BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿ

TEMPLE DEMOLITION EFFECT, TAHASILDAR TRANSFER: “ದೇವಿ”..ಇದಕ್ಕೆಲ್ಲಾ ಸಾಥ್ ಕೊಡ್ತಾಳಾ..? ನೋ ಚಾನ್ಸ್.. ಸುಪ್ರಿಂ ಆದೇಶ ಪಾಲಿಸಿದ ದಕ್ಷ ತಹಸೀಲ್ದಾರ್ ಗೆ ವರ್ಗಾವಣೆ ಶಿಕ್ಷೆ…

ಹುಚ್ಚುಗಣಿ ಮಹಾದೇವಮ್ಮ ದೇವಸ್ಥಾನ ತೆರವಿಗೆ ಕೈ ಹಾಕಿ ವರ್ಗಾವಣೆ ಶಿಕ್ಷೆಗೊಳಪಟ್ಟ ನಂಜನಗೂಡು ದಕ್ಷ ತಹಸೀಲ್ದಾರ್ ಮೋಹನಕುಮಾರಿ
ಹುಚ್ಚುಗಣಿ ಮಹಾದೇವಮ್ಮ ದೇವಸ್ಥಾನ ತೆರವಿಗೆ ಕೈ ಹಾಕಿ ವರ್ಗಾವಣೆ ಶಿಕ್ಷೆಗೊಳಪಟ್ಟ ನಂಜನಗೂಡು ದಕ್ಷ ತಹಸೀಲ್ದಾರ್ ಮೋಹನಕುಮಾರಿ

ಮೈಸೂರು:ಸುಪ್ರಿಂ ಕೋರ್ಟ್ ಆದೇಶ ಪಾಲಿಸಲು ಹೋದ ತಹಸೀಲ್ದಾರ್ ತಲೆ ದಂಡವಾಗಿದೆ.ಜಿಲ್ಲೆಯ ಇತಿಹಾಸ ಪ್ರಸಿದ್ಧ  ಹುಚ್ಚಗಣಿ ಮಹದೇವಮ್ಮ ದೇವಾಲಯವನ್ನು ಮುಂದೆ ನಿಂತು  ತೆರವು ಮಾಡಿದ ವಿಚಾರಕ್ಕೆ ತಹಸೀಲ್ದಾರ್ ಮೋಹನ್ ಕುಮಾರಿ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಕೋರ್ಟ್ ಆದೇಶ ಪರಿಪಾಲಿಸುವಂತೆ ಮೈಸೂರು ಜಿಲ್ಲಾಧಿಕಾರಿ ಬಗಾದಿ  ಗೌತಮ್ ಸೂಚನೆ ಕೊಟ್ಟಿದ್ದರು. ಮೇಲಾಧಿಕಾರಿಗಳ ಆದೇಶ ಪಾಲಿಸಲು ಹೋಗಿ ಸ್ಥಳೀಯವಾಗಿ ತೀವ್ರ ವಿರೋಧ ಎದುರಿಸಬೇಕಾಯ್ತು.

ಅನೇಕರ ಕೆಂಗಣ್ಣಿಗೂ ಗುರಿಯಾಗಿದ್ದರು.ಬಿಜೆಪಿ ನೇತೃತ್ವದ ಸರ್ಕಾರದಲ್ಲಿರುವ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದ ಮೋಹನ ಕುಮಾರಿ ಅವರನ್ನು ಎತ್ತಂಗಡಿ ಮಾಡುವಂತೆ ಒತ್ತಡವೂ ಕೇಳಿಬಂದಿತ್ತು.ಸ್ಥಳೀಯರ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಮೋಹನಕುಮಾರಿ ಅವರನ್ನು  . ಐಎಂಎ ಸಕ್ಷಮ ಪ್ರಾಧಿಕಾರಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ.

ಹುಚ್ಚುಗಣಿ ಮಹಾದೇವಮ್ಮ ದೇವಸ್ಥಾನ ತೆರವನ್ನು ಖಂಡಿಸಿ ನಂಜನಗೂಡಿನಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ನಡೆದ ಸನ್ನಿವೇಶ
ಹುಚ್ಚುಗಣಿ ಮಹಾದೇವಮ್ಮ ದೇವಸ್ಥಾನ ತೆರವನ್ನು ಖಂಡಿಸಿ ನಂಜನಗೂಡಿನಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ನಡೆದ ಸನ್ನಿವೇಶ

ಕೆಲಸವೇ ಇಲ್ಲದ ಐಎಂಎ ಸಕ್ಷಮ ಪ್ರಾಧಿಕಾರಕ್ಕೆ ವರ್ಗಾಯಿಸಿರುವ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ನಂಜನಗೂಡು ತಹಶೀಲ್ದಾರ್​ ಹುದ್ದೆಯನ್ನು  ಖಾಲಿ ಉಳಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸೂಕ್ತ ಪ್ರಭಾರ ವ್ಯವಸ್ಥೆ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್​ಗೆ ಸೂಚನೆ ನೀಡಲಾಗಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹರದನಹಳ್ಳಿಗೆ ಪೇಜಾವರ ಮಠದ ಸ್ವಾಮೀಜಿಗಳು ಇಂದು (ಸೆಪ್ಟೆಂಬರ್ 27) ಭೇಟಿ ನೀಡಿದ್ದರು. ದೇಗುಲ ತೆರವು ಬಗ್ಗೆ ಮಾಹಿತಿ ಪಡೆದಿದ್ದರು.

ದೇಗುಲ ತೆರವು ಬಳಿಕ ಶೆಡ್​​ನಲ್ಲಿ ಪ್ರತಿಷ್ಠಾಪಿಸಿರುವ ದೇವರಿಗೆ ಪೂಜೆ ಸಲ್ಲಿಸಿದ್ದರು. ದೇವರಿಗೆ ಪೂಜೆ ಸಲ್ಲಿಸಿ ಪೇಜಾವರ ಶ್ರೀಗಳು ವಾಪಸಾಗಿದ್ದರು.ಪೇಜಾವರ ಶ್ರೀಗಳ ಭೇಟಿ ಬೆನ್ನಲ್ಲೇ ಮೋಹನ ಕುಮಾರಿ ಅವರ ವರ್ಗಾವಣೆಯಾಗಿದೆ ಎನ್ನಲಾಗ್ತಿದೆ.ಇದರಲ್ಲಿ ಪೇಜಾವರ ಶ್ರೀಗಳ ಕೈವಾಡ ಇದೆಯಾ ಎನ್ನುವ ಅನುಮಾನ ಕಾಡುತ್ತಿದೆ.

ಅದೇನೇ ಆಗಲಿ,ಸುಪ್ರಿಂ ಕೋರ್ಟ್ ಆದೇಶ ಪಾಲಿಸಲು ಮುಂದಾದ ದಕ್ಷ ಅಧಿಕಾರಿಗೆ ಸರ್ಕಾರ ವರ್ಗಾವಣೆ ಶಿಕ್ಷೆ ವಿಧಿಸಿರುವುದು ಸಾರ್ವಜನಿಕವಾಗಿ ಖಂಡನೆಗೆ ಗುರಿಯಾಗಿದೆ.ಅಲ್ಲದೇ ಸುಪ್ರಿಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ.

ಆಡಳಿತದಲ್ಲಿ  ಸರ್ಕಾರ ಅಗತ್ಯಕ್ಕಿಂತ ಹೆಚ್ಚಿನ ಹಸ್ತಕ್ಷೇಪ ಮಾಡಿದ್ರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡೋದಾದ್ರೂ ಹೇಗೆ ಎನ್ನುವ ಶಂಕೆ ಕಾಡುತ್ತಿದೆ. ಮೋಹನ್ ಕುಮಾರಿ ಅವರ ವರ್ಗಾವಣೆಯನ್ನು ನಿವೃತ್ತ ಕೆಎಎಸ್ ಅಧಿಕಾರಿಗಳೇನಕರು ಖಂಡಿಸಿದ್ದಾರೆ.

ಇಂಥಾ ವಾತಾವರಣವಿರುವಾಗ ಪ್ರಾಮಾಣಿಕ ಅಧಿಕಾರಿಗಳೂ ಭ್ರಷ್ಟರಾಗದೆ ಇನ್ನೇನು ಎಂದು ಪ್ರಶ್ನಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News