Breakinglock downTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜ್ಯ-ರಾಜಧಾನಿ

ವಿಜಯ ನಗರ ಜಿಲ್ಲೆ ನೂತನ ಎಸ್ಪಿಯಾಗಿ ಡಾ.ಅರುಣ್ ನೇಮಕ

 

ಬಳ್ಳಾರಿ/ವಿಜಯನಗರ:ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ನೂತನ ಎಸ್ಪಿಯಾಗಿ ಡಾ. ಅರುಣ್ ನೇಮಕಗೊಂಡಿದ್ದಾರೆ ರಾಜ್ಯ ಸರ್ಕಾರ ಡಾ. ಅರುಣ್ ರವರನ್ನು  ನೇಮಕ ಮಾಡಿ ಆದೇಶ ಹೊರಡಿಸಿದೆ.

ಬಿಎಂಟಿಸಿಯಲ್ಲಿ ಹಾಲಿ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಡಾಕ್ಟರ್ ಅರುಣ್ ತಮ್ಮ ಕಾರ್ಯವೈಖರಿ ಮತ್ತು ದಕ್ಷತೆಯಿಂದಲೇ ಉತ್ತಮ ಅಧಿಕಾರಿ ಎನ್ನುವ ಹೆಸರು ಪಡೆದವರು ಸಾಕಷ್ಟು ಬದಲಾವಣೆಗಳನ್ನು ಅಮೂಲಾಗ್ರವಾದ ಸಹ ಬೆಳವಣಿಗೆಗಳಿಗೂ ಕೂಡ ಕಾರಣವಾದವರು ಈ ಕಾರಣದಿಂದಲೇ ಕಾರ್ಮಿಕ ಸ್ನೇಹಿ ವ್ಯವಸ್ಥೆಯನ್ನು ಬಿಎಂಟಿಸಿಯಲ್ಲಿ ಜಾರಿಗೆ ಗೊಳಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.

ನೂತನ ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಡಾಕ್ಟರ್ ಅರುಣ್ ರವರ ಮೇಲೆ ಸಾಕಷ್ಟು ಹೊಣೆಗಾರಿಕೆ ಮತ್ತು ಜವಾಬ್ದಾರಿ ಇದೆ ಅದರ ಜೊತೆಗೆ ಹೊಸ ಜಿಲ್ಲೆಯ ಎಸ್ಪಿಯಾಗಿ ಯಾವ ರೀತಿ ಕಾನೂನು ಸುವ್ಯವಸ್ಥೆ ಜಾರಿಗೊಳಿಸುತ್ತಾರೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Spread the love

Related Articles

Leave a Reply

Your email address will not be published.

Back to top button
Flash News