Breakinglock downMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

NO ALLOWENCE FOR AYUDHAPOOJA WHAT A INJUSTICE.. : ಇದೆಂಥಾ ಅನ್ಯಾಯ…?! ಇದೇನಿದು “ಶೋ ಅಪ್” ಸಚಿವ ಶ್ರೀರಾಮುಲು ಅವ್ರೇ,.. ಸಾರಿಗೆ ಕಾರ್ಮಿಕರಿಗೆ ಈ ಬಾರಿ “ಆಯುಧಪೂಜೆ ಭತ್ಯೆ”ಯೇ ಇಲ್ಲ.?!

ಬೆಂಗಳೂರು:ಸಾರಿಗೆ ಕಾರ್ಮಿಕರಿಗೆ ವರ್ಷದಲ್ಲಿ ಯಾವ್ ಹಬ್ಬ ಮಹತ್ವ ಪಡೆಯುತ್ತೆ ಇಲ್ಲವೋ ಗೊತ್ತಿಲ್ಲ.ಆದ್ರೆ ಆಯುಧಪೂಜೆಗೆ ಎಲ್ಲಿಲ್ಲದ ಮಹತ್ವವಿದೆ.ಆಯುಧಪೂಜೆ ಎಂದ್ರೆ ಅವರ ಪಾಲಿಗೆ ಕೇವಲ ಒಂದು ಹಬ್ಬವಲ್ಲ,ಆಚರಣೆಯಲ್ಲ,ಅದು ಅವರ ಅಸ್ಮಿತೆ.. ಸಂಭ್ರಮ.. ಭಾವನಾತ್ಮಕತೆ..ಸಂಬಳವಾಗಲಿ ಬಿಡಲಿ..ಜೇಬಲ್ಲಿ ಹಣವಿರಲಿ,ಇಲ್ಲದೇ ಇರಲಿ,ಸಾಲ ಮಾಡಿಯಾದ್ರೂ ಹೂವು-ಬಾಳೆ ಕಂದು-ತಳಿರು ತೋರಣಗಳನ್ನು ಖರೀದಿಸಿ ಬಸ್ ಗಳನ್ನು ಚೆನ್ನಾಗಿ ತೊಳೆದು ಮದುವಣಗಿತ್ತಿಯಂತೆ ಸಿಂಗರಿಸಿ ಸಂಭ್ರಮಿಸುವುದು ಅವರ ವಾಡಿಕೆ. ಸಂಪ್ರದಾಯ.ಬಸ್ ಗಳನ್ನು ತೇರಿನಂತೆ ಆಲಂಕರಿಸಿ ದೊಡ್ಡದಾದ ಧ್ವನಿಯಲ್ಲಿ ಹಾಡನ್ನು ಹಾಕಿ, ಒಂದು ಸುತ್ತು ಹಾಕಿದರೇನೇ ಆಯುಧಪೂಜೆಗೆ ಸಾರ್ಥಕತೆ..ಅದನ್ನು ಇಲಾಖೆ ಕೂಡ ಪ್ರೋತ್ಸಾಹಿಸುತ್ತಿತ್ತು.ಅದಕ್ಕೆ ಬೇಕಾದ ಹಣವನ್ನು ಭತ್ಯೆಯ ರೂಪದಲ್ಲಿ ಕೊಡುತ್ತಿತ್ತು ಕೂಡ..

ಆದ್ರೆ..ಆದ್ರೆ ಈ ಬಾರಿ ಆಯುಧಪೂಜೆಯ ಸಂಭ್ರಮವೇ ನಾಲ್ಕು ಸಾರಿಗೆ ನಿಗಮಗಳಲ್ಲಿ ಕಾಣುತ್ತಿಲ್ಲ.ಕಾರ್ಮಿಕರ ಮುಖದಲ್ಲಿ ಆ ಮಂದಹಾಸವೂ ಇಲ್ಲ. ಮನಸಲ್ಲಿ ಹಬ್ಬ ಆಚರಿಸುವ ಸಂಭ್ರಮವೂ ಇಲ್ಲ.ಇದಕ್ಕೆಲ್ಲಾ ಕಾರಣ ಸಂಬಳ..ಸಂಬಳ..ಸಂಬಳ.. ಕಾರ್ಮಿಕರಿಗೆ ಕಳೆದ ಎರಡು ತಿಂಗಳಿಂದ ಸಂಬಳವೇ ಸಿಕ್ಕಿಲ್ಲವಂತೆ..ಇದು ಆಯುಧಪೂಜೆ ಆಚರಿಸುವ ಸಂಭ್ರಮವನ್ನೇ ಕಾರ್ಮಿಕರಲ್ಲಿ ಮೂಡಿಸಿಲ್ಲ.ಇದರ ಜತೆಗೆ ಆಯುಧಪೂಜೆ ಭತ್ಯೆಯನ್ನೂ ಬಿಡುಗಡೆ ಮಾಡಿಲ್ಲ..ಭತ್ಯೆ ಇಲ್ಲದಿದ್ದರೆ ಅಟ್ಲೀಸ್ಟ್ ಸಂಬಳದಿಂದಲಾದ್ರೂ ಖರ್ಚನ್ನು ನಿಭಾಯಿಸಿ ಆಯುಧಪೂಜೆ ಆಚರಿಸುತ್ತಿದ್ದ ಕಾರ್ಮಿಕರಿಗೆ ಕಳೆದೆರೆರಡು ತಿಂಗಳಿಂದ ಕೈ ಸೇರದ ಸಂಬಳವೇ ಕಾರ್ಮಿಕರ ಮನಸ್ತಿತಿಗೆ ಕಾರಣ.

ನಾಲ್ಕು ಸಾರಿಗೆ ನಿಗಮಗಳಲ್ಲಿ 1.25 ಲಕ್ಷದಷ್ಟು ಕಾರ್ಮಿಕರಿದ್ದಾರೆ.ಅವರಲ್ಲಿ ಶೇಕಡಾ 10 ರಷ್ಟು ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡ ತಪ್ಪಿಗೆ ಶಿಸ್ತು ಕ್ರಮಕ್ಕೆ ಒಳಗಾಗಿ ಕೆಲಸ ಕಳೆದುಕೊಂಡು ಮನೆಯಲ್ಲಿ ಉಳಿದಿದ್ದಾರೆ.ಆ ಕಾರ್ಮಿಕರಿಗಂತೂ ಸಂಬಳವಿಲ್ಲದೆ ಸಾಕಷ್ಟು ತಿಂಗಳುಗಳೆ ಕಳೆದಿವೆ.ಇನ್ನು ಕೆಲಸದಲ್ಲಿರುವ ಕಾರ್ಮಿಕರ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.ಕಳೆದ 2 ತಿಂಗಳಿಂದಲೂ ಕಾರ್ಮಿಕರಿಗೆ ಸಂಬಳ ಕೈ ಸೇರಿಲ್ಲ.ಅಟ್ಲೀಸ್ಟ್ ಇವರಾದ್ರೂ ಆಯುಧಪೂಜೆ ಮಾಡಬಹುದೆನ್ನುವ ನಿರೀಕ್ಷೆಗಳು ಈ ಕಾರಣಕ್ಕೆ ಕಮರಿ ಹೋಗಿವೆ.ಇದರ ಜತೆಗೆ ಆಯುಧಪೂಜೆಗೆ ಬಿಡುಗಡೆಯಾಗುತ್ತಿದ್ದ ಭತ್ಯೆ ಯನ್ನೂ ನೀಡಿಲ್ಲ.ಸಂಬಳವಾಗಿಲ್ಲ ಎನ್ನೋದರ ಜತೆಗೆ ಭತ್ಯೆ ಬಿಡುಗಡೆ ಮಾಡದಿರುವುದು ಕಾರ್ಮಿಕರು ತಮ್ಮ ಬಸ್ ಗಳ ಬಗ್ಗೆ..ಅವುಗಳನ್ನು ಸ್ವಚ್ಛಗೊಳಿಸುವ ಬಗ್ಗೆಯಾಗಲಿ ತಲೆಕೆಡಿಸಿಕೊಳ್ಳದಂತೆ ಮಾಡಿದೆ.

ಅಂದ್ಹಾಗೆ ಸಾರಿಗೆ ಕಾರ್ಮಿಕರು ಆಯುಧಪೂಜೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾ ಬಂದಿರುವುದರಿಂದ ಆಡಳಿತ ಮಂಡಳಿ ಪ್ರತಿ ವರ್ಷ ಕೋಟ್ಯಾಂತರ ಹಣವನ್ನು ಇದಕ್ಕೆಂದೇ ಮೀಸಲಿರಿಸುತ್ತದೆ.ಆದರೆ ಪ್ರತಿ ಬಸ್ ಗಳಂತೆ ಇದು ಲೆಕ್ಕ ಹಾಕಿದ್ರೆ ಆನೆ ಬಾಯಿಗೆ ಅರೆಕಾಸಿನ ಮಜ್ಜಿಗೆ ಎನ್ನುವಷ್ಟು ಅಲ್ಪ ಪ್ರಮಾಣದ್ದಾಗಿತ್ತು.ಇಲಾಖೆ ಕಡಿಮೆ ಕೊಟ್ಟರೂ ತಮಗೆ ವರ್ಷಪೂರ್ತಿ ಅನ್ನ ಕೊಡುವ ಬಸ್ ಗಳನ್ನು ಅಲಂಕರಿಸುವ  ಸಂಭ್ರಮಕ್ಕೆ ತಮ್ಮ ಜೇಬಿನಿಂದಲೇ ಹಣ ಹಾಕಿ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದ್ದರು.ಇಲಾಖೆ ಕೊಡುವ ಪುಡಿಗಾಸಿನ ಭತ್ಯೆಗೆ ಎಂದೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಅದಕ್ಕೆ ತಗಾದೆಯನ್ನೂ ತೆಗೆಯುತ್ತಿರಲಿಲ್ಲ..ಹೇಗೊ ನಡೆದುಕೊಂಡು ಹೋಗಿಬಿಡುತ್ತಿತ್ತು.

 “ತಿನ್ನೊಕ್ಕೆ ಅನ್ನವಿಲ್ಲ ಸಾರ್..ಮನೆಯಲ್ಲಿ ಸಾಮಾನು ಸರಂಜಾಮು ಇಲ್ಲ..ಸಂಬಳವಿಲ್ಲದೆ ಹಬ್ಬಗಳನ್ನೇ ಆಚರಿಸಿಲ್ಲ..ದಿನದ ಜೀವನ ನಿರ್ವಹಣೆಯೇ ಕಷ್ಟವಾಗ್ಹೋಗಿದೆ.ಇಂಥಾ ಸನ್ನಿವೇಶದಲ್ಲಿ ಎಲ್ಲಿಂದ ದುಡ್ಡು ತಂದು ಬಸ್ ಗಳನ್ನು ಅಲಂಕರಿಸುವುದು..ಹತ್ತಿರತ್ತಿರ 1 ಸಾವಿರ ಬೇಕು..ಯಾರ್ ಹತ್ರ ಇದೆ ಹಣ..ಇದು ನಮ್ಮ ವೃತ್ತಿ ಬದುಕಿನಲ್ಲಿ ಅತ್ಯಂತ ನೋವಿನ ಕ್ಷಣ..” ಎಂದು ಬೇಸರದಿಂದ ನುಡಿಯುತ್ತಾರೆ ಅನೇಕ ಸಾರಿಗೆ ಕಾರ್ಮಿಕರು.

“ಹಬ್ಬಕ್ಕೆ ಬೇಡ..ಆಯುಧಪೂಜೆಗಾದ್ರೂ ಸಾಲ ಕೊಡಿ ಎಂದು ಕೇಳಿದ್ರೆ ಹಣವನ್ನೇ ಕೊಡ್ತಿಲ್ಲ..ನಮ್ಮ ಜತೆ ಕೆಲಸ ಮಾಡುವ ನಮ್ಮ ಮೇಲಾಧಿಕಾರಿಗಳು,ಡಿಪೋ ಮ್ಯಾನೇಜರ್ ಗಳನ್ನು ಕೇಳಿದ್ರೆ ಅವರಿಂದಲೂ ನಮಗೆ ಹಣ ಸಿಕ್ಕಿಲ್ಲ..ಬೇರೆ ಯಾರಿಂದಲು ನಮಗೆ ಸಾಲವೇ ಹುಟ್ಟುತ್ತಿಲ್ಲ.ನಮಗೆ ಇಂಥಾ ದುರ್ದಿನಗಳು ಬರುತ್ತವೆ ಎಂದು ಭಾವಿಸಿರಲಿಲ್ಲ” ಎನ್ನುತ್ತಾರೆ ಬಿಎಂಟಿಸಿ ನೌಕರ ಯೋಗೇಶ್ ಕುಮಾರ್.

“ಸಾರಿಗೆ ಕಾರ್ಮಿಕರ ಸ್ತಿತಿ ಇಷ್ಟೊಂದು ಶೋಚನೀಯವಾಗಿರುವುದಕ್ಕೆ ನಮ್ಮ ಸರ್ಕಾರ-ಆಡಳಿತ ವ್ಯವಸ್ಥೆಗಳೇ ಕಾರಣ ಎನ್ನುವುದು ಸಾರಿಗೆ ಕಾರ್ಮಿಕರ ಯೂನಿಯನ್ ಗಳ ಮುಖಂಡರು.ಕಾರ್ಮಿಕರ ಸ್ತಿತಿ ಸಂಬಳವಿಲ್ಲದೆ ತೀವ್ರ ಶೋಚನೀಯವಾಗಿದೆ.ಹಬ್ಬಗಳನ್ನು ಆಚರಿಸಿಲ್ಲ..ದಸರಾ.ಆಯುಧಪೂಜೆ ಹಬ್ಬಗಳ ಆಚರಣೆಯೂ  ಈ ಬಾರಿ ನಮ್ಮ ಕಾರ್ಮಿಕರಿಗೆ ಗಗನ ಕುಸುಮ ಎನಿಸುತ್ತೆ.ಸಾರಿಗೆ ಸಚಿವ ಶ್ರೀರಾಮುಲು ಈ ಬಗ್ಗೆ ಆಲೋಚಿಸಬೇಕು. ಅಧಿಕಾರಿಗಳಿಗೆ ಸಂಬಳ ಮಾಡಿ ಕಾರ್ಮಿಕರಿಗೆ ಸಂಬಳ ಕೊಡದಿರುವುದು ಯಾವ ನ್ಯಾಯ..” ಎನ್ನೋದು ಸಾರಿಗೆ ಮುಖಂಡ ಆನಂದ್ ಪ್ರಶ್ನೆ.

ಈ ಬಗ್ಗೆ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರೆ ಸಿಕ್ಕಿದ್ದು ಕೇವಲ ಹಾರಿಕೆ ಉತ್ತರ ಅಷ್ಟೇ..”ಸಂಬಳ-ಭತ್ಯೆ ಕೊಡಬಾರದೆಂದೇನೂ ಅಲ್ಲ,ಕೆಲವು ತಾಂತ್ರಿಕ-ಆಡಳಿತಾತ್ಮಕ ತೊಡಕುಗಳಿವೆ ಅಷ್ಟೇ..ನಮಗೂ ಗೊತ್ತು ಆಯುಧಪೂಜೆಯ ಮಹತ್ವ.ಕಾರ್ಮಿಕರ ಭಾವನೆಗಳ ಜತೆಗೆ ಮನಸನ್ನು ನೋಯಿಸಬೇಕೆನ್ನುವ ಉದ್ದೇಶ ನಮ್ಮದಲ್ಲ,ಮೇಲಾಧಿಕಾರಿಗಳ ಜತೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು..” ಎನ್ನುತ್ತಾರೆ ಸಾರಿಗೆ ನಿಗಮಗಳ ಅಧಿಕಾರಿಗಳು.

ಸಾರಿಗೆ ಕಾರ್ಮಿಕರ ಪಾಲಿನ ಅತ್ಯಂತ ಸಂಭ್ರಮದ ಆಯುಧಪೂಜೆಗೆ ಈ ಬಾರಿ ಸಂಬಳ ಹಾಗೂ ಭತ್ಯೆ ದೊಡ್ಡ ತೊಡಕಾಗಿದೆ.ಕಳೆದ ಎರಡು ತಿಂಗಳಿಂದ ಕೈ ಸೇರದ ಸಂಬಳದಿಂದ ಕಾರ್ಮಿಕರ ಜೀವನಗಳು ದುಸ್ತರವಾಗಿದೆ.ಅವರ ಬವಣೆಗಳನ್ನು ಅರ್ಥ ಮಾಡಿಕೊಳ್ಳುವವರೇ ಇಲ್ಲವಾಗಿದೆ.ಈ ನಡುವೆ ಸಾರಿಗೆ ಸಚಿವ ಶ್ರಿರಾಮುಲು ಕೇವಲ ಶೋ ಅಪ್ ಕೊಟ್ಟಿಕೊಂಡು ಅಡ್ಡಾಡುವುದರಲ್ಲಿ ಅದೇನ್ ಅರ್ಥ-ಸಾರ್ಥಕತೆ ಇದೆಯೋ ಗೊತ್ತಾಗ್ತಿಲ್ಲ.

NO ALLOWENCE FOR AYUDHAPOOJA WHAT A INJUSTICE..: ಇದೆಂಥಾ ಅನ್ಯಾಯ…?! ಇದೇನಿದು “ಶೋ ಅಪ್” ಸಚಿವ ಶ್ರೀರಾಮುಲು ಅವ್ರೇ,.. ಸಾರಿಗೆ ಕಾರ್ಮಿಕರಿಗೆ ಈ ಬಾರಿ “ಆಯುಧಪೂಜೆ ಭತ್ಯೆ”ಯೇ ಇಲ್ಲ.?!

Spread the love

Related Articles

Leave a Reply

Your email address will not be published.

Back to top button
Flash News