Is Suspension-Dismissal only for Workers ..? Why not For Depo Managers :ಇದು ಸರಿನಾ..?! ಸಚಿವ ಶ್ರೀರಾಮುಲು ಅವ್ರೇ..ಕಾರ್ಮಿಕರಿಗೊಂದು ನ್ಯಾಯ..ಅಧಿಕಾರಿಗಳಿಗೊಂದು ನ್ಯಾಯನಾ..?

ಡ್ಯೂಟಿಗೆ ಅಂಗಲಾಚಿದ್ರೂ  ಬಸ್ ನೀಡದೆ ಸತಾಯಿಸಿ ಕಾರ್ಮಿಕರ ಅಮಾನತು-ವಜಾಕ್ಕೆ ಕಾರಣವಾದ ಅಧಿಕಾರಿಗಳಿಗೇಕಿಲ್ಲ ಶಿಕ್ಷೆ..ಕಾರ್ಮಿಕರು “ದ್ರೋಹಿ” ಗಳಾ..ಅಧಿಕಾರಿಗಳೇನು “ಮಹಾದಕ್ಷ”ರಾ..!?”.

0

ಬೆಂಗಳೂರು:ಸಾರಿಗೆ ಕಾರ್ಮಿಕರಲ್ಲಿ ಕಮರಿಯೇ ಹೋಗಿದ್ದ ನೌಕರಿಯ ಆಸೆಯನ್ನು ಶ್ರೀರಾಮುಲು,ದಿಟ್ಟ ನಿರ್ದಾರ ತೆಗೆದುಕೊಳ್ಳುವ ಮೂಲಕ ಕಾರ್ಮಿಕರ ವಲಯದಲ್ಲಿ ಕಾರ್ಮಿಕಸ್ನೇಹಿ ಸಚಿವ ಎನಿಸಿಕೊಂಡಿ ರೋದನ್ನು ಅಲ್ಲಗೆಳೆಯಲಿಕ್ಕಾಗೊಲ್ಲ.ಆದ್ರೆ ಸಾರಿಗೆ ವ್ಯವಸ್ಥೆಯೊಳಗೆ ಕಂಟಕಪ್ರಾಯವಾಗಿರುವ ಅಧಿಕಾರಿ ವರ್ಗಕ್ಕೆ ಚುರುಕು  ಮುಟ್ಟಿಸಬೇಕಾದ ಹೊಣೆಗಾರಿಕೆ ಶ್ರೀರಾಮುಲು ಅವರ ಮೇಲಿದೆ..ಅದನ್ನು ಸಮರ್ಥವಾಗಿ ನಿಭಾಯಿಸಬೇಕೆನ್ನುವುದು ಎಲ್ಲರಂತೆ ನಮ್ಮ ಆಶಯವೂ ಕೂಡ.ಆದ್ರೆ ಕಾರ್ಮಿಕರ ಬದುಕುಗಳು ಬೀದಿಗೆ ಬರೊಕ್ಕೆ ಕಾರಣವಾದ ಅದೆಷ್ಟೋ ಅಧಿಕಾರಿಗಳಿಗೆ ನಯಾಪೈಸೆ ಶಿಕ್ಷೆ ಇಲ್ಲದೆ ಜಾಮ್ ಜೂಮ್ ಅಂಥ ಅಡ್ಡಾಡುತ್ತಿರುವುದು ಸಾರಿಗೆ ಕಾರ್ಮಿಕರ ಸಮುದಾಯವನ್ನೇ ಕೆಂಡಾಮಂಡಲಗೊಳಿಸಿದೆ.

ಹೌದು..ಮುಷ್ಕರದ ವೇಳೆ ಕೆಲಸಕ್ಕೆ ಹಾಜರಾಗೊಕ್ಕೆ ಬಂದ ಸಾವಿರಾರು ಕಾರ್ಮಿಕರನ್ನು ಡಿಪೋ ಗೇಟ್ ಬಳಿಯೇ ನಿಲ್ಲಿಸಿ ವಾಪಸ್ ಕಳುಹಿಸಿದಂತವರು ಬಿಎಂಟಿಸಿ ಅಧಿಕಾರ ಮಹಾಷಯರು..ಆದ್ರೆ ನಿಯಮಗಳ ಪ್ರಕಾರ ಮನೆಯಲ್ಲಿದ್ದರೂ ಕಾರ್ಮಿಕರನ್ನು ಕೆಲಸಕ್ಕೆ ಕರೆಯಬೇಕು.

ಡ್ಯೂಟಿ ಆರಂಭವಾಗುವ ಸಮಯದವರೆಗೂ ಅವರಿಗೆ ಕರೆ ಮಾಡಿ ನೆನಪಿಸಬೇಕು.ಬಸ್ ಗಳ ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲದಂತೆ ಮಾಡುವ ಹೊಣೆಗಾರಿಕೆ ಇರುವುದೇ ಈ ಡಿಪೋ ಮ್ಯಾನೇಜರ್ಸ್ ಮೇಲೆ..ಆದ್ರೆ ಅದರಲ್ಲಿ ಬಹುತೇಕ ನಾಲಾಯಕ್ ಅಧಿಕಾರಿಗಳು ಡಿಪೊಗಳ ಬಳಿ ಡ್ಯೂಟಿ ಕೊಡಿ ಸರ್ ಎಂದು ಅಂಗಲಾಚಿದ್ರೂ ಯಾವ್ ಬಸ್ ಗಳೂ ಇಲ್ಲ..ಬಸ್ ಗಳನ್ನು ಅಡ್ಡಾಡಿಸಿ,ಅವುಗಳಿಗೆ ಹಾನಿಯಾದ್ರೆ ಯಾರ್ ಹೊಣೆ..? ಹೋಗಿ ಎಂದು ಪ್ರಚೋದಿಸಿ ಚಾಲಕ-ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ವಾಪಸ್  ಕಳುಹಿಸಿದ್ದಾರಂತೆ.ಹೆಸರು ಹೇಳಲಿಚ್ಛಿಸದ ಸಾಕಷ್ಟು ಸಿಬ್ಬಂದಿಯೇ ಅಧಿಕಾರಿಗಳ ದುಂಡಾವರ್ತನೆಯಿಂದ ತಮಗೆ ಆದ ಅನ್ಯಾಯದ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಿ ಅಳಲು ತೋಡಿಕೊಂಡಿದ್ದಾರೆ.

ಮುಷ್ಕರದಲ್ಲಿ ಪಾಲ್ಗೊಳ್ಳಬೇಡಿ..ಕೆಲಸ ಹೋಗುತ್ತದೆ..ಆಮೇಲೆ ಅದಕ್ಕೆ ಸಂಸ್ಥೆ ಹೊಣೆಯಲ್ಲ ಎಂದು ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ಕಾರ್ಮಿಕರಿಗೆ ಸುತ್ತೋಲೆ ಹೊರಡಿಸಲಾಗಿತ್ತು.ಸಾರಿಗೆ ಕಾರ್ಮಿಕರು ಮುಷ್ಕರದ ವೇಳೆ ಕೆಲಸ ಹೋಗುತ್ತೆನ್ನುವ ಭೀತಿಯಲ್ಲಿ ಡಿಪೋಗಳಿಗೆ ಬಂದಿದ್ದರು.ಆದ್ರೆ ಡಿಪೋ ಮ್ಯಾನೇಜರ್ ಗಳೇ ಡ್ಯೂಟಿ ಇಲ್ಲ..ಬಸ್ ಗಳನ್ನು ಆಪರೇಟ್ ಮಾಡಿದ್ರೆ ಆಗೋ ತೊಂದರೆ-ನಷ್ಟಕ್ಕೆ ನಾವ್ ಹೊಣೆಯಾಗಬೇಕಾಗ್ತದೆ ಹೋಗ್ರಪ್ಪ  ಎಂದ್ಹೇಳಿ ಕಾರ್ಮಿಕರಲ್ಲಿ ನಿರುತ್ಸಾಹ ಮೂಡಿಸಿದರೆನ್ನುವುದು ಕಾರ್ಮಿಕರ ಆರೋಪ.ಬಂದ್-ಮುಷ್ಕರವನ್ನು ಜವಾಬ್ದಾರಿಯುತ ಅಧಿಕಾರಿಗಳಾಗಿ ಬೆಂಬಲಿಸಬಾರದಾಗಿದ್ದ ಡಿಪೋ ಮ್ಯಾನೇಜರ್ ಗಳೇ  ಬಸ್ ತೆಗೆದರೆ ತಮ್ಮ ಬೇಳೆ ಬೇಯೊಲ್ಲ ಎಂಬ ಕಾರಣಕ್ಕೆ ಕಾರ್ಮಿಕರಿಗೆ ಕರೆ ಮಾಡದೆ,ಡ್ಯೂಟಿಗೆ ಬಂದವರಿಗೆ ಡ್ಯೂಟಿ ಕೊಡದೆ ಸತಾಯಿಸಿದ್ದರಂತೆ..

-ಶಿವಾನಂದ್-ಸಾರಿಗೆ ಕಾರ್ಮಿಕರ ಸಂಘಟನೆಗಳ ಮುಖಂಡ

ಅಷ್ಟರ ಮೇಲೂ ನಮಗೆ ಡ್ಯೂಟಿ ಕೊಡಲೇಬೇಕೆಂದು ಪಟ್ಟು ಹಿಡಿದು ಅದೆಷ್ಟೋ ಕಾರ್ಮಿಕರನ್ನು ಸಂಜೆವರೆಗೂ ಡಿಪೋಗಳ ಹೊರಗೇ ಕಾಯಿಸಿದ್ದಾರೆನ್ನುವುದು ಮುಷ್ಕರದ ದಿನಗಳಲ್ಲೇ ಕೇಳಿಬಂದ ಆರೋಪ.

ಸರ್ಕಾರದ ಆದೇಶ,ಮೇಲಾಧಿಕಾರಿಗಳ ಅಣತಿಯಂತೆ ನಡೆದುಕೊಳ್ಳಲು ಕಾರ್ಮಿಕರನ್ನು ರೆಡಿ ಇದ್ರು ಅವರ ದಾರಿ ತಪ್ಪಿಸಿದ್ದು ಡಿಪೋ ಮ್ಯಾನೇಜರ್ ಗಳಂತೆ.ಈ ಸಂಗತಿಯನ್ನು ಹಿಂದಿನ  ಸಚಿವ ಸವದಿ ಅವರ ಗಮನಕ್ಕೂ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳು ತಿಳಿಸಿದ್ವು.ಮೇಲಾಧಿಕಾರಿಗಳ ಗಮನಕ್ಕೂ ಈ ವಿಷಯ ತರಲಾಗಿತ್ತು.ಆದ್ರೆ ಅಧಿಕಾರಿಗಳು ಕಟ್ಟುವ ಕಥೆಯನ್ನೇ ಕೇಳುವಂಥ ಕೆಟ್ಟ ಸಂಪ್ರದಾಯ ವಿರುವ ಸಾರಿಗೆ ನಾಲ್ಕು ನಿಗಮಗಳ ಆಡಳಿತ ಮಂಡಳಿಗೆ ಕಾರ್ಮಿಕರು ಮಾಡಿದ ತಪ್ಪುಗಳು ಎದ್ದುಕಂಡವೇ ಹೊರತು,ಮುಷ್ಕರಕ್ಕೆ ಪರೋಕ್ಷವಾಗಿ ಬೆಂಬಲಿಸಿದ ಬಹುತೇಕ ಡಿಪೋ ಮ್ಯಾನೇಜರ್ ಗಳು ಸಾಚಾಗಳಂತೆ ಕಂಡ್ ಬಿಟ್ರಲ್ಲ ಎನ್ನುವುದೆ ನೋವಿನ ಸಂಗತಿ ಎನ್ನುತ್ತಾರೆ ಕಾರ್ಮಿಕ ಸಂಘಟನೆಗಳ ಮುಖಂಡರು.

ಮುಷ್ಕರಕ್ಕೆ ಕಾರ್ಮಿಕರೇ ಕಾರಣ.ಸರ್ಕಾರದ ಆದೇಶವನ್ನು ಬೇಕಂತಲೇ ಧಿಕ್ಕರಿಸಿದ್ರು ಎಂದೇ ಬಿಂಬಿಸು ತ್ತಾ ಬಂದಿದೆ ಅಧಿಕಾರಿವರ್ಗ. ಆದರೆ ಬಸ್ ಗಳನ್ನು ಕಾ್ಯಾಚರಣೆ ಮಾಡೊಕ್ಕೆ ಅವಕಾಶ ನೀಡದ ಡಿಪೋ ಮ್ಯಾನೇಜರ್ ಗಳು,ಅವರಿಗೆ ಹಾಗೊಂದು ಆದೇಶ ನೀಡಿರ ಬಹುದಾದ ಮೇಲಾಧಿಕಾರಿಗಳು ಕೂಡ ಕಾರ್ಮಿಕರಿಗಿಂತ ದೊಡ್ಡ ಅಪರಾಧಿಗಳೆಂದ್ಹೇಕೆ ಸರ್ಕಾರಕ್ಕೆ ಗೊತ್ತಾಗಲಿಲ್ಲವೋ ತಿಳೀತಿಲ್ಲ.

ಮುಷ್ಕರ ಮಾಡಿದ್ರು..ಲಾಸ್ ಮಾಡಿದ್ರು..ಸರ್ಕಾರದ ಆದೇಶಕ್ಕೆ ಕಿಮ್ಮತ್ತಿನ ಬೆಲೆ ನೀಡಲಿಲ್ಲ ಎನ್ನುವುದನ್ನೇ ಪದೇ ಪದೇ ಪುನರಾವರ್ತನೆ ಮಾಡಿ ಕಾರ್ಮಿಕ ಸಮುದಾಯದ ಮೇಲೆನೇ ಗೂಬೆ ಕೂರಿಸಿ ತಪ್ಪಿನಿಂದ ನುಣುಚಿಕೊಂಡ ಅಧಿಕಾರಿಗಳೇಕೆ ತಪ್ಪಿತಸ್ಥರೆನ್ನುವ ಭಾವನೆ ಸರ್ಕಾರಕ್ಕೆ ಬರುತ್ತಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆ.

ನಿಗಮಗಳಲ್ಲಿ ಏನೇ ತಪ್ಪಾದ್ರೂ..ತೊಂದರೆಯಾದ್ರೂ ಅದಕ್ಕೆ ಕಾರ್ಮಿಕರೇ ಕಾರಣ ಎನ್ನುವುದನ್ನು ಪ್ರೊಜೆಕ್ಟ್ ಮಾಡಲಾಗ್ತದೆ. ಆಡಳಿತ ವರ್ಗ ಕೂಡ ಅಧಿಕಾರಿಗಳು ಕೊಡುವ ರಿಪೋರ್ಟ್ ಮೇಲೆಯೇ ಕ್ರಮ ಜಾರಿಗೊಳಿಸ್ತಾ ಬಂದಿದೆ.ಮುಷ್ಕರದ ಸಂದರ್ಭದಲ್ಲೂ ಕೂಡ ಡಿಪೋ ಮ್ಯಾನೇಜರ್ಸ್ ಕೊಟ್ಟ ರಿಪೋರ್ಟ್ ಮೇಲೆಯೇ ಕಾರ್ಮಿಕರನ್ನು ತಪ್ಪಿತಸ್ಥರೆಂದು ಏಕಪಕ್ಷೀಯವಾಗಿ ನಿರ್ಧರಿಸಲಾಯ್ತೆನ್ನುವುದು  ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳ ಆರೋಪ.

ಆದ್ರೆ..ಆದ್ರೆ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳು ಸಮಜಾಯಿಷಿ ಕೊಟ್ಟರೂ..ವಿವರಣೆ ನೀಡಿದ್ರೂ ಅದನ್ನು ಕೇಳೋ ಮನಸ್ಥಿತಿಯಾಗಲಿ,ವ್ಯವಧಾನವಾಗಲಿ ಆಡಳಿತ ವರ್ಗಕ್ಕಿಲ್ಲ..ಮುಷ್ಕರಕ್ಕೆಲ್ಲಾ ಕಾರ್ಮಿಕರೇ ಕಾರಣ ಎನ್ನುವ ಪೂರ್ವಾಗ್ರಹಕ್ಕೆ ಒಳಗಾಗಿರು ವ ಆಡಳಿತ ಮಂಡಳಿ ಶಿಕ್ಷಿಸಿದ್ದು ಕೇವಲ ಕಾರ್ಮಿಕರನ್ನು ರಕ್ಷಿಸಿದ್ದು ಕಾರ್ಮಿಕರಿಗಿಂತ ಹೆಚ್ಚು ಮುಷ್ಕರಕ್ಕೆ ಕಾರಣವಾದ, ಮುಷ್ಕರ ವನ್ನು ಪರೋಕ್ಷವಾಗಿ ಬೆಂಬಲಿಸಿದ,ಪ್ರಚೋದಿಸಿದ ಕೆಲವು ಡಿಪೋ ಮ್ಯಾನೇಜರ್ಸ್ ಗಳು ಆಡಳಿತ ವರ್ಗದ ದೃಷ್ಟಿಯಲ್ಲಿ ಪ್ರಾಮಾಣಿಕ ರು,ದಕ್ಷರು ಎನ್ನುವ ಭಾವನೆ ಮೂಡಿಬಿಟ್ಟಿದೆ.ಹಾಗಾಗಿ ಒಬ್ಬನೇ ಒಬ್ಬ ಡಿಪೋ ಮ್ಯಾನೇಜರ್ ಮೇಲೂ ನೈತಿಕ ಹೊಣೆಗಾರಿಕೆ ಆರೋಪದ ಮೇಲೆ ಶಿಸ್ತುಕ್ರಮ ಜಾರಿಯಾಗಲಿಲ್ಲ.

-ಶಿವಶಂಕರ್-ಡ್ಯೂಟಿಗೆ ದಿನನಿತ್ಯ ಡಿಪೋಗೆ ತೆರಳಿ ವಾಪಸ್ಸಾಗುತ್ತಿದ್ದ ಸಾರಿಗೆ ಕಾರ್ಮಿಕ

ಮುಷ್ಕರದ ದಿನಗಳಲ್ಲಿ ಬಸ್ ಗಳನ್ನು ಓಡಿಸೊಕ್ಕ ಸಿದ್ಧವಿದ್ದ  ಸಾವಿರಾರು ಕಾರ್ಮಿಕರು ಕೆಲಸ ಕೊಡಿ ಎಂದು ಡಿಪೋಗಳ ಮುಂದೆ ಕ್ಯೂ ನಿಂತಿದ್ದರೆನ್ನುವುದಕ್ಕೆ, ಡಿಪೋಗಳಲ್ಲಿ ಇರಬಹುದಾದ ಸಿಸಿಟಿವಿ ಗಮನಿಸಬಹುದು…ಅದೇ ರೀತಿ ಮುಷ್ಕರದ ಸಮಯದಲ್ಲಿ ಎಷ್ಟ್ ಡಿಪೋ ಮ್ಯಾನೇಜರ್ಸ್, ಮೊಬೈಲ್ ಗಳ ಮೂಲಕ ಕರೆ ಮಾಡಿಯೋ,ಮೆಸೇಜ್ ಹಾಕಿಯೋ ಕೆಲಸಕ್ಕೆ ಬನ್ನಿ ಎಂದು ಸೂಚಿಸಿದ್ದರೆನ್ನುವ ಅಸಲೀಯತ್ತನ್ನು ಅವರ ಮೊಬೈಲ್ ಕರೆಗಳ ಸಮ್ಮರಿಯನ್ನು ಅವಲೋಕಿಸಿದ್ರೆ ತಿಳೀಬೋದು.

ಸಾರಿಗೆ ಸಚಿವ ಶ್ರೀರಾಮುಲು ಕೇವಲ ಆಡಳಿತವರ್ಗದ ಚಾಡಿ ಮಾತಿಗೆ ಹಿತ್ತಾಳೆ ಕಿವಿಯಾಗಬಾರದು. ಕೆಲಸ ಕೊಡಿ ಎಂದು ಅಂಗಲಾಚಿ ದ್ರೂ ಬಸ್ ಕಾರ್ಯಾಚರಣೆಗೆ ಅವಕಾಶ ನೀಡದೆ ಸತಾಯಿಸಿದ ಡಿಪೋ ಮ್ಯಾನೇಜರ್ಸ್ ಗಳ ಬಗ್ಗೆ ವರದಿ ತರಿಸಿಕೊಳ್ಳಬೇಕಿದೆ. ಮು ಷ್ಕರ ದ ದಿನಗಳಲ್ಲಿ ಅಧಿಕಾರಿಗಳ ಡ್ಯೂಟಿ ಚಾರ್ಟ್,ಮೊಬೈಲ್ ಕರೆಗಳ ಸಮ್ಮರಿಯನ್ನು ಕೂಲಂಕುಷವಾಗಿ ತನಿಖೆಗೊಳಪಡಿ ಸಬೇಕಿದೆ.

-ಶ್ರೀಶೈಲ ಗುಣವಕ್ಕನವರ್-ಸಾಮಾಜಿಕ ಕಾರ್ಯಕರ್ತ

ಮುಷ್ಕರದ ಬಗ್ಗೆ ಆಸಕ್ತಿಯೇ ಇಲ್ಲದ ಸಾವಿರಾರು ಕಾರ್ಮಿಕರು ಡಿಪೋಗಳ ಮುಂದೆ ಡ್ಯೂಟಿಗಾಗಿ ಅಂಗಲಾಚಿದ್ದಾರೆನ್ನುವುದಕ್ಕೆ ಸಾಕ್ಷ್ಯದಂತೆ ಇರುವ ಸಿಸಿಟಿವಿ ಫುಟೇಜಸ್ ಗಳನ್ನು ತರಿಸಿಕೊಂಡು ಪರಿಶೀಲಿಸಬೇಕಿದೆ..ಆಗ ಗೊತ್ತಾಗುತ್ತೆ ಕಾರ್ಮಿಕರನ್ನು ವಿಲನ್ ಗಳನ್ನಾಗಿಸಿ ತಮ್ಮನ್ನು ಹೀರೋಗಳಂತೆ ಬಿಂಬಿಸಿಕೊಡ ಡಿಪೋ ಮ್ಯಾನೇಜರ್ಸ್ ಗಳ ಅಸಲೀಯತ್ತು ,ಅನ್ನ ಕೊಟ್ಟ ಸಂಸ್ಥೆಗೆ   ದ್ರೋಹ ಮಾಡಿದ ನೀಚತನ,ಮುಷ್ಕರಕ್ಕೆ ಕುಮ್ಮಕ್ಕು ನೀಡಿದ ಅವರ ಡಬಲ್ ಗೇಮ್ ಬುದ್ಧಿ.

ಮುಷ್ಕರದ ವಿಷಯದಲ್ಲಿ ಕಾರ್ಮಿಕರನ್ನು ಶಿಕ್ಷಿಸಿದಂತೆ ಡಿಪೋ ಮ್ಯಾನೇಜರ್ಸ್ ಗಳನ್ನು ಶಿಕ್ಷಿಸುವ ಕೆಲಸಕ್ಕೆ ಆಡಳಿತ ವರ್ಗ ಏಕೆ ಮುಂದಾಗಲಿಲ್ಲ ಎನ್ನುವುದೇ ಪ್ರಶ್ನೆ. ಡಿಪೋ ಗಳಲ್ಲಿ ಸಿಗುವ ಲಂಚದ ಹಣವನ್ನು ತಿಂದು ತಿಂದು ಕೊಬ್ಬಿರುವ ಕೆಲಸ ಡಿಪೋ ಮ್ಯಾನೇಜರ್ಸ್ ಗಳು ಆಡಳಿತ ವರ್ಗ ಹಾಗೂ ಸರ್ಕಾರಕ್ಕೆ ಪ್ರಾಮಾಣಿಕರು ಎಂದೆನಿಸುತ್ತಿರುವುದೇ ದುರಂತ ಹಾಗೂ ವಿಪರ್ಯಾಸ..ಹಿಂದಿನ ಸಚಿವರಂತೆ ನೀವಾಗದೆ ನೊಂದ ಕಾರ್ಮಿಕರಿಗೆ ಧ್ವನಿಯಾಗುವಂಥ,ಮುರಿದೋದ ಅವರ ಬದುಕುಗಳನ್ನು ಕಟ್ಟಿಕೊಡುವ ಕೆಲಸಕ್ಕೆ ಮುಂದಾಗಬೇಕೆನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್  ನ ಆಶಯ ಕೂಡ.

Spread the love
Leave A Reply

Your email address will not be published.

Flash News