BIG DISSOPOINTMENT FOR TRANSPORT EMPLYOEES : ಬಿಗ್ ಬಿಗ್ ಶಾಕಿಂಗ್ ನ್ಯೂಸ್.. ನೌಕರಿ ನಿರೀಕ್ಷೆಯಲ್ಲಿದ್ದ ಸಾರಿಗೆ ಕಾರ್ಮಿಕರಿಗೆ ಭಾರೀ ಅಘಾತ..!!??-

ಸಾರಿಗೆ ಕಾರ್ಮಿಕರ ಮರು ನಿಯೋಜನೆ ಕಷ್ಟ..ಕಷ್ಟವಂತೆ..?! ಸಚಿವ ಶ್ರೀರಾಮಲು ಪ್ರಯತ್ನಕ್ಕೆ ಅಧಿಕಾರಿಗಳೇ ಅಡ್ಡಗಾಲು..?! ನೌಕರಿ ಆಸೆಯಲ್ಲಿದ್ದಕಾರ್ಮಿಕರ ಆಸೆಗೆ ತಣ್ಣೀರು..?!

0

ಬೆಂಗಳೂರು: ಇಡೀ ಸಾರಿಗೆ ಕಾರ್ಮಿಕರ  ಚಿತ್ತ ಇವತ್ತು ಸಚಿವ ಶ್ರೀರಾಮುಲು ಅವರತ್ತ ನೆಟ್ಟಿದೆ. ಸಾರಿಗೆ ಕಾರ್ಮಿಕ ರೇನಾದ್ರೂ ಇವತ್ತು ಭರವಸೆಯಿಂದ ಬದುಕುತ್ತಿದ್ದಾರೆ.. ಮನಸಲ್ಲಿ ಕೋಟಿ ಚಿಂತೆಗಳಿ ದ್ದರೂ,ಅದನ್ನೆಲ್ಲಾ ಮರೆತು ದಿನದೂಡುತ್ತಿದ್ದಾರೆ ಎಂದ್ರೆ ಅದು ಕೇವಲ..ಸಚಿವ ಶ್ರೀರಾಮಲು ಕೊಟ್ಟ ಆ ಒಂದು ಭರವಸೆಯ ಮಾತಿನಿಂದ..ಆದ್ರೆ ಸಚಿವರ ಭರವಸೆ-ಆತ್ಮವಿಶ್ವಾಸ ತುಂಬುವ ಕೆಲಸಕ್ಕೆ ನಿಗಮದ ಅಧಿಕಾರಿಗಳೇ ತೊಡಕಾಗಿದ್ದಾರೆನಿಸುತ್ತದೆ.ಕೆಲವು ತಾಂತ್ರಿಕ-ಆಡಳಿತಾತ್ಮಕ ಹಾಗೂ ಆರ್ಥಿಕ ಹೊರೆಯ ಕಾರಣಗಳನ್ನೊಡ್ಡಿ ಕಾರ್ಮಿಕರ ಮರುನಿಯೋಜನೆಗೆ ಅಡ್ಡಗೋಡೆಯಾಗಿ ನಿಂತಿದ್ದಾರೆನ್ನುವ ಮಾತು ಆಡಳಿತ ವಲಯದ ಆವರಣದಿಂದಲೇ ಕೇಳಿಬರುತ್ತಿದೆ.

ಹೌದು..ಸಾರಿಗೆ ನಿಗಮಗಳೆನ್ನುವುದು ನಮ್ಮ ಕುಟುಂಬವಿದ್ದಂತೆ ಎನ್ನುವುದಾದ್ರೆ ಅದರಲ್ಲಿರುವ ಪ್ರತಿ ಯೋರ್ವ ಕಾರ್ಮಿಕ ಕೂಡ ನಮ್ಮ ಮನೆಯ ಸದಸ್ಯ.ಆ  ಮನೆಯಲ್ಲಿ ನೆಮ್ಮದಿಯಿಲ್ಲ..ಸದಸ್ಯರ ಬದುಕಲ್ಲಿ ಬೆಳಕಿಲ್ಲ ಎನ್ನುವುದಾದ್ರೆ ಆ ಮನೆಯ ಯಜಮಾನ ಸಂತೋಷದಿಂದ ಇರೊಕ್ಕೆ ಸಾಧ್ಯವೇ..? ನನ್ನ ಪರಿಸ್ಥಿತಿಯೂ ಹಾಗೆಯೇ ಇದೆ..ಹಾಗಾಗಿ ಏನೇ ಸಮಸ್ಯೆಗಳಿದ್ದರೂ ಅದನ್ನೆಲ್ಲಾ ಸರಿಪಡಿಸಿ ವಜಾ ಗೊಂಡಿರುವ,ಅಮಾನತುಗೊಂಡಿರುವ ಎಲ್ಲಾ ಕಾರ್ಮಿಕರನ್ನು ಸೇವೆಗೆ ನಿಯೋಜಿಸಿಕೊಳ್ಳಿ ಎಂದು ಸಚಿವ ಶ್ರೀರಾಮಲು ಫರ್ಮಾನ್ ಹೊರಡಿಸಿದ್ರೆ ಅಧಿಕಾರಿಗಳು ಮಾತ್ರ ಕೇವಲ ನೆವಗಳನ್ನು ಹೇಳಿಕೊಂಡೇ ಕಾಲ ಹರಣ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಕಾರ್ಮಿಕರನ್ನು ಮರು ನಿಯೋಜಿಸಿಕೊಂಡ್ರೆ 8-10 ಕೋಟಿಯಷ್ಟು ಹೊರೆ ನಿಗಮದ ಮೇಲಾಗುತ್ತದೆ ಎಂಬ ವರದಿಯೊಂದನ್ನು ಸರ್ಕಾರಕ್ಕೆ ರವಾನಿಸಿದ್ದಾರೆನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ..

ಮುಷ್ಕರ ನಡೆಸಿದ್ದು,ಆ ಕಾರಣಕ್ಕೆ ವಜಾ-ಅಮಾನತುಗೊಂಡಿದ್ದೆಲ್ಲಾ ಕೆಟ್ಟ ಅಧ್ಯಾಯ-ಕನಸು ಎಂದು ಮರೆತುಬಿಡಿ..ಅವೆಲ್ಲಾ ಆಗಬಾರದಿತ್ತು,ಆಗ್ಹೋಗಿದೆ.. ಆಗೋಗಿರುವುದಕ್ಕೆಲ್ಲಾ ತಲೆ ಕೆಡಿಸಿಕೊಂಡ್ರೆ ಎಲ್ಲರ ಮನಸುಗಳು ಹಾಳಾಗುತ್ತವೆ..

ನಮಗೆ ಮೊದಲು ವಜಾಗೊಂಡು,ಅಮಾನತ್ತಾಗಿ ಸಂಕಷ್ಟಕ್ಕೆ ಸಿಲುಕಿರುವ ನಮ್ಮ ಕಾರ್ಮಿಕರ ಹಿತ ಕಾಯೋದು ಮುಖ್ಯ.ಅವರ ಬದುಕುಗಳು ಬೀದಿಗೆ ಬೀಳೊಕ್ಕೆ ಮುನ್ನ, ಅವರ ಕುಟುಂಬಗಳು ಹಿಡಿಶಾಪ ಹಾಕೊಕ್ಕೆ ಮುನ್ನ ಏನೇ ಅಡೆತಡೆಗಳಿದ್ದರೂ ಸರಿಪಡಿಸಿ ಕೆಲಸಕ್ಕೆ ನಿಯೊಜಿಸಿಕೊಳ್ಳುವ ಕೆಲಸ ಮಾಡಿ ಎಂದು ಪ್ರತಿ ಬಾರಿಯ ಸಭೆಯಲ್ಲೂ ಸಚಿವ ಶ್ರೀರಾಮುಲು ಹೇಳುತ್ತಲೇ ಬಂದಿದ್ದಾರೆ..

ಪ್ರಕ್ರಿಯೆ ತಡವಾಗುತ್ತಿರುವ ಬಗ್ಗೆ ಮಾದ್ಯಮಗಳಲ್ಲಿ ವರದಿಯಾದಾಗಲೆಲ್ಲಾ ಅಧಿಕಾರಿಗಳನ್ನು ಗದರಿಸಿದ್ದಾರೆ ಕೂಡ..ಆದ್ರೆ ಎಮ್ಮೆ ಚರ್ಮದ ಕೆಲವು  ಅಧಿಕಾರಿಗಳು ಸಚಿವರ ಮಾತಿಗೂ ಕಿಮ್ಮತ್ತಿನ ಬೆಲೆ ನೀಡದಿರುವುದು ವಿಪರ್ಯಾಸ ಹಾಗೂ ದುರಂತವೇ ಸರಿ.

ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಾರಿಗೆ ನಿಗಮಗಳ ಉನ್ನತ ಮೂಲಗಳಿಂದ ತಿಳಿದುಬಂದಿರುವ ಸುದ್ದಿ ನಿಜಕ್ಕೂ ಶಾಕಿಂಗ್ ಎನಿಸುತ್ತಿದೆ.ಮರು ನಿಯೋಜನೆಗೆ ನಿರೀಕ್ಷೆಯಲ್ಲಿರುವ ಸಾರಿಗೆ ಕಾರ್ಮಿಕರನ್ನು ನಿರಾಶೆಗೊಳಿಸಬಹುದು ಎನಿಸುತ್ತದೆ.ಸಚಿವ ಶ್ರೀರಾಮುಲು ಅಧಿಕಾರಿಗಳಿಗೆ ಮರುನಿಯೋಜನೆಗೆ ಪ್ರೆಷರ್ ಹಾಕುತ್ತಿದ್ದರೆ ಇನ್ನೊಂದೆಡೆ ಕೆಲವು ಅಧಿಕಾರಿಗಳು ಸರ್ಕಾರಕ್ಕೆ ಒಳಗೊಳಗೆ ರಿಪೋರ್ಟ್ ನೀಡಿದ್ದಾರೆನ್ನುವ ಸುದ್ದಿ ತಿಳಿದು ಬಂದಿದೆ.

ಸಾರಿಗೆ ಕಾರ್ಮಿಕರನ್ನು ಮತ್ತೇನಾದ್ರೂ ನಿಯೋಜನೆ ಮಾಡಿಕೊಂಡ್ರೆ ನಿಗಮಕ್ಕೆ 8 ರಿಂದ 10 ಕೋಟಿಯಷ್ಟು ಹೊರೆಯಾಗುತ್ತದೆ.ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ನಿಗಮಗಳಿಗೆ ಇಂಥಾ ಮರುನಿಯೋಜನೆ ಆಯ್ಕೆ ಭಾರೀ ದುಬಾರಿ ಆಗಬಹುದಾದ ಸಾಧ್ಯತೆಗಳಿವೆ..ಹಾಗಾಗಿ ಮೇಲ್ಕಂಡ ಪ್ರಸ್ತಾವನೆ ಕೈ ಬಿಡೋದೇ ಸೂಕ್ತ ,ಅವರನ್ನು ಸೇವೆಯಿಂದ ಶಾಶ್ವತವಾಗಿ ಕೈಬಿಡೋದೇ ಸೂಕ್ತ ಎನ್ನುವ ಮಾದರಿಯ ವರದಿಯೊಂದನ್ನು ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ..ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ಮಾತ್ರ ಖಚಿತವಾಗುತ್ತಿಲ್ಲ.

ಆದರೆ ಮುಖ್ಯಮಂತ್ರಿ ಬಸರವರಾಜ ಬೊಮ್ಮಾಯಿ ಹಾಗೂ ಸಚಿವ ಶ್ರೀರಾಮಲು ಅವರ ಸೂಚನೆ ಹೊರತಾಗ್ಯೂ ಮರುನಿಯೋಜನೆ ಪ್ರಕ್ರಿಯೆ ತಡವಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ರೆ ಮೇಲ್ನೋಟಕ್ಕೆ ಅಧಿಕಾರಿಗಳು ವರದಿ ಸಲ್ಲಿಸಿರುವುದು ನಿಜವಿರಬಹುದೇನೋ ಎನ್ನುವ ಅನುಮಾನ ಮೂಡಿಸುವುದಂತೂ ಸತ್ಯ.

ಏಕೆಂದ್ರೆ ಸಿಎಂ ಅವರ ಸೂಚನೆ ಮತ್ತು ಸಾರಿಗೆ ಸಚಿವರ ಆದೇಶವನ್ನು ಪಾಲಿಸಬೇಕೆನ್ನುವ ಮನಸ್ಥಿತಿ ಅಧಿಕಾರಿಗಳದ್ದಾಗಿದ್ದರೆ,ನಮ್ಮ ಕಾರ್ಮಿಕರು ಮತ್ತೆ ಮರಳಬೇಕು…ಕಮರಿ ಹೋಗಿರುವ ಅವರ ಬದುಕುಗಳು ಮತ್ತೆ ಹಸನಾಗಬೇಕೆನ್ನುವ ಹೃದಯವೈಶಾಲ್ಯ ಅವರಲ್ಲಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಪ್ರಕ್ರಿಯೆಗಳು ಚುರುಕು ಪಡೆಯಬೇಕಾಗಿತ್ತು.ಮರು ನಿಯೋಜನೆಗೆ ಇದ್ದ ತೊಡಕುಗಳೆಲ್ಲಾ ದೂರವಾಗ ಬೇಕಿತ್ತು.ಕಾರ್ಮಿಕ ಇಲಾಖೆ ಜತೆ ಸಭೆಗಳು ಮ್ಯಾರಥಾನ್ ರೀತಿಯಲ್ಲಿ ನಡೆಯಬೇಕಿತ್ತು.ಅದಾಲತ್ ನಡೆಸುವ ದಿನಾಂಕ ನಿಗಧಿಯಾಗಬೇಕಿತ್ತು.

ಇಷ್ಟೊತ್ತಿಗಾಗ್ಲೇ ಶೇಕಡಾ 75ರಷ್ಟು ಪ್ರಕ್ರಿಯೆ ಮುಗಿಯಬೇಕಿತ್ತು.ಆದ್ರೆ ಕಾರ್ಮಿಕರಿಗೆ ಸಂಬಳ-ಭತ್ಯೆಯನ್ನು ಅವರಪ್ಪಂದಿರ ಮನೆಯಿಂದ ಕೊಡುತ್ತಾರೆನ್ನುವ ರೇಂಜ್ ನಲ್ಲಿ ಆಲೋಚಿ ಸುತ್ತಿರುವ ಅಧಿಕಾರಿಗಳು   ಕಾರ್ಮಿಕರು ವಾಪಸ್ಸಾದ್ರೆ ಹೊರೆಯಾಗುತ್ತದೆ ಎನ್ನುವ ನೆವ ವನ್ನೇ ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಲೇ ಬಂದಿದ್ದಾರೆ..ಒಂದು ಮೂಲಗಳ ಪ್ರಕಾರ ಬಹುಮುಖ್ಯವಾದ ಪ್ರಕ್ರಿಯೆಗಳು ಇನ್ನೂ ಚಾಲನೆಯೇ ಪಡೆದಿಲ್ಲವಂತೆ..ಈ ಬಗ್ಗೆ ಕೇಳಿಕೊಂಡು ಕಾರ್ಮಿಕರು ಕರೆ ಮಾಡಿದ್ರೆ ಸಚಿವರಿದ್ದಾರಲ್ವಾ.. ಅವರನ್ನೇ ಕೇಳಿನೋಡಿ,ಯಾವಾಗ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆಂದು ಎನ್ನುವ ಕೊಬ್ಬಿನ ಧಾಟಿಯಲ್ಲಿ ಉತ್ತರ ನೀಡುತ್ತಾರೆಂದರೆ ಆಡಳಿತಶಾಹಿ ಎಷ್ಟು ಅಹಂಕಾರ-ದರ್ಪದಿಂದ ಮೆರೆಯುತ್ತಿದೆ ಎನ್ನುವುದು ಗೊತ್ತಾಗುತ್ತದೆ.

ಈ ಬಗ್ಗೆ ಕನ್ನಡ ಫ್ಲ್ಯಾಶ್ ಕೆಲವು ಅಧಿಕಾರಿಗಳನ್ನು ಪ್ರಶ್ನಿಸಿದ್ರೆ ನಮ್ಮ ಕಡೆಯಿಂದ ಏನ್ ಪ್ರೋಸಸ್ ಆಗಬೇಕಿತ್ತೋ ಅದೆಲ್ಲಾ ಆಗಿದೆ..ಕೆಲವು ತಾಂತ್ರಿಕ ತೊಂದರೆಗಳಿಂದ ಪ್ರೋಸಸ್ ತಡವಾಗುತ್ತಿದೆಯಷ್ಟೇ ಎಂದು ಪ್ರತಿಕ್ರಿಯಿಸಿದ್ರು.ಅವರೆಲ್ಲಾ ನಿಮ್ಮವರಲ್ಲವೇ ಬೇಗ ಒಳಗೆ ಕಳುಹಿಸಿಕೊಳ್ಳೋದಲ್ವಾ ಎಂದು ಕೇಳಿದ್ರೆ ಮುಷ್ಕರ ಮಾಡುವ ಮುನ್ನ ಇದೆಲ್ಲಾ ಗೊತ್ತಿರಲಿಲ್ವಾ..ನಾವು ಪರಿಪರಿಯಾಗಿ ಹೇಳಿದ್ರೂ ಕೇಳಲಿಲ್ಲ..ಈಗ ಅನುಭವಿಸುತ್ತಿದ್ದಾರೆ ಅಷ್ಟೇ..ನಮ್ಮ ಕೆಲಸ ಆಗೋವರೆಗೂ ಕಾಯಲೇಬೇಕಾಗುತ್ತದೆ ಎನ್ನುವ ಧಾಟಿಯ ಉತ್ತರ ಕೊಟ್ರು.

ಸರ್ಕಾರಕ್ಕೆ ಅಧಿಕಾರಿಗಳು ವರದಿ ಕೊಟ್ಟಿದ್ದಾರೆನ್ನುವ ವದಂತಿಗಳ ಬಗ್ಗೆ ಸಾರಿಗೆ ಕಾರ್ಮಿಕರು ಕೆಂಡಾಮಂಡಲವಾಗಿದ್ದಾರೆ..ಹಾಗೇನಾದ್ರೂ ಆದ್ರೆ ಆತ್ಮಹತ್ಯೆ ಸುದ್ದಿಗಳನ್ನು ನಿತ್ಯ ಕೇಳಬೇಕಾಗ್ತದೆ ನೋಡಿ..ಅಧಿಕಾರಿಗಳಿಗೆ ಏನ್ ಮಾಡ್ತೇವೋ ಗೊತ್ತಿಲ್ಲ..ನಮ್ಮ ಹೊಟ್ಟೆ ಮೇಲೆ ಕಲ್ಲು ಹಾಕೊಕ್ಕೆ ಅವರಿಗೇನು ಅಧಿಕಾರವಿದೆ ಎನ್ತಾರೆ..

ದೇವರು ವರ ಕೊಟ್ರೂ ಪೂಜಾರಿ ಕೊಡೊಲ್ಲ ಎನ್ನುವ ಗಾಧೆ ನೆನಪಿಸುತ್ತೆ ಸರ್ಕಾರ ಹಾಗೂ ಅಧಿಕಾರಿಗಳ ನಡುವಿನ ಮನಸ್ಥಿತಿ.ಸಿಎಂ ಮತ್ತು ಸಚಿವರಿಗೆ ಕಾರ್ಮಿಕರನ್ನು ಮರುನಿಯೋಜಿಸಿಕೊಳ್ಳಬೇಕೆನ್ನುವ ಮನಸಿದ್ದರೂ ಅದಕ್ಕೆ ಅಧಿಕಾರಿಗಳೇ ಅಡ್ಡವಾಗಿ ನಿಂತಿದ್ದಾರೆ ಎನ್ನಲಾಗುತ್ತಿರುವುದು ಸಾಕಷ್ಟು ಅಚ್ಚರಿ ಮೂಡಿಸುತ್ತೆ..ಇದು ಅಧಿಕಾರಿಗಳು ಹಾಗೂ ಕಾರ್ಮಿಕರ ನಡುವೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಲೂಬಹುದು..ಸಚಿವ ಶ್ರೀರಾಮುಲು ಎಚ್ಚೆತ್ತುಕೊಂಡು ಆಡಳಿತಶಾಹಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳದಿದ್ದರೆ ಸಚಿವರನ್ನೇ ತಮ್ಮ ಕೈಬೆರಳುಗಳ ತುದಿಯಲ್ಲಿ ಗೊಂದೆಯಂತೆ ಆಡಿಸೋದರಲ್ಲಿ ಅನುಮಾನವೇ ಇಲ್ಲ..

Spread the love
Leave A Reply

Your email address will not be published.

Flash News