Minister Sriramulu Missing:ಇಲ್ಲಿ ಕಾರ್ಮಿಕನ ಕುಟುಂಬ ನಿರ್ನಾಮವಾದ್ರೆ..ವಿಜಯನಗರ ಜಿಲ್ಲೆ ಉದ್ಘಾಟನೆಯಲ್ಲಿ ಶ್ರೀರಾಮುಲು ಸಾಹೇಬ್ರು ಫುಲ್ ಬ್ಯುಸಿ..?!

ಮಾತೆತ್ತಿದ್ರೆ ಸಾರಿಗೆ ಕಾರ್ಮಿಕರೆಲ್ಲಾ ಕುಟುಂಬದ ಸದಸ್ಯರೆನ್ತಿರಿ..ಇಲ್ಲಿ ಕಾರ್ಮಿಕರ ಕುಟುಂಬ ನಿರ್ನಾಮವಾದ್ರೆ ಸಂಬಂಧವೇ ಇಲ್ಲದಂತಿದ್ದೀರಲ್ಲ..?!

0

ಬೆಂಗಳೂರು:ಸಾರಿಗೆ ಸಚಿವ ಶ್ರೀರಾಮುಲು ಅವ್ರೇ..ಏನಿದು ಅನ್ಯಾಯ…? ನಿಮ್ ಇಲಾಖೆಯಲ್ಲಿ ನಡೀತಿರೋ ಅನ್ಯಾಯ ನಿಮಗೆ ಕಾಣ್ತಿಲ್ವೇ..? ಅಧಿಕಾರಿಗಳ ಜೀವಕ್ಕಷ್ಟೇ ಬೆಲೆನಾ..? ಕಾರ್ಮಿಕರ ಜೀವಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ವೇ..? ಎಷ್ಟ್ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಗೊತ್ತಾ..? ಅವರ ಆತ್ಮಹತ್ಯೆಗಳಿಗೆ ಕಾರಣ ಗೊತ್ತಿದೆಯಾ..?ಕೊರೊನಾಕ್ಕೆ ಬಲಿಯಾದ ಕಾರ್ಮಿಕರೆಷ್ಟೆನ್ನುವ ಮಾಹಿತಿಯಾದ್ರೂ ಇದೆಯಾ..? ಅವರಲ್ಲಿ ಎಷ್ಟು ಕಾರ್ಮಿಕರ ಕುಟುಂಬಕ್ಕೆ ಪರಿಹಾರ ಸಿಕ್ಕಿದೆ..? ಕೊರೊನಾಕ್ಕೆ ಬಲಿಯಾದ ಮೊದಲ ಕಾರ್ಮಿಕನಿಗೇನೆ  ಪರಿಹಾರ ಕೊಡಲಿಕ್ಕಾಗಿಲ್ಲ ಇನ್ನುಳಿದವರಿಗೆ .ಪರಿಹಾರ ಕೊಡಿಸ್ಲಿಕ್ಕೇಕೆ ನಿಮ್ ಅಧಿಕಾರಿಗಳಿಗೆ ಸಾಧ್ಯನಾ..? ಹೀಗೊಂದಿಷ್ಟು ಪ್ರಶ್ನೆಗಳನ್ನು ಪುಂಖಾನುಪುಂಖವಾಗಿ ಕೇಳುವಂತೆ ಮಾಡಿದೆ ಕಾರ್ಮಿಕ ಪ್ರಶಾಂತ್ ರ ಇಡೀ ಕುಟುಂಬದ ಸಾಮೂಹಿಕ ಆತ್ಮಹತ್ಯೆ…

ಹೌದು.. ಸಾರಿಗೆ ಸಚಿವ ಶ್ರಿರಾಮಲು ಅವರಿಗೆ ನಿಜಕ್ಕೂ ಸಚಿವ ಸ್ಥಾನದಲ್ಲಿ ಮುಂದುವರೆಯೋ ನೈತಿಕತೆ ಇದೆಯಾ..? ಕೊರೊನಾದಿಂದ ಸಾವನ್ನಪ್ಪಿದ ಸಾರಿಗೆ ಕಾರ್ಮಿಕ  ಪ್ರಶಾಂತ್ ನ  ಕುಟುಂಬ  ಸಾಮೂಹಿಕ ಆತ್ಮಹತ್ಯೆ ಗೆ ಶರಣಾಗಿದ್ರೂ ಆ ಬಗ್ಗೆ ರಿಯಾಕ್ಟ್ ಮಾಡುವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸವನ್ನೇ ಮಾಡಿಲ್ಲ.ಇದು ಕಾರ್ಮಿಕ ಸ್ನೇಹಿ ಸಚಿವ ಎಂದು ಹಾಡಿಹೊಗಳಿದ್ದ ಸಾರಿಗೆ ಕಾರ್ಮಿಕರೇ ಹಿಡಿಶಾಪ ಹಾಕುವಂತೆ ಮಾಡಿದೆ.

ಕೊರೊನಾದಿಂದ ಕೊನೆಯುಸಿರೆಳೆದಿದ್ದ ಪ್ರಶಾಂತ್ ನ ಮಡದಿ ಹಾಗೂ ಇಬ್ಬರು ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡು ಅನೇಕ ಗಂಟೆಗಳೇ ಆಗೋದ್ರು ಸಚಿವ ಶ್ರೀರಾಮುಲು ಮಾತ್ರ ಪತ್ತೆಯಿಲ್ಲ..ಅವರೆಲ್ಲಿ ಇದ್ದಾರೆ ಎನ್ನುವುದು ಅವರ ಆಪ್ತರಿಗೇನೆ ಗೊತ್ತಿಲ್ಲ..ಸಾರಿಗೆ ಸಚಿವರಾಗಿ ಶ್ರಿರಾಮುಲು ನಡೆದುಕೊಳ್ಳುವ ರೀತಿನಾ ಇದು ಎಂದು ಕಾರ್ಮಿಕರು ಬೈದಾಡಿಕೊಳ್ಳೊಕ್ಕೆ ಕಾರಣವಾಗಿದೆ.

ಘಟನೆ ನಡೆದು ಗಂಟೆಗಳಾದ್ರೂ ಕಾರ್ಮಿಕನ ಕುಟುಂಬಕ್ಕೆ ಸೌಜನ್ಯಕ್ಕೂ ಸಾಂತ್ವನ ಹೇಳದ ಶ್ರೀರಾಮುಲು ಅವರ ಅಮಾನವೀಯ ಧೋರಣೆ ಸಾರ್ವಜನಿಕವಾಗಿಯೂ ಪ್ರಶ್ನೆಗೀಡಾಗುತ್ತಿದೆ. ದುರಂತ ನಡೆದಿರುವುದು ನಿಮ್ ಇಲಾಖೆಯಲ್ಲಿ ಅಲ್ಲವೇ..? ಮಾತೆತ್ತಿದರೆ ಸಾರಿಗೆ ನಿಗಮಗಳೆನ್ನುವುದು ನನ್ ಕುಟುಂಬ ಎನ್ತೀರಾ..? ಕಾರ್ಮಿಕರು ನಮ್ ಕುಟುಂಬದವ್ರು ಎಂದು ಹೇಳ್ತಿರಾ.. ಆದ್ರೆ ಕುಟುಂಬದದಲ್ಲಿ ದುರಂತಗಳಾದ್ರೆ ಸಂಬಂಧವೇ ಇಲ್ಲದಂತೆ ಇದ್ದರೆ ಹೇಗೆ..? ಎಂದು ಪ್ರಶ್ನಿಸಿದ್ದಾರೆ.

ಅದೇನೇ ಆಗಲಿ ಕುಟುಂಬದ ಯಜಮಾನನಾಗಿ ನಿಂತು ಕುಟುಂಬವನ್ನೇ ಕಳೆದುಕೊಂಡವರಿಗೆ ಸಾಂತ್ವನ ಹೇಳಬೇಕಿದ್ದ ಶ್ರಿರಾಮುಲು ಅವರಂಥವರೇ ಇಷ್ಟೊಂದು  ಸಂವೇದನಾರಹಿತವಾದ್ರೆ ಹೇಗೆ,…

Spread the love
Leave A Reply

Your email address will not be published.

Flash News