BreakingScrollTop NewsUncategorizedಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯ

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಫರೀದಾ ಇಷ್ತಿಯಾಕ್ ನಿಧನ..

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಫರೀದಾ ಇಫ್ತಿಯಾಕ್ ನಿಧನರಾಗಿದ್ದಾರೆ.ಶಿವಾಜಿನಗರ ವಾರ್ಡ್ ಅನ್ನು 2 ಬಾರಿ ಪ್ರತಿನಿಧಿಸಿದ್ದ ಫರಿದಾ ಹಲವಾರು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.

ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ.ಧಾರ್ಮಿಕ ವಿಧಿವಿಧಾನಗಳ ಮೂಲಕ ಅವರ ಅಂತ್ಯಸಂಸ್ಕಾರ ನೆರವೇರಿತು.

ಅಂದಹಾಗೆ ಫರಿದಾ ಅವರು ಕಾಂಗ್ರೆಸ್ನ ಮುಖಂಡ ಇಷ್ತಿಯಾಕ್ ಪೈಲ್ವಾನ್ ಅವರ ಪತ್ನಿಯಾಗಿದ್ದರು.ಕಳೆದ 2 ಅವಧಿಯಲ್ಲೂ ಕಾಂಗ್ರೆಸ್ ಕಾರ್ಪೊರೇಟರ್ ಆಗಿ  ವಾರ್ಡ್ ವಾರ್ಡ್ ಅನ್ನು  ಪ್ರತಿನಿಧಿಸಿದ್ದ ಫರೀದಾ ಅವರ ನಿಧನಕ್ಕೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್

ಸೇರಿದಂತೆ ಹಲವಾರು ಮಾಜಿ ಮೇಯರ್ ಗಳು ಹಾಗೂ ಮಾಜಿ ಕಾರ್ಪೊರೇಟರ್ ಗಳು ಶೋಕ ವ್ಯಕ್ತಪಡಿಸಿದ್ದಾರೆ

Spread the love

Related Articles

Leave a Reply

Your email address will not be published.

Back to top button
Flash News