BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜ್ಯ-ರಾಜಧಾನಿ

ಶಾಕಿಂಗ್..ಶಾಕಿಂಗ್ ನ್ಯೂಸ್…ಮಕ್ಕಳ ಸಾಗಾಟ ಜಾಲದ ಕಿಂಗ್ ಪಿನ್ BMTC ಚಾಲಕ ಮಹೇಶ್..?!

ಬೆಂಗಳೂರು’ಕೇವಲ ಬಿಎಂಟಿಸಿ ಒಂದೇ ಅಲ್ಲ 4ಸಾರಿಗೆ ನಿಗಮಗಳು ಸೇರಿದಂತೆ ಇಡೀ ಸಾರಿಗೆ ಇಲಾಖೆ ಈ ಸುದ್ದಿಯನ್ನು ಕೇಳಿ ಬೆಚ್ಚಿಬಿದ್ದಿದ್ದೆ ತಮ್ಮ ನಿಗಮದಲ್ಲಿ ಕೆಲಸ ಮಾಡುವ ಕಾರ್ಮಿಕನೋರ್ವ ಮಕ್ಕಳ ಕಳ್ಳ ಸಾಗಣೆಯಲ್ಲಿ ಕಿಂಗ್ ಪಿನ್ ಆಗಿ ಪೋಲಿಸರಿಗೆ ಅತಿಥಿ ಆಗಿರುವಂತದ್ದು ಈಗ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಡಿಪೋ 13ರ (ಕಾಮಾಕ್ಯ ವೋಲ್ವೋ  ಡಿಪೋ)ರಲ್ಲಿ ಡ್ರೈವರ್ ಕಮ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಈ ದಂಧೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗುತ್ತಿದೆ.

ಹೌದು…ಮಕ್ಕಳ ಕಳ್ಳ ಸಾಗಣೆಯಲ್ಲಿ ಸಿಕ್ಕಿಬಿದ್ದಿರುವ ಖತರ್ನಾಕ್ ಆರೋಪಿಗಳಲ್ಲಿ, ಆ ಗುಂಪಿನ ಮುಖ್ಯಸ್ಥ ಮಹೇಶ್ ಎಂಬಾತ ಬಿಎಂಟಿಸಿಯ ಚಾಲಕ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಬಿಎಂಟಿಸಿಯಲ್ಲಿ  ಸೇವೆ ಆರಂಭಿಸಿದಾಗಿನಿಂದಲೂ ಕೇವಲ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಈ ರೀತಿಯಾದಂಥ ಮಾಹಿತಿಗಳನ್ನು ಕಲೆಹಾಕಿ ಬೆಳಗ್ಗೆ ನಿದ್ದೆಯನ್ನು ಮಾಡದೆ ವಿಶ್ರಾಂತಿಯನ್ನೂ ಪಡೆಯದೆ  ಸ್ಕೆಚ್ ಮೇಲೆ ಮಕ್ಕಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ರಾತ್ರಿ ಡ್ಯೂಟಿಯಲ್ಲಿ ಬಸ್ಸನ್ನು ಚಾಲನೆ ಮಾಡುವ ಸಂದರ್ಭದಲ್ಲಿ ಸ್ಲಮ್ ಗಳ ಬಳಿ ಬಸ್ ಗಳನ್ನು  ಸ ಪಾರ್ಕ್ ಮಾಡಿ ಇದ್ದಕ್ಕಿದ್ದಂಗೆ ಗಾಯಬ್ ಆಗುತ್ತಿದ್ದ  ಮಹೇಶ್ ಅಲ್ಲಿನ ಮಾಹಿತಿ ಕಲೆ ಹಾಕುತ್ತಿದ್ದನಂತೆ.

ಅದರಲ್ಲೂ ಮಕ್ಕಳ ಅಳು ಕೇಳಿದ್ರೆ ಅದನ್ನು ಗುರುತು ಮಾಡಿ ಬೆಳಗ್ಗೆ ಸ್ಥಳಕ್ಕೆ ವಿಸಿಟ್ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದನಂತೆ.

ಆಶ್ಚರ್ಯ ಹಾಗೂ ಗಾಬರಿ ಆಗುವಂತ ವಿಚಾರ ಎಂದ್ರೆ ಆತ ತನ್ನ ಈ ಕಾರ್ಯಕ್ಕೆ ನೆಟ್ ವರ್ಕ್ ಕೂಡ ರೂಪಿಸಿಕೊಂಡಿದ್ದನಂತೆ.

ಅನೇಕ ವರ್ಷಗಳಿಂದಲೂ‌ ನಿಯಮಬಾಹಿರವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶನ ವರ್ತನೆಯ ಬಗ್ಗೆ ಸಾಕಷ್ಟು ಬಾರಿ ಅನೇಕರು ದೂರು ಕೂಡ ನೀಡಿದ್ದರಂತೆ.

55 ವರ್ಷ ಮೇಲ್ಪಟ್ಟವರಿಗೆ ನೈಟ್ ಶಿಫ್ಟ್ ಡ್ಯೂಟಿ ಕೊಡದೆ ಈತನಿಗೇನೆ ಪ್ರತ್ಯೇಕವಾಗಿ‌ ರೂಲ್ಸ್ ಫ್ರೇಮ್ ಮಾಡಿರುವುದು ಅನ್ಯಾಯ ಅಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರಂತೆ.

ಆದರೆ ಲಂಚಬಾಕ ಅಧಿಕಾರಿಗಳು ಮಾತ್ರ ಆತನಿಂದ ಹಣ ಪಡೆದು ಆತನ ಕಾಯಕ ಮುಂದುವರೆಸೊಕ್ಕೆ ಪರೋಕ್ಷವಾಗಿ ಪ್ರಚೋದನೆ ನೀಡಿದ್ದಾರೆನ್ನಲಾಗುತ್ತಿದೆ..

ಅದೇನೇ ಆಗಲಿ ಪುಟ್ಟಮಕ್ಕಳನ್ನು, ಹಸುಕಂದಮ್ಮಗಳು, ಹಸುಳೆಗಳನ್ನು ಟಾರ್ಗೆಟ್ ಮಾಡಿ ಅವರನ್ನು ಶ್ರೀಮಂತರಿಗೆ ಅಥವಾ ದಂಧೆಕೋರರಿಗೆ ಹಣ ಪಡೆದು ಮಾರಾಟ ಮಾಡುವಂತಹ ಕೆಲಸವನ್ನು ಮಹೇಶ್ ಮಾಡುತ್ತಿದ್ದ ಎನ್ನುವ ಸಂಗತಿಯನ್ನು ತಿಳಿದು ಇಡೀ ಡಿಪಾರ್ಮೆಂಟ್ ದಿಗ್ಭ್ರಾಂತವಾಗಿದೆ. ಇಂತಹ ನೌಕರರನ್ನು ಕಾರ್ಯದಲ್ಲಿ ಮುಂದುವರೆಸಬೇಕಾ ತಕ್ಷಣವೇ ಆತನನ್ನು ತೆಗೆಯಬೇಕೆನ್ನುವ ಮಾತುಗಳು ಕೇಳಿ ಬರುತ್ತಿವೆ

Spread the love

Related Articles

Leave a Reply

Your email address will not be published.

Back to top button
Flash News