MLA CT Ravi clean toilet With Brooms: ಪೊರಕೆ ಹಿಡಿದು ಟಾಯ್ಲೆಟ್ ಕ್ಲೀನ್ ಮಾಡಿದ ಎಮ್ಮೆಲ್ಲೆ ಸಿ.ಟಿ ರವಿ..

ಶಾಸಕರ ಸ್ವಚ್ಛತಾ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ-ಕೈ-ತೆನೆ ಮುಖಂಡರಿಂದ ವಿಡಂಬನೆ

0

ಚಿಕ್ಕಮಗಳೂರು:ವರ್ಷವೆಲ್ಲಾ ಮಹಾತ್ಮರನ್ನು  ಬೈಯ್ದುಕೊಂಡು ಅಡ್ಡಾಡೋ ನಮ್ ರಾಜಕಾರಣಿಗಳಿಗೆ ಅದ್ಹೇಕೋ ಗೊತ್ತಿಲ್ಲ ಅವರ ಜಯಂತಿಗಳು ಬರುತ್ತಿದ್ದಂಗೆ ಅಭಿಮಾನ ಉಕ್ಕಿ ಹರಿಯೊಕ್ಕೆ ಶುರುವಾಗುತ್ತೆ.ಅವರ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಲಿಕ್ಕೆ ಶುರುಮಾಡ್ತಾರೆ..ಇವತ್ತು ಚಿಕ್ಕಮಗಳೂರಿನಲ್ಲಿ ಆದದ್ದು ಅದೇ..ಕ್ಷೇತ್ರ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಸಾಹೇಬ್ರು  ಮಹಾತ್ಮಗಾಂದೀಜಿ ಹುಟ್ಟು ಹಬ್ಬದ ಪ್ರಯುಕ್ತ ಸ್ವಚ್ಛತಾ ಕಾರ್ಯ ಕೈಗೊಂಡು ಎಲ್ಲರ ಗಮನ ಸೆಳೆದರು.

ಸ್ವಚ್ಛತೆ ಪಾಠವನ್ನು ಸ್ವತಃ ಆಚರಣೆ ಮೂಲಕ ತೋರಿಸಿಕೊಟ್ಟ ಆದರ್ಶಪುರುಷ  ಮಹಾತ್ಮಗಾಂಧೀಜಿ ಬದುಕಿದ್ದಾಗ ಸಾರ್ವಜನಿಕವಾಗಿ ಶೌಚಾಲಯವನ್ನು ಸ್ವಚ್ಛಗೊಳಿಸಿದವರು.ಅದೇ ಮಾದರಿಯಲ್ಲಿ ಇವತ್ತು  ಬಾಲಕಿಯರ ವಿದ್ಯಾರ್ಥಿನಿಲಯದ ಶೌಚಾಲಯವನ್ನು ಸ್ವಚ್ಛಗೊಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ರು.

ಸ್ವತಃ ತಾವೇ ಪೊರಕೆ ಹಿಡಿದು ರಾಮನಹಳ್ಳಿಯ ಬಾಲಕಿಯರ  ಹಾಸ್ಟೆಲ್ ನಲ್ಲಿರುವ ಶೌಚಾಲಯ ಸ್ವಚ್ಛಗೊಳಿಸಿದ ಸಿ.ಟಿ ರವಿ ಮಹಾತ್ಮಗಾಂದೀಜಿಯರ ಸಿದ್ಧಾಂತದ  ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ್ದಷ್ಟೇ ಅಲ್ಲ,ಸ್ವಚ್ಛತೆಯ ಬಗ್ಗೆ ಪಾಠ ಕೂಡ ಮಾಡಿದ್ರು.

ಶಾಸಕರ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ರೆ ವಿಪಕ್ಷಗಳು ಗಾಂಧೀಜಿ ಅವರ ವ್ಯಕ್ತಿತ್ವವನ್ನು ತಮ್ಮದೇ ಮೂಗಿನ ನೇರದಲ್ಲಿ ವಿಶ್ಲೇಷಿಸುವಂಥ ಬಿಜೆಪಿ ನಾಯಕರಲ್ಲಿ ಸಿ.ಟಿ ರವಿ ಕೂಡ ಒಬ್ಬರು.ಅವರು ಇವತ್ತು ಶೌಚಾಲಯ ಕ್ಲೀನ್ ಮಾಡಿದ್ರು ಎಂದ್ರೆ ಅತ್ಯಾಶ್ಚರ್ಯ..ಮಹಾತ್ಮನ ವಿಚಾರಧಾರೆಗಳು ಎಂಥವು ಎನ್ನುವುದನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಲಿ..ಆ ಮಹಾತ್ಮ ಸಿ.ಟಿ ರವಿ ಸೇರಿದಂತೆ ಬಿಜೆಪಿಗರಿಗೆ ಒಳ್ಳೇ ಬುದ್ದಿ ಕರುಣಿಸಲಿ ಎಂದು ಅಣಕವಾಡಿದ್ರು.

Spread the love
Leave A Reply

Your email address will not be published.

Flash News