BreakingScrollTop NewsUncategorizedಕ್ರೈಮ್ /ಕೋರ್ಟ್ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

72 ಸಾರಿಗೆ ಕಾರ್ಮಿಕರ ವಜಾ ವಿಷಯನೇ ಸಚಿವ ಶ್ರೀರಾಮುಗೆ ಗೊತ್ತಿಲ್ಲವಂತೆ..? ಇದನ್ನು ನಂಬೇಕಾ.. ನಂಬೋದಾ..?!

ಬೆಂಗಳೂರು:ಒಬ್ಬ ಜವಾಬ್ದಾರಿಯುತ ಸಚಿವರಾಗಿ ಶ್ರೀರಾಮುಲು ಹೀಗೆ ಹೇಳೋದು ಸರಿನಾ.? ತಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ಮಹತ್ವದ ಬೆಳವಣಿಗೆ ಬಗ್ಗೆ ಮಾಹಿತಿಯೇ ಇಲ್ಲ ಎನ್ನುವುದು ಏನನ್ನು ತೋರಿಸುತ್ತೆ..ಅವರ ವೈಫಲ್ಯವನ್ನೋ..ಅಥವಾ ಆಡಳಿತಶಾಹಿ ಮೇಲೆ ನಿಯಂತ್ರಣ ಇಲ್ಲದಿರುವುದನ್ನೋ ಇದನ್ನು ಸ್ವತಃ ಶ್ರೀರಾಮುಲು ಅವರೇ ಹೇಳಬೇಕು..ಏಕಂದ್ರೆ ನಿನ್ನೆ ನಡೆದ 72 ಕಾರ್ಮಿಕರ ವಜಾ ಪ್ರಕರಣದಲ್ಲಿ ಅವರ ನಿಲುವು-ಧೋರಣೆ  ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕ್ತಿದೆ.

ತಮ್ಮ ಇಲಾಖೆಯಲ್ಲಿ 72 ಕಾರ್ಮಿಕರನ್ನು ವಜಾಗೊಳಿಸಿರುವ ವಿಷಯದ ಮಾಹಿತಿಯೇ ತಮಗಿಲ್ಲ ಎಂದು ಹೇಳುವ ಮೂಲಕ ಸಾರಿಗೆ ಸಚಿವ ಶ್ರೀರಾಮುಲು ಕಾರ್ಮಿಕರ ಆಕ್ರೋಶಕ್ಕೆ  ತುತ್ತಾಗಿದ್ದಾರೆ.

ಕನ್ನಡ ಫ್ಲಾಶ್ ನ್ಯೂಸ್ ಮಾಡಿದ ವರದಿ ಹಿನ್ನಲೆಯಲ್ಲಿ ಸುದ್ದಿ‌ಮಾಡಿದ ಮಾದ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ವೇಳೆ ಕಾರ್ಮಿಕರನ್ನು ವಜಾಗೊಳಿಸಿರುವ ಮಾಹಿತಿಯೇ ತಮಗಿಲ್ಲ.ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯೊದಾಗಿ ಹೇಳಿದರು.ಕಾರ್ಮಿಕರು ನನ್ನ ಸಹೋದರರಿದ್ದಂತೆ,ಸಾರಿಗೆ ನಿಗಮಗಳು ತನ್ನ ಮನೆಯಿದ್ದಂತೆ..ಇಲ್ಲಿ ಏನೇ ಸಮಸ್ಯೆಗಳಾದ್ರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳೋದಾಗಿ ಹೇಳಿದ್ದ ಶ್ರೀರಾಮುಲು ಅವರೇ 72 ಕಾರ್ಮಿಕರ ವಜಾ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರೀತಿ ಕಾರ್ಮಿಕರನ್ನು ಕೆಂಡಾಮಂಡಲಗೊಳಿಸಿದೆ.

ಸಚಿವರಿಗೆ ಸತ್ಯ ಗೊತ್ತಿದ್ರೂ ಅದನ್ನು ಮರೆ ಮಾಚುತ್ತಿದ್ದಾರೋ..ಅಥವಾ ಇಲಾಖೆ ಅಧಿಕಾರಿಗಳು ಮಾಡಿರೋ ಕೃತ್ಯದಿಂದ ತಮಗಾಗಿರುವ ಮುಜುಗರದಿಂದ ತಪ್ಪಿಸಿಕೊಳ್ಳೊಕ್ಕೆ  ಹೀಗೆ ಹೇಳ್ತಿರಬಹುದೇನೋ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಚಿವ ಶ್ರೀರಾಮುಲು ಅವರಿಗೆ ತಮ್ಮ ಇಲಾಖೆ ಮೇಲಾಗಲಿ, ಸೊಕ್ಕಿನಿಂದ ಮೆರೆಯುತ್ತಿರುವ ಸಾರಿಗೆ ಅಧಿಕಾರಿಗಳ ಮೇಲಾಗಲಿ ಖಂಡಿತಾ ನಿಯಂತ್ರಣ ಇಲ್ಲ..ನಿಯಂತ್ರಣ ಇದ್ದಿದ್ದರೆ ಹೀಗೊಂದು ಕಾರ್ಮಿಕ ವಿರೋಧಿ ಕೃತ್ಯ ನಡೆಯೊಕ್ಕೆ ಬಿಡ್ತಿದ್ರಾ ಎನ್ನೋದು ನಿನ್ನೆಯ ಬೆಳವಣಿಗೆಯಿಂದ ಪ್ರಶ್ನೆಗೀಡಾಗುತ್ತಿದೆ.

ಇಲಾಖೆಯ ಅಧಿಕಾರಿಗಳು ಮಾಡಿರುವ ಕೆಲಸದಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವುದು ಸಚಿವ ಶ್ರೀರಾಮುಲು ಮಾತ್ರ.ತನ್ನನ್ನು ಕಾರ್ಮಿಕ ಸ್ನೇಹಿ ಸಚಿವರೆಂದು ಪ್ರೂವ್ ಮಾಡಿಕೊಳ್ಳೊಕ್ಕೆ ಹೋಗಿ ಅಧಿಕಾರಿಗಳ ದುಂಡಾವರ್ತನೆಯಿಂದಾಗಿ ಕಸಿವಿಸಿ ಅನುಭವಿಸುವಂತಾಗಿದೆ.ಈ ಹಂತದಲ್ಲಿ ಅವರು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಇಲಾಖೆ,ಸರ್ಕಾರ ಹಾಗೂ ತಮ್ಮನ್ನು ಮುಜುಗರದಿಂದ ತಪ್ಪಿಸ್ತಾರೋ ಅಥವಾ ಅಧಿಕಾರಿಗಳ ಕೈನೇ ಮೇಲಾಗುವಂತೆ ಮಾಡುವ ಮೂಲಕ ತಮ್ಮ ಸೋಲನ್ನು ಒಪ್ಪಿಕೊಳ್ತಾರೋ ಕಾದು ನೋಡಬೇಕಿದೆ..

Spread the love

Related Articles

Leave a Reply

Your email address will not be published.

Back to top button
Flash News