ಕನ್ನಡ ಫ್ಲ್ಯಾಶ್ ನ್ಯೂಸ್ ವರದಿ ಇಂಪ್ಯಾಕ್ಟ್:ಆಯುಧಪೂಜೆಗೆ ಪ್ರತಿ ಬಸ್ ಗೆ 100 ರೂ-ಪ್ರತಿ ಡಿಪೋಗೆ 1000ರೂ ಭತ್ಯೆ ಬಿಡುಗಡೆ

ಆಯುಧಪೂಜೆ ಸಂಭ್ರಮ ಕುಗ್ಗಬಾರದು,ಅಧಿಕಾರಿಗಳು ಹಣ ಬಿಡುಗಡೆ ಮಾಡಬೇಕು..ಶೀಘ್ರವೇ ಸಂಬಳವೂ ಬಿಡುಗಡೆ

0
ಕನ್ನಡ ಫ್ಲ್ಯಾಶ್ ನ್ಯೂಸ್ ವರದಿ ಬಿತ್ತರವಾದ ಕೆಲವೇ ಗಂಟೆಗಳಲ್ಲಿ ಸಾರಿಗೆ ಸಚಿವರು ಆಯುಧಪೂಜೆ ಭತ್ಯೆ ಬಿಡುಗಡೆಗೆ ಸೂಚಿಸಿ ಹೊರಡಿಸಿರುವ ಆದೇಶದ ಪ್ರತಿ
ಕನ್ನಡ ಫ್ಲ್ಯಾಶ್ ನ್ಯೂಸ್ ವರದಿ ಬಿತ್ತರವಾದ ಕೆಲವೇ ಗಂಟೆಗಳಲ್ಲಿ ಸಾರಿಗೆ ಸಚಿವರು ಆಯುಧಪೂಜೆ ಭತ್ಯೆ ಬಿಡುಗಡೆಗೆ ಸೂಚಿಸಿ ಹೊರಡಿಸಿರುವ ಆದೇಶದ ಪ್ರತಿ

ಬೆಂಗಳೂರು:ಕನ್ನಡ ಫ್ಲ್ಯಾಶ್ ನ್ಯೂಸ್ ವರದಿಗೆ ಸಚಿವ ಶ್ರೀರಾಮುಲು ಸ್ಪಂದಿಸಿದ್ದಾರೆ.ಶೀಘ್ರವೇ ಬಾಕಿ ಸಂಬಳ ಪಾವತಿಸುವುದಾಗಿ ಹೇಳಿರುವ  ಅವರು ಆಯುಧಪೂಜೆಗೆ ಭತ್ಯೆ ಬಿಡುಗಡೆಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

“NO ALLOWENCE FOR AYUDHAPOOJA WHAT A INJUSTICE..:ಇದೆಂಥಾ ಅನ್ಯಾಯ…?! ಇದೇನಿದು “ಶೋ ಅಪ್” ಸಚಿವ ಶ್ರೀರಾಮುಲು ಅವ್ರೇ,.. ಸಾರಿಗೆ ಕಾರ್ಮಿಕರಿಗೆ ಈ ಬಾರಿ “ಆಯುಧಪೂಜೆ ಭತ್ಯೆ”ಯೇ ಇಲ್ಲ.?!” ಶೀರ್ಷಿಕೆಯಲ್ಲಿ ಬೆಳಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ವರದಿ ಬಿತ್ತರಿಸಿತ್ತಲ್ಲದೇ ಸಚಿವರ ನೈತಿಕತೆಯನ್ನೂ ಪ್ರಶ್ನಿಸಿತ್ತು.ವರದಿ ಬಿತ್ತರವಾದ ಕೆಲವೇ ಗಂಟೆಗಳಲ್ಲಿ ಆಯುಧಪೂಜೆ ಭತ್ಯೆ ಬಿಡುಗಡೆಗೆ ಆದೇಶಿಸಿದ್ದಾರೆ.

ಆಯುಧ ಪೂಜೆಯ ದಿನದಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಎಲ್ಲಾ  ಪ್ರಯಾಣಿಕ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸಂಪ್ರದಾಯದಂತೆ ಪೂಜಿಸಿ  ಎಂದು ಸಚಿವ ಶ್ರೀರಾಮುಲು ವಿನಂತಿಸಿದ್ದಾರೆ.ಪೂಜೆಗೆ ನೆರವಾಗುವಂತೆ ಪ್ರತಿ ವಾಹನಕ್ಕೆ 100 ರೂ ಮತ್ತು ಪ್ರತಿ  ವಿಭಾಗೀಯ ಕಾರ್ಯಾಗಾರಕ್ಕೆ 1000 ರೂ ಮುಂಗಡ ನಗದು ಬಿಡುಗಡೆಗೊಳಿಸುವಂತೆ ಸೂಚಿಸಿದ್ದಾರೆ.

ಆಯುಧಪೂಜೆ ನಮ್ಮ ಸಾರಿಗೆ ನಿಗಮಗಳ ಚಾಲಕ ಸಿಬ್ಬಂದಿ ಪಾಲಿಗೆ ಸಂಭ್ರಮದ ಸನ್ನಿವೇಶವಾಗಿದೆ.ಅದಕ್ಕೆ ಯಾವುದೆ ರೀತಿ ಭಂಗ ಬರಬಾರದು.ಹಾಗಾಗಿ ಅದನ್ನು ಎಂದಿನಂತೆ ಮುಂದುವರೆಸಬೇಕು.ಇದಕ್ಕೆ ಅಧಿಕಾರಿಗಳು ಪ್ರೋತ್ಸಾಹ ನೀಡಬೇಕು ಎಂದು ಕಟ್ಟೆಚ್ಚರ ನೀಡಿದ್ದಾರೆ.ಪೂಜಾ ಕಾರ್ಯಕ್ಕೆ ಎಂದಿನಂತೆ  ಹಣವನ್ನು ವಿನಿಯೋ ಗಿಸಿ, ಆಚರಿಸಬೇಕು. ಎಂದು ತಿಳಿಸಿರುವ ಅವರು, ರಾಜ್ಯದ ಸಮಸ್ತ ಜನತೆಗೆ,  ಕರ್ನಾಟಕ ರಾಜ್ಯ  ರಸ್ತೆ ಸಾರಿಗೆ ಸಂಸ್ಥೆಯ    ಸಮಸ್ತ ನೌಕರರಿಗೆ , ಅಧಿಕಾರಿಗಳಿಗೆ  ದಸರಾ ನಾಡಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ನಾಡದೇವತೆ ಚಾಮುಂಡೇಶ್ವರಿ ಎಲ್ಲರಿಗೂ ಸುಖ, ಸಂತೋಷ, ಆರೋಗ್ಯವನ್ನು ಅನುಗ್ರಹಿಸಲಿ. ಸಾಂಕ್ರಾಮಿಕದ ಕರಿನೆರಳು ದೂರಸರಿದು, ಸಂಭ್ರಮ ಸಮೃದ್ಧಿಗಳ ಹೊಂಗಿರಣ  ಮೂಡಲಿ ಎಂದು ಹಾರೈಸಿದ್ದಾರೆ.

ಆಯುಧ ಪೂಜೆಯ ದಿನದಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಎಲ್ಲಾ  ಪ್ರಯಾಣಿಕ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸಂಪ್ರದಾಯದಂತೆ ಪೂಜಿಸಿ-ಸಾರಿಗೆ ಸಚಿವ ಶ್ರೀರಾಮುಲು

Spread the love
Leave A Reply

Your email address will not be published.

Flash News