ಬೆಂಗಳೂರು/ಹೊಸಪೇಟೆ: ಹೊಸಪೇಟೆ ವಿಭಾಗದ ಡಿಪೋ ಮ್ಯಾನೇಜರ್ ವೆಂಕಟೇಶ್ ಅವರು, ಚಾಲಕ ಮಧು ಗೆ ಸೂ..ಮಗನೇ ಅಂಥಾ ಬೈಯ್ದಿದ್ದು..ಲಾಠಿಯಿಂದ ಹೊಡೆಯೊಕ್ಕೆ ಹೋದದ್ದೆಲ್ಲಾ ತಮಾಷೆಗಂತೆ..ಹೀಗೆ ಎಂದಿರುವುದು ಈಶಾನ್ಯ ಸಾರಿಗೆ ವಿಭಾಗದ ಮುಖ್ಯ ಸಂಚಾರಿ ನಿಯಂತ್ರಣಾಧಿಕಾರಿ (CTM) ಸಂತೋಷ್ ಕುಮಾರ್..
ಇದನ್ನು ನಾವು ನಂಬಬೇಕು..ಕೆಳ ಹಂತದ ಕಂಡಕ್ಟರ್ಸ್-ಡ್ರೈವರ್ಸ್ ಗಳನ್ನು ಯಾರು ಹೇಗೆ ಬೇಕಾದ್ರೂ ಬೈಯ್ಯಬಹುದು..ಹೇಗೆ ಬೇಕಾದ್ರೂ ಬಳಸಿಕೊಳ್ಳಬಹುದೇ..? ಹೀಗೊಂದು ಪ್ರಶ್ನೆ ಮತ್ತೆ ಸಂತೋಷ್ ಕುಮಾರ್ ಅವರನ್ನೇ ಕೇಳಬೇಕು.ಹೊಸಪೇಟೆ ವಿಭಾಗದ ಡಿಪೋ ಮ್ಯಾನೇಜರ್ ವೆಂಕಟೇಶ್,ಬಸ್ ಡ್ರೈವೆರ್ ಹಾಗೂ ಕಂಡಕ್ಟರ್ ಕಲೆಕ್ಷನ್ ಟಾರ್ಗೆಟ್ ರೀಚ್ ಮಾಡ್ಲಿಲ್ಲ ಎನ್ನುವ ಕಾರಣಕ್ಕೆ ಅವರಿಬ್ಬರನ್ನು ಅವಾಚ್ಯವಾಗಿ ಬೈಯ್ದಿದಷ್ಟೇ ಅಲ್ಲ,ಲಾಠಿಯಿಂದ ಹಲ್ಲೆಗೆ ಮುಂದಾಗುವಂಥ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಇದನ್ನು ಮೊದಲ ಬಾರಿಗೆ ಕನ್ನಡ ಫ್ಲಾಶ್ ನ್ಯೂಸ್ ವರದಿ ಮಾಡಿತ್ತು.
ಕನ್ನಡ ಫ್ಲಾಶ್ ನ್ಯೂಸ್ ವರದಿಯನ್ನೇ ಅನುಸರಿಸಿ ಸಾಕಷ್ಟು ಮಾದ್ಯಮಗಳು ಸುದ್ದಿ ಪ್ರಸಾರ ಮಾಡಿದ್ವು.ಸುದ್ದಿ ಹಿನ್ನಲೆಯಲ್ಲಿ ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಲಾಗ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಕನ್ನಡ ಫ್ಲಾಶ್ ನ್ಯೂಸ್ ಈಶಾನ್ಯ ಸಾರಿಗೆ ಮುಖ್ಯ ಸಂಚಾರ ವ್ಯವಸ್ಥಾಪಕರನ್ನು ಅವರ ಮೊಬೈಲ್ ಸಂಖ್ಯೆ (7760992000)ಗೆ ಕರೆ ಮಾಡಿದಾಗ ಅವರು ಹೇಳಿದ್ದು ಇಷ್ಟು..
ಘಟನೆ ನಡೆದಿದ್ದು ಮೂರ್ನಾಲ್ಕು ತಿಂಗಳ ಹಿಂದೆ..ತಮಾಷೆಗೆ ನಡೆದ ಘಟನೆ ಅಷ್ಟೇ ಇದು..ಇದರಲ್ಲಿ ಉದ್ದೇಶಪೂರ್ವಕವಾಗಿ ತಾನು ಬೈದಿದ್ದಾಗಲಿ,ಹೊಡೆಯಲು ಮುಂದಾಗಿದ್ದಾಗಲಿ ಇಲ್ಲ..ಇದೆಲ್ಲಾ ತಮಾಷೆಗಷ್ಟೇ ಎಂದು ವೆಂಕಟೇಶ್ ಅವರನ್ನು ತನಿಖೆಗೊಳಪಡಿಸಿದಾಗ ವಿವರಣೆ ನೀಡಿದ್ರು ಎಂದು ಸಂತೋಷ್ ಕುಮಾರ್ ವಿವರಿಸಿದ್ರು.
ಅಲ್ಲಾ ಸಾರ್..ಡ್ರೈವರ್ಸ್-ಕಂಡಕ್ಟರ್ಸ್ ಗಳೆಂದ್ರೆ ಯಾವ್ ರೀತಿ ಬೇಕಾದ್ರೂ ಬೈಯ್ಯಬಹುದಾ..? ಅವರೊಂದಿಗೆ ವ್ಯವಹರಿಸಬಹುದಾ..? ಇದು ತಪ್ಪಲ್ವೇ..ಎಂದು ಪ್ರಶ್ನಿಸಿದ್ದಕ್ಕೆ ಖಂಡಿತಾ ತಪ್ಪು..ಅವರನ್ನು ಸಮರ್ಥಿಸಿಕೊಳ್ಳುವ ಯಾವ ಉದ್ದೇಶವೂ ನನಗಿಲ್ಲ..ಹಾಗೆ ಬೈಯ್ಯೋದು, ಹಲ್ಲೆ ಗೆ ಮುಂದಾಗೋದು ನಮ್ಮ ಆಡಳಿತ ವ್ಯವಸ್ಥೆ ಬಗ್ಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ..ಹಾಗಾಗಿ ಮೇಲ್ಕಂಡ ವಿಷಯವನ್ನು ಎಂಡಿ ಯಶವಂತ್ ಗುರಿಕಾರ್ ಅವರ ಗಮನಕ್ಕೆ ವರದಿ ನೀಡಲಾಗುವುದು..ಅವರು ಯಾವ್ ರೀತಿಯ ಕ್ರಮ ಕೈಗೊಳ್ಳುತ್ತಾರೋ..ಯಾವ ರೀತಿಯ ಆದೇಶ ನೀಡುತ್ತಾರೊ ಆ ಸೂಚನೆ ಪಾಲಿಸುವುದಾಗಿ ಸಂತೋಷ್ ಕುಮಾರ್ ಹೇಳಿದ್ರು.
ವೆಂಕಟೇಶ್ ಪ್ರಜ್ಞಾಪೂರ್ವಕವಾಗಿ ಬೈಯ್ದರೋ..ಹೊಡೆಯೊಕ್ಕೆ ಮುಂದಾದ್ರೋ ಅಥವಾ ಇದೆಲ್ಲಾ ತಮಾಷೆಯ ಮಟ್ಟದಲ್ಲಿ ನಡೆದೋಯ್ತೋ ಗೊತ್ತಿಲ್ಲ,ಆದ್ರೆ ಡಿಪೋದಲ್ಲಿ ಕೆಲಸ ಮಾಡುವ ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನು ಮನುಷ್ಯರಂತೆ ನೋಡುವ ಅವರೊಂದಿಗೆ ವ್ಯವಹರಿಸುವ ಕಾಮನ್ ಸೆನ್ಸನ್ನು ಅಧಿಕಾರಿಗಳಿಗೆ ತಿಳಿಸೇಳಬೇಕಿದೆ.ಅದಕ್ಕೆ ವೆಂಕಟೇಶ್ ಅವರಂಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳೋದು ಸೂಕ್ತ ಎನ್ನುವುದು ಅನೇಕ ಡಿಪೋಗಳಲ್ಲಿನ ಡಿಪೋ ಮ್ಯಾನೇಜರ್ಸ್ ಗಳಿಂದ ಇಂತದ್ದೇ ಕಿರಿಕಿರಿ ಅನುಭವಿಸುತ್ತಿರುವ ಕಾರ್ಮಿಕರು ಹಾಗೂ ಕಾರ್ಮಿಕರ ಬವಣೆಗಳನ್ನು ಹತ್ತಿರದಿಂದ ಬಲ್ಲಂಥ ಕಾರ್ಮಿಕ ಯೂನಿಯನ್ ಗಳ ಅನಿಸಿಕೆ ಹಾಗೂ ಒತ್ತಾಯ.