
ಬೆಂಗಳೂರು: ಅಪ್ಪ ಇಲ್ಲದೇ ಬದುಕು ತುಂಬ ಕಷ್ಟ ಆಗ್ತಿದೆ. ನಾವು ಯಾರಿಗೂ ಭಾರವಾಗೋದು ಬೇಡ..ನಮ್ಮಿಂದ ಯಾರಿಗೂ ತೊಂದರೆ ಆಗೋದು ಬೇಡ ಮಕ್ಳ..ನಾವಿಲ್ಲಿ ಇರೋದೆ ಬೇಡ, ಅಪ್ಪ ಇರೋ ಜಾಗಕ್ಕೆ ಹೋಗಿಬಿಡೋಣ.ಅಲ್ಲಿ ಎಲ್ಲಾ ಒಟ್ಟಿಗೆ ಇರೋಣ ಎಂದು ಮಕ್ಕಳನ್ನು ಹೆತ್ತಾಕೆಯೇ ಹೇಳುತ್ತಾಳೆಂದ್ರೆ ಪಾಪ ಆಕೆಯ ಮನಸ್ತಿತಿ ಏನಾಗಿರಬೇಡ..ಕೊನೆಗೂ ಅಂದುಕೊಂಡಂತೆಯೇ ಮಾಡಿಕೊಂಡುಬಿಟ್ಟಿದೆ ಆ ಕುಟುಂಬ.ಇಬ್ಬರು ಮಕ್ಕಳನ್ನು ನೇಣಿನ ಕುಣಿಕೆಗೆ ಒಡ್ಡಿ,ಅವ್ರು ಸತ್ತಿದ್ದನ್ನು ಕನ್ಫರ್ಮ್ ಮಾಡಿಕೊಂಡ ಮೇಲೆ ತಾನು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..
ಪಾಪ.. ಯಜಮಾನನಿಲ್ಲದ ಆ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಬರುತ್ತೆ ಎಂದ್ರೆ ಸಾರಿಗೆ ಸಚಿವ ಶ್ರೀರಾಮುಲು ಆತ್ಮಾವಲೋಕನ ಮಾಡಿಕೊಳ್ಳ ಬೇಕು..ತಾವು ಈ ಸ್ಥಾನಕ್ಕೆ ಅರ್ಹನೋ..ಅಲ್ಲವೋ ಎನ್ನುವುದನ್ನು.ವಜಾಗೊಂಡ, ಅಮಾನತ್ತಾದ ಕಾರ್ಮಿಕರನ್ನು ಮರು ನಿಯೋಜಿಸಿಕೊಳ್ಳೋದಾಗಿ ಘೋಷಣೆ ಮಾಡಿದ್ದನ್ನು ಬಿಟ್ಟರೆ ಕಾರ್ಮಿಕರ ಬವಣೆಗಳೇನು ಎನ್ನುವುದನ್ನು ಅರಿಯೋ ಸಣ್ಣ ಪ್ರಯತ್ನವನ್ನು ಅವರು ಮಾಡಿದ್ದಾರಾ..ಖಂಡಿತಾ ಇಲ್ಲ..ಹಾಗಾಗಿನೇ ಕಾರ್ಮಿಕರ ವಲಯದಲ್ಲಿ ಕೆಲಸ ಮಾಡಲಿಕ್ಕಾದ್ರೆ ಹುದ್ದೆಯಲ್ಲಿರಿ…ಇಲ್ಲಾಂದ್ರೆ ಸ್ಥಾನದಿಂದ ಕೆಳಗಿಳಿಯಿರಿ ಎಂಬ ವರಾತ ಶುರುವಿಟ್ಟುಕೊಂಡಿದ್ದಾರೆ.
ಇದೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ಬಿಎಂಟಿಸಿ ಕಾರ್ಮಿಕನ ಕುಟುಂಬದ ಮೂವರು ಸದಸ್ಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದಕ್ಕೆ ಕಾರಣ ಬಿಎಂಟಿಸಿ ಆಡಳಿತ ಮಂಡಳಿ ಎನ್ನಲಾಗ್ತಿದೆ.ಕೊರೊನಾಕ್ಕೆ ಮನೆಯ ಯಜಮಾನ ಪ್ರಸನ್ನ ಕುಮಾರ್ ಬಲಿಯಾದ ಮೇಲೆ ಜೀವನದ ಆಸರೆಗೆ ಇದ್ದ ಒಂದೇ ಒಂದು ಮಾರ್ಗವೂ ಕೈ ತಪ್ಪಿ ಹೋಯ್ತು.ಪತ್ನಿ ವಸಂತ ತನ್ನ ಕೈಲಾದ ಮಟ್ಟಿಗೆ ಕುಟುಂಬ ನಿರ್ವಹಣೆಗೆ ಯತ್ನಿಸಿದ್ದಾಳೆ.ಆದ್ರೆ ದಿನದೂಡೋದು ಕಷ್ಟ ಎನಿಸಿದಾಗ ಇಬ್ಬರು ಮಕ್ಕಳ ಸಮೇತ ನೇಣಿಗೆ ಶರಣಾಗಿದ್ದಾಳೆ.
ಅಂದ್ಹಾಗೆ ಬಿಎಂಟಿಸಿಯಲ್ಲಿ ಚಾಲಕನಾಗಿದ್ದ ಪ್ರಸನ್ನ ಕುಮಾರ್ ಕೊರೊನಾಕ್ಕೆ ಬಲಿಯಾದ ಮೇಲೆ ಸರ್ಕಾರ ಘೋಷಿಸಿದ್ದಂತೆ 30 ಲಕ್ಷ ಪರಿಹಾರಕ್ಕಾಗಿ ಪತ್ನಿ ವಸಂತಾ ಅನೇಕ ಬಾರಿ ಬಿಎಂಟಿಸಿ ಕೇಂದ್ರ ಕಚೇರಿಗೆ ಚಪ್ಪಲಿ ಸವೆಸಿದ್ದಾಳೆ.ಸರ್ಕಾರಕ್ಕೆ ವರದಿ ಕಳುಹಿಸಿದ್ದೇವೆ,,ಇನ್ನೂ ಪರಿಹಾರ ಬಂದಿಲ್ಲ..ಫೈಲ್ ಮೂಮೆಂಟ್ ಆಗ್ತಿದೆ ಎಂದು ಹೇಳಿ ಕಳುಹಿಸುತ್ತಿದ್ದರು.ಇಂದಲ್ಲ ನಾಳೆ ಬರಬಹುದೆಂದು ಅನೇಕ ತಿಂಗಳುವರೆಗೆ ಕಾದಿದ್ದಾಳೆ.ಮನೆಯಲ್ಲೇ ಕುಳಿತು 30 ಲಕ್ಷ ಪರಿಹಾರ ಸಿಕ್ಕರೆ ಏನೆಲ್ಲಾ ಮಾಡಬಹುದು ಎಂದು ದಿನನಿತ್ಯ ಪ್ಲ್ಯಾನ್ ಹಾಕಿ ಮಲಗುತ್ತಿದ್ದಂತೆ ಕುಟುಂಬ.ಮನೆಯ ಒಡತಿ ವಸಂತ ಅಂತೂ 30 ಲಕ್ಷದಲ್ಲಿ ಇರೋ ಬರೋ ಸಾಲ ತೀರಿಸಿ ಸಣ್ಣಗೂಡು ಮಾಡಿಕೊಂಡು ಮಕ್ಕಳ ಎಜುಕೇಷನ್-ಭವಿಷ್ಯಕ್ಕೆ ಒಂದಷ್ಟು ಇನ್ವೆಸ್ಟ್ ಮಾಡಿ ನೆಮ್ಮದಿಯಿಂದ ಇರುವ ಕನಸು ಕಟ್ಟಿದ್ದರಂತೆ.ಮಕ್ಕಳ ಬಳಿಯೂ ಇದನ್ನು ಹೇಳಿ ಅವರನ್ನು ಸಮಾಧಾನ ಮಾಡುತ್ತಿದ್ದರಂತೆ


ಆದ್ರೆ ಇತ್ತೀಚೆಗೆ ಆಕೆ 30 ಲಕ್ಷ ಹಣದ ಬಗ್ಗೆ ವಿಚಾರಿಸೊಕ್ಕೆ ಬಂದ್ರೆ ನಾಲಾಯಕ್ ಅಧಿಕಾರಿ ಸಿಬ್ಬಂದಿ ಆಕೆಯನ್ನು ಹೀಯಾಳಿಸುತ್ತಿದ್ದರಂತೆ..ನಿಂಗೆ ಹಣ ಬಂದಂಗೆ ನೀನು ಅದನ್ನು ತಿಂದಂಗೆ ಎಂಬ ಮಾತನ್ನಾಡುತ್ತಿದ್ದರಂತೆ.ಹಣ ಬಿಡುಗಡೆ ಬಗ್ಗೆ ಏನಾಗಿದೆ ಎನ್ನುವ ಮಾಹಿತಿ ಕೊಡಲಿಕ್ಕೂ ಆಕೆಯಿಂದ ಹಣ ಪಡೆದಿದ್ದುಂಟಂತೆ.ಅನಿವಾರ್ಯವಾಗಿ ತನ್ನ ಕೈಲಿರುವಷ್ಟನ್ನು ಕೊಟ್ಟು ವಾಪಸ್ಸಾಗುತ್ತಿದ್ಗಳಂತೆ.ಕೆಲವರು 30 ಲಕ್ಷ ಹಣ ಬಂದ್ರೂ ನಿಂಗೆ ಸಿಗೊಕ್ಕೆ ನಮ್ಮ ಕೈ ಬೆಚ್ಚಗೆ ಮಾಡಬೇಕಾಗ್ತದೆ ಗೊತ್ತಾ ಎಂದ್ಹೇಳಿ ಕಳುಹಿಸುತ್ತಿದ್ದರಂತೆ.
ಇದನ್ನೆಲ್ಲಾ ನೋಡಿ..ನೋಡಿ ಬೇಸತ್ತು ಹೋದ ವಸಂತ ತನ್ನಿಬ್ಬರು ಮಕ್ಕಳನ್ನು ಕೂರಿಸಿಕೊಂಡು ವ್ಯಥೆಯನ್ನು ಹೇಳಿಕೊಂಡಿದ್ದಾಳೆ. ಪಾಪ ಇಷ್ಟ ಇಲ್ಲದ ಮಕ್ಕಳು ಅಮ್ಮನನ್ನು ಕನ್ವೀನಿಯನ್ಸ್ ಮಾಡಿದ್ದಾರೆ.ಆದರೆ ಒಪ್ಪದೆ ಹೇಗೋ ಒಪ್ಪಿಸಿ ಮೊದಲು ಅವರ ಕೊರಳಿಗೆ ನೇಣು ಬಿಗಿದಿದ್ದಾಳೆ.ಒಂದ್ವೇಳೆ ನಾನು ಸತ್ತು ಅವರು ಬದುಕಿಬಿಟ್ರೆ ಅವರ ಬದುಕುಗಳಿಗೆ ದಿಕ್ಕೇನು ಎಂದು ಆಲೋಚಿಸಿ ಮಕ್ಕಳ ಪ್ರಾಣ ಪಕ್ಷಿ ಹಾರಿ ಹೋಗುವವರೆಗೆ ಕಾದಿದ್ದು ನಂತರ ತಾನೂ ನೇಣು ಬಿಗಿದುಕೊಂಡಿದ್ದಾಳೆ.
ಕಾರ್ಮಿಕ ಕುಟುಂಬನ ಸಾಮೂಹಿಕ ಆತ್ಮಹತ್ಯೆಗೆ ಕಾರ್ಮಿಕ ಸಮುದಾಯ ಕಂಬನಿ ಮಿಡಿದಿದೆ.ಆಡಳಿತ ವರ್ಗದ ಅಮಾನವೀಯ ಧೋರಣೆಗೆ ಹಿಡಿಶಾಪ ಹಾಕಿದೆ.ಸಾರಿಗೆ ಸಚಿವರಿಗೆ ಕಾರ್ಮಿಕರ ಬಗ್ಗೆ ಕಾಳಜಿ-ಸಹಾನುಭೂತಿ ಇದ್ದರೆ ತತ್ ಕ್ಷಣಕ್ಕೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ.ಹೇಳೋರು..ಕೇಳೋರು ಇಲ್ಲದೆ ಕೊಬ್ಬಿ ಹೋಗಿರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಿತ್ತು.ಇದಾಗದೇ ಹೋದ್ರೆ ಪ್ರಸನ್ನ ಕುಟುಂಬದಂತೆ ಇನ್ನೂ ಸಾಕಷ್ಟು ಕುಟುಂಬಗಳು ಆತ್ಮಹತ್ಯೆ ಹಾದಿ ಹಿಡಿಬೋದು..ಡೌಟೇ ಇಲ್ಲ..ಹಾಗೆ ಆಗೊಕ್ಕೆ ಮುನ್ನ ಶ್ರೀರಾಮುಲು ಎಚ್ಚೆತ್ತುಕೊಳ್ಳುತ್ತಾರಾ..ಕಾದು ನೋಡಬೇಕಿದೆ.
“ಯಾರಿಗೆ ಯಾರೂ ಇಲ್ಲ ಎಂಬ ಸತ್ಯ ತಿಳಿದು ಆತ್ಮಹತ್ಯೆಗೆ ಶರಣಾದೆವು..|
ಮಹಾನಗರ ನಾವು ನಗುವಾಗ ಊರೆಲ್ಲ ನೆಂಟರು ನಾವು ಅಳುವಾಗ ಯಾರೂ ಇಲ್ಲ ಎಂಬ ಸತ್ಯ ಅರಿವಾಯಿತು ಇಷ್ಟು ಜನ ಬದುಕಿದ್ದು ಈಗ ಈ ನಿರ್ಧಾರಕ್ಕೆ ಕಾರಣ ಅವರನ್ನು ನನ್ನ ಪತಿ ಪ್ರಶಾಂತ್ ಅವರನ್ನು ಮರೆಯಲು ಸಾಧ್ಯವಾಗದ ನಾನು ಎದ್ದು ಸತ್ತ ಹಾಗೆ ಏಕೆಂದರೆ ನಾವು ಮಾಡಿದ ಸಾಲವನ್ನು ತೀರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಅವರು ಎಲ್ಲವನ್ನು ಬಿಟ್ಟು ಹೋಗಿದ್ದಾರೆ. ಆದರೆ ಅವನನ್ನು ನಂಬಿ ಸಾಲ ಕೊಟ್ಟವರಿಗೆ ಮೋಸ ಮಾಡಬಾರದು ಎಂದು ಗಟ್ಟಿ ಜೀವ ಮಾಡಿ ಬದುಕಿದ್ದೆ. ಅದರ ಜತೆಗೆ ನನಗೆ ಇನ್ನೊಂದು ಜವಾಬ್ದಾರಿಯಿತ್ತು. ಅದು ನಮ್ಮ ಮಕ್ಕಳು ಅವರ ಸತ್ತುಹೋದರು. ಅವರಿಲ್ಲದ ಅನಾಥ ಪ್ರಜ್ಞೆ ನಮಗೆ ಮುಂದೆ ಯಾರು ಹೇಗೆ ಜೀವನ ನಮ್ಮವರು ಎಂದು ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರಕಲಿಲ್ಲ ಅವರು ಕೊಡುತಿದ್ದ ಪ್ರೀತಿಯನ್ನೇ ಕಾಣದ ಯನ್ನಾಗಲೀ ರವಿ ಕಾಳಿನಷ್ಟು ಪ್ರೀತಿ ನನಗೂನನ್ನ ಮಕ್ಕಳಿಗೂ ಯಾರಂದ್ರು ದೊರಕಲಿಲ್ಲ ಇಂಥ ಕೆಟ್ಟ ಪ್ರಪಂಚದಲ್ಲಿ ಬದುಕೋದು ಹೇಗೆ ಎಂಬ ಪ್ರಶ್ನೆಗೆ ಸಾವು.ಉತ್ತರವಾಗುತ್ತಿತ್ತು.
ನನಗೆ ಸರಿಯಾದ ಸಹಾಯ ಯಾರಿಂದಳು ದೊರಕಲಿಲ್ಲ. ನಮ್ಮವರಿಗಿಂತ ಬೇರೆಯವರು ತೋರಿಸುವ ಕಾಳಜಿ ನಮ್ಮವರಿಂದಲೇ ಸಿಗಲಿಲ್ಲ. ಒಳಗೊಳಗೆ ಮೋಸ ಮಾಡಿದರು ಎಲ್ಲವನ್ನೂ ಮಾಡುತ್ತೇನೆ ಎಂದು ಯಾವುದನ್ನು ಸರಿಯಾಗಿ ಮಾಡಿ ಕೊಡಲಿಲ್ಲ. ಅಂದರೆ ನನ್ನ ಗಂಡನಿಗೆ ಬರಬೇಕಾದ ಹಣಕ್ಕೆ ಸರಿಯಾದ ದಾಖಲೆಗಳನ್ನು ಕೊಡದೆ ನನಗೆ ಬರಬೇಕಾದ ಹಣ ಸರಿಯಾದ ಸಮಯಕ್ಕೆ ಬರಲಿಲ್ಲ ಯಾವುದಕ್ಕೂ ಸರಿಯಾದ ಸಹಾಯಕರಿಲ್ಲ ನಮ್ಮವರು ಇದ್ದು ಬೇರೆಯವರ ಸಹಾಯ ಕೇಳು ನನ್ನ ಮನಸ್ಸು ಒಪ್ಪುತ್ತಿಲ್ಲ ಅವರಿಗೆ ಉಪಕಾರ ವಾದರೆ ಮಾತ್ರ ಕೆಲಸ ಮಾಡುತ್ತಾರೆ ಇಲ್ಲವಾದರೆ ಚುಚ್ಚು ಮಾತುಗಳನ್ನಾಡಿ ನಡುನೀರಲ್ಲಿ ಕೈ ಬಿಟ್ಟು ಹೋಗುತ್ತಾರೆ.