BreakingMoreScrollUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

BBMP ILLEGAL BUILDINGS :ಇಷ್ಟೊಂದು ದೊಡ್ಡ ಬೆಂಗಳೂರಲ್ಲಿ ಇಷ್ಟೆನಾ,”ಅಕ್ರಮ-ಶಿಥಿಲ”ಕಟ್ಟಡಗಳು..?! ಇದನ್ನು ನಂಬೊಕ್ಕೆ ಬೆಂಗಳೂರಿಗರೇನು ಮೂರ್ಖರಾ..?!

ಬೆಂಗಳೂರು:ಹೀಗೊಂದು ಪ್ರಶ್ನೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತರಾಗಿರುವಂಥ ಶ್ರೀಮಾನ್..ಶ್ರೀಯುತ..ಸನ್ಮಾನ್ಯ..ಗೌರವ್ ಗುಪ್ತಾ ಅವರನ್ನು ಕೇಳಲೇಬೇಕಾಗಿದೆ…ಏನ್ ಲೆಕ್ಕ ಕೊಟ್ರೂ ಪರಿಶೀಲಿಸುವ ಗೋಜಿಗೆ ಹೋಗದೆ ಕಣ್ಣಿಗೊತ್ತಿಕೊಂಡು ನಂಬ್ತಾರೆ ನ್ನುವ ಕಾರಣಕ್ಕೆ ಅಧಿಕಾರಿಗಳು ಗೌರವ್ ಗುಪ್ತಾ ಕಲರ್ ಕಲರ್ ಆಗಿ ಯಾಮಾರಿಸೊಕ್ಕೆ ಶುರು ಮಾಡಿದ್ದಾರೆ.ಈ ವಿಷಯದಲ್ಲಿ ಕಮಿಷನರ್ ಸಾಹೇಬ್ರು ಯಾಮಾರಬಹುದು…ಅವರ ಕಿವಿಯಲ್ಲೇ ಲಾಲ್ ಭಾಗನ್ನೇ ತಂದಿರಿಸಬಹುದು..ಆದ್ರೆ ಬಿಬಿಎಂಪಿ ಅಧಿ ಕಾರಿಗಳ ಯೋಗ್ಯತೆ ಗೊತ್ತಿರುವ ಯಾವೊಬ್ಬ ಬೆಂಗಳೂರಿಗನು ಕೂಡ ಅಧಿಕಾರಿಗಳ ಯಾವ್ದೇ ಲೆಕ್ಕ ನಂಬೊಕ್ಕೆ ಸಿದ್ದವೇ ಇಲ್ಲ.

ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಮೊನ್ನೆ ಮೊನ್ನೆ ಗುಂಡಿಗಳ ವಿಚಾರದಲ್ಲಿ ತಪ್ ತಪ್ ಲೆಕ್ಕ ಕೊಟ್ಟು ಮಾದ್ಯಮಗಳಿಂದ ತೀರಾ ಕಸಿವಿಸಿ-ಮುಜುಗರ ಎದುರಿಸಿದ್ದರು ಮುಖ್ಯ ಆಯುಕ್ತ ಗೌರವ್ ಗುಪ್ತಾ.ಅದಕ್ಕೆ ಕಾರಣವಾಗಿದ್ದು ಬಿಬಿಎಂಪಿಯಲ್ಲಿರುವ ಕೆಲವು ನಾಲಾಯಕ್ ಅಧಿಕಾರಿಗಳೆನ್ನುವುದು ನಂತರ ಅವರಿಗೆ ಮನವರಿಕೆಯಾಗಿತ್ತು.ಅದರಿಂದ ಎಚ್ಚೆತ್ತುಕೊಳ್ಳಬೇಕಿದ್ದ ಸಾಹೇಬ್ರು ಇವತ್ತು ಮತ್ತೊಂದು ಲೆಕ್ಕ ಕೊಟ್ಟು ಅಧಿಕಾರಿಗಳ ಸುಳ್ಳಿನ ಖೆಡ್ಡಾಕ್ಕೆ ಬಿದ್ದಿದ್ದಾರೆ.ಅಕ್ರಮ ಕಟ್ಟಡಗಳ ಲೆಕ್ಕ ಕೊಡುವ ವಿಚಾರದಲ್ಲಿ ಕ್ರಾಸ್ ಚೆಕ್ ಮಾಡಬೇಕೆನ್ನುವ ವಿಚಾರಕ್ಕೆ ಒತ್ತು ಕೊಡದೆ ಅಧಿಕಾರಿಗಳು ಕೊಟ್ಟ ಲೆಕ್ಕವನ್ನೇ ಕಣ್ಣಿಗೆ ಒತ್ತಿಕೊಂಡು ಆ ವಿವರವನ್ನೇ ಮಾದ್ಯಮಗಳಿಗೆ ಅಧೀಕೃತವಾಗಿ ನೀಡಿದ್ದಾರೆ.

ಇಷ್ಟೊಂದು ಅಗಾಧವಾಗಿ ಬೆಳೆದಿರುವ ಬೆಂಗಳೂರಿನಲ್ಲಿ 194 ಕಟ್ಟಡಗಳಷ್ಟೇ ಶಿಥಿಲ ಹಾಗೂ ಅಕ್ರಮವಂತೆ..ಅಂದ್ರೆ 198 ವಾರ್ಡ್ ಗಳ ವ್ಯಾಪ್ತಿ ಹೊಂದಿರುವ ಬಿಬಿಎಂಪಿಯಲ್ಲಿ ವಾರ್ಡ್ ಗೆ ಒಂದೊಂದರಂತೂ ಅಕ್ರಮ ಕಟ್ಟಡ ನಿರ್ಮಾಣವಾಗಿಲ್ಲವಂತೆ.ಒಂದ್ ಕಡೆ ನಿಂತ್ಕೊಂಡು ಕಣ್ಣಳತೆಯಲ್ಲೇ ಹತ್ತಾರು  ಅಕ್ರಮ ಕಟ್ಟಡಗಳನ್ನು ಪತ್ತೆ ಮಾಡಲು ಸಾಧ್ಯವಿರುವ ಬೆಂಗಳೂರಿನಲ್ಲಿ ಕೇವಲ 198 ಅಕ್ರಮ-ಶಿಥಿಲ ಕಟ್ಟಡಗಳಷ್ಟೇ ಇರೋದು ಎಂದು ಹೇಳಲಿಕ್ಕೂ ಕಮಿಷನರ್ ಗೌರವ್ ಗುಪ್ತಾ ಅವರಿಗೆ ಅದ್ಹೇಗೆ ಮನಸು-ಧೈರ್ಯ ಬಂತೋ ಗೊತ್ತಿಲ್ಲ.ಬಿಬಿಎಂಪಿ ಅಧಿಕಾರಿಗಳು ನೀಡ್ತಿರೋ ಲೆಕ್ಕ..ಹೇಳ್ತಿರುವ ಹೇಳಿಕೆ ಹಸಿ ಹಸಿ ಸುಳ್ಳು ಎನ್ನುವುದು ಎಂಥಾ ಮೂರ್ಖನಿಗೂ ಗೊತ್ತಾಗುವಂಥ ಸನ್ನಿವೇಶದಲ್ಲಿ ಅಂತದ್ದೊಂದು ಸತ್ಯ ಗೌರವ್ ಗುಪ್ತಾ ಸಾಹೇಬರಿಗೆ ಗೊತ್ತಾಗದೆ ಹೋಯ್ತಲ್ಲ ಎನ್ನುವುದೆ ದುರಾದೃಷ್ಟಕರ.

ಲಕ್ಕಸಂದ್ರದಲ್ಲಿ ನಿನ್ನೆ ವರದಿಯಾದ ಕಟ್ಟಡ ದುರಂತದ ಬೆನ್ನಲ್ಲಿ ಬಿಬಿಎಂಪಿ ಅಧಿಕಾರಿಗಳು 198 ವಾರ್ಡ್ ಗಳಲ್ಲಿರುವ ಅಕ್ರಮ ಕಟ್ಟಡಗಳ ಲೆಕ್ಕ ನೀಡಿದ್ದಾರೆ.ಯಾವುದೋ ಸಂದರ್ಭದಲ್ಲಿ ಕಾಟಾಚಾರಕ್ಕೆಂದು ಮಾಡಿಟ್ಟಿದ್ದ ಲೆಕ್ಕವನ್ನೇ ಕಮಿಷನರ್ ಗೌರವ್ ಗುಪ್ತಾರಿಗೆ ರವಾನಿಸಿದಂತಿದೆ.

ಬಿಬಿಎಂಪಿ ಆಡಳಿತದಲ್ಲಿ ಏನಾಗ್ತಿದೆ..ಬೆಂಗಳೂರಿನಲ್ಲಿ ಏನಾಗ್ತಿದೆ ಎನ್ನುವುದನ್ನು ವಿಚಾರಿಸಲಿಕ್ಕಾಗದಷ್ಟು “ಬ್ಯುಸಿ..?”ಯಾಗಿರುವ ಗೌರವ್ ಗುಪ್ತಾ ಸಾಹೇಬ್ರು,ಅದನ್ನು ಕ್ರಾಸ್ ಚೆಕ್ ಮಾಡದೆ ಮಾದ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ ಎಂದ್ರೆ ಏನ್ ಅರ್ಥ..ಅಧಿಕಾರಿಗಳಿಗೆ ಮೈ ಚಳಿ ಬಿಡಿಸಿ, ಡೆಡ್ ಲೈನ್ ನೊಳಗೆ ಮಾಹಿತಿ ನೀಡಿ ಎಂದು ಅವಾಜ್ ಬಿಟ್ಟಿದಿದ್ದರೆ ಇವತ್ತು ಮನಸಿಗೆ ಬಂದಂಥ ಲೆಕ್ಕವನ್ನು ಅಧಿಕಾರಿಗಳು ಕೊಡ್ತಿರಲಿಲ್ಲ..ಗೌರವ್ ಗುಪ್ತಾ ಅವರಿಗೂ ಸುಳ್ ಸುಳ್ ಲೆಕ್ಕ ಕೊಟ್ಟ ಆಪಾದನೆಗೆ ಮುಜುಗರಕ್ಕೆ ಈಡಾಗುವ ಸನ್ನಿವೇಶವೂ ಸೃಷ್ಟಿಯಾಗುತ್ತಿರಲಿಲ್ಲವೇನೋ..?

ಬೆಂಗಳೂರಿನ  ಪ್ರತಿ ರಸ್ತೆಗಳಲ್ಲೂ ಅಕ್ರಮ ಕಟ್ಟಡಗಳಿವೆ ಎನ್ನುತ್ತಾರೆ ಟೌನ್ ಪ್ಲ್ಯಾನಿಂಗ್ ನಲ್ಲೇ ಕೆಲಸ ಮಾಡುವ ಅಧಿಕಾರಿಗ ಳು.ಅಂಥಾ ಅದೆಷ್ಟೋ ಲಕ್ಷಾಂತರ ರಸ್ತೆಗಳು ಬೆಂಗಳೂರಿನಲ್ಲಿವೆಯಂತೆ.ಹಾಳಾಗಿ ಹೋಗ್ಲಿ ಈ ಲೆಕ್ಕವನ್ನೇ ಬಿಡೋಣ. ಬಿಬಿಎಂಪಿಯ ಪ್ರತಿ ವಾರ್ಡ್ ಗೆ ಕನಿಷ್ಟ 10 ರಂತೆ ತೆಗೆದುಕೊಂಡ್ರೆ 198 ವಾರ್ಡ್ ಗಳಿಗೆ ಎಷ್ಟು ಆಗಬೇಕಿತ್ತು…1980 ಕಟ್ಟಡಗಳಲ್ವೇ..ಇಂತದ್ದೊಂದು ಕಾಮನ್ ಸೆನ್ಸೂ ಅಧಿಕಾರಿಗಳಿಗೆ ಇಲ್ಲದೆ ವಾರ್ಡ್ ಗೆ ಒಂದೊಂರಂತೂ ಇಲ್ಲ ಎನ್ನುವ ರೇಂಜ್ ನಲ್ಲಿ 194 ಕಟ್ಟಡಗಳ ಲೆಕ್ಕ ಕೊಡ್ತಾರೆಂದ್ರೆ ಇವರಿಗೆ ಮಾನ-ಮರ್ಯಾದೆ ಇದೆಯಾ..? ಅನ್ನ ಕೊಡೋ ಸಂಸ್ಥೆಗೆ ನೀಯತ್ತಾಗಿ ಕೆಲಸ ಮಾಡಬೇಕೆನ್ನುವ ಇರಾದೆ ಇದೆಯೇ..? ಎಂದು ಪ್ರಶ್ನಿಸ್ತಾರೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್.

ಭ್ರಷ್ಟಾತೀಭ್ರಷ್ಟರಾಗಿ ಹೋಗಿರುವ ಬಿಬಿಎಂಪಿಯ ಬಹುತೇಕ ಅಧಿಕಾರಿಗಳು ತಪ್ ತಪ್ ಲೆಕ್ಕ ಕೊಡ್ತಾರೆಂದ್ರೆ ಅದನ್ನು ಗೌರವ್ ಗುಪ್ತಾ ಅವರೇಕೆ ನಂಬಬೇಕು..ಅವರೇ ಖುದ್ದು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದುಕೊಂಡು ಸ್ಥಳ ಪರಿಶೀಲನೆಯನ್ನೇಕೆ ಮಾಡಬಾರದು..ತಪ್ ಲೆಕ್ಕ ಕೊಟ್ಟರೆ ಅಲ್ಲೇ ಸ್ಪಾಟ್ ನಲ್ಲಿ ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬಾರದು..ಇದೆಲ್ಲಾ ಮಾಡೊಕ್ಕೆ ಪಾಪ ಗೌರವ್ ಗುಪ್ತಾರಿಗೆ ಸಮಯ ಎಲ್ಲಿದೆ ಹೇಳಿ..? ಎಸಿ ಕಚೇರಿಯಲ್ಲಿ ಕುತ್ಕೊಂಡು..ಸರ್ಕಾರದ ಸವಲತ್ತುಗಳನ್ನು ಎಂಜಾಯ್ ಮಾಡ್ತಾ..? ವಿಧಾನಸೌಧ-ವಿಕಾಸಸೌಧಕ್ಕೆ ಕಾರಿನಲ್ಲಿ ಜಾಮ್ ಜೂಮ್ ಅಂಥ ಅಡ್ಡಾಡ್ಲಿಕ್ಕೇನೆ ಪುರುಸೊತ್ತಿಲ್ಲ.ಅಂತದ್ದರಲ್ಲಿ ಇಂತದ್ದನ್ನೆಲ್ಲಾ ಮಾಡುತ್ತರಾ..? ಅಂತದ್ದೊಂದು ನಿರೀಕ್ಷ ಇಟ್ಟುಕೊಳ್ಳೋದು ಮೂರ್ಖತನವಾದೀತೇನೋ..?ಅಲ್ವಾ

ಅಧಿಕಾರಿಗಳು ತಮ್ಮನ್ನು ಯಾಮಾರಿಸುತ್ತಿರುವುದಕ್ಕೆ ಬ್ರೇಕ್ ಹಾಕದೆ ಹೋದಲ್ಲಿ ಭವಿಷ್ಯದಲ್ಲಿ ಗೌರವ್ ಗುಪ್ತಾರಿಗೇನೆ ಖೆಡ್ಡಾ ತೋಡೋದ್ರಲ್ಲಿ ಅನುಮಾನವೇ ಇಲ್ಲ..ತಾವೇನೇ ಹೇಳಿದ್ರು ನಂಬ್ತಾರೆ..ಅವರನ್ನು ಸಲೀಸಾಗಿ ನಂಬಿಸಬಹುದು ಎನ್ನುವ ಭಾವನೆಯಲ್ಲಿರುವ ಅಧಿಕಾರಿಗಳನ್ನು ಇನ್ನೂ ನಂಬುತ್ತಾ ಹೋದ್ರೆ ಬಹುದೊಡ್ಡ ಸಂಕಟ-ಸಂಕಷ್ಟ-ಕಂಟಕಕ್ಕೆ ತಮ್ಮನ್ನೇ ತಾವು ಈಡು ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ..ಗೌರವ್ ಗುಪ್ತಾ ಸ್ವಭಾವತಃ ದುಷ್ಟರೇನಲ್ಲ..

ಮುಖ್ಯ ಆಯುಕ್ತರಾಗಿರುವುದರಿಂದ ಹೊಣೆಗಾರಿಕೆ-ಜವಾಬ್ದಾರಿ ಹೆಚ್ಚಿರುವುದರಿಂದ ಎಲ್ಲವನ್ನು ಅವಲೋಕಿಸೊಕ್ಕೆ ಸಾಧ್ಯವಿಲ್ಲ ಒಪ್ಪೋಣ..ಹಾಗಂತ ಅದರಲ್ಲೇ  ಮಗ್ನರಾಗಿ ಆಡಳಿತದ ಮೇಲೆ ಹಿಡಿತ ಕಳೆದುಕೊಳ್ಳುವುದು ಕೂಡ ಸರಿಯಲ್ಲ ಅಲ್ವಾ..ಹಾಗಾಗಿ ತಮ್ಮ ಕಾರ್ಯವ್ಯಾಪ್ತಿಯಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಗೌರವ್ ಗುಪ್ತಾ ಮಾಡಬೇಕಿದೆ..ಇಲ್ಲವಾದಲ್ಲಿ ಅವರ ಗೌರವವನ್ನು ಇದೇ ಅಧಿಕಾರಿಗಳು ಮಣ್ಣುಪಾಲು ಮಾಡುವುದು ಗ್ಯಾರಂಟಿ..ಕನ್ಫರ್ಮ್..ಖಚಿತ..ಖಡಾಖಂಡಿತ..

Spread the love

Related Articles

Leave a Reply

Your email address will not be published.

Back to top button
Flash News