BUMPER MEDICAL BENIFIT TO MLC.S BUT WHY NOT FOR COMMON MAN: “ಕೊರೊನಾ ಟೈಮ್” ನಲ್ಲೂ MLC ಗಳಿಗೆ ಅವರು ಕ್ಲೇಮ್ ಮಾಡಿದಷ್ಟು “ವೈದ್ಯಕೀಯ ಭತ್ಯೆ” ಮಂಜೂರು..?

ಇದೇನ್ ಅನ್ಯಾಯ…?! ಶ್ರೀಸಾಮಾನ್ಯ ಕೊರೊನಾಕ್ಕೆ ತುತ್ತಾದ್ರೆ ಬಿಡಿಗಾಸಿನ ಸಹಾಯವಿಲ್ಲ.. MLC ಗಳಿಗಾದ್ರೆ ಮನೆ ಬಾಗಿಲಲ್ಲೇ ಮೆಡಿಕಲ್ ಬಿಲ್ ಕ್ಲೇಮ್..

0

ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್
ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್

ಬೆಂಗಳೂರು:ಕೊರೊನಾ ಜಗತ್ತನ್ನೇ ತಲ್ಲಣಿಸಿದ ಮಹಾಮಾರಿ..ಈ ಸನ್ನಿವೇಶದಲ್ಲಿ ಹೆಚ್ಚು ಪ್ರಾಣಭಯದಿಂದ ನಲುಗಿದವರಲ್ಲಿ ಹೆಚ್ಚಿನವರು ರಾಜಕಾರಣಿಗಳು.ಕೊರೊನಾ ಮಹಾಮಾರಿ ಕಾಣಿಸಿಕೊಳ್ಳುತ್ತಿದ್ದಂತೆ ಜನರೊಂದಿಗೆ ಸಂಪರ್ಕವನ್ನು ಕಡಿದುಕೊಂಡು ತಮ್ಮ ಮನೆಗಳಲ್ಲಿಯೇ ಸೀಮಿತವಾದರು.ಆದರೂ ಅಟ್ಟಾಡಿಸಿಕೊಂಡು ಬಂದ ಕೊರೊನಾ  ಅನೇಕರನ್ನು ಬಸವಳಿಸಿತು..

ಸಾಕಷ್ಟು ರಾಜಕಾರಣಿಗಳು ಸಾವನ್ನಪ್ಪಿದರು ಕೂಡ..ಕೊರೊನಾಕ್ಕೆ ತುತ್ತಾಗಿ ಚಿಕಿತ್ಸೆ ಪಡೆದವರಿಗೆ ಸರ್ಕಾರ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಳ್ಳೊಕ್ಕೆ ನೀಡಿದ್ದ ಅವಕಾಶವನ್ನು ನಮ್ಮ ರಾಜಕಾರಣಿಗಳು ಚೆನ್ನಾಗಿಯೆ ಬಳಸಿಕೊಂಡಿದ್ದಾರೆ.ತಾವಲ್ಲದೇ ತಮ್ಮ ಕುಟುಂಬದ ಸದಸ್ಯರಿಗೂ ಮಾಡಿಸಿಕೊಂಡಿರಬಹುದಾದ ಚಿಕಿತ್ಸೆಗೆ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ.ಅದರ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಆರ್ ಟಿಐ ನಲ್ಲಿ ಮಾಹಿತಿ ಹಾಕಿ ತೆಗೆದಿದ್ದಾರೆ.ಅದರ ಎಕ್ಸ್ ಕ್ಲ್ಯೂಸಿವ್ ರಿಪೋರ್ಟ್ ಇಲ್ಲಿದೆ..

ಹಾಗೆಯೇ 2019 ರಿಂದ 2021ರ ಕೊರೊನಾ ಅವಧಿಯಲ್ಲಿ ಯಾವ್ಯಾವ ವಿಧಾನಪರಿಷತ್ ಸದಸ್ಯರು ಎಷ್ಟೆಲ್ಲಾ ಮೊತ್ತದ ವೈದ್ಯಕೀಯ ಬಿಲ್ ನ್ನು ಕ್ಲೇಮ್ ಮಾಡಿಕೊಂಡಿದ್ದಾರೆನ್ನುವ ಮಾಹಿತಿಯನ್ನೂ ನೀಡಲಾಗಿದೆ.ಜನರೊಂದಿಗೆ-ಕ್ಷೇತ್ರದೊಂದಿಗೆ ಸಾಲದ್ದಕ್ಕೆ ರಾಜಕೀಯದೊಂದಿಗೂ ಸಂಪರ್ಕ ಕಡಿದುಕೊಂಡು ಮನೆಯಲ್ಲಿ,ಫಾರ್ಮ್ ಹೌಸ್ ಗಳಲ್ಲಿ ಕಾಲ ಕಳೆದವರೇ ಹೆಚ್ಚು.ಅದ್ರೂ ಅವರು ಪಡೆದಿರುವ ವೈದ್ಯಕೀಯ ಭತ್ಯೆಯನ್ನು ನೋಡಿದಾಗ ಅವರಿಗೂ ನಿಜಕ್ಕೂ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಳ್ಳುವಂಥ ಕೆಟ್ಟ ಸ್ತಿತಿ ಬಂದಿತ್ತಾ ಎನ್ನುವ ಶಂಕೆ ಕಾಡೋದು ಸತ್ಯ..ಆದ್ರೆ ಅದನ್ನು ಪ್ರಶ್ನಿಸಿದರೂ ತಲೆ ಕೆಡಿಸಿಕೊಳ್ಳೋರು ಯಾರು..?ಅಲ್ಲವೇ..?

ಕೊರೊನಾ ಸಂಕಷ್ಟ ಕಾಲದಲ್ಲಿ ಪಾಪ..ಖರ್ಚು ಮಾಡೊಕ್ಕೆ ಕೈಯಲ್ಲಿ ಹಣವಿಲ್ಲದೆ ಸರ್ಕಾರದ ಬೊಕ್ಕಸದಿಂದ ಹಣ ಪಡೆದ ವಿಧಾನಪರಿಷತ್ ಸದಸ್ಯರಿವರು…?!
ಕೊರೊನಾ ಸಂಕಷ್ಟ ಕಾಲದಲ್ಲಿ ಪಾಪ..ಖರ್ಚು ಮಾಡೊಕ್ಕೆ ಕೈಯಲ್ಲಿ ಹಣವಿಲ್ಲ ದೆ ಸರ್ಕಾರದ ಬೊಕ್ಕಸದಿಂದ ಹಣ ಪಡೆದ ವಿಧಾನಪರಿಷತ್ ಸದಸ್ಯರಿವರು…?!

ಕೊರೊನಾ ವೇಳೆ ಪಡೆದುಕೊಂಡಿದ್ದಾರೆನ್ನಲಾಗುವ ಚಿಕಿತ್ಸೆಗೆ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಸಿಕೊಂಡ ಎಮ್ಮೆಲ್ಸಿಗಳು:ಕೊವಿಡ್ ಸಂಕಷ್ಟದ ಸಮಯದಲ್ಲಿ ಯಾರ್ಯಾರು ಎಷ್ಟೆಷ್ಟು ಮೊತ್ತದ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆನ್ನು ವುದನ್ನು ತಿಳಿಯೊಕ್ಕೆ ಸಾಮಾಜಿಕ ಕಾರ್ಯಕರ್ತರಾದ ಎಚ್.ಎಂ.ವೆಂಕಟೇಶ್ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಆ ಪೈಕಿ 7 ಎಮ್ಮೆಲ್ಸಿಗಳ ಹೆಸರನ್ನು ನೀಡಲಾಗಿದೆ.ಅದರಲ್ಲಿ ಹೆಚ್ಚಿನ ಮೊತ್ತವನ್ನು ಕೆ.ಎ ತಿಪ್ಪೇಸ್ವಾಮಿ ಹಾಗೂ ಅವರ ಪತ್ನಿ ಪಡೆದಿದ್ದಾರೆ.ಕೊರೊನಾಕ್ಕೆ ತುತ್ತಾಗಿ ಅವರು ಹಾಗೂ ಪತ್ನಿ ಪಡೆದ ಟ್ರೀಟ್ಮೆಂಟ್ ಗೆ ಸನ್ಮಾನ್ಯರು 4,27,202 ರೂ ಪಡೆದಿದ್ದಾರೆ.ಇನ್ನು  ಪಿ.ಆರ್ ರಮೇಶ್ ತಾನು ಹಾಗೂ ತನ್ನ ಪತ್ನಿ ಟ್ರೀಟ್ಮೆಂಟ್ ಗೆ – 4,20,469 ರೂ ಪಡೆದಿದ್ದಾರೆ.ಹಾಗೆಯೇ ಬಳ್ಳಾರಿ ಮೂಲದ ಗಣಿಧಣಿ ಕೆ.ಸಿ.ಕೊಂಡಯ್ಯ 3,94,232 ರೂ ,ಅರವಿಂದ ಕುಮಾರ್ ಅರಳಿ 3,50,646 ರೂ, ಸುನೀಲ್ ವಲ್ಯಾಪುರೆ ತಾನು ಹಾಗೂ ತನ್ನ ಪತ್ನಿಯ ಟ್ರೀಟ್ಮೆಂಟ್ ಗೆ 3,21,391 ರೂ ಹಾಗೂ ಮಂಡ್ಯ ಮೂಲದ ಕೆ.ಟಿ ಶ್ರೀಕಂಠೇಗೌಡ ಅವರು 62,076 ರೂ ಪಡೆದಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಕೊವಿಡ್ ಹಿನ್ನಲೆಯಲ್ಲಿ ಪರಿಹಾರ ಪಡೆದ ವಿಧಾನಪರಿಷತ್ ಸದಸ್ಯರು

ವಿಧಾನ ಪರಿಷತ್ ಸದಸ್ಯರು ಮಂಜೂರಾದ ಮೊತ್ತ
1-ಕೆ.ಸಿ.ಕೊಂಡಯ್ಯ- 3,94,232 ರೂ
2-ಪಿ.ಆರ್ ರಮೇಶ್ ಹಾಗೂ ಪತ್ನಿಗೆ – 4,20,469 ರೂ
3-ಕೆ.ಟಿ ಶ್ರೀಕಂಠೇಗೌಡ- 62,076 ರೂ
4-ಕೆ.ಎ ತಿಪ್ಪೇಸ್ವಾಮಿ ಹಾಗೂ ಪತ್ನಿ- 4,27,202 ರೂ
5-ಸುನೀಲ್ ವಲ್ಯಾಪುರೆ ಹಾಗೂ ಪತ್ನಿ- 2,90,324 ರೂ
6-ಸುನೀಲ್ ಗೌಡ ಬಿ ಪಾಟೀಲ ಹಾಗೂ ಪತ್ನಿ- 3,21,391 ರೂ
7-ಅರವಿಂದ ಕುಮಾರ್ ಅರಳಿ- 3,50,646 ರೂ

——————————————————————————————————————————————————————————

2019ನೇ ಸಾಲಿನಲ್ಲಿ ವೈದ್ಯಕೀಯ ಭತ್ಯೆ ಪಡೆದವರು:2019 ರ ಸಾಲಿನಲ್ಲಿ ಅತೀ ಹೆಚ್ಚಿನ ವೈದ್ಯ ಕೀಯ ಭತ್ಯೆಯನ್ನು ಇಬ್ಬರು ಪಡೆದಿದ್ದಾರೆ.ಒಬ್ಬರು ಎಚ್ ಎಂ ರೇವಣ್ಣ ಹಾಗೂ ಮತ್ತೊಬ್ಬರು  ಟಿ.ಎ ಸರವಣ ಇವರಿಬ್ಬರು  ಕ್ರಮವಾಗಿ  8,29,836 ರೂ ಮತ್ತು7,04,797 ರೂ ಕ್ಲೇಮ್ ಮಾಡಿಕೊಂಡಿರುವುದು ವೆಂಕಟೇಶ್ ಅವರಿಗೆ ನೀಡಿರುವ ಮಾಹಿತಿಯಿಂದಲೇ ದೃಢಪಟ್ಟಿದೆ.

2019 ರಲ್ಲಿ ಅತೀ ಹೆಚ್ಚು ಬಾರಿ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡ ಹೆಗ್ಗಳಿಕೆ ಎಮ್ಮೆಲ್ಸಿ ವೇಣುಗೋಪಾಲ್ ಅವರಿಗೆ ಸಲ್ಲುತ್ತೆ.ಸನ್ಮಾನ್ಯರು 5 ಬಾರಿ ಮೆಡಿಕಲ್ ಕ್ಲೇಮ್ ಪಡೆದಿದ್ದಾರೆ ಕ್ರಮವಾಗಿ  66,278 ರೂ, 53,884 ರೂ, 14,676 ರೂ ಪಡೆದಿದ್ದಾರೆ.ಅಷ್ಟೇ ಅಲ್ಲ,ಕೈಯಿಂದಲೇ ಖರ್ಚು ಮಾಡಲು ಸಾಧ್ಯವಿದ್ದ  09,200 ರೂ ಹಾಗೂ 8,363 ರೂಗಳ ಖರ್ಚನ್ನೂ ಸರ್ಕಾರದ ಬೊಕ್ಕಸದಿಂದಲೇ ಪಡೆದಿದ್ದಾರೆ.ಇದು ಅಗತ್ಯವಿತ್ತಾ ಎನ್ನುವುದು  ವೆಂಕಟೇಶ್ ಅವರ ಪ್ರಶ್ನೆ..
ಟಿ.ಎ ಸರವಣ ನಾಲ್ಕು ಬಾರಿ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ.ಮೊದಲು   7,04,797 ರೂ ಎರಡನೇ ಬಾರಿ  1,23,429 ರೂ  ಮೂರನೇ ಬಾರಿ 70,873 ರೂ ಹಾಗೂ ನಾಲ್ಕನೇ ಬಾರಿ 26,951 ರೂ ಪಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮಾಗಡಿ ಮಾಜಿ ಶಾಸಕ,ಕುರುಬ ಸಮುದಾಯದ ಧೀಮಂತ ಮುಖಂಡ ಎಂದೇ ಕರೆಯಿಸಿಕೊಂಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಬಲಗೈ ಭಂಟ ಎಚ್ ಎಂ ರೇವಣ್ಣ 2 ಬಾರಿ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ.ಮೊದಲ ಬಾರಿ  8,29,836 ರೂ ಹಾಗೂ ಎರಡನೇ ಬಾರಿ 1,35,581 ರೂ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ.

2019ನೇ ಸಾಲಿನಲ್ಲಿ ವೈದ್ಯಕೀಯ ಭತ್ಯೆ ಪಡೆದವರು
ಪರಿಷತ್ ಸದಸ್ಯರು                         ವೈದ್ಯಕೀಯ ಭತ್ಯೆ
**ಟಿ. ಸರವಣ                                    70,873 ರೂ
ಆಯನೂರು ಮಂಜುನಾಥ್              55,234 ರೂ
ಎಸ್.ವಿ ಸಂಕನೂರ                           1,42,100 ರೂ
ಎಚ್.ಎಂ.ರೇವಣ್ಣ                            1,35,581 ರೂ
ಎಂ.ನಾರಾಯಣಸ್ವಾಮಿ                    29,697 ರೂ
ಎಸ್.ಎಲ್ ಧರ್ಮೇಗೌಡ                    25,389 ರೂ
ಜಯಮ್ಮ                                            1,03,003 ರೂ
ಬಸವರಾಜ ಪಾಟೀಲ ಇಟಗಿ              12,149 ರೂ
ಪುಟ್ಟಣ್ಣ                                             64,012 ರೂ
ಎಚ್.ಎಂ.ರೇವಣ್ಣ                            8,29,836 ರೂ
ಕೆ.ಸಿ ಕೊಂಡಯ್ಯ                                56,950 ರೂ
**ಟಿ.ಎ ಸರವಣ                               26,951 ರೂ
ಮರಿತಿಬ್ಬೇಗೌಡ                                  11,632 ರೂ
ಎಂ.ಸಿ ವೇಣುಗೋಪಾಲ್                   66,278 ರೂ
ಎಸ್.ಎಲ್ ಭೋಜೇಗೌಡ                   65,360 ರೂ
ಎಂ.ನಾರಾಯಣಸ್ವಾಮಿ                    1,10,548 ರೂ
ಆರ್.ಪ್ರಸನ್ನಕುಮಾರ್                       02,06,275 ರೂ
ಎಂ.ಸಿ ವೇಣುಗೋಪಾಲ್                   8,363 ರೂ
ಅಲ್ಲಂ ವೀರಭದ್ರಪ್ಪ                          39,266 ರೂ
ಸಿ.ಎಂ.ಇಬ್ರಾಹಿಂ                                30,966 ರೂ
ತಿಪ್ಪಣ್ಣ ಕಮಕನೂರ                        12,075ರೂ
ಎಸ್.ರುದ್ರೇಗೌಡ                                08,106 ರೂ
ಪುಟ್ಟಣ್ಣ                                             12,811 ರೂ
ವಿ.ಎಸ್ ಉಗ್ರಪ್ಪ-                                1,11,961 ರೂ
ಆಯನೂರು ಮಂಜುನಾಥ್              31,447 ರೂ
ಎಸ್,ರುದ್ರೇಗೌಡ                                9,846 ರೂ
ಅಲ್ಲಂ ವೀರಭದ್ರಪ್ಪ-                         33,940 ರೂ
ಸಂದೇಶ್ ನಾಗರಾಜು-                        23,600 ರೂ
ಜಯಮ್ಮ                                            17,989 ರೂ
ಎಂ.ಸಿ ವೇಣುಗೋಪಾಲ್                   14,676 ರೂ
ಜಯಮ್ಮ –                                         40,616 ರೂ
ಮರಿತಿಬ್ಬೇಗೌಡ                                  6,444 ರೂ
**ಟಿ.ಎ .ಸರವಣ                            7,04,797 ರೂ
ಎಂ.ಸಿ ವೇಣುಗೋಪಾಲ್-                  53,884 ರೂ
ಕೆ.ಪಿ ನಂಜುಂಡಿ                                 13,944 ರೂ
ಅ.ದೇವೇಗೌಡ                                     36,224 ರೂ
**ಟಿ.ಎ ಸರವಣ                                42,858 ರೂ
ಬಸವೆರಾಜ ಪಾಟೀಲ್ ಇಟಗಿ             14,458 ರೂ
ಎಂ.ಸಿ ವೇಣುಗೋಪಾಲ್                   09,200 ರೂ
**ಟಿ.ಎ ಸರವಣ                               1,23,429 ರೂ

 

ಅತೀ ಹಚ್ಚಿನ ಮೊತ್ತದ ವೈದ್ಯಕೀಯ ಭತ್ಯೆ ಪಡೆದವರು
**ಎಚ್.ಎಂ.ರೇವಣ್ಣ               8,29,836 ರೂ
**ಟಿ.ಎ .ಸರವಣ                       7,04,797 ರೂ

 

ಹೆಚ್ಚು ಬಾರಿ ವೈದ್ಯಕೀಯ ಭತ್ಯೆ ಪಡೆದವರು
ಎಂ.ಸಿ ವೇಣುಗೋಪಾಲ್ 5 ಬಾರಿ
**ಎಂ.ಸಿ ವೇಣುಗೋಪಾಲ್                           09,200 ರೂ
**ಎಂ.ಸಿ ವೇಣುಗೋಪಾಲ್-                          53,884 ರೂ
**ಎಂ.ಸಿ ವೇಣುಗೋಪಾಲ್                           14,676 ರೂ
**ಎಂ.ಸಿ ವೇಣುಗೋಪಾಲ್                           8,363 ರೂ
**ಎಂ.ಸಿ ವೇಣುಗೋಪಾಲ್                           66,278 ರೂ

 

ಟಿ.ಎ .ಸರವಣ-4 ಬಾರಿ
**ಟಿ.ಎ .ಸರವಣ                                   7,04,797 ರೂ
**ಟಿ.ಸರವಣ                                    1,23,429 ರೂ
**ಟಿ. ಸರವಣ                                       70,873 ರೂ
**ಟಿ.ಸರವಣ                                    26,951 ರೂ

 

ಎಚ್.ಎಂ.ರೇವಣ್ಣ-2 ಬಾರಿ
**ಎಚ್.ಎಂ.ರೇವಣ್ಣ                           8,29,836 ರೂ
**ಎಚ್.ಎಂ.ರೇವಣ್ಣ                           1,35,581 ರೂ

————————————————————————————————————————————————————————

2020ನೇ ಸಾಲಿನಲ್ಲಿ ವೈದ್ಯಕೀಯ ಭತ್ಯೆ ಪಡೆದವರು:ಅತೀ ಹೆಚ್ಚು ಭತ್ಯೆ ಪಡೆದವರ ಲೀಸ್ಟ್ ನಲ್ಲಿ ಶಿವಮೊಗ್ಗದ ಖ್ಯಾತ ಉದ್ಯಮಿ ಹಾಗೂ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರೆನಿಸಿಕೊಳ್ಳುವ ಯಡಿಯೂರಪ್ಪ ಅವರ ಬಲಗೈ ಭಂಟ ಎಸ್.ರುದ್ರೇಗೌಡ ಮುಂಚೂಣಿಯಲ್ಲಿದ್ದಾರೆ.ಸನ್ಮಾನ್ಯರು ಎರಡು ಬಾರಿ ಭಾರೀ ಮೊತ್ತವನ್ನೇ ಕ್ಲೇಮ್ ಮಾಡಿಸಿಕೊಂಡಿದ್ದಾರೆ.ಒಮ್ಮೆ 08,09,949 ರೂ ಹಾಗೂ  ಮತ್ತೊಮ್ಮೆ 05,73,175 ರೂ ಪಡೆದಿದ್ದಾರೆ.ಅವರ ನಂತರ ಮಾಜಿ ಮೇಯರ್ ಆಗಿದ್ದ ಪಿ.ಆರ್ ರಮೇಶ್ 04,70,469 ರೂ ಹಾಗೂ ಬಳ್ಳಾರಿಯ ಗಣಿಧಣಿ ಕೆ.ಸಿ ಕೊಂಡಯ್ಯ 03,94,232 ರೂ ಕ್ಲೇಮ್ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳಲ್ಲಿ ಮಾಹಿತಿ ಕೊಡಲಾಗಿದೆ.

ರಾಜಕಾರಣಿಗಿಂತ ಚಿನ್ನಾಭರಣ ಉದ್ಯಮಿಯಾಗೆ ಹೆಚ್ಚು ಪರಿಚಿತವಾಗಿರುವ  ಟಿ.ಎ ಸರವಣ ಕೂಡ  ಸರ್ಕಾರದಿಂದ ಸವಲತ್ತು ಸಿಗುತ್ತೆ ಎಂದ್ರೆ ಏಕೆ ಬಿಡೋಣ ಎಂದು ಒಂದಲ್ಲಾ ಎರಡಲ್ಲಾ ಆರು ಬಾರಿ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ.ಒಮ್ಮೆ  19,713 ರೂ, ಮತ್ತೊಮ್ಮೆ 71,522 ರೂ, ಇನ್ನೊಮ್ಮೆ 69,063 ರೂ ಮಗದೊಮ್ಮೆ 27,785 ರೂ ಪುನಃ  20,530 ರೂ ಹಾಗೂ ಮತ್ತೆ 29,793 ರೂ ಕ್ಲೇಮ್ ಮಾಡಿಕೊಂಡಿದ್ದಾರೆ.ಕಡಿಮೆ ಮೊತ್ತದ ಚಿಕಿತ್ಸೆಯ ಮೊತ್ತವನ್ನೂ ಸರ್ಕಾರದ ಬೊಕ್ಕಸದಿಂದ ಕ್ಲೇಮ್ ಮಾಡಿಕೊಳ್ಳುವಂಥ ಸ್ತಿತಿ ಪಾಪ ಸರವಣ ಅಂಥವರಿಗೆ ಬಂತಲ್ಲಾ ಎನ್ನುವುದೇ ವೆಂಕಟೇಶ್ ಅವರ ಪ್ರಶ್ನೆ.

ವಿಧಾನಪರಿಷತ್ ನಲ್ಲಿ ಕಾಣಿಸಿಕೊಂಡಷ್ಟೆ ಪ್ರಶ್ನೆ ಕೇಳಿದ್ದು ಕಡಿಮೆ ಎನ್ನುವ ಆರೋಪ ಎದುರಿಸುತ್ತಿರುವ ಜಯಮ್ಮ ನಾಲ್ಕು ಬಾರಿ ಮಿಸ್ ಮಾಡದೆ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ.ಒಮ್ಮೆ  66,528 ರೂ ಪಡೆದರೆ ಇನ್ನೊಮ್ಮೆ  07,610 ರೂ ಪಡೆದಿದ್ದಾರೆ.ಅಷ್ಟೇ ಅಲ್ಲ ಮತ್ತೊಮ್ಮೆ 42,670 ರೂ ಪಡೆದರೆ ಅತ್ಯಂತ ಕನಿಷ್ಟ ಮೊತ್ತವಾದ 2,706 ರೂಗೆ ಕೂಡ ಮೆಡಿಕಲ್ ಕ್ಲೇಮ್ ಮಾಡಿಕೊಂಡಿದ್ದಾರೆ.

2020ನೇ ಸಾಲಿನಲ್ಲಿ ವೈದ್ಯಕೀಯ ಭತ್ಯೆ ಪಡೆದವರು

ಟಿ .ಎ ಶರವಣ                                    19,713 ರೂ
ಆ .ದೇವೇಗೌಡ                                    1,450 ರೂ
ಜಯಮ್ಮ                                            66,528 ರೂ
ಎನ್. ಎಸ್ .ಬೋಸರಾಜು                  60,050 ರೂ
ಶ್ರೀನಿವಾಸ ಮಾನೆ                               35,929 ರೂ
ಆಯನೂರ ಮಂಜುನಾಥ                 14,801 ರೂ
ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್     07,442 ರೂ
ಎಂ.ಸಿ.ವೇಣುಗೋಪಾಲ್                   11,370 ರೂ
ಟಿ. ಎ. ಶರವಣ                                   29,793 ರೂ
ಮರಿತಿಬ್ಬೇಗೌಡ                                  13,894 ರೂ
ಜಯಮ್ಮ-                                          2,706 ರೂ
ಡಾ. ಚಂದ್ರಶೇಖರ ಬಿ. ಪಾಟೀಲ್-     10,180 ರೂ
ರಮೇಶ್ ಗೌಡ .ಎಚ್. ಎಮ್ –           29,876 ರೂ
ಟಿ .ಎ. ಶರವಣ                                   20,530 ರೂ
ಕೆ .ಎ. ತಿಪ್ಪೇಸ್ವಾಮಿ                           39,505 ರೂ
ಕೆ .ತಿಪ್ಪೇಸ್ವಾಮಿ                                 36,625 ರೂ
ಎಂ .ನಾರಾಯಣಸ್ವಾಮಿ                   12,223 ರೂ
ಟಿ .ಎ. ಶರವಣ                                   27,785 ರೂ
ಎಸ್. ವಿ .ಸಂಕನೂರ                           02,31,000
ಹೆಚ್. ಎಂ. ರೇವಣ್ಣ                          01,20,420 ರೂ
ಆರ್. ಬಿ .ತಿಮ್ಮಾಪುರ                          01,91,055 ರೂ
ಎಂ.ಸಿ.ವೇಣುಗೋಪಾಲ್                   21,175 ರೂ
ಎಸ್. ರುದ್ರೇಗೌಡ                               34,523 ರೂ
ಟಿ. ಎ. ಶರವಣ                                   69,063 ರೂ
ಜಯ್ಯಮ್ಮ                                          42,670 ರೂ
ಪ್ರಕಾಶ್ ರಾಥೋಡ್                           01,03,802 ರೂ
ಸಿ.ಎಂ.ಲಿಂಗಪ್ಪ                                 94,422 ರೂ
ಟಿ. ಎ. ಶರವಣ                                   71,522 ರೂ
ಎಸ್. ರುದ್ರೇಗೌಡ                               05,73,175 ರೂ
ಆಯನೂರು ಮಂಜುನಾಥ್              15,866 ರೂ
ಪುಟ್ಟಣ್ಣ                                             56,565 ರೂ
ಮರಿತಿಬ್ಬೇಗೌಡ                                  06,080 ರೂ
ಎಸ್. ವಿ. ಸಂಕನೂರ                           46,300 ರೂ
ಜಯಮ್ಮ                                            07,610 ರೂ
ಎಸ್. ರುದ್ರೇಗೌಡ                               08,09,949 ರೂ
ಕೆ. ಸಿ .ಕೊಂಡಯ್ಯ                              03,94,232 ರೂ
ಎಂ.ಸಿ.ವೇಣುಗೋಪಾಲ್                   17,217 ರೂ
ಸಿ. ಎಂ. ಲಿಂಗಪ್ಪ                               28,550 ರೂ
ಸಿ. ಎಂ. ಲಿಂಗಪ್ಪ                               65,000 ರೂ
ಪಿ. ಆರ್. ರಮೇಶ್                              04,70,469 ರೂ
ಪ್ರಕಾಶ್ ರಾಥೋಡ್                           11,733 ರೂ
ಸಂದೇಶ ನಾಗರಾಜ್                           26,590 ರೂ
ಕೆ.ಟಿ.ಶ್ರೀಕಂಠೇಗೌಡ                            62,086 ರೂ
ಬಸವರಾಜ್ ಪಾಟೀಲ್ ಇಟಗಿ            21,900 ರೂ

ಅತಿ ಹೆಚ್ಚು ಭತ್ಯೆ ಪಡೆದವರು
-ಎಸ್. ರುದ್ರೇಗೌಡ       08,09,949 ರೂ
-ಎಸ್. ರುದ್ರೇಗೌಡ       05,73,175 ರೂ
-ಪಿ. ಆರ್. ರಮೇಶ್      04,70,469 ರೂ
-ಕೆ. ಸಿ .ಕೊಂಡಯ್ಯ      03,94,232 ರೂ
ಅತೀ ಹೆಚ್ಚು ಬಾರಿ ಭತ್ಯೆ ಪಡೆದವರು

ಟಿ.ಎ ಸರವಣ-6 ಬಾರಿ
-ಟಿ .ಎ ಶರವಣ            19,713 ರೂ
-ಟಿ. ಎ. ಶರವಣ           71,522 ರೂ
-ಟಿ. ಎ. ಶರವಣ           69,063 ರೂ
-ಟಿ .ಎ. ಶರವಣ           27,785 ರೂ
-ಟಿ .ಎ. ಶರವಣ           20,530 ರೂ
-ಟಿ. ಎ. ಶರವಣ           29,793 ರೂ

ಜಯಮ್ಮ-4 ಬಾರಿ
-ಜಯಮ್ಮ        66,528 ರೂ
-ಜಯಮ್ಮ        07,610 ರೂ
-ಜಯ್ಯಮ್ಮ      42,670 ರೂ
-ಜಯಮ್ಮ-      2,706 ರೂ

————————————————————————————————————————————————————————

2021ನೇ ಸಾಲಿನಲ್ಲಿ ವೈದ್ಯಕೀಯ ಭತ್ಯೆ ಪಡೆದವರು:ಇನ್ನು 2021ನೇ ಸಾಲಿಗೆ ಅನ್ವಯವಾಗುವಂತೆ ವೆಂಕಟೇಶ್ ಅವರು ಕೇಳಿದ ಪ್ರಶ್ನೆಗೆ ನೀಡಲಾಗಿರುವ ಮಾಹಿತಿಯಂತೆ 33 ಸದಸ್ಯರು ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ.ಅದರಲ್ಲಿ ಅತೀ ಹೆಚ್ಚಿನ ಮೊತ್ತವನ್ನು ಎಸ್.ರುದ್ರೇಗೌಡ(8,67,034 ರೂ)
ಕೆ.ಎ.ತಿಪ್ಪೇಸ್ವಾಮಿ 4,27,202 ರೂ, ಅರವಿಂದ ಕುಮಾರ್ ಅರಳಿ 3,50,646 ರೂ,
ಸಂದೇಶ್ ನಾಗರಾಜು 3,33,917 ರೂ ಹಾಗೂ  ಸುನೀಲ್‌ಗೌಡ ಬಿ ಪಾಟೀಲ್ ಅವರು 3,21,391 ರೂ ಗಳನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ಈ ವರ್ಷದಲ್ಲಿ  ಸಿಎಂ ಇಬ್ರಾಹಿಂ ಹೆಚ್ಚು ಅಂದ್ರೆ ನಾಲ್ಕು ಬಾರಿ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ ಒಮ್ಮೆ 9,000 ರೂ,1,63,472 ರೂ,1,69,830 ರೂ ಹಾಗೂ 2,34,598 ರೂ ಗಳನ್ನು ಪ್ರತ್ಯೇಕ ದಿನಗಳಂದು ಪಡೆದಿರುವುದು ದಾಖಲೆಗಳಿಂದ ದೃಡಪಟ್ಟಿದೆ.ಅವರ ನಂತರ ಸುನೀಲ್ ವಲ್ಯಾಪುರೆ ಮೂರು ಬಾರಿ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ. ಒಮ್ಮೆ 2,90,324 ರೂ,ಇನ್ನೊಮ್ಮೆ 10,539 ರೂ ಹಾಗೂ ಮತ್ತೊಮ್ಮೆ 18,865 ರೂ ಗಳನ್ನು ಪಡೆದುಕೊಂಡಿದ್ದಾರೆ. ಅವುಗಳ ಸಮಗ್ರ ವಿವರ ಕೆಳಕಂಡಂತಿದೆ.

2021ನೇ ಸಾಲಿನಲ್ಲಿ ವೈದ್ಯಕೀಯ ಭತ್ಯೆ ಪಡೆದವರು
01. ಕೆ.ಎ.ತಿಪ್ಪೇಸ್ವಾಮಿ-                      19.264 ರೂ
02. ಸಿ.ಎಂ.ಇಬ್ರಾಹಿಂ-                        9,000 ರೂ
03. ಕೆ.ಎ.ತಿಪ್ಪೇಸ್ವಾಮಿ-                      4,27,202 ರೂ
04. ಸುನೀಲ್ ವೈ ವಲ್ಯಾಪೂರೆ-          2,90,324 ರೂ
05. ಕೆ.ವಿ.ನಾರಾಯಣಸ್ವಾಮಿ-           4,98,286 ರೂ
06. ಆರ್.ಧರ್ಮಸೇನ-                         68,975 ರೂ
07. ಪ್ರಕಾಶ್ ಕೆ ರಾಥೋಡ್-               4,202 ರೂ
08. ಸುನೀಲ್‌ಗೌಡ ಬಿ ಪಾಟೀಲ್-        3,21,391 ರೂ
09. ಸಿ.ಎಂ.ಇಬ್ರಾಹಿಂ-                        1,63,472 ರೂ
10. ಆರ್.ಧರ್ಮಸೇನ-                         5,929 ರೂ
11. ಸಂದೇಶ್ ನಾಗರಾಜು                   3,33,917 ರೂ
12. ಸಿ.ಎಂ.ಇಬ್ರಾಹಿಂ-                        1,69,830 ರೂ
13. ಡಾ.ತಳವಾರ ಸಾಬಣ್ಣ-               33,338 ರೂ
14. ಅಲ್ಲಂ ವೀರಭದ್ರಪ್ಪ-                  731 ರೂ
15. ಸುನೀಲ್ ವೈ ವಲ್ಯಾಪೂರೆ-          18,865 ರೂ
16. ಎಸ್.ವಿ.ಸಂಕನೂರ-                    1,30,900 ರೂ
17. ಎಸ್.ರುದ್ರೇಗೌಡ-                         8,67,034 ರೂ
18. ಅ.ದೇವೇಗೌಡ-                             85,774 ರೂ
19. ಪುಟ್ಟಣ್ಣ-                                      41,871 ರೂ
20. ಯು.ಬಿ.ವೆಂಕಟೇಶ್-                    10,316 ರೂ
21. ಫೋಟ್ನೆಕರ್ ಶ್ರೀಕಾಂತ ಲಕ್ಷ್ಮಣ- 69,053 ರೂ
22. ರಘುನಾಥ್ ರಾವ್ ಮಾಲ್ಕಾಪೂರೆ- 13,185 ರೂ
23. ಕೆ.ಪ್ರತಾಪಚಂದ್ರ ಶೆಟ್ಟಿ-               16,568 ರೂ
24. ಶ್ರೀನಿವಾಸ ವಿ ಮಾನೆ-                   50,693 ರೂ
25. ಬಸವರಾಜ ಪಾಟೀಲ್ ಇಟಗಿ-      52,749 ರೂ
26. ವಿ.ಎಸ್.ಉಗ್ರಪ್ಪ-                          16,959 ರೂ
27. ಸಿ.ಎಂ.ಇಬ್ರಾಹಿಂ-                        2,34,598 ರೂ
28. ಆರ್.ಪ್ರಸನ್ನ ಕುಮಾರ್-               35,000 ರೂ
29. ಬಸವರಾಜ ಪಾಟೀಲ್ ಇಟಗಿ-      75,530 ರೂ
30. ಅ.ದೇವೇಗೌಡ-                             27,743 ರೂ
31. ಅರವಿಂದ ಕುಮಾರ್ ಅರಳಿ-       3,50,646 ರೂ
32. ಕೆ.ಪ್ರತಾಪಚಂದ್ರ ಶೆಟ್ಟಿ-               27,660 ರೂ
33. ಸುನೀಲ್ ವಲ್ಯಾಪೂರ-                10,539 ರೂ

ಅತೀ ಹೆಚ್ಚು ಮೊತ್ತದ ಭತ್ಯೆ ಪಡೆದವರು

-ಎಸ್.ರುದ್ರೇಗೌಡ-                               8,67,034 ರೂ
-ಕೆ.ಎ.ತಿಪ್ಪೇಸ್ವಾಮಿ-                            4,27,202 ರೂ
-ಅರವಿಂದ ಕುಮಾರ್ ಅರಳಿ-             3,50,646 ರೂ
-ಸಂದೇಶ್ ನಾಗರಾಜು                         3,33,917 ರೂ
-ಸುನೀಲ್‌ಗೌಡ ಬಿ ಪಾಟೀಲ್-              3,21,391 ರೂ

ಅತೀ ಹೆಚ್ಚು ಭತ್ಯೆ ಪಡೆದವರು ಭತ್ಯೆ ಪಡೆದವರು

ಸಿ.ಎಂ.ಇಬ್ರಾಹಿಂ-  ನಾಲ್ಕು ಬಾರಿ
-ಸಿ.ಎಂ.ಇಬ್ರಾಹಿಂ-                  9,000 ರೂ
-ಸಿ.ಎಂ.ಇಬ್ರಾಹಿಂ-                  1,63,472 ರೂ
-ಸಿ.ಎಂ.ಇಬ್ರಾಹಿಂ-                  1,69,830 ರೂ
-ಸಿ.ಎಂ.ಇಬ್ರಾಹಿಂ-                  2,34,598 ರೂ

ಸುನೀಲ್ ವಲ್ಯಾಪುರೆ-ಮೂರು ಬಾರಿ
-ಸುನೀಲ್ ವೈ ವಲ್ಯಾಪೂರೆ-    2,90,324 ರೂ
-ಸುನೀಲ್ ವಲ್ಯಾಪೂರ-          10,539 ರೂ
-ಸುನೀಲ್ ವೈ ವಲ್ಯಾಪೂರೆ-    18,865 ರೂ

ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಜನ ಸೇವೆ ಮಾಡದೆಯೇ..ಮನೆಯಿಂದ ಹೊರಗೆ ಕಾಲಿಡದೆಯೆ ವಕ್ಕರಿಸಿದ ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ಬಿಲ್ ನ್ನು ಕ್ಲೇಮ್ ಮಾಡಿಕೊಂಡ ನಮ್ಮ ಎಮ್ಮೆಲ್ಸಿಗಳೇ ಪುಣ್ಯವಂತರು..ಇಂಥವರನ್ನು ಪಡೆದ ನಾವೇ ಭಾಗ್ಯವಂತರು.

 

Spread the love
Leave A Reply

Your email address will not be published.

Flash News