8.5 CRORE BRIBE CASE:RETAIRED JUDGE IN TROUBLE: “ಹುದ್ದೆ” ಆಸೆಗೆ 8.5 ಕೋಟಿ “ಹಣ” ಕೊಟ್ಟ ನಿವೃತ್ತ ಜಡ್ಜ್ ಗೇ ಸಂಕಷ್ಟ..?! ಹಣದ ಮೂಲ ಪ್ರಶ್ನಿಸಿ ತುರ್ತು ನೊಟೀಸ್..

ಲಂಚ ಪಡೆಯುವುದಷ್ಟೇ ಅಪರಾಧವಲ್ಲ..ಲಂಚ ಕೊಡುವುದೂ ಅಪರಾಧವಲ್ಲವೇ..? ಇದು ಸಮಾಜಕ್ಕೆ ಎಂಥಾ ಸಂದೇಶವನ್ನು ರವಾನಿಸುತ್ತದೆ ಎಂದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಪೀಠ...

0

ಬೆಂಗಳೂರು:ಲಂಚ ಪಡೆಯುವುದಷ್ಟೇ ಅಪರಾಧವಲ್ಲ..ಲಂಚ ಕೊಡುವುದೂ ಅಪರಾಧವೇ..ಎನ್ನುತ್ತೆ ನಮ್ಮ ಕಾನೂನು.ಇದು ಎಲ್ಲರಿಗೂ ಅನ್ವಯವಾಗುವಂತ ಮಾತು..ಅದು ದೊಡ್ಡವರು..ಸಮಾಜದಲ್ಲಿ ಘನತವೆತ್ತ ಸ್ಥಾನದಲ್ಲಿರುವವರ ವೃತ್ತಿ-ವ್ಯಕ್ತಿತ್ವ ಹಾಗು ಸಾಮಾಜಿಕ ಬದುಕಿನ ಮೇಲೆ ಗಂಭೀರ ಪ್ರಮಾಣದಲ್ಲಿ ರಿಫ್ಲೆಕ್ಟ್ ಆಗುತ್ತೆ..ಹೈಕೋರ್ಟ್ ನ ನಿವೃತ್ತ  ನ್ಯಾಯಮೂರ್ತಿ ಬಿ.ಎಸ್ ಇಂದ್ರಕಲಾ ಮಾಡಿಕೊಂಡ ಯಡವಟ್ಟಿನ ವಿಷಯದಲ್ಲಂತೂ ಇದು ಅತ್ಯಂತ ಗಂಭೀರವಾಗಿಯೇ ಚರ್ಚೆಯಾಗುತ್ತಿದೆ.

ರಾಜ್ಯಪಾಲ ಹುದ್ದೆ ಕೊಡಿಸುತ್ತೇನೆಂದು ಯುವರಾಜ್ ಅಲಿಯಾಸ್ ಸ್ವಾಮಿ ನನ್ನಿಂದ 8.5 ಕೋಟಿ ಹಣ ಪಡೆದು ಮೋಸ ಮಾಡಿದ ಎಂದು ಬಿ.ಎಸ್ ಇಂದ್ರಕಲಾ ಮೇಡಮ್ ಕೊಟ್ಟ ದೂರು ಇದೀಗ ಅವರಿಗೇನೆ ತಿರುಗೇಟು ನೀಡಿತಾ ಎನಿಸುತ್ತದೆ.ಪ್ರಕರಣದಲ್ಲಿ ಚಂದ್ರಕಲಾ ಅವರ ನೈತಿಕತೆಯನ್ನು ಪ್ರಶ್ನಿಸಿ ವಕೀಲ ಅಮೃತರಾಜ್ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಹಿನ್ನಲೆಯಲ್ಲಿ ನಡೆದ ಬೆಳವಣಿಗೆಗಳು ಹಾಗೊಂದು ಅನುಮಾನ ಮೂಡಿಸುತ್ತವೆ.ಏಕೆಂದ್ರೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ “ಯುವರಾಜ್ ಹಣ ಪಡೆದ ಎಂದು ಆಪಾದಿಸುತ್ತಿರುವ ಚಂದ್ರಕಲಾ,ಹಣ ಕೊಟ್ಟಿದ್ದೂ ಕೂಡ ತಪ್ಪಲ್ಲವೇ..? ಜವಾಬ್ದಾರಿಯಿತ ಸ್ಥಾನದಲ್ಲಿದ್ದ ಬಿ.ಎಸ್ ಇಂದ್ರಕಲಾ ಅವರೇ ಹೀಗೆ ಮಾಡಿದ್ದು ತಪ್ಪಲ್ಲವೇ..?ಎಂದು ಪ್ರಶ್ನಿಸಿದೆಯಲ್ಲದೇ,ಈ ಬಗ್ಗೆ ಕಾರಣ ಕೇಳಿ ಚಂದ್ರಕಲಾ ಸೇರಿದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ದೂರು ದಾಖಲಿಸಿಕೊಂಡ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಪೊಲೀಸರಿಗೂ ಶೋಕಾಸ್ ನೊಟೀಸ್ ಜಾರಿ ಮಾಡಿದೆ.

ಹುದ್ದೆ ಕೊಡಿಸೊಕ್ಕೆ ಯುವರಾಜ್ ಹಣ ಕೇಳಿ,ಪಡೆದದ್ದು ತಪ್ಪು ಎನ್ನುವುದಾದ್ರೆ ಹುದ್ದೆ ಆಸೆಗೆ ಹಣ ನೀಡಿದ್ದು ಕೂಡ ಅಪರಾಧವಲ್ಲವೇ..? ಜಡ್ಜ್ ಆಗಿದ್ದವರೊಬ್ಬರು ಹೀಗೆ ಮಾಡುವುದು ಸಮಾಜ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಎಂಥಾ ಸಂದೇಶ ರವಾನಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಯುವರಾಜ್ ಗೆ ನೀಡಿದ್ದಾರೆನ್ನಲಾದ ಅ  8.5 ಕೋಟಿಯ ಮೂಲ ಎಲ್ಲಿಯದು..? ಎನ್ನುವುದರ ವಿವರಣೆ ಕೋರಿ ನೊಟೀಸ್ ಜಾರಿ ಮಾಡಿದ್ದಾರೆ.

ತನಿಖೆಗೆ ಆಗ್ರಹಿಸಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ ವಕೀಲ ಅಮೃತೇಶ್..
ತನಿಖೆಗೆ ಆಗ್ರಹಿಸಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ ವಕೀಲ ಅಮೃತೇಶ್..

ಯುವರಾಜ್ ಗೆ ನೀಡೊಕ್ಕೆ ಅಷ್ಟೊಂದು ಮೊತ್ತದ ಹಣ ಎಲ್ಲಿಂದ ಬಂತು..? ಅಷ್ಟೊಂದು ಮೊತ್ತದ ಹಣವನ್ನು ಹೇಗೆ ಸಂಪಾದಿಸಿದಿರಿ..? ಅದನ್ನು ಕೊಟ್ಟವರು ಯಾರು..? ಅದರ ಮೂಲ ಏನು..? ಅದನ್ನು ಹೇಗೆ ನೀಡಿದಿರಿ..? ಚೆಕ್ ರೂಪದಲ್ಲಿ ಎಷ್ಟು..ನಗದು ರೂಪದಲ್ಲಿ ಎಷ್ಟು ಕೊಟ್ಟಿದ್ದೀರಿ..ಹಣ ಕೊಟ್ಟಿದ್ದಕ್ಕೆ ಇರುವ ಸಾಕ್ಷ್ಯಗಳೇನು..? ಎನ್ನುವುದರ ಬಗ್ಗೆ ಸಂಪೂರ್ಣ ವಿವರಣೆ ಕೋರಿ ನೊಟೀಸ್ ಜಾರಿ ಮಾಡಲಾಗಿದೆ ಎನ್ನಲಾಗುತ್ತಿದೆ.

ಹಣ ಕೊಡುವ ಮೂಲಕ ನಿವೃತ್ತ ಜಡ್ಜ್ ಬಿ.ಎಸ್ ಇಂದ್ರಕಲಾ ಅವರೇ,ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗಿದೆ.ಘನತವೆತ್ತ ಸ್ಥಾನದಲ್ಲಿರುಗವವರು, ಸಮಾಜಕ್ಕೆ ಬುದ್ದಿ ಹೇಳಬೇಕಾದವರು, ನ್ಯಾಯಪೀಠದಲ್ಲಿ ಕೂತು ಎಷ್ಟೋ ಜನರಿಗೆ ನ್ಯಾಯದಾನ ಮಾಡಿದಂತವರೇ ಹೀಗೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ವಕೀಲ ಅಮೃತೇಶ್ ತನಿಖೆಗೆ ಕೋರಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಅದನ್ನು ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ.

2021ರ ಜನವರಿ 16 ರಂದು ಅಮೃತೇಶ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಲಂಚ ಕೊಡುವ ಮೂಲಕ ಚಂದ್ರಕಲಾ ಅವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದರ ಬಗ್ಗೆಯೂ ಕೂಲಂಕುಷ ಹಾಗೂ ನ್ಯಾಯ ಸಮ್ಮತ ಚರ್ಚೆಯಾಗಬೇಕೆನ್ನುವ ಮನವಿಯನ್ನು ಮುಂದಿಟ್ಟು ದೂರು ಕೊಟ್ಟಿದ್ದರು.ಆದರೆ ಅದ್ಯಾವ ಕಾರಣಗಳಿಂದ ದೂರನ್ನು ಗಂಭೀರವಾಗಿ ಪರಿಗಣಿಸಲಿಲ್ಲವೋ ಗೊತ್ತಿಲ್ಲ, ಅದರ ಬಗ್ಗೆ ಸಣ್ಣ ಕ್ರಮವನ್ನೂ ಪೊಲೀಸರು ಕೈಗೊಳ್ಳಲಿಲ್ಲ..ಇದನ್ನೂ ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಮೇಲ್ಕಂಡ ಆರೋಪ-ದೂರುಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಒಟ್ಟಾರೆ ಮೇಲ್ಕಂಡ ಪ್ರಕರಣ ಗಮನಿಸಿದರೆ,ಯುವರಾಜ್ ಅಲಿಯಾಸ್ ಸ್ವಾಮಿಗೆ ಹುದ್ದೆ ಆಸೆಯಲ್ಲಿ ಹಣ ನೀಡಿದೆ ಎಂದು ದೂರು ನೀಡಿದ ನಿವೃತ್ತ ಜಡ್ಜ್ ಇಂದ್ರಕಲಾ ಅವರೇ,ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಆಪಾದನೆಯಲ್ಲಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.ಅಷ್ಟೇ ಅಲ್ಲ, ಮೇಲ್ಕಂಡ ಪ್ರಕರಣದಲ್ಲಿ ಹಣ ನೀಡಿದ್ದರ ಬಗ್ಗೆ ಯಾರಿಗೂ ಹೇಳೊಲ್ಲ ಎಂದು ಗ್ಯಾರಂಟಿ ನೀಡಿ,ಅದನ್ನು ಲಿಖಿತವಾಗಿಯೂ ಬರೆದುಕೊಟ್ಟಿದ್ದರೆನ್ನಲಾಗುತ್ತಿರುವ ಇಂದ್ರಕಲಾ ದೂರು ಕೊಡುವ ಮಟ್ಟಕ್ಕೆ ಹೋಗಿದ್ದರ ಹಿನ್ನಲೆಯೂ ಇದೀಗ ಸಾಕಷ್ಟು ಚರ್ಚೆಗೀಡಾಗುತ್ತಿದೆ.ಇದೇ ಆಧಾರದಲ್ಲಿ ಮೇಲ್ಕಂಡ ವಂಚನೆ ಪ್ರಕರಣದಲ್ಲಿ ಯುವರಾಜ್ ಅಲಿಯಾಸ್ ಸ್ವಾಮಿಗೆ ಕ್ಲೀನ್ ಚಿಟ್ ಸಿಕ್ಕರೂ ಆಶ್ಚರ್ಯಪಡಬೇಕಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

Spread the love
Leave A Reply

Your email address will not be published.

Flash News