Tollywood Most Happening Couple Officially separated: Samantha-Nagachaitanya diviorced :ಟಾಲಿವುಡ್ ನ “ದೊಡ್ಮನೆ” ಅಕ್ಕಿನೇನಿ ಕುಟುಂಬಕ್ಕೆ ಡೈವೋರ್ಸ್ ಅಘಾತ-ನಾಗಚೈತನ್ಯ ರಿಂದ ದೂರವಾದ ಸಮಂತಾ ಅಕ್ಕಿನೇನಿ

ಫ್ಯಾಮಿಲಿ ಮ್ಯಾನ್ ನ ಮನೋಜ್ ಬಾಜಪೇಯಿ ಜತೆಗಿನ ಆಪ್ತ ಸನ್ನಿವೇಶಗಳೇ ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಿಸ್ತಾ..?!

0

ಟಾಲಿವುಡ್ ನ ಮೋಸ್ಟ್ ಹ್ಯಾಪನಿಂಗ್ ಕಪಲ್ಸ್ ಎಂದೇ ಕರೆಯಿಸಿಕೊಂಡಿದ್ದ ನಾಗಚೈತನ್ಯ ಹಾಗೂ ಸಮಂತಾ ದಂಪತಿಗಳ ನಡುವಿನ ಬಿರುಕು ಅಧೀಕೃತವಾಗಿ ಡೈವೋರ್ಸ್ ಆಗುವ ಮೂಲಕ ಜಗಜ್ಜಾಹೀರಾಗಿದೆ.

ಅನೇಕ ದಿನಗಳಿಂದಲೂ ದಂಪತಿಗಳು ಬೇರೆಯಾಗಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದ್ದವು.ಆದರೆ ನಾವಿಬ್ಬರು ಬೇರೆಯಾಗುವ ಮಾತೇ ಇಲ್ಲ ಎಂದು ಸಮಂತಾ ಹೇಳಿದ್ದರು.ಆದ್ರೆ ಕೆಲ ಕ್ಷಣಗಳ ಮುನ್ನ ತಾವಿಬ್ಬರು ಬೇರೆಯಾಗುತ್ತಿರುವ ಸಂಗತಿಯನ್ನು ಅಧೀಕೃತಗೊಳಿಸುವ ಮೂಲಕ ಅಪಾರ ಪ್ರಮಾಣದ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ದಂಪತಿ ನಾಗಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ನಡುವೆ ಅನೇಕ ದಿನಗಳಿಂದಲೂ ವೈಯುಕ್ತಿಕ ಹಾಗೂ ವೃತ್ತಿಪರ ಕಾರಣಕ್ಕೆ ಬಿನ್ನಾಭಿಪ್ರಾಯ ಮೂಡಿತ್ತು.ಆದ್ರೆ ತನ್ನ ಮಗ ಹಾಗು ಸೊಸೆ ನಡುವೆ ಮೂಡಿದ್ದ ಬಿರುಕನ್ನು ಸರಿಪಡಿಸೊಕ್ಕೆ ನಾಗಾರ್ಜುಜ್-ಅಮಲಾ ದಂಪತಿ ಸಾಕಷ್ಟು ಪ್ರಯತ್ನ ಮಾಡಿದ್ದರು.

ಟಾಲಿವುಡ್ ನ ದೊಡ್ಮನೆ ಎಂದೇ ಕರೆಯಿಸಿಕೊಳ್ಳುವ ಅಕ್ಕಿನೇನಿ ಕುಟುಂಬಕ್ಕೆ ನಿಜಕ್ಕೂ ಅತ್ಯಂತ ಮುಜುಗರ ತರಿಸುವ ಘಟನೆ ಇಂದು ಅಧಿಕೃತವಾಗಿ ನಡೆದೋಗಿದೆ.

ಪ್ಯಾಮಿಲಿ ಮ್ಯಾನ್ ಚಿತ್ರದಲ್ಲಿ ಸಮಂತಾ ತನ್ನ ಸಹನಟ ಮನೋಜ್ ಭಾಜ್ ಪಾಯ್ ನಡುವೆ ಸಾಕಷ್ಟು ಆಪ್ತವಾಗಿ ನಟಿಸಿದ್ದರು.ಆ ಚಿತ್ರದಲ್ಲಿನ ಕೆಲ ದೃಶ್ಯಗಳು ಅಕ್ಕಿನೇನಿ ಕುಟುಂಬಕ್ಕೆ ಸಾಕಷ್ಟು ಮುಜುಗರ ತರಿಸಿತ್ತು.ನಾಗಚೈತನ್ಯ ಕೂಡ  ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು.ಅದೇ ಅವರಿಬ್ಬರ ನಡುವೆ ಬಿರುಕು ಮೂಡೊಕ್ಕೆ ಕಾರಣವಾಗಿತ್ತು.

ಅಂದ್ಹಾಗೆ ಅವರಿಬ್ಬರ ನಡುವಿನ ಡೈವೋರ್ಸ್ ಅತ್ಯಂತ ದುಬಾರಿಯ ವಿಚ್ಛೇದನ ಎನ್ನಲಾಗುತ್ತಿದೆ.ಕೆಲವು ಮೂಲಗಳ ಪ್ರಕಾರ ವಿಚ್ಚೇದನ ನೀಡೊಕ್ಕೆ 200 ಕೋಟಿ ನೀಡಲಾಗಿದೆ ಎನ್ನಲಾಗ್ತಿದೆ.ಕೆಲವು ಮೂಲಗಳ ಪ್ರಕಾರ 50 ಕೋಟಿ ನೀಡಲಾಗಿದೆ.

2017 ಅಕ್ಟೋಬರ್ 08 ರಂದು  ನಾಗಚೈತನ್ಯ-ಸಮಂತಾ ಮದುವೆಯಾಗಿತ್ತು.ಅಂದ್ಹಾಗೆ ಇವರಿಬ್ಬರ ದಾಂಪತ್ಯ ಕನಿಷ್ಠ 4 ವರ್ಷವೂ ಬಾಳಿ ಬದುಕಲಿಲ್ಲ ಎನ್ನುವುದೇ ದುರಂತ

Spread the love
Leave A Reply

Your email address will not be published.

Flash News