BMTC DRIVER SUCIDE:ಮೊನ್ನೆ ಒಂದಿಡೀ ಕುಟುಂಬ..ನಿನ್ನೆ ಬಿಎಂಟಿಸಿ ಚಾಲಕ ಆತ್ಮಹತ್ಯೆ.. ಎಚ್ಚೆತ್ತುಕೊಳ್ಳೊಕ್ಕೆ ಇನ್ನೆಷ್ಟು ಬಲಿ ಬೇಕು ಸಾರಿಗೆ ಸಚಿವರೇ?!

ಮೇಲಾಧಿಕಾರಿಗಳ ಕಿರುಕುಳಕ್ಕೆ ಗುಂಜೂರು ಡಿಪೋ ಡ್ರೈವರ್ ಜಟ್ಟೆಪ್ಪ ಆತ್ಮಹತ್ಯೆ-ಸಾಯೊಕ್ಕೆ ಮುನ್ನ ಆಡಿಯೋ ಮಾಡಿದ ನತದೃಷ್ಟ

0

ಬೆಂಗಳೂರು/ಸಿಂಧಗಿ: ಮೇಲಾಧಿಕಾರಿಗಳ ಕಿರುಕುಳಕ್ಕೆ ಬಿಎಂಟಿಸಿ ಕಾರ್ಮಿಕ ಬಲಿಯಾಗಿದ್ದಾನೆ. ಸಿಂಧಗಿ ಮೂಲದ ಡಿಪೋ ಜಟ್ಟೆಪ್ಪ ಪಟೇಲ್ ಮೇಲಾಧಿಕಾರಿಗಳ ಕಿರುಕುಳ ತಡೆಯಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗುಂಜೂರು ಡಿಪೋ 41 ರಲ್ಲಿ  ಡ್ರೈವರ್ ಕಮ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಜಟ್ಟೆಪ್ಪ ಆಪಾದಿಸಿರುವಂತೆ ತನಗೆ ಡಿಪೊ ಮ್ಯಾನೇಜರ್ ಹಾಗೂ ಡಿಸಿ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದರು.ಅನೇಕ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು.ಡಿಪೋದಿಂದ ಡಿಪೋಗೆ ಬೇಕಂತಲೇ ಟ್ರಾನ್ಸ್ ಫರ್ ಮಾಡುವ ಮೂಲಕ ಗೋಳೋಯ್ದುಕೊಳ್ಳುತ್ತಿದ್ದರು.ಅನೇಕ ಬಾರಿ ಕ್ಷಮೆ ಯಾಚಿಸಿದ್ರೂ ಅದೇ ಕಿರುಕುಳ ಮುಂದುವರೆಸಿದ್ದರಂತೆ.

ಮೇಲಾಧಿಕಾರಿಗಳ ಕಿರುಕುಳದಿಂದ ಅಕ್ಷರಶಃ ಬೇಸತ್ತ ಜಟ್ಟೆಪ್ಪ ಆತ್ಮಹತ್ಯೆ ನಿರ್ದಾರ ಮಾಡಿಕೊಂಡು ರಜೆ ಮೇಲೆ ತನ್ನ ಸ್ವಂತೂರಾದ ಸಿಂಧಗಿಗೆ ತೆರಳಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗು ಮುನ್ನ ಆಡಿಯೋ ಮಾಡಿ ತನ್ನ ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ ಎಂದು ಆಪಾದಿಸಿ ಆಡಿಯೋ ರೆಕಾರ್ಡ್ ಮಾಡಿದ್ದಾರೆ.

ತಾನು ಸತ್ತ ನಂತರ ತನಗೆ ಬರಬೇಕಾದ ಎಲ್ಲಾ ಸವಲತ್ತುಗಳನ್ನು ತನ್ನ ಹೆಂಡತಿ ಹಾಗು ಇಬ್ಬರು ಮಕ್ಕಳಿಗೆ ನೀಡಿ ಎಂದು ಆಡಿಯೋದಲ್ಲಿ ಉಲ್ಲೇಖಿಸಿರುವ ಜಟ್ಟೆಪ್ಪ,ಮೇಲಾಧಿಕಾರಿಗಳ ಕಿರುಕುಳವಾದ್ರೆ ದೃತಿಗೆಡಬೇಡಿ,ಧೈರ್ಯವಾಗಿ ಎದುರಿಸಿ ಸ್ನೇಹಿತರೇ..ನಾನು ಹೋಗಿ ಬರುತ್ತೇನೆಂದು ಹೇಳಿದ್ದಾರೆ.

ಜಟ್ಟೆಪ್ಪನ ಆತ್ಮಹತ್ಯೆಯಿಂದ ಸಾರಿಗೆ ನಿಗಮಗಳ ಕಾರ್ಮಿಕರಲ್ಲಿ ಆತಂಕ ಹೆಚ್ಚಿದೆ.ಮೇಲಾಧಿಕಾರಿಗಳ ಕಿರುಕುಳ ದಿನೇ ದಿನೇ ಡಿಪೋಗಳಲ್ಲಿ ಹೆಚ್ಚುತ್ತಿದ್ದರೂ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ..ಒಂದೆಡೆ ಕೆಲಸ ಕಳೆದುಕೊಂಡ ನೋವು..ಇನ್ನೊಂದೆಡೆ ತಿಂಗಳುಗಟ್ಟಲೇ ಸಂಬಳವಿಲ್ಲದೆ ಬದುಕು ನಡೆಸೋದು ದುಸ್ತರವಾಗಿರುವಂತದ್ದರಿಂದ ತೀವ್ರ ನೊಂದಿರುವ ಕಾರ್ಮಿಕರ ನೆರವಿಗೆ ಸಚಿವ ಶ್ರೀರಾಮುಲು ಧಾವಿಸದಿದ್ದರೆ ಜಟ್ಟೆಪ್ಪನಂತೆ  ಇನ್ನಷ್ಟು ಕಾರ್ಮಿಕರು ಆತ್ಮಹತ್ಯೆ ಹಾದಿ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ..

ಹಾಗಾದಲ್ಲಿ,ಸಾರಿಗೆ ಕಾರ್ಮಿಕರ  ಕುಟುಂಬಗಳ ಹಿಡಿಶಾಪ ಶ್ರೀರಾಮುಲು ಸೇರಿದಂತೆ ಸರ್ಕಾರ ಹಾಗು ಸಾರಿಗೆ ನಿಗಮಗಳ ಅಧಿಕಾರಿಗಳಿಗೆ ತಪ್ಪದೇ ಇರೊಲ್ಲ..

Spread the love
Leave A Reply

Your email address will not be published.

Flash News