ANOTHER CD SHOCK TO BJP GOVERNMENT..?! :ಬಿಜೆಪಿ ಸರ್ಕಾರಕ್ಕೆ ಮತ್ತೆ ಸಿಡಿ ಸಂಕಷ್ಟ..!? ಶೀಘ್ರವೇ “ಸ್ಪೋಟಿ”ಸುತ್ತಾ ಮತ್ತೊಂದು CD ಬಾಂಬ್.?!

ಸಾಮಾಜಿಕ ಜಾಲತಾಣಗಳಲ್ಲಿ ಸಿಡಿ ಸ್ಪೋಟದ್ದೇ ಚರ್ಚೆ-ಕುತೂಹಲ ಕೆರಳಿಸಿದ ಕಾಂಗ್ರೆಸ್ ಯುವ ನಾಯಕನ ಫೇಸ್ ಬುಕ್ ಸ್ಟೇಟಸ್..

0

ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ಸಿಡಿ ಸ್ಪೋಟ ನಿಲ್ಲುವಂಗೆ ಕಾಣುತ್ತಿಲ್ಲ ಅನ್ನಿಸುತ್ತೆ…ಅವರ ಸಿಡಿ ಇವರ ಬಳಿ ಇದೆ..ಇವರ ಸಿಡಿ ಅವರ ಬಳಿ ಇದೆ ಎಂದು ತಲೆಗೆ ಹುಳು ಬಿಟ್ಟು ಮಜಾ ತೆಗೆದುಕೊಳ್ಳುವ,ರಾಜಕೀಯ ತೆವಲು ತೀರಿಸಿಕೊಳ್ಳುವ ಕೆಟ್ಟ ಖಯಾಲಿ ರಾಜಕೀಯ ನಾಯಕರಲ್ಲಿದೆ..ಈಗ ಮತ್ತೆ ಚರ್ಚೆಯಾಗುತ್ತಿರುವುದು ಕೂಡ ಅದೇ,..

ಶೀಘ್ರವೇ ಮತ್ತೊಂದು ಸಿಡಿ ಸ್ಪೋಟಿಸುವ ಶಂಕೆ ಇದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಈ ಬಾರಿ ಸ್ಪೋಟಿಸಲಿರುವ ಸಿಡಿ ಬಿಎಸ್ ಯಡಿಯೂರಪ್ಪ ಅವರ ವಿರೋಧಿ ಬಣದ್ದು..ಅದು ಕೂಡ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸೊಕ್ಕೆ ಪ್ಲ್ಯಾನ್ ಮಾಡಿದವರಲ್ಲಿ ಒಬ್ಬರದು ಎನ್ನುವ ರೀತಿಯಲ್ಲಿ ಚರ್ಚೆಗಳಾಗುತ್ತಿವೆ..ಹಾಗಾದ್ರೆ ಆ ಸಿಡಿ ಯಾರದು..?. ಯಾವ್ ಮಹಾನುಭಾವ ರಾಜ್ಯದ ಜನರೆದುರು ಬೆತ್ತಲೆಯಾಗಲಿದ್ದಾನೆ…? ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೀಡಾಗುತ್ತಿದೆ.

ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಸಿಡಿ ಸ್ಪೋಟದ ವಿಚಾರಕ್ಕೆ ಈವರೆಗೂ ಯಾವುದೇ ಸ್ಪಷ್ಟತೆ.. ಖಚಿತತೆ.. ಇಲ್ಲವಾದರೂ ಬಿಎಸ್ ವೈ ರನ್ನು ಸಿಎಂ ಗಾದಿಯಿಂದ ಕೆಳಗಿಳಿಸೊಕ್ಕೆ ಸಂಚು ನಡೆಸಿದವರು ಎಂಬ ಒಂದು ಸಂದೇಶ ಹರಿದಾಡು ತ್ತಿರುವುದನ್ನು ನೋಡಿದ್ರೆ ಆ ಸಿ ಡಿ ಯ ಹೀರೋ ಕಮ್ ವಿಲನ್ ಬಿಜೆಪಿಯವರೇ ಆಗಿರಬಹುದೇನೋ ಎನಿಸುತ್ತದೆ.ಏಕೆಂದ್ರೆ ಸರ್ಕಾರವನ್ನು ಉರುಳಿಸುವ ಯಾವುದೇ ಇರಾದೆಗಳು ವಿಪಕ್ಷಗಳಿಗೆ ಇರದ ಸನ್ನಿವೇಶದಲ್ಲಿ ಬಿಎಸ್ ವೈ ರನ್ನು ಕೆಳಗಿಳಿಸೊಕ್ಕೆ ಲಾಭಿ ಹಾಗು ಷಡ್ಯಂತ್ರ ಮಾಡಿದವರು ಸ್ವಪಕ್ಷದವರು.ಹಾಗಾಗಿ ಅವರ  ಪಕ್ಷದವರಲ್ಲೇ ಒಬ್ಬ ಆ  ಮಿಕ ಇರಬಹುದೆನ್ನುವುದು ಮೇಲ್ನೋಟಕ್ಕೆ ಭಾಸವಾಗುತ್ತದೆ.

ಬಿಎಸ್ ವೈ ಅವರನ್ನು ಕೆಳಗಿಳಿಸಬೇಕೆನ್ನುವುದನ್ನೇ ಮುಖ್ಯ ಅಜೆಂಡಾ ಎನ್ನುವಂತೆ ಮಾಡ್ಕೊಂಡು ಓಡಾಡಿದವರಲ್ಲಿ, ಹೋರಾಡಿ ದವರಲ್ಲಿ ಮಂಚೂಣಿಯಲ್ಲಿದ್ದವರು ಯಾರೆನ್ನುವುದನ್ನು ನಾವು ಹೇಳಬೇಕಿಲ್ಲ..ಇಡೀ ರಾಜ್ಯದ ಜನತೆಗೆ ಆ ವಿಷಯ ಗೊತ್ತಿದೆ..:ಆ ಮಹಾನುಭಾವನೇ ಸಿಡಿಯ ಮಿಕ  ಆಗಿರಬಹುದಾ ಎನಿಸುತ್ತದೆ.ಬಿಎಸ್ ವೈ ವಿರೋಧಿ ಬಣದವರಲ್ಲೇ ಒಬ್ಬರದು ಸಿಡಿ ಸ್ಪೋಟಿಸಲಿದೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು ಅನೇಕರಲ್ಲಿ ನಡುಕ ಸೃಷ್ಟಿಸಿದೆ.ಪರಸ್ಪರರು ತಮ್ಮಲ್ಲೇ ತಾವು ಆತ್ಮಾವಲೋಕನ ಶುರುವಿಟ್ಟುಕೊಂಡಿ ದ್ದಾರೆ.ತಾವು ಹೋಗಿದ್ದು ಬಂದಿದ್ದು..ಉಳಿದುಕೊಂಡಿದ್ದು..ಲಾಡ್ಜ್ ಹೊಟೇಲ್ ಗಳಲ್ಲಿ ಮಲಗಿದ್ದು..ಯಾರ್ಯಾರ ಜತೆ ಸಂಪರ್ಕ ಸಾಧಿಸಿದ್ದರಬಹುದಾದ  ಘಟನೆಗಳನ್ನು ರಿಕಾಲ್ ಮಾಡಿಕೊಳ್ಳೊಕ್ಕೆ ಶುರುಮಾಡಿದ್ದಾರಂತೆ.

ಇದೆಲ್ಲದರ ನಡುವೆ ಕಾಂಗ್ರೆಸ್ ಲೀಗಲ್ ಸೆಲ್  ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬಿಜೆಪಿ ನಾಯಕ ನೊಬ್ಬನ ಚಿತ್ರಗಳನ್ನು ಹಾಕಿ ಸೂಚ್ಯವಾಗಿ “ಬಿಜೆಪಿ ನಾಯಕರ ವೀಡಿಯೊ ಕಾನ್ಫರೆನ್ಸ್…!!! ಎಂದು ಸ್ಟೇಟಸ್ ಹಾಕಿದ್ದಾರೆ..ಈ ಮೂಲಕ ಸೂರ್ಯ ಮುಕುಂದರಾಜ್  ಏನೋ ಹೇಳಕ್ಕೆ ಹೊರಟಿದ್ದಾರೆ ಎಂದೆನಿಸುತ್ತದೆ..

ಈ ಬಗ್ಗೆ ಸೂರ್ಯ ಮುಕುಂದರಾಜ್ ಅವರನ್ನು ಕನ್ನಡ ಫ್ಲಾಶ್ ನ್ಯೂಸ್ ಸಂಪರ್ಕಿಸಿದಾಗ,ಈ ಚಿತ್ರಗಳ ಬಗ್ಗೆ ನಮಗೂ ಅನುಮಾನವಿದೆ..ಬಿಜೆಪಿಯಲ್ಲಿ ಹೀಗೆ ಆಗುತ್ತೆ ಎಂದು ಊಹಿಸಲಿಕ್ಕೆ ಅಗುತ್ತಿಲ್ಲ..ಅಲ್ಲಿ ಏನ್ ಬೇಕಾದ್ರೂ ಆಗಬಹುದು.ಮೇಲ್ಕಂಡ ಚಿತ್ರಗಳಿಗೆ ಸಂಬಂಧಿಸಿದಂತೆ  ಈ ನಾಯಕ ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ಕೂಡ ಪಡೆದಿದ್ದಾರೆ ಎನ್ನುವ ಮಾಹಿತಿ ಇದೆ..ತಾನು ಆ ಕೆಟಗರಿಯ ಲೀಡರ್ ಅಲ್ಲ ಎನ್ನುವುದೇ ಆಗಿದ್ದರೆ ಕೋರ್ಟ್ ನ ಮೊರೆ ಹೋಗುವ ಅಗತ್ಯವೇನಿತ್ತು..ಇದರ ಹಿಂದೆ ಏನೋ ಅಡಗಿದೆ ಎನ್ನುವ ಅನುಮಾನವಿದೆ..ನಮ್ಮ ಲೀಗಲ್ ಸೆಲ್ ಈ ರಹಸ್ಯ ಬೇಧಿಸದೆ ಬಿಡೊಲ್ಲ ಎಂದುತ್ತರಿಸಿದರು.

ಬಿಎಸ್ ವೈ  ವಿರೋಧಿ ಬಣದ ಶಾಸಕನದ್ದೇ ಸಿಡಿ ಅದಾಗಿದ್ದರೆ,ಅದು ರಿಲೀಸ್ ಅಥವಾ ಲೀಕ್ ಆಗೋದು ಬಿಎಸ್ ವೈ ಬಣದವರಿಂದಲೇನಾ ಎನ್ನುವ ಅನುಮಾನ ಕಾಡುತ್ತಿದೆ.ತಮ್ಮ ನಾಯಕ ಬಿಎಸ್ ವೈ ರನ್ನು ಕೆಳಗಿಳಿಸಿ ಎಲ್ಲಾ ಮುಗಿದೋಯ್ತು ನಾವು..ಗೆದ್ದೆವು ಎಂದು ಬೀಗೊಕ್ಕೆ ನಾವ್ಹೇಕೆ ಬಿಡಬೇಕು..ನಮ್ಮ ನಾಯಕನ ಸಂತೋಷ-ನೆಮ್ಮದಿ-ಅಧಿಕಾರ ಕಸಿದುಕೊಂಡವರು ಕೂಡ ಆರಾಮಾಗಿರಬಾರದು ಎನ್ನುವ ಸಿಟ್ಟು-ಆಕ್ರೋಶ-ದ್ವೇಷದ  ಹಿನ್ನಲೆಯಲ್ಲಿ  ಬಿಎಸ್ ವೈ ಬಣದವರು ಈ ರೀತಿಯ ಸಂದೇಶ ಹರಿಬಿಡುತ್ತಿದ್ದಾರಾ..? ಸಿಡಿ ಇಲ್ಲದಿದ್ದರೂ ಸುಮ್ಮನೆ ರೂಮರ್ಸ್ ಸೃಷ್ಟಿಸುತ್ತಿದ್ದಾರಾ ? ಗೊತ್ತಿಲ್ಲ.

ಅದೇನೇ ಇರಲಿ,ಬಿಜೆಪಿ ಸರ್ಕಾರ ಯಾವುದೇ ವಿವಾದಗಳಿಲ್ಲದೆ ಸಧ್ಯಕ್ಕೆ ನಿರಾತಂಕವಾಗಿ ನಡೆದುಕೊಂಡು ಹೋಗುತ್ತಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಶೀಘ್ರವೇ ಬಿಜೆಪಿ ಶಾಸಕನ ಸಿಡಿ ಸ್ಪೋಟವಾಗುವ ಶಂಕೆ ಇದೆ..ಅದು ಕೂಡ ಬಿಎಸ್ ವೈ ವಿರೋಧಿ ಬಣದ ಶಾಸಕನದ್ದಾ..? ಎಂಬ ಸಂದೇಶ ಹರಿದಾಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.ಅದು ಯಾರದ್ದಾಗಿರಬಹುದು..ಎನ್ನುವ ಕೆಟ್ಟ ಕೌತುಕ ಕಾಡಲಾರಂಭಿಸಿದೆ..ಅದು ಯಾರದು..ಅದರಿಂದ ಸರ್ಕಾರಕ್ಕೆ ಎಂಥಾ ಸಂಕಟ ಸೃಷ್ಟಿಯಾಗಬಹುದು ಎನ್ನುವುದನ್ನು ಕಾಲವೇ ಉತ್ತರಿಸಲಿದೆ.

Spread the love
Leave A Reply

Your email address will not be published.

Flash News