The officer Picked up the baton on the Driver: “ಸಾರಿಗೆ ಸಚಿವ”ರ ಕ್ಷೇತ್ರದ ಪಕ್ಕದಲ್ಲೇ, “ಡ್ರೈವರ್ಸ್-ಕಂಡಕ್ಟರ್ಸ್” ಮೇಲೆ ಅಧಿಕಾರಿಗಳ ದಬ್ಬಾಳಿಕೆ..!? .ಅವಾಚ್ಯ ಪದಗಳಿಂದ ನಿಂದನೆ-ಲಾಠಿಯಿಂದ ಹಲ್ಲೆ ಯತ್ನ..?!

"ಸೂ… ಮಗನೇ.. ಎಲ್ಲಿ ಹೋಗಿದ್ಯಲ್ಲೇ..?ಕೆರೆ ತಗೊಂಡ್ ಹೊಡೀತಿನಿ..ಆ ಲಾಠಿ ತಗೊಂಡ್ ಬನ್ರೋ ಇಲ್ಲಿ..ಅಧಿಕಾರಿ ಬಳಸೋ ಪದನಾ ಇದು..? ಹಾಗಾ ನಡೆದುಕೊಳ್ಳೊದು.."

0
ಡಿವಿಷನಲ್ ಕಂಟ್ರೋಲರ್ ವೆಂಕಟೇಶ್
ಡಿವಿಷನಲ್ ಕಂಟ್ರೋಲರ್ ವೆಂಕಟೇಶ್

ಹೊಸಪೇಟೆ/ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಕೆಳ ಹಂತದ ಕಾರ್ಮಿಕ ಸಿಬ್ಬಂದಿ ಎಂದ್ರೆ ಅಲ್ಲಿನ  ಅಧಿಕಾರಿಗಳಿಗೆ ಇಷ್ಟೊಂದು ತಾತ್ಸಾರನಾ..?ಅವರನ್ನು ಮನುಷ್ಯರಂತೆ ಭಾವಿಸುವ ಮನುಷ್ಯತ್ವನೇ ಅದಿಕಾರಿಗಳಿಗಿಲ್ಲವೇ..?ಇಂಥಾ ಅನುಮಾನಕ್ಕೆ ಎಡೆ ಮಾಡಿಕೊಡುವಂಥ ಘಟನೆಗಳು ನಿತ್ಯವೂ ರಾಜ್ಯದ ನಾಲ್ಉ ಸಾರಿಗೆ ನಿಗಮಗಳ ಒಂದಲ್ಲಾ ಒಂದು ಘಟಕದಲ್ಲಿ ನಡೆಯುತ್ತಲೇ ಇರುತ್ತೆ..ಇದಕ್ಕೆ ಪುಷ್ಟಿ ನೀಡುವಂತೆ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಘಟನೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.

ಕಲೆಕ್ಷನ್ ಟಾರ್ಗೆಟ್ ಎನ್ನುವುದು ಸಾರಿಗೆ ನಿಗಮಗಳಲ್ಲಿ ಕಾಮನ್ ಪ್ರಕ್ರಿಯೆ.ಬಸ್ ಕೊಂಡೊಯ್ಯುವ ಡ್ರೈವರ್ಸ್-ಕಂಡಕ್ಟರ್ಸ್ ಗಳಿಗೆ ಅವುಗಳ ರೂಟ್ ಗಳ ಆಧಾರದ ಮೇಲೆ ಇಂತಿಷ್ಟು ಎಂದು ಫಿಕ್ಸ್ ಮಾಡಿ ಕಳುಹಿಸಲಾಗುತ್ತೆ. ಕೆಲವರು ಅವತ್ತು ಅದೃಷ್ಟ ಇದ್ದಲ್ಲಿ ಆ ಟಾರ್ಗೆಟ್ ರೀಚ್ ಮಾಡ್ತಾರೆ.ಇನ್ಸೆಂಟಿವ್ ಪಡೆಯುತ್ತಾರೆ( ಇತ್ತೀಚೆಗೆ ಆ ಇನ್ಸೆಂಟಿವ್ ಕೂಡ ಇಲ್ಲ ಎನ್ನಲಾಗ್ತಿದೆ).ಟಾರ್ಗೆಟ್ ರೀಚ್ ಮಾಡದ ಸಿಬ್ಬಂದಿಯನ್ನು ಡಿಪೊ ಮ್ಯಾನೇಜರ್ಸ್ ಅಥವಾ ಘಟಕದ  ಅಧಿಕಾರಿಗಳು ತರಾಟೆ ತೆಗೆದುಕೊಳ್ಳುವುದು ಕೂಡ ಕಾಮನ್ನೇ ಬಿಡಿ..ಅದರಲ್ಲೇನು ವಿಶೇಷ ಇಲ್ಲ.

ಆದ್ರೆ ಈ ಡಿಪೋದ ಡಿವಿಷನಲ್ ಕಂಟ್ರೋಲರ್ ಆಗಿರುವ ವೆಂಕಟೇಶ್ ಎಂಬ ಮಹಾನುಭಾವ ಕಲೆಕ್ಷನ್ ಕಡಿಮೆ ತಂದ ಡ್ರೈವರ್-ಕಂಡಕ್ಟರ್ ಅವರೊಂದಿಗೆ  ಅಮಾನವೀಯವಾಗಿ ವರ್ತಿಸಿದ್ದಷ್ಟೇ  ಅಲ್ಲ, ಅಸಂಸದೀಯ ಪದದಿಂದಲೂ ಬೈದಿದ್ದಾನೆ.ಅಷ್ಟು ಸಾಲದ್ದಕ್ಕೆ ಬೆತ್ತವನ್ನು ತರಿಸಿ ಡ್ರೈವರ್ ಮಧು ಅವರನ್ನು  ಅಟ್ಟಾಡಿಸುವಂತೆ ತೋರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ.

ಡ್ರೈವರ್ ಮಧು ಎಂಬಾತನ ಮೇಲೆ ಲಾಠಿ ಹಿಡಿದು ಹಲ್ಲೆಗೆ ಮುಂದಾದರೆನ್ನಲಾದ ವೆಂಕಟೇಶ್..!?
ಡ್ರೈವರ್ ಮಧು ಎಂಬಾತನ ಮೇಲೆ ಲಾಠಿ ಹಿಡಿದು ಹಲ್ಲೆಗೆ ಮುಂದಾದರೆನ್ನಲಾದ ವೆಂಕಟೇಶ್..!?(ಚಿತ್ರ-1)
ಡ್ರೈವರ್ ಮಧು ಎಂಬಾತನ ಮೇಲೆ ಲಾಠಿ ಹಿಡಿದು ಹಲ್ಲೆಗೆ ಮುಂದಾದರೆನ್ನಲಾದ ವೆಂಕಟೇಶ್..!?
ಮಧು ಮೇಲೆ  ಹಲ್ಲೆಗೆ ಮುಂದಾದರೆನ್ನಲಾದ ವೆಂಕಟೇಶ್..!?(ಚಿತ್ರ-2)

ಕಲೆಕ್ಷನ್ ಎನ್ನೋದು ಕೊರೊನಾಕ್ಕೆ ಮುನ್ನ ನಿರೀಕ್ಷಿತ ಟಾರ್ಗೆಟ್ ರೀಚ್ ಆಗುತ್ತಿಲ್ಲ ಎನ್ನುವ ಮಾತುಗಳಿವೆ.ಕೊರೊನಾ ನಂತರವಂತೂ ಜನ ಬಸ್ ಹತ್ತೊಕ್ಕೆ ಮನಸು ಮಾಡದಿರುವುದರಿಂದ ಲಾಭದ ರೂಟ್ ಗಳಲ್ಲೆಲ್ಲಾ ಕಲೆಕ್ಷನ್ ಕಡಿಮೆಯಾಗಿದೆ.ಇದು ಡಿಪೋ ಮ್ಯಾನೇಜರ್ಸ್-ಡಿವಿಷನಲ್ ಕಂಟ್ರೋಲರ್ಸ್ ಗೂ ಗೊತ್ತು..ಹೊಸಪೇಟೆ ವಿಭಾಗದಲ್ಲಿ ಆಗಿರುವುದು ಇದೇ..ಇದನ್ನು ಅರ್ಥೈಸಿಕೊಳ್ಳದೆ ಮೇಲಾಧಿಕಾರಿ ವೆಂಕಟೇಶ್ ನಡೆದುಕೊಂಡಿರುವ ರೀತಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.ಕಲೆಕ್ಷನ್ ಕಡಿಮೆ ತಂದ ಸಿಬ್ಬಂದಿಯನ್ನು ಬೈಯ್ದಾಡುವ ವೆಂಕಟೇಶ್,ಒಂದು ಹೆಜ್ಜೆ ಮುಂದ್ಹೋಗಿ “ಸೂ…. ಮಗನೇ ಎಲ್ ಹೋಗಿದ್ಯಲ್ಲೆ..ಕೆರೆ ತಗೊಂಡ್ ಹೊಡೀತಿನಿ ನೋಡು..ಇವ್ನ್ ನೋಡುದ್ರೆ ಇಲ್ಲ ಅಂತಿದ್ದಾನೆ..ನಾಟ್ಕ ಮಾಡ್ತಿದಿರಾ..ಜಾಫರ್ ಕರೀರಿ..ಲೇ ಜಾಫರ್..ಲೇ ಜಾಫರ್..ಆ ಲಾಠಿ ತಗೊಂಡ್ ಬಾ ಅನ್ರಿ..ಹೇ ಬಾರೋ ಇಲ್ಲಿ ಎನ್ನುತ್ತಾ ಲಾಠಿ ಹಿಡಿದು ಹೊಡೆಯಲು ಮುಂದಾಗುವ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿದೆ.

ಸಹಜವಾಗಿ ಬಹುತೇಕ  ಡಿಪೋ ಗಳಲ್ಲಿ ಕಲೆಕ್ಷನ್ ಟಾರ್ಗೆಟ್ ಮಾಡಲಿಕ್ಕೆ ವಿಫಲವಾಗುವ ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನು ಏರುಧ್ವನಿಯಲ್ಲಿ ಬೈದು..ನಿಮ್ ಹಣೇಬರಹ ಎಂದೇಳಿಕೊಂಡು ಸುಮ್ಮನಾಗ್ತಾರೆ..ಆದ್ರೆ ಈ ವೆಂಕಟೇಶ್ ತನ್ನ ಡಿಪೋದಲ್ಲಿ ಕೆಲಸ ಮಾಡುವವರನ್ನು ತನ್ನ ಜೀತದಾಳುಗಳಂತೆ ಟ್ರೀಟ್ ಮಾಡಿದ್ದಷ್ಟೇ ಅಲ್ಲ,ಡ್ರೈವರ್ ಮೇಲೆ ಹಲ್ಲೆ ಮಾಡುವಂಥ ದುಸ್ಸಾಹಸಕ್ಕೆ ಮುಂದಾಗಿದ್ದಾರೆನ್ನುವುದು ಈಗ ದೊಡ್ಡ ಮಟ್ಟದ ಆಕ್ರೋಶ ಮೂಡಿಸಿದೆ.

ಮಧು ಮೇಲೆ  ಹಲ್ಲೆಗೆ ಮುಂದಾದರೆನ್ನಲಾದ ವೆಂಕಟೇಶ್..!?(ಚಿತ್ರ-3)
ಮಧು ಮೇಲೆ  ಹಲ್ಲೆಗೆ ಮುಂದಾದರೆನ್ನಲಾದ ವೆಂಕಟೇಶ್..!?(ಚಿತ್ರ-4)
ಡ್ರೈವರ್ ಮಧು ಎಂಬಾತನ ಮೇಲೆ ಲಾಠಿ ಹಿಡಿದು ಹಲ್ಲೆಗೆ ಮುಂದಾದರೆನ್ನಲಾದ ವೆಂಕಟೇಶ್..!?
ಡ್ರೈವರ್ ಮಧು ಎಂಬಾತನ ಮೇಲೆ ಲಾಠಿ ಹಿಡಿದು ಹಲ್ಲೆಗೆ ಮುಂದಾದರೆನ್ನಲಾದ ವೆಂಕಟೇಶ್..!?(ಚಿತ್ರ-3)

ಸಾರಿಗೆ ನಾಲ್ಕು ನಿಗಮಗಳಲ್ಲಿ,ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನು ಇಷ್ಟೊಂದು ಕೀಳು ಮಟ್ಟದಲ್ಲಿ ಟ್ರೀಟ್ ಮಾಡುವ ಅಧಿಕಾರಿಗಳಿಗೇನು ಕೊರತೆಯಿಲ್ಲ.ರೂಟ್ ಕೊಡಲಿಕ್ಕೆ..ಡ್ಯೂಟಿ ಅಸೈನ್ ಮಾಡೊಕ್ಕೆ  ಡ್ರೈವರ್ಸ್-ಕಂಡಕ್ಟರ್ಸ್ ಗಳಿಂದಲೇ  ಲಂಚ ತಿನ್ನೋ ಡಿಪೋ ಮ್ಯಾನೇಜರ್ ಗಳು ಅವರುಗಳ ಮೇಲೆಯೇ ದಬ್ಬಾಳಿಕೆ-ದೌರ್ಜನ್ಯ ನಡೆಸುವಂಥ ಕೆಲಸ ಮಾಡುತ್ತಿದ್ದಾರೆ. ಅವರನ್ನು ಮನುಷ್ಯರಂತೆ ನೋಡುವ ಮನಸ್ಥಿತಿಯೇ ಬಹುತೇಕ ಅಧಿಕಾರಿಗಳಲ್ಲಿ ಇಲ್ಲ.. ಡ್ರೈವರ್ಸ್-ಕಂಡಕ್ಟರ್ಸ್ ಗಳೆಂದ್ರೆ ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಕೆಲಸ ಮಾಡುವ ಪಶುಗಳಂತೆ ಭಾವಿಸುವ,ವ್ಯವಹರಿಸುವ ಆಧಿಕಾರಿಗಳೇ ನಿಗಮಗಳಲ್ಲಿ ತುಂಬಿ ಹೋಗಿದ್ದಾರೆ.

ಮೇಲ್ಕಂಡ ಘಟನೆಯಲ್ಲಿ ಡ್ರೈವರ್ ನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೇ,ಲಾಠಿಯಿಂದ ಹಲ್ಲೆ ಮಾಡೊಕ್ಕೆ ಮುಂದಾದ ಘಟಕ ವ್ಯವಸ್ಥಾಪಕ ವೆಂಕಟೇಶ್ ವಿರುದ್ಧ ಕಠಿಣಾತೀಕಠಿಣ ಕ್ರಮ ಕೈಗೊಳ್ಳಬೇಕು..ಕ್ಷುಲ್ಲಕ ಕಾರಣಕ್ಕೆ ಕೆಳ ಹಂತದ ಸಿಬ್ಬಂದಿಯನ್ನು ಶಿಕ್ಷೆಗೊಳಪಡಿಸುವ ಆಡಳಿತವರ್ಗ ವೆಂಕಟೇಶ್ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಕಾರ್ಮಿಕರು ಹಾಗು ಕಾರ್ಮಿಕರ ಯೂನಿಯನ್ ಗಳು ಒತ್ತಾಯಿಸಲಾರಂಭಿಸಿವೆ..

ಕಾರ್ಮಿಕಸ್ನೇಹಿ ವ್ಯವಸ್ಥೆಯನ್ನು ಜಾರಿಗೊಳಿಸುವುದಷ್ಟೇ ಅಲ್ಲ,ಕಾರ್ಮಕರನ್ನು ಮನುಷ್ಯರಂತೆ ನೋಡುವ,ಗೌರವಯುತವಾಗಿ ಬದುಕುವಂತೆ ಮಾಡುವ ವಾತಾವರಣ ನಿರ್ಮಿಸುವುದೇ ನನ್ನ ಪರಮಧ್ಯೇಯ ಎಂದು ಹೇಳುತ್ತಾ ಬಂದಿರುವ ಸಚಿವ ಶ್ರೀರಾಮುಲು ಮೇಲ್ಕಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.ಇಲ್ಲವಾದಲ್ಲಿ ಸಚಿವರು ಹೇಳಿದ್ದು ಸುಳ್ಳೆನ್ನುವ ತಪ್ಪು ಸಂದೇಶ ರವಾನೆಯಾಗುವ ಅಪಾಯವಿದೆ..

“ಸಾರಿಗೆ ಸಚಿವ”ರ ಕ್ಷೇತ್ರದ ಪಕ್ಕದಲ್ಲೇ, “ಡ್ರೈವರ್ಸ್-ಕಂಡಕ್ಟರ್ಸ್” ಮೇಲೆ ಅಧಿಕಾರಿಗಳ ದಬ್ಬಾಳಿಕೆ..!? .ಅವಾಚ್ಯ ಪದಗಳಿಂದ ನಿಂದನೆ-ಲಾಠಿಯಿಂದ ಹಲ್ಲೆ ಯತ್ನ..?!

Spread the love
Leave A Reply

Your email address will not be published.

Flash News