BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜ್ಯ-ರಾಜಧಾನಿ

PROTEST IN PARAPPANA AGRAHAARA PRISON :ಪ್ರೊಟೆಸ್ಟ್… ಪ್ರೊಟೆಸ್ಟ್ …ಪ್ರೊಟೆಸ್ಟ್ ….ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಖೈದಿಗಳ ಪ್ರತಿಭಟನೆ..?! ಯಾರ  ಮನವೊಲಿಕೆಗೂ ಸೊಪ್ಪಾಕದ ಜೈಲು ಹಕ್ಕಿಗಳು..

 ಜೈಲ್ ಮುಖ್ಯ ಅಧೀಕ್ಷಕ ರಂಗನಾಥ್
ಜೈಲ್ ಮುಖ್ಯ ಅಧೀಕ್ಷಕ ರಂಗನಾಥ್

ಬೆಂಗಳೂರು:ಪರಪ್ಪನ ಅಗ್ರಹಾರ ಸಾವಿನ ಮನೆಯಾಗುತ್ತಿದೆಯಾ..? ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿದೆಯಾ..? ಆರೋಗ್ಯ-ಊಟ ಸೇರಿದಂತೆ ಸಾಕಷ್ಟು ಸೇವೆಗಳು ಜೈಲು ಹಕ್ಕಿಗಳಿಗೆ ಸಿಗುತ್ತಿಲ್ಲವೇ..? ಇಂತದೊಂದಿಷ್ಟು ಅನುಮಾನ ಕಾಡೊಕ್ಕೆ ಖೈದಿಗಳು ನಡೆಸುತ್ತಿರುವ ಹೋರಾಟವೇ ಸಾಕ್ಷಿ.

ಕಳೆದ ಮೂರ್ನಾಲ್ಕು ದಿನಗಳಿಂದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿ ಖೈದಿಗಳು ಹರತಾಳ ಶುರುಮಾಡಿದ್ದಾರೆ.ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ.ಇಲ್ಲಿ ಜೀವಕ್ಕೆ ಗ್ಯಾರಂಟಿಯಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಶುರುಮಾಡಿದ್ದಾರೆ.ಅನ್ನಾಹಾರ ತ್ಯಜಿಸಿ ಮುಷ್ಕರ ನಡೆಸುತ್ತಿರುವುದರಿಂದ ಸಹಜವಾಗೇ ಆಡಳಿತ ವ್ಯವಸ್ಥೆ ಮುಜುಗರಕ್ಕೆ ಸಿಲುಕಿದೆ.

ತಮಗೆ ನೀಡುತ್ತಿರುವ ಆಹಾರ ತಿನ್ನೊಕ್ಕೆ ಯೋಗ್ಯವೇ ಅಲ್ಲ,ಪೌಷ್ಟಿಕಾಂಶಗಳೇ ಇಲ್ಲದ  ಈ ಆಹಾರವನ್ನು ಪಶುಗಳೂ ತಿನ್ನೊಲ್ಲ.ಅಂಥಾ ಆಹಾರವನ್ನು ಅನೇಕ ದಿನಗಳಿಂದ ನೀಡಲಾಗುತ್ತಿದೆ.ಈ ಆಹಾರ ಸೇವಿಸಿ ಅನೇಕರು ಅಸ್ವಸ್ಥರಾಗುತ್ತಿದ್ದಾರೆ.ಹಾಗೆ ಅಸ್ವಸ್ಥರಾದವರಿಗೆ ಸರಿಯಾದ ಚಿಕಿತ್ಸೆಯೂ ಸಿಗುತ್ತಿಲ್ಲ.ವೈದ್ಯಕೀಯ ಸೇವೆಯಂತೂ ಅತ್ಯಂತ ಕಳಪೆಯಾಗಿದೆ ಎನ್ನುವುದು ಮುಷ್ಕರನಿರತ ಖೈದಿಗಳ ಆರೋಪ.

ಮನೆಯವರು,ಕುಟುಂಬದವರ ಭೇಟಿಗೆ ಖೈದಿಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.ವರ್ಷಗಳಿಂದಲೂ ತಮ್ಮ ಕುಟುಂಬದವರನ್ನು  ನೋಡಲಾಗದ ಸ್ತಿತಿಯಲ್ಲಿ ಖೈದಿಗಳಿದ್ದಾರಂತೆ.ಇದರ ಜತೆಗೆ ಪೆರೋಲ್ ಮೇಲೆ ತೆರಳೊಕ್ಕೆಕೂಡ ಅವಕಾಶ ಮಾಡಿಕೊಡಲಾಗುತ್ತಿಲ್ಲ.ಬಹುಷಃ ಪರಪ್ಪನ ಅಗ್ರಹಾರ ಜೈಲ್ ನ ಇತಿಹಾಸದಲ್ಲಿ ಖೈದಿಗಳಿಗೆ ಇಂತದ್ದೊಂದು ಸಂಕಷ್ಟ ಬಂದಿರಲಿಕ್ಕಿಲ್ಲ ಎನ್ನೋದು ಅನೇಕರ ಆರೋಪ.

ಇದೆಲ್ಲಕ್ಕಿಂತ ಹೆಚ್ಚಾಗಿ ಖೈದಿಗಳು ಅಸಹಜವಾಗಿ ಸಾಯುತ್ತಿದ್ದಾರೆನ್ನುವ ಗಂಭೀರ ಆರೋಪ ಕೇಳಿಬಂದಿದೆ.ಕಳೆದೊಂದು ತಿಂಗಳಿಂದ 4-5 ಖೈದಿಗಳು ಕಾರಾಗೃಹದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಸಣ್ಣಪುಟ್ಟ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾದವರು ಮತ್ತೆ ವಾಪಸ್ಸಾಗುತ್ತಿಲ್ಲ ಎನ್ನಲಾಗಿದೆ.ಇದು ಖೈದಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಹೀಗೆ ಸಾಲು ಸಾಲು ಸಮಸ್ಯೆಗಳಿಗೆ ತುತ್ತಾಗಿ ರೋಗಗ್ರಸ್ಥವಾಗಿರುವ ಪರಪ್ಪನ ಅಗ್ರಹಾರದ ವ್ಯವಸ್ಥೆ ಸುಧಾರಿಸಲು ಮುಖ್ಯ ಅಧೀಕ್ಷಕ ರಂಗನಾಥ್ ಸಾಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಇದ್ದಾರೆ.  ಸಾಕಷ್ಟು ಸುಧಾರಣೆಗಳು ಅವರು ಬಂದ ಮೇಲೆ ನಡೆದಿದೆ.ಮೇಲ್ಕಂಡ ಸಮಸ್ಯೆಗಳು ಕೂಡ ಅವರನ್ನು ಸಾಕಷ್ಟು ಚಿಂತೆಗೀಡುಮಾಡಿದೆ.ಅವ್ಯವಸ್ಥೆ ಸರಿಮಾಡೊಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಿರುವ ನಡುವೆಯೇ ದುರಂತಗಳು ನಡೆಯುತ್ತಿವೆ.

ಕಾರಾಗೃಹದಲ್ಲಿ ರೌಡಿಗಳ ಅಟ್ಟಹಾಸ ಹತ್ತಿಕ್ಕಲು ರಂಗನಾಥ್ ಮಾಡುತ್ತಿರುವ ಪ್ರಯತ್ನಗಳು ಅಲ್ಲಿರುವ ಕೆಲವು ರೌಡಿ ಗುಂಪುಗಳ ಅಸಮಾಧಾನಕ್ಕೆ ಕಾರಣವಾಗಿರಬಹುದಾ..? ರೌಡಿಗಳೇ ಸಮಸ್ಯೆಯನ್ನು ವೈಭವೀಕರಿಸಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರಬಹುದಾ..? ರಂಗನಾಥ್ ಅವರ ಪರಿಶ್ರಮವನ್ನು  ಮಣ್ಣುಪಾಲು ಮಾಡಲು ರೌಡಿಗಳೇ ಇಂತದ್ದೊಂದು ಕುಕೃತ್ಯಕ್ಕೆ ಕೈ ಹಾಕುತ್ತಿದ್ದಾರಾ..? ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಜೈಲ್ ನಲ್ಲಿ ತಾಂಡವವಾಡುತ್ತಿದ್ದ ಅಕ್ರಮ-ಅವ್ಯವಹಾರ ಎಲ್ಲಕ್ಕಿಂತ ಹೆಚ್ಚಾಗಿ ರೌಡಿಪಡೆಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿ ಅದರಲ್ಲಿ ಸಾಕಷ್ಟು ಯಶಸ್ವಿಯಾಗುತ್ತಿರುವ ಬೆಳವಣಿಗೆ ಸಹಿಸದೆ ಕೆಲವು ರೌಡಿಗಳು ಜೈಲ್ ನೊಳಗೆ ಪ್ರತಿಭಟನೆ ವಾತಾವರಣ ಸೃಷ್ಟಿಸುತ್ತಿದ್ದರೂ ಆಶ್ಚರ್ಯವಿಲ್ಲ..

ಅದೇನೇ ಆಗಲಿ,ಈ ಎಲ್ಲಾ ಬೆದರಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಆರಂಭದಿಂದಲೂ ಪ್ರತಿಪಾದಿಸುತ್ತಾ ಬಂದಿರುವ ಸೂಪರಿಂಟೆಂಡೆಂಟ್ ರಂಗನಾಥ್  ರೌಡಿಗಳ ಕುಮ್ಮಕ್ಕಿನ ಪ್ರತಿಭಟನೆಯಿಂದ ವಿಚಲಿತರಾದಂತೆ ಕಾಣುತ್ತಿಲ್ಲ.ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಪರಪ್ಪನ ಅಗ್ರಹಾರ ಜೈಲ್ ನ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕಿದೆ.ಸಧ್ಯಕ್ಕೆ ಅತ್ಯವಶ್ಯಕವಾಗಿರುವುದು ಕೂಡ ಅದೇ..

Spread the love

Related Articles

Leave a Reply

Your email address will not be published.

Back to top button
Flash News