Transport Emplyoees Angry over Leader’s appeal For Money:”3 ಸಾವಿರ ಕೊಡಿ…”ಕೂಟದ ಅಧ್ಯಕ್ಷ ಚಂದ್ರು ಮನವಿಗೆ, ಸಾರಿಗೆ ಕಾರ್ಮಿಕರು ಕೆಂಡಾಮಂಡಲ….

ದುಡಿಮೆಯಿಲ್ಲದೆ ಬಸವಳಿದಿರೋ ಸಾರಿಗೆ ಕಾರ್ಮಿಕರ ಮುಂದೆ ಕೂಟದ ಅಧ್ಯಕ್ಷ ಚಂದ್ರು ಅವರಿಂದ  ಇದೆಂಥಾ ಡಿಮ್ಯಾಂಡ್.-ಮುಷ್ಕರ ವೇಳೆ ಸಂಗ್ರಹಿಸಿದ ಲಕ್ಷಾಂತರ ಹಣಕ್ಕೆ ಮೊದಲು ಲೆಕ್ಕ ಕೊಟ್ಟು…ನಂತರ ಸಹಾಯ ಕೇಳುವಂತೆ ಕಾರ್ಮಿಕರ ಒತ್ತಾಯ..

0

ಬೆಂಗಳೂರು:ಮುಷ್ಕರದಲ್ಲಿ ಪಾಲ್ಗೊಂಡ ತಪ್ಪಿಗೆ ಸಾರಿಗೆ ಕಾರ್ಮಿಕರ ಬದುಕುಗಳು ಬೀದಿಗೆ ಬಿದ್ದಿವೆ..ಸರ್ಕಾರಿ ನೌಕರರ ಮಾನ್ಯತೆ ಕೊಡಿಸೋದಾಗಿ ಪುಸಲಾಯಿಸಿ, ಹುಚ್ಚೆಬ್ಬಿಸಿ,ಪ್ರಚೋದಿಸಿ ಮುಷ್ಕರದ ಮಾಡಿಸೊಕ್ಕೆ ಕಾರಣವಾದ ಕಾರ್ಮಿಕ ಮುಖಂಡರೇ ಕೈಲಾಗದ ಸ್ಥಿತಿಯಲ್ಲಿದ್ದಾರೆ. ಕೆಲಸವಿಲ್ಲದೆ ಬದುಕು ನಡೆಸೊಕ್ಕೆ ಸಾಧ್ಯವಾಗದೆ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.

ತುತ್ತು ಚೀಲ ತುಂಬಿಸಿಕೊಳ್ಳೊಕ್ಕೆ ಕೂಲಿ-ಕೃಷಿ-ಬೀದಿಬದಿ ವ್ಯಾಪಾರ ನಡೆಸುತ್ತಿದ್ದಾರೆ.ಅಂದೇ ದುಡಿದು ತಿನ್ನಬೇಕಾದ ಸ್ಥಿತಿಯಲ್ಲಿರುವ ಕಾರ್ಮಿಕರು ನಖಶಿಖಾಂತ ಉರಿದು ಹೋಗುವಂತೆ ಮಾಡುವ ವೀಡಿಯೋ ಸಾರಿಗೆ ಕಾರ್ಮಿಕರ ಕೂಟದ ರಾಜ್ಯಾಧ್ಯಕ್ಷ ಚಂದ್ರು ಅವರ ಮೊಬೈಲ್ ಮೂಲಕ ರವಾನೆಯಾಗಿ ಎಲ್ಲೆಡೆ ಹರಿದಾಡುತ್ತಿದೆ.ತಿರ್ಕೊಂಡು ತಿನ್ನೋರನ್ನು ಅಟ್ಟಾಡಿಸಿಕೊಂಡು ಹೊಡೆದ್ರಂತೆ ಎನ್ನುವಂತಾಗಿದೆ ಸಾರಿಗೆ ಕಾರ್ಮಿಕರ ಮನಸ್ಥಿತಿ.

ಅಂದ್ಹಾಗೆ ಸಾರಿಗೆ ಕಾರ್ಮಿಕರು ತಮ್ಮ ಜೀವನದಲ್ಲಿ ಮರೆಯಲಾರದಂಥ ವ್ಯಕ್ತಿಯಾಗಿ ಇತ್ತೀಚಿನ ದಿನಗಳಲ್ಲಿ ಕಂಡುಕೊಂಡ ವ್ಯಕ್ತಿತ್ವಗಳಲ್ಲಿ ಚಂದ್ರು ಅಲಿಯಾಸ್ ಕೂಟದ ಚಂದ್ರಶೇಖರ್ ಮುಖ್ಯರಂತೆ.ಸುಮ್ಮನಿದ್ದ ತಮ್ಮನ್ನು ಸರ್ಕಾರಿ ನೌಕರರನ್ನಾಗಿಸುತ್ತೇನೆಂಬ ಹುಚ್ಚು ಎಬ್ಬಿಸಿ,ಅನ್ನ ಕೊಡುತ್ತಿದ್ದ ಸಂಸ್ಥೆ ವಿರುದ್ಧವೆ ತಿರುಗಿಬೀಳುವಂತೆ ಮಾಡಿ, ದುಡಿದುಕೊಂಡು ತಿನ್ನೊಕ್ಕೆ ಇದ್ದ ನೌಕರಿಗೆ ಕಲ್ಲಾಕಿದ್ದೇ ಈ ಚಂದ್ರು ಎನ್ನುವ ಮಾತಿದೆ..

ಬಹುಷಃ ಚಂದ್ರುಗೆ  ರೈತಪರ ಹೋರಾಟಗಳನ್ನು ದಿಕ್ಕುತಪ್ಪಿಸಿ ರೈತಾಪಿ ಅವರ ತಲೆ ತೋರಿಸಿ ತಮ್ಮ ವ್ಯವಹಾರ ಮಾಡಿಕೊಳ್ಳುತ್ತಾರೆನ್ನುವ ಆರೋಪ ಇರುವ ಕೋಡಿ ಹಳ್ಳಿ ಚಂದ್ರಶೇಖರ್ ಸಾಥ್ ಕೊಡದೆ ಹೋಗಿದಿದ್ದರೆ ಇವತ್ತು ನಾವೆಲ್ಲಾ ಹಾಯಾಗಿ ಇರುತ್ತಿದ್ದೆವು..ನಮ್ಮ ಲೈಫನ್ನು ಹಾಳ್ ಮಾಡಿಬಿಟ್ಟ ಎಂದು ಚಂದ್ರು ಅವರನ್ನು ಶಪಿಸುವ ಸಾವಿರಾರು ಕಾರ್ಮಿಕರಿದ್ದಾರೆ.

ಈಗ ಚಂದ್ರು ಮತ್ತೆ ಮುನ್ನಲೆಗೆ ಬಂದಿರೋದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವೀಡಿಯೋದಿಂದ. ವಜಾ-ಅಮಾನತ್ತುಗೊಂಡಿರುವ ಸಾರಿಗೆ ಕಾರ್ಮಿಕರನ್ನು ಕಾನೂನು ಹೋರಾಟಕ್ಕೆ ಅಣಗೊಳಿಸುವ ಮಾತನ್ನಾಡಿದ್ದಾರೆ ಚಂದ್ರು ಆ ವೀಡಿಯೋದಲ್ಲಿ.ಸರ್ಕಾರ ವಜಾ-ಅಮಾನತುಗೊಂಡ ಕಾರ್ಮಿಕರನ್ನು ಕೆಲಸಕ್ಕೆ ಮರುನಿಯೋಜಿಸಿಕೊಳ್ಳುವ ಮಾತನ್ನಾಡಿದೆ.ಸಾರಿಗೆ ಸಚಿವ ಶ್ರೀರಾಮುಲು ಈ ಬಗ್ಗೆ ಘೋಷಣೆಯನ್ನೂ ಮಾಡಿದ್ದಾರೆ.

ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡ್ರೆ ವೆಲ್ ಅಂಡ್ ಫೈನ್..ಒಂದ್ವೇಳೆ ಮಾತು ತಪ್ಪಿದ್ರೆ ಕಾನೂನಾತ್ಮಕ ಹೋರಾಟ ಅನಿವಾರ್ಯವಾಗ್ತದೆ ..ಹಾಗಾಗಿ ಈ ಅಕ್ಟೋಬರ್ ಮೊದಲ ವಾರದೊಳಗೆ ಕೋರ್ಟ್ ಗೆ ಕೇಸ್ ಹಾಕಬೇಕಿದೆ..ಅದಕ್ಕೆ ಐವರು ವಕೀಲರನ್ನು ನಿಯೋಜಿಸಲಾಗ್ತಿದೆ..ಕೋರ್ಟ್-ಲಾಯರ್ ಖರ್ಚು..ವಗೈರೆಗೆ ಹೆಚ್ಚು ಹಣ ಬೇಕಾಗ್ತದೆ..ಹಾಗಾಗಿ ಸಾರಿಗೆ ಕಾರ್ಮಿಕರು ತಲಾ 3,000 ರೂ ನೀಡಬೇಕೆನ್ನುವುದು ಚಂದ್ರು ವೀಡಿಯೋದ ಸಾರಾಂಶ.

ಮೇಲ್ನೋಟಕ್ಕೆ ವೀಡಿಯೋದಲ್ಲಿ ನೊಂದ ಕಾರ್ಮಿಕರ ಹಿತಾಸಕ್ತಿ ಇದೆ ಎಂದು ಭಾಸವಾದ್ರೂ ಕಾರ್ಮಿಕರು ಮಾತ್ರ ಬಹುತೇಕ ವೀಡಿಯೋಕ್ಕೆ ಸಿಕ್ಕಾಪಟ್ಟೆ ಗರಂ ಆಗಿಯೇ ರಿಯಾಕ್ಟ್ ಮಾಡಿದ್ದಾರೆ.ಸರ್ಕಾರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ ಮೇಲೆ ಮತ್ತೇಕೆ ಕೋರ್ಟ್ ಕಲಾಪ ಎಂದು ಕೆಲವರು ಹೇಳಿದ್ದರೆ,ಇದು ಕಾರ್ಮಿಕ ನ್ಯಾಯಾಲಯದ ಪರಿಧಿಗೆ ಬರುವ ವಿಚಾರ,ಈ ಕಾಮನ್ ಸೆನ್ಸೂ ಚಂದ್ರುಗೆ ಇಲ್ಲವೇ..ಹೀಗಿರುವಾಗ ಲಾಯರ್ ಗಳನ್ನು ನಿಯೋಜಿಸುವುದರಲ್ಲಿ ಅರ್ಥವೇನಿದೆ.. ಹೈಕೋರ್ಟ್-ಸುಪ್ರಿಂ ಕೋರ್ಟ್ ಎಂದ್ಹೇಳಿ ದುಡ್ಡು ಹೊಡೆಯುವ ಸ್ಕೀಂ ಅಷ್ಟೇ ಇದು ಎಂದು ಇನ್ನುಳಿದವರು ಕಾಲೆಳೆದಿದ್ದಾರೆ.

ಸಾರಿಗೆ ಕಾರ್ಮಿಕರು ಕೆಲಸ ಕಳೆದುಕೊಂಡ ನೋವಿನಲ್ಲಿ…., ನೆಮ್ಮದಿಯ ಬದುಕನ್ನು ಕೈಯಾರೆ ಹಾಳಿ ಮಾಡಿಕೊಂಡ ಹತಾಷೆಯಲ್ಲಿ…..,ಚಂದ್ರು-ಕೋಡಿಹಳ್ಳಿ ಚಂದ್ರಶೇಖರ್ ಅವರಂಥವರ ಮಾತು ಕೇಳಿ ಹಾಳಾದೆವೆಲ್ಲಾ ಎನ್ನುವ ಆವೇಶದಲ್ಲಿ…… ಹೀಗೆ ಮಾತನಾಡಿರುವುದರಲ್ಲಿ ತಪ್ಪೇ ಇಲ್ಲ. ದುಡಿಮೆಯೇ ಇಲ್ಲದೆ ತಿಂಗಳ ಸಂಬಳವನ್ನೂ ನೋಡಲಿಕ್ಕಾಗದೆ ಕಷ್ಟದಲ್ಲಿ ದಿನ ದೂಡುವಂಥ ಸನ್ನಿವೇಶದಲ್ಲಿ ಪ್ರತಿಯೋರ್ವರು 3,000 ರೂ ಕೊಡಿ ಎಂದು ಕೇಳಿದ್ರೆ ಎಂಥವ್ರ ಪಿತ್ತ ನೆತ್ತಿಗೇರುವುದರಲ್ಲಿ ಸಂಶಯವೇ ಇಲ್ಲ..ಹಾಗಾಗಿ ಚಂದ್ರು ವೀಡಿಯೋ ನೋಡಿ ಕಾರ್ಮಿಕರು ಕೆಂಡಾಮಂಡಲವಾಗಿದ್ರೂ ಅದರಲ್ಲಿ ಆಶ್ಚರ್ಯಪಡಬೇಕಿಲ್ಲ.

ಸಾರಿಗೆ ಕಾರ್ಮಿಕರ ಪರಿಸ್ತಿತಿ ಹೇಗಾಗಿದೆ ಎನ್ನುವುದನ್ನು ಚಂದ್ರು ಅರ್ಥ ಮಾಡಿಕೊಂಡಿದಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ..ಮುಷ್ಕರದ ಸನ್ನಿವೇಶ ಬೇರೆಯಾಗಿತ್ತು…ಆಗ ಕಾರ್ಮಿಕರು ಈತನ ಮೇಲೆ ನಂಬಿಕೆ ಇಟ್ಟು ಲಕ್ಷಾಂತರ ಹಣ ಸುರಿದ್ರು..ಅದರಿಂದ ಸಂಗ್ರಹವಾಗಿದ್ದೇ ಅದೆಷ್ಟೋ ಲಕ್ಷಗಳು(ಇದು..ನಮ್ಮ ಆರೋಪವಲ್ಲ…ಕೂಟದ ಪದಾಧಿಕಾರಿಗಳ ನಡುವೆ ಸೃಷ್ಟಿಯಾದ  ಸಂಘರ್ಷದ ವೇಳೆ ಗಲಾಟೆ ಮಾಡಿಕೊಂಡವರೇ ಬಾಯಿಬಿಟ್ಟ ವಿಚಾರ..)

ಹಾಗೆ ಬಂದ ಆ ಹಣವನ್ನು ಕೂಟದ ಪದಾಧಿಕಾರಿಗಳು ಏನ್ ಮಾಡಿದ್ರು..ಹೋರಾಟಕ್ಕೆ ಅಬ್ಬಬ್ಬಾ ಎಂದ್ರೆ ಎಷ್ಟ್ ಖರ್ಚು ಮಾಡಿರಬಹುದು.. ಎಲ್ಲಾ ಸೇರಿ 25 ಲಕ್ಷನಾ..ಉಳಿದ ಮತ್ತಷ್ಟು ಲಕ್ಷಗಳು ಎಲ್ಲಿ ಹೋದವು..?ಅದನ್ನು ಕೂಟದ ಅಕೌಂಟ್ ನಲ್ಲಿ ಇಟ್ಟಿದಿದ್ದರೆ..ಇವತ್ತು ಕಾನೂನಾತ್ಮಕ ಹೋರಾಟಕ್ಕೆ ಸಾರಿಗೆ ಕಾರ್ಮಿಕರ ಬಳಿ ಹಣಕ್ಕಾಗಿ ಸಹಾಯ ಕೇಳಬೇಕಾಗಿ ಬರುತ್ತಿತ್ತಾ..ಖಂಡಿತಾ ಇಲ್ಲ..ಕೂಟಕ್ಕೆ ಹರಿದುಬಂದ ಹಣ ಎಷ್ಟು..? ಖರ್ಚಾಗಿದ್ದು ಎಷ್ಟು..ಯಾವುದಕ್ಕೆಲ್ಲಾ ಎಷ್ಟೆಷ್ಟು..ಉಳಿದಿರುವುದು ಎಷ್ಟು..? ಎನ್ನುವ ಲೆಕ್ಕವನ್ನೇ ಸಾರಿಗೆ ಕಾರ್ಮಿಕರ ಮುಂದಿಟ್ಟಿಲ್ಲ..?!

ಇದು ಸಾರಿಗೆ ಕಾರ್ಮಿಕರು ಚಂದ್ರು ಮೇಲೆ ಇಟ್ಟ ನಂಬಿಕೆಯನ್ನೇ ಹಾಳು ಮಾಡಿದೆ..ಚಂದ್ರು ಹಾಗೂ ಕೂಟದ ತಂಡ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಭಾವನೆ ಕಾರ್ಮಿಕರು ಹಾಗು ಕುಟುಂಬಗಳಲ್ಲಿ ಬಂದು ಬಿಟ್ಟಿದೆ..ಹಾಗಾಗಿನೇ ಚಂದ್ರು ಮತ್ತೊಮ್ಮೆ ಸಹಾಯಕ್ಕೆ ಅಂಗಲಾಚಿರುವುದಕ್ಕೆ ಕೆಂಡಾಮಂಡಲವಾಗಿದ್ದಾರೆ ಎಂದು ವಸ್ತುಸ್ತಿತಿಯನ್ನು ಸಾರಿಗೆ ಮುಖಂಡರು ಅವಲೋಕಿಸಿದ್ದಾರೆ.

ಸಾರಿಗೆ ಮುಷ್ಕರದ ವೇಳೆ ಸಂಗ್ರಹವಾದ ಹಣದಲ್ಲಿ ಅವ್ಯವಹಾರವಾಗಿದೆ ಎಂದು ಕಾರ್ಮಿಕರು ವರಾತ ತೆಗುದ್ರೆ ಸಾಕು,ಕೆಂಡಾಮಂಡಲವಾಗುವ ಚಂದ್ರು,ಕಾಲ ಬಂದಾಗ ಲೆಕ್ಕ ಕೊಡುತ್ತೇನೆ.. ಹಾದಿಯ ಲ್ಲಿ,ಬೀದಿಯಲ್ಲಿ ಹೋಗುವವರಿಗೆಲ್ಲಾ ಲೆಕ್ಕ ಕೊಡಬೇಕಾಗಿಲ್ಲ ಎಂದು ಹೇಳುತ್ತಲೇ ಬಂದಿರುವುದು ಚಂದ್ರು ಸಾರಿಗೆ ಕಾರ್ಮಿಕರ ವಲಯದಲ್ಲಿ ನಂಬಿಕೆ-ವಿಶ್ವಾಸ ಕಳೆದುಕೊಳ್ಳೊಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ.. ಹಾಗಾಗಿನೇ ಹಿಂದೆಲ್ಲಾ ಕೇಳಿದಾಕ್ಷಣ ಕಷ್ಟವಿದ್ದರೂ ಅಲ್ಲಿ..ಇಲ್ಲಿ ಸಾಲ ಮಾಡಿ ನೀಯತ್ತಾಗಿ,ಪ್ರಶ್ನೆ ಮಾಡದ ಹಣ ನೀಡುತ್ತಿದ್ದ ಸಾರಿಗೆ ಕಾರ್ಮಿಕರು 3,000ಕ್ಕೆ ಬೇಡಿಕೆ ಇಟ್ಟು ಮಾಡಿರುವ ವೀಡಿಯೋಕ್ಕೆ ಕೆಂಡಾಮಂಡಲವಾಗಿದ್ದಾರೆ..ಇದನ್ನು ಚಂದ್ರು ಕೂಡ  ಅರ್ಥ ಮಾಡಿಕೊಳ್ಳಬೇಕೇನೋ..

ಸಾರಿಗೆ ಕೂಟವನ್ನು ಬೆಂಬಲಿಸಿದ್ದ..ಇಂದಿಗೂ ಬೆಂಬಲಿಸುವ ಕನಿಷ್ಠ 10 ಸಾವಿರ ಕಾರ್ಮಿಕರಿದ್ದಾರೆಂದೇಕೊಳ್ಳೋಣ..ಇವರ ಪೈಕಿ ಕನಿಷ್ಠ 2 ಸಾವಿರ ಕಾರ್ಮಿಕರು ತಲಾ 3,000 ರೂ ನಂತೆ ಕೂಟಕ್ಕೆ ಕಳುಹಿಸಿಕೊಟ್ಟರೆ 60 ಲಕ್ಷ ಸಂಗ್ರಹವಾಗ್ತದೆ..ಇದರಲ್ಲಿ ಕೋರ್ಟ್ ಕಲಾಪಕ್ಕೆ 30  ಲಕ್ಷ ಕೊಟ್ರೂ ಉಳಿದ 30 ಲಕ್ಷ.ಅದರ ಕಥೆ ಏನಾಗುತ್ತೆ..ಆ ಹಣಕ್ಕೆ ಬೇಕಾಬಿಟ್ಟಿ ಲೆಕ್ಕ ಕ್ರಿಯೇಟ್ ಮಾಡಬಹುದಲ್ಲವೇ..? ಎಂದು ಪ್ರಶ್ನಿಸಿರುವ ನೂರಾರು ಕಾರ್ಮಿಕರು ಚಂದ್ರು ಕೇಳಿದಾಕ್ಷಣ ಹಣ ಹಾಕೋ ತಪ್ಪು ಯಾರೂ ಮಾಡಬೇಡಿ..ಒಮ್ಮೆ ಯಾಮಾರಿದ್ದೇವೆ..ಪದೇ ಪದೇ ಏಕೆ ಯಾಮಾರಬೇಕು..ಹುಷಾರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಿದ್ದಾರೆ.

ಸಾರಿಗೆ ಕಾರ್ಮಿಕರ ಜೀವನಗಳು ಕೇರ್ ಆಫ್ ಫುಟ್ಪಾತ್ ಆಗಿರುವ ಸನ್ನಿವೇಶದಲ್ಲಿ ಮತ್ತೆ 3,000ಕ್ಕೆ ಬೇಡಿಕೆ ಇಟ್ಟಿರುವುದು ಮೇಲ್ನೋಟಕ್ಕೆ ಅಷ್ಟೊಂದು ಉತ್ತಮವಾದ ನಿರ್ದಾರವಾದಂತೆ ಕಾಣುತ್ತಿಲ್ಲ..ಒಂದ್ವೇಳೆ ಚಂದ್ರುಗೆ ಕಾರ್ಮಿಕರ ಬವಣೆ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ ಹಿಂದೆ ಕೊಟ್ಟ ದೇಣಿಗೆಯಿಂದ ಉಳಿದಿರುವ  ಲಕ್ಷಾಂತರ ಹಣವನ್ನೇ ಕೋರ್ಟ್-ಕಲಾಪಕ್ಕೆ ಖರ್ಚು ಮಾಡಲಿ ಎಂದ್ಹೇಳಿರುವುದೇ ಹೆಚ್ಚು..

ಮುಷ್ಕರದ ವೇಳೆ ಕಾರ್ಮಿಕರಿಂದ ಸಂಗ್ರಹಿಸಿದ ಹಣಕ್ಕೆ ಸರಿಯಾದ ಲೆಕ್ಕ ಕೊಟ್ಟು ನಂಬಿಕೆ ಉಳಿಸಿಕೊಂಡ್ರೆ ಕಾರ್ಮಿಕರು ಏನಾದ್ರೂ ಮಾಡಬಹುದೇನೋ. ಅದನ್ನು ಬಿಟ್ಟು ಉಡಾಫೆ ಉತ್ತರ ಕೊಟ್ಟು ಮೊಂಡುತನ ಮುಂದುವರೆಸಿದ್ರೆ ಅಷ್ಟೋ ಇಷ್ಟೋ ಕಾರ್ಮಿಕರ ವಲಯದಲ್ಲಿ ಉಳಿಸಿಕೊಂಡಿರುವ ಗೌರವ-ಘನತೆ-ನಂಬಿಕೆಯನ್ನೂ ಚಂದ್ರು ಶಾಶ್ವತವಾಗಿ ಕಳೆದುಕೊಳ್ಳಬೇಕಾಗಿ ಬರಬಹುದೇನೋ..

ಕಾನೂನಾತ್ಮಕ ಹೋರಾಟಕ್ಕೆ ಅಗತ್ಯವಿರುವ ಹಣದ ಸಹಾಯಕ್ಕೆ ಮನವಿ ಮಾಡಿರುವ ಕೂಟದ ಅಧ್ಯಕ್ಷ ಚಂದ್ರು ತಮ್ಮ ಫೇಸ್ ಬುಕ್ ನಲ್ಲಿ ಹರಿಬಿಟ್ಟಿರುವ ವೀಡಿಯೋ ನೋಡಬೇಕಂದರೆ ಈ ಕೆಳಕಂಡ  ಲಿಂಕ್ ಕ್ಲಿಕ್ ಮಾಡಿ… .

https://www.facebook.com/chandrashekar.chandru.71216141/videos/2986796124869130/?sfnsn=wiwspwa

Spread the love
Leave A Reply

Your email address will not be published.

Flash News