೆ ಕಾರ್ಮಿಕರನ್ನು ಇಟ್ಟುಕೊಂಡು 35 ಸಾವಿರ ಬಾಡಿಗೆ ಪಡೆಯತ್ತಿದ್ದ ದುರಾತ್ಮನ ವಿರುದ್ಧ ಎಫ್ ಐ ಆರ್ ದಾಖಲಿಸೊಕ್ಕೆ ಸೂಚಿಸಲಾಗಿದೆ.

ಆ ಗುತ್ತಿಗೆ ಕಾರ್ಮಿಕರ ಆಯಸ್ಸು ಗಟ್ಟಿಗಿತ್ತು..!ಪಾಪ  ದೂರದ ಉತ್ತರಾಕಾಂಡ್, ಜಾರ್ಖಂಡ್, ಅಸೋಮ್,ವೆಸ್ಟ್ ಬೆಂಗಾಳ್ ನಂಥ ಊರುಗಳಿಂದ ತುತ್ತು ಚೀಲ ತುಂಬಿಸಿಕೊಳ್ಳಲಿಕ್ಕಂತ ಬಂದು ಅನೇಕ ದಿನಗಳಿಂದ ಕಟ್ಟಡದಲ್ಲಿ ವಾಸವಾಗಿದ್ದ ಆ ನಿಷ್ಪಾಪಿಗಳು ಮಾಡಿದ ಪೂರ್ವ ಜನ್ಮದ ಪುಣ್ಯವೋ. ..ಅವರ ಅಥವಾ ಆಯಸ್ಸು ಗಟ್ಟಿಯಾಗಿತ್ತೋ ಗೊತ್ತಿಲ್ಲ,ಸಂಭವಿಸಬಹುದಾದ ಬಹುದೊಡ್ಡ ದುರಂತದಿಂದ ಪವಾಡಸದೃಶ ರೀತಿಯಲ್ಲಿ ಬದುಕಿದ್ದಾರೆ.

ಅವರೆಲ್ಲಾ ಕಟ್ಟಡದಿಂದ ತೆರಳೊದು ಒಂದು ಗಂಟೆ ತಡವಾಗಿದ್ರೂ ಒಂದಲ್ಲಾ ಎರಡಲ್ಲ ಸುಮಾರು 60ಕ್ಕೂ ಹೆಚ್ಚು ಶ್ರಮಿಕರು ಕಟ್ಟಡ ದುರಂತದಲ್ಲಿ ಅವಶೇಷಗಳಡಿಯಲ್ಲಿ ಹೂತೋಗುತ್ತಿದ್ದರೇನೋ..ಆ ದೇವ್ರೇ  ಪ್ರೇರಣೆ ಕೊಟ್ಟಿದ್ನೋ ಗೊತ್ತಿಲ್ಲ..ಎಂದಿಗಿಂತ ಕೆಲ ನಿಮಿಷಗಳ ಮುನ್ನ ಕಟ್ಟಡ ತೊರೆದು ಜೀವ ಉಳಿಸಿಕೊಂಡಿದ್ದಾರೆ.

ಅಂದ್ಹಾಗೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಹೊಂಬೇಗೌಡ ನಗರ-ಲಕ್ಕಸಂದ್ರ ವ್ಯಾಪ್ತಿಯಲ್ಲಿ ಇಂದು ಸುಮಾರು 10:30 ರ ಸಮಯದಲ್ಲಿ ಇದ್ದಕ್ಕಿದ್ದಂತೆ ಮೂರಂತಸ್ತಿನ ಕಟ್ಟಡ ಧರೆಗುರುಳಿದೆ.ಕಟ್ಟಡ ಉರುಳೋದು ಕನ್ಫರ್ಮ್ ಆಗಿದ್ದರಿಂದ ಕಳೆದ ಕೆಲ ದಿನಗಳಿಂದಲೂ ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರಿಂದ ಜೀವಾಪಾಯವಾಗಿಲ್ಲ.ಆದ್ರೆ ಕಟ್ಟಡ ಉರುಳಿದ ತೀವ್ರತೆಗೆ  ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ.

ಸುರೇಶ್ ಎಂಬಾತನಿಗೆ ಸೇರಿದ ಕಟ್ಟಡ ನಿರ್ಮಾಣವಾಗಿದ್ದು 1960 ರಲ್ಲಿ.60 ವರ್ಷದಷ್ಟು ಹಳೆಯ ಕಟ್ಟಡದ ಲೈಫ್ ಮುಗಿದೋಗಿದ್ರಿಂದ ಶಿಥಿಲಗೊಂಡಿ ದ್ದನ್ನು ಬಿಬಿಎಂಪಿ ಕೂಡ ಪತ್ತೆಮಾಡಿತ್ತು.ಡೆಮಾಲಿಷನ್ ಗೆ ಡೇಟ್ ಕೂಡ ಫಿಕ್ಸ್ ಮಾಡಲಾಗಿತ್ತು.ತನ್ನ ಕಟ್ಟಡ ಧರೆಗುರುಳೋದು ಕನ್ಫರ್ಮ್ ಮಾಡಿ ಕೊಂಡ್ರೂ ದುರುಳ ಸುರೇಶ್,ಮೆಟ್ರೋದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉಳಿದುಕೊಳ್ಳೊಕ್ಕೆ ತಿಂಗಳಿಗೆ 35 ಸಾವಿರ ದರದಲ್ಲಿ ಕಟ್ಟಡ ಬಿಟ್ಟುಕೊಡಲಾ ಗಿತ್ತು.ಯಾವ್ ಕ್ಷಣದಲ್ಲಿ ಬೇಕಾದ್ರೂ ಉರುಳಬಹುದಾದ ಆತಂಕದ ನಡುವೆಯೂ ಕಾರ್ಮಿಕರು ಅಲ್ಲಿ ಜೀವ ಕೈಲಿಡಿದು ವಾಸವಾಗಿದ್ರು.ಇವತ್ತು ಬೆಳಗ್ಗೆ ಎಲ್ಲಾ ಕಾರ್ಮಿಕರು ಕಟ್ಟಡ ತೊರೆದ ಕೆಲವೇ ಕ್ಷಣಗಳಲ್ಲಿ ದುರಂತ ಸಂಭವಿಸೋಗಿದೆ.

ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಶಾಸಕ ಉದಯ ಗರುಡಾಚಾರ್,ಪರಿಸ್ತಿತಿ ಅವಲೋಕಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು.ಮನೆ ಮಾಲೀಕ ಸುರೇಶ್ ಹಾಗು ಶಿಥಿಲಗೊಂಡ ಕಟ್ಟಡದಲ್ಲಿ ಗುತ್ತಿಗೆ ಕಾರ್ಮಿಕರನ್ನು ಉಳಿಸಿಕೊಂಡಿದ್ದ ಕಾಂಟ್ರ್ಯಾಕ್ಟರ್ ವಿರುದ್ದ ಎಫ್ ಐ ಆರ್ ಲಾಡ್ಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು.

ಇನ್ನು ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರಪ್ಪ,ಕಟ್ಟಡವನ್ನು ಬಿಬಿಎಂಪಿ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದ್ರು.ದುರಂತಕ್ಕೆ ಕಟ್ಟಡ ಮಾಲೀಕ-ಗುತ್ತಿಗೆದಾರನಷ್ಟೇ ನೈತಿಕ ಹೊಣೆಗಾರರಾಗಿರುವ ಬಿಬಿಎಂಪಿ ಅಧಿಕಾರಿಗಳನ್ನು ತಪ್ಪಿತಸ್ಥರನ್ನಾಗಿಸಲಾಗುವುದು.ದಕ್ಷಿಣ ವಲಯದಲ್ಲಿರುವ  ಅನಧೀಕೃತ ಹಾಗೂ ಶಿಥಿಲಾವಸ್ಥೆ ಕಟ್ಟಡಗಳ ಸರ್ವೆ ಮಾಡಿ ರಿಪೋರ್ಟ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ್ರು.

ದುರಂತದಲ್ಲಿ ಕಾರ್ಮಿಕರ ಬಟ್ಟೆಬರೆ-ಸಾಮಾನು ಸರಂಜಾಮು,ಉಳಿತಾಯದ ಹಣವೆಲ್ಲಾ ಧರಾಶಾಹಿಯಾಗಿದೆ.ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಜೆಸಿಬಿಗಳು ನಿರತವಾಗಿವೆ.ಎಲ್ಲಿವರೆಗೆ ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗುವುದಿಲ್ಲವೋ..ಅಲ್ಲಿವರೆಗೆ ಇಂಥಾ ದುರಂತಗಳು ಸಂಭವಿಸುತ್ತಲೇ ಇರುತ್ವೆ..

ಬಿಬಿಎಂಪಿ ದಕ್ಷಿಣ ವಲಯದಲ್ಲಿ ಇಂಥಾ ಸಾವಿರಾರು ಅಕ್ರಮ-ಅನಧೀಕೃತ ಹಾಗೂ ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡಗಳಿವೆ.ಇದು ಅಧಿಕಾರಿಗಳಿಗೂ ಗೊತ್ತು..ಆದ್ರೆ ಕ್ರಮ ಕೈಗೊಳ್ಳುವ ಪ್ರಶ್ನೆ ಬಂದಾಗ ಎಲ್ಲಾ ಹಿಂದೇಟು ಹಾಕ್ತಾರೆ.ಮುಗುಮ್ಮಾಗುತ್ತಾರೆ.ಇದಕ್ಕೆ ಕಾರಣ ಹೇಳಬೇಕಿಲ್ಲ. ಅಧಿಕಾರಿಗಳನ್ನು ಶಿಕ್ಷಿಸುವ ಕೆಲಸ ಆಗದ ಹೊರತು,ಅಕ್ರಮ  ಕಟ್ಟಡಗಳಿಗೆ ಕಡಿವಾಣ ನಿರೀಕ್ಷಿಸೋದು ನಮ್ಮ ಮೂರ್ಖತನವಾಗುತ್ತೇನೋ..

Spread the love
Leave A Reply

Your email address will not be published.

Flash News