Breakinglock downMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜಕೀಯರಾಜ್ಯ-ರಾಜಧಾನಿ

ಯುವರಾಜ್ @ ಸ್ವಾಮಿ ಬಿಡುಗಡೆ..?. ಪ್ರತೀಕಾರದ ಬೆಂಕಿಯಲ್ಲಿ ಬೇಯುತ್ತಿರುವ ಯುವರಾಜ್ ಕೋಪಕ್ಕೆ ಸುಟ್ಟು ಹೋಗುವವರು ಯಾರ್ಯಾರೋ…

ಬೆಂಗಳೂರು: ಯುವರಾಜ್ ಅಲಿಯಾಸ್ ಸ್ವಾಮಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಗಿದೆ.ಕಳೆದ ನಾಲ್ಕು ದಿನಗಳ ಹಿಂದೆಯೇ ಪರಪ್ಪನ ಅಗ್ರಹಾರದಿಂದ ಸ್ವಾಮಿ ಹೊರಬಿದ್ದಾಗಿದೆ.ಆದ್ರೆ ಮಾದ್ಯಮಗಳಲ್ಲಿ ಅದು ಸುದ್ದಿಯಾದದ್ದು ನಿನ್ನೆ..ಇರಲಿ,ವಿಷಯ ಅದಲ್ಲ,ಜೈಲಿನಿಂದ ಸ್ವಾಮಿ ಬಿಡುಗಡೆಯಾಗಿರುವುದು ಬಿಜೆಪಿ ಪಕ್ಷ ಹಾಗೂ ಸರ್ಕಾರದಲ್ಲಿರುವ ಅನೇಕ ರಾಜಕೀಯ ಮುಖಂಡರಲ್ಲಿ ನಡುಕ ಸೃಷ್ಟಿಸಿದೆ.

ಸ್ವಾಮಿ ಬಿಡುಗಡೆಗೂ ಬಿಜೆಪಿ ಸರ್ಕಾರ ಹಾಗೂ ಪಕ್ಷದ ಮುಖಂಡರು ಭಯಗೊಳ್ಳಲಿಕ್ಕೂ ಸಂಬಂಧವೇನು ಎಂಬ ಪ್ರಶ್ನೆ ಮೂಡೋದು ಸಹಜ..ಆದ್ರೆ ಸ್ವಾಮಿ ಅಂದರ್ ಆಗೊಕ್ಕೆ ಕಾರಣವಾದವರಲ್ಲಿ ಬಿಜೆಪಿ ಸರ್ಕಾರದವರ ಪಾತ್ರ-ಕುಮ್ಮಕ್ಕು-ಷಡ್ಯಂತ್ರ ಇತ್ತೆನ್ನುವುದು ಜಗಜ್ಜಾಹೀರಾಗಿದೆ.ಸ್ವಾಮಿಯನ್ನು ಹೊರಗೆ ಬೆಳೆಯೊಕ್ಕೆ-ಇರೊಕ್ಕೆ ಬಿಟ್ಟರೆ ತಮ್ಮ ಬುಡ ಕಾಯಿಸ್ತಾನೆನ್ನುವ ಅಂಜಿಕೆಯಲ್ಲಿ ಅನೇಕರೇ ಅವನನ್ನು ಜೈಲು ಪಾಲಾಗುವಂತೆ ಮಾಡಿದ್ದನ್ನು ತಮ್ಮನ್ನು ಭೇಟಿಯಾದವರ ಬಳಿಯೆಲ್ಲಾ ಸ್ವಾಮಿ ಹೇಳಿಕೊಂಡಿದ್ದಾನೆನ್ನಲಾಗಿದೆ.

ಈ ಸ್ವಾಮಿ, ಬಿಜೆಪಿ ಪಕ್ಷದಲ್ಲಿರುವ ಅನೇಕ ಮುಖಂಡರೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ ಎನ್ನುವುದರಲ್ಲಿ ಎರಡು ಮಾತಿಲ್ಲ..ದೆಹಲಿ ಮಟ್ಟದಲ್ಲಿ ಒಳ್ಳೆಯ ಸಂಪರ್ಕ ಇದ್ದುದ್ದೇ ಇಲ್ಲಿನ ಮುಖಂಡರು ಸ್ವಾಮಿಯ ಬೆನ್ ಬೀಳೊಕ್ಕೆ ಕಾರಣ ಎನ್ನುವುದನ್ನು ಅಲ್ಲಗೆಳೆಯೊಕ್ಕಾಗೊಲ್ಲ.ಇಲ್ಲಿನ ಮುಖಂಡರಿಗೆ ದೆಹಲಿ ಮಟ್ಟದಲ್ಲಿ ಆಗಬೇಕಾದ ಕೆಲಸವನ್ನು ಕಣ್ಣಿಗೊತ್ತಿ ಮಾಡಿದ್ದರಿಂದಲೇ ಆತನ ಸಂಪರ್ಕಕ್ಕೆ ಹಲವರು ಬರೊಕ್ಕೆ ಸಾಧ್ಯವಾಯ್ತೆನ್ನುವ ಮಾತು ಬಿಜೆಪಿ ಪಕ್ಷದಲ್ಲೇ ಇದೆ.

ರಾಜಕಾರಣಿಗಳ ಬೇಕು ಬೇಡುಗಳನ್ನೆಲ್ಲಾ ಪೂರೈಸುವ ಮೀಡಿಯೇಟರ್-ಮದ್ಯವರ್ತಿಯಾಗಿದ್ದ ಸ್ವಾಮಿಗೆ ಬಿಜೆಪಿ ಸರ್ಕಾರದಲ್ಲಿರುವ ಮುಕ್ಕಾಲು ಪಾಲು ರಾಜಕಾರಣಿಗಳ ರಹಸ್ಯವೆಲ್ಲಾ ಗೊತ್ತಿದೆ ಎನ್ನುವ ಮಾತಿದೆ.ಬಯಲು ಮಾಡ್ಲಿಕ್ಕೆ ಸಾಧ್ಯವೇ ಇಲ್ಲವೆನಿಸುವಂತ ಸ್ಪೋಟಕ ಸಾಕ್ಷ್ಯ-ರಹಸ್ಯಗಳಿವೆ ಎನ್ನಲಾಗ್ತದೆ.ಸರ್ಕಾರದ ಅಳಿವು-ಉಳಿವು ನಿರ್ಧರಿಸುವಂತ ಸಂಗತಿಗಳಿವೆ ಎನ್ನಲಾಗ್ತಿದೆ.ಈತನನ್ನು ಉಳಿಯೊಕ್ಕೆ ಬಿಟ್ಟರೆ ಅಪಾಯ ತಮಗೇ ಎನ್ನುವ ಕಾರಣಕ್ಕೆ ಅನೇಕರು ಮಸಲತ್ತು ಮಾಡಿ,ಜೈಲಿಗೆ ಕಳುಹಿಸಿದ್ರು ಎನ್ನುವುದು ಬಿಜೆಪಿಯಲ್ಲೇ ಹರಿದಾಡುತ್ತಿರುವ ಮಾತು..

ಇಂಥಾ ಸ್ವಾಮಿ ಇದೀಗ ಪರಪ್ಪನ ಅಗ್ರಹಾರದಲ್ಲಿ ಹಲವಾರು ತಿಂಗಳ ಅಜ್ಞಾತವಾಸ ಅನುಭವಿಸಿಯಾಗಿದೆ.ಜಗತ್ತು-ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಅರಿತುಕೊಳ್ಳೊಕ್ಕೆ ಕಾಲಾವಕಾಶ ದೊರೆತಂತಾಗಿದೆ.ತಾನು ಹೊರಗೋದರೆ ಹೇಗೆ ಬದುಕ್ಬೇಕು..ಯಾರ್ಯಾರ ಜಾತಕವನ್ನು ಬಯಲು ಮಾಡಬೇಕು..ತನ್ನ ವರ್ಚಸ್ಸನ್ನು ಹೇಗೆ ಬದಲಾಯಿಸಿಕೊಳ್ಳಬೇಕೆನ್ನುವುದಕ್ಕೆ ಜೈಲ್ ನೊಳಗೇ ಕೂತು ಪಕ್ಕಾ ಪ್ಲ್ಯಾನ್ ಮಾಡಿದ್ದಾನಂತೆ.ಹಾಗಾಗಿನೇ ಬಂದ ಒಂದು ವಾರ ದೇವಸ್ಥಾನಗಳಿಗೆ ವಿಸಿಟ್ ಕೊಟ್ಟು ನಂತರ ತನಗೆ ಮೋಸ ಎಸಗಿದವರ,ವಂಚನೆ ಮಾಡಿದವರ,ತನ್ನಿಂದ ಎಲ್ಲಾ ರೀತಿಯ ಲಾಭ ಪಡೆದ ಹೊರತಾಗ್ಯೂ ಬೆನ್ನಿಗೆ ಚೂರಿ ಹಾಕಿದವರ ಬಂಡವಾಳವನ್ನು ಸಾಕ್ಷ್ಯ ಸಮೇತ ಬಯಲು ಮಾಡೊಕ್ಕೆ ನಿರ್ಧರಿಸಿದ್ದಾರೆನ್ನುವುದು ಸ್ವಾಮಿಯ ಆತ್ಮೀಯ ಮೂಲಗಳಿಂದ ತಿಳಿದು ಬಂದಿರುವ ಸಂಗತಿ.

ಅಂದ್ಹಾಗೆ ಸ್ವಾಮಿಯ ಹಿಟ್ ಲೀಸ್ಟ್ ನಲ್ಲಿರುವವರಲ್ಲಿ ಬಹುತೇಕ ಸರ್ಕಾರದಲ್ಲಿ ಹಾಲಿ-ಮಾಜಿ ಸಚಿವರಾಗಿದ್ದವರೇ ಆಗಿದ್ದಾರಂತೆ. ಬೊಮ್ಮಾಯಿ ಸಂಪುಟದಲ್ಲಿ ಬಹುಮುಖ್ಯ ಖಾತೆ-ಇಲಾಖೆಗಳನ್ನು ನಡೆಸುತ್ತಿರುವ ಪ್ರಮುಖ ಸಚಿವರುಗಳೇ ಹಿಟ್ ಲೀಸ್ಟ್ ನಲ್ಲಿದ್ದಾರೆ ಎನ್ನಲಾಗ್ತಿದೆ.ಅವರೆಲ್ಲರ ಬಟ್ಟೆ ಬಿಚ್ಚಿಸುವ-ಮಾನ ಹರಾಜಾಕುವ ಮಟ್ಟಕ್ಕೆ ಸ್ವಾಮಿ ಬಂದು ನಿಂತಿದ್ದಾನೆನ್ನಲಾಗಿದೆ.

ತನ್ನ ಬಳಿ ಹಲವರ ಸ್ಪೋಟಕ ಸಾಕ್ಷ್ಯಗಳಿವೆ..ಹೊರಗೆ ಬಂದ ಮೇಲೆ ಅದನ್ನೆಲ್ಲಾ ಸವಿಸ್ತಾರವಾಗಿ ಹೇಳುತ್ತೇನೆ ಎಂದಷ್ಟೇ ಹೇಳಿದ್ದ ಸ್ವಾಮಿ ಮೇಲೆ ಎಲ್ಲರ ಕಣ್ಣುಗಳಿವೆ..ಆ ಲೀಸ್ಟ್ ನಲ್ಲಿ ನಾನಿದ್ದೇನಾ..ಲೀಸ್ಟ್ ನಿಂದ ಡಿಲೀಟ್ ಆಗಲಿಕ್ಕೆ ಏನ್ ಮಾಡೋದೆನ್ನುವ ಚಿಂತೆಯಲ್ಲಿದ್ದಾರೆ.ಆದ್ರೆ ಯಾವುದೇ ಕಾಂಪ್ರಮೈಸ್ ಗೂ ಇಷ್ಟವಿರದ ಸ್ವಾಮಿ,ದ್ವೇಷದ ಪ್ರತೀಕಾರ ತೀರಿಸಿಕೊಂಡೇ ತೀರುವ ಉಮೇದಿನಲ್ಲಿದ್ದಾರೆ..ಕಾದು ನೋಡಬೇಕು..ಯಾರ್ಯಾರ ಮಾನ ಹರಾಜಾಗುತ್ತದೋ..ಯಾರ್ಯಾರ ಚೆಡ್ಡಿ ಉದುರಿ ಹೋಗುತ್ತದೋ..ಸಾರ್ವಜನಿಕವಾಗಿ ಯಾರ್ಯಾರೆಲ್ಲ ಬೆತ್ತಲಾಗುತ್ತಾರೋ ಎನ್ನುವುದು ಕುತೂಹಲದ ವಿಷಯ:

Spread the love

Related Articles

Leave a Reply

Your email address will not be published.

Back to top button
Flash News