INJUSTICE WITH 63 KAS TRAINEES BY MINISTER R.ASHOK….?!: 63 ತರಬೇತಿ “KAS” ಗಳ “ವೃತ್ತಿ-ಜೀವನ”ದೊಂದಿಗೆ “ಸಾಮ್ರಾಟ್ ಅಶೋಕ್” ಚೆಲ್ಲಾಟ..?!

ಪ್ರತಿಷ್ಟಿತ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಕಂದಾಯ ಇಲಾಖೆ ಬಿಗ್ ಶಾಕ್..?! 1 ವರ್ಷದ ತರಬೇತಿ ಪೂರ್ಣಗೊಳಿಸಿದ್ರೂ ಮತ್ತೆ 8 ತಿಂಗಳ ಟ್ರೈನಿಂಗ್ ಅಂತೆ..?!

0
ಕಂದಾಯ ಸಚಿವ ಸಾಮ್ರಾಟ್ ಅಶೋಕ್
ಕಂದಾಯ ಸಚಿವ ಸಾಮ್ರಾಟ್ ಅಶೋಕ್

ಬೆಂಗಳೂರು: ಒಬ್ಬ ಜವಾಬ್ದಾರಿಯುತ ಹಾಗೂ ಹಿರಿಯ ಸಚಿವರೆನಿಸಿಕೊಂಡ ಸನ್ಮಾನ್ಯ ಆರ್ .ಅಶೋಕ್  ನಿಜಕ್ಕೂ ಹೀಗೆ ನಡೆದುಕೊಳ್ಳಬಾರದಿತ್ತು..ಅವರಿಂದ ಇಂತದ್ದೊಂದು ನಡುವಳಿಕೆಯನ್ನು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ.ಸದನದಲ್ಲಿ ತಾವೇ ಹೇಳಿದ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಹೇಳೋದೊಂದು..ಮಾಡೋದೊಂದು ಎನ್ನುವುದನ್ನು ಸಾರಿ ಹೇಳಿದಂತಿದೆ ಅವರ ಧೋರಣೆ..

ತರಬೇತಿ ಅವಧಿಯನ್ನು ಮುಗಿಸಿ ಸೇವೆಗೆ ನಿಯೋಜನೆಗೊಳ್ಳಬೇಕಿದ್ದ ಒಟ್ಟು 63 ಪರೀಕ್ಷಾರ್ಥ ತಹಸೀಲ್ದಾ ರ್ ಗಳ  ವಿಷಯದಲ್ಲಿ ಕಂದಾಯ ಸಚಿವ ಆರ್.ಅಶೋಕ್ ನಡೆದುಕೊಳ್ಳುತ್ತಿರುವ, ಅವರೊಂದಿಗೆ ವ್ಯವಹರಿಸುತ್ತಿರುವ  ರೀತಿನೀತಿಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿವೆ.ಉನ್ನತ ಹಾಗೂ ಜವಾಬ್ದಾರಿಯುತ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ಹುದ್ದೆ ನಿಯೋಜನೆ ಮಾಡುವಲ್ಲಿ ಅವರು ತೋರುತ್ತಿರುವ ನಿರುತ್ಸಾಹ-ನಿರಾಸಕ್ತಿ,ತಮ್ಮ ಸಮಸ್ಯೆ ಹೇಳಿಕೊಂಡು ಭೇಟಿಯಾಗುತ್ತಲೇ ಇರುವ ಅವರನ್ನು ಟ್ರೀಟ್ ಮಾಡುತ್ತಿರುವ ರೀತಿಯೆಲ್ಲಾ ಖುದ್ದು ಪರೀಕ್ಷಾರ್ಥ ತಹಸೀಲ್ದಾರ್ ಗಳಲ್ಲಿ ಬೇಸರ-ಆಕ್ರೋಶ ಮೂಡಿಸುತ್ತಿದೆಯಂತೆ..ಆದರೆ ಅದನ್ನು ಬಹಿರಂಗಗೊಳಿಸಿದ್ರೆ ತಮ್ಮ ಕೆಲಸಕ್ಕೆಲ್ಲಿ ಕುತ್ತು ಬರುತ್ತೋ ಎನ್ನುವ ಕಾರಣಕ್ಕೆ ಎಲ್ಲವನ್ನೂ ತುಟಿ ಕಚ್ಚಿ ಸಹಿಸಿಕೊಳ್ಳುತ್ತಿದ್ದಾರಂತೆ.

ತರಬೇತಿ ಅವಧಿ ವಿಸ್ತರಿಸಿ ಕಂದಾಯ ಇಲಾಖೆ ಹೊರಡಿಸಿರುವ ಆದೇಶ
ತರಬೇತಿ ಅವಧಿ ವಿಸ್ತರಿಸಿ ಕಂದಾಯ ಇಲಾಖೆ ಹೊರಡಿಸಿರುವ ಆದೇಶ
ತರಬೇತಿ ಅವಧಿ ವಿಸ್ತರಿಸಿ ಕಂದಾಯ ಇಲಾಖೆ ಹೊರಡಿಸಿರುವ ಆದೇಶ-1
ತರಬೇತಿ ಅವಧಿ ವಿಸ್ತರಿಸಿ ಕಂದಾಯ ಇಲಾಖೆ ಹೊರಡಿಸಿರುವ ಆದೇಶ-1

2005ನೇ ಸಾಲಿನ ಕೆಎಎಸ್ ಬ್ಯಾಚ್ ನ 63  ಪರೀಕ್ಷಾರ್ಥ ತಹಸೀಲ್ದಾರ್ ಗಳು ಕಳೆದ ಒಂದೂವರೆ ವರ್ಷದಿಂದಲೂ ಎಲ್ಲಾ ಆಯಾಮಗಳಲ್ಲೂ ತರಬೇತಿ ಪೂರ್ಣಗೊಳಿ ಸಿದ್ದಾರೆ.ಹುದ್ದೆಗೆ ನಿಯೋಜನೆಗೊಂಡು ಸ್ವತಂತ್ರವಾಗಿ ಆಡಳಿತ ನಡೆಸುವುದಕ್ಕೆ ಬೇಕಾದ ಎಲ್ಲಾ ತಾಲೀಮು ಪಡೆದಿದ್ದೂ ಆಗಿದೆ.ಆದ್ರೆ ಇನ್ನೇನು ಹುದ್ದೆಗೆ ನಿಯೋಜನೆ ಗೊಳ್ಳಬೇಕು ಎನ್ನುವಷ್ಟರಲ್ಲೇ ಎಲ್ಲಾ 63 ಅಧಿಕಾರಿಗಳಿಗೂ ಜಿಲ್ಲಾ ತರಬೇತಿಗೆ ಮರುನಿಯೋಜನೆ ಮಾಡಲಾಗಿದೆ.ಇದೆಲ್ಲವೂ ಸಚಿವ ಆರ್.ಅಶೋಕ್ ಅವರ ಅಣತಿಯಂತೆ ನಡೆದಿದೆ ಎನ್ನುವುದು ಹೆಸರು ಹೇಳಲಿಚ್ಚಿಸದ ಪರೀಕ್ಷಾರ್ಥ ತಹಸೀಲ್ದಾರ್ ಗಳ ಆರೋಪ.

ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ.48 ಎಎಸ್ ಡಿ.2020 ದಿನಾಂಕ:22-02-2021 ನ್ನು ಉಲ್ಲೇಖಿಸಿ 01-10-2021 ಕ್ಕೆ ಅನ್ವಯವಾಗುವಂತೆ ಕಾರ್ಯ ನಿರ್ವಹಣೆಗೆ ಪೂರಕವಾದ ವಿಷಯಗಳಿಗೆ ಸಂಬಂಧಿಸಿದಂತೆ  ಎನ್ನುವ ಸಾಲಿನ ಆದೇಶವನ್ನು ಹೊರಡಿಸಿ ಎಲ್ಲಾ 63 ಅಧಿಕಾರಿಗಳಿಗೂ ರವಾನೆ ಮಾಡಲಾಗಿದೆ. ಈಗಾಗಲೇ ಎಲ್ಲಾ ರೀತಿಯ ತರಬೇತಿ ಮುಗಿಸಿದ  63  ಪರೀಕ್ಷಾರ್ಥ ತಹಸೀಲ್ದಾರ್ ಗಳು ಈ ಆದೇಶದಿಂದ ಕಂಗಾಲಾಗಿದ್ದಾರಲ್ಲದೇ ಆಡಳಿತ ವ್ಯವಸ್ಥೆಗೆ ಕೆಂಡಾಮಂಡಲ ವಾಗಿ ಕೊತ ಕೊತ ಕುದಿಯುತ್ತಿದ್ದಾರೆ.

ಮತ್ತೆ ತರಬೇತಿ ಅವಧಿ ವಿಸ್ತರಣೆಗೊಳಪಡುವ 63 ಕೆಎಎಸ್ ಪರೀಕ್ಷಾರ್ಥ ತಹಸೀಲ್ದಾರ್ ಗಳ ಪಟ್ಟಿ
ಮತ್ತೆ ತರಬೇತಿ ಅವಧಿ ವಿಸ್ತರಣೆಗೊಳಪಡುವ 63 ಕೆಎಎಸ್ ಪರೀಕ್ಷಾರ್ಥ ತಹಸೀಲ್ದಾರ್ ಗಳ ಪಟ್ಟಿ
ಮತ್ತೆ ತರಬೇತಿ ಅವಧಿ ವಿಸ್ತರಣೆಗೊಳಪಡುವ 63 ಕೆಎಎಸ್ ಪರೀಕ್ಷಾರ್ಥ ತಹಸೀಲ್ದಾರ್ ಗಳ ಪಟ್ಟಿ
ಮತ್ತೆ ತರಬೇತಿ ಅವಧಿ ವಿಸ್ತರಣೆಗೊಳಪಡುವ 63 ಕೆಎಎಸ್ ಪರೀಕ್ಷಾರ್ಥ ತಹಸೀಲ್ದಾರ್ ಗಳ ಪಟ್ಟಿ
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್.

ಅಂದ್ಹಾಗೆ 63  ಪರೀಕ್ಷಾರ್ಥ ತಹಸೀಲ್ದಾರ್ ಗಳಿಗೆ ನಿಯೋಜಿಸಲಾಗಿರುವ ತರಬೇತಿ ಹಾಗೂ ಅದರ ಅವಧಿ ಕೆಳಕಂಡಂತಿದೆ.

ಭೂಮಿ ಸೇವೆ..ಮೋಜಣಿ ಸೇವೆ ಒದಗಿಸುವ ಅಟಲ್ ಜೀ ಸ್ನೇಹಿ ನಿರ್ದೇಶನಾಲಯದಲ್ಲಿ 1 ತಿಂಗಳ ತರಬೇತಿ,ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಯಲ್ಲಿ 2 ವಾರ,ಪೌರಾಡಳಿತ  ವಿಷಯವನ್ನೊಳಗೊಂಡ ನಿರ್ದೇಶನಾಲಯದಲ್ಲಿ 1 ತಿಂಗಳು,ಬಾಗಲಕೋಟೆ-ಬಿಜಾಪುರದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ಅನ್ವಯವಾಗುವಂಥ ಕಚೇರಿಯಲ್ಲಿ 1 ತಿಂಗಳು,ಭೂ ದಾಖಲೆ-ಭೂ ಮಾಪನ ಇಲಾಖೆಯಲ್ಲಿ 1 ತಿಂಗಳು,ಸರ್ವೆಯ ಮತ್ತೊಂದು ಭಾಗವಾದ ಸ್ವಾಮಿತ್ವ-ಡ್ರೋಣ್ ಸರ್ವೆ ಕುರಿತಾದ ಕಚೇರಿಯಲ್ಲಿ 2 ವಾರ,ಸರ್ವೆ ಆಫ್ ಇಂಡಿಯಾ ಸಂಬಂಧಿ ಕಚೇರಿಯಲ್ಲಿ 2 ವಾರ,ಕಾವೇರಿ ಯೋಜನೆಯ ಗಣಕೀಕೃತ ಕಚೇರಿಯಲ್ಲಿ 2 ವಾರ,ಫೀಲ್ಡ್ ಸರ್ವೆಗೆ 2 ವಾರ,ಕೆರೆ ಒತ್ತುವರಿ ಸಂಬಂಧಿ ಕಾರ್ಯಕ್ಕೆ 2 ವಾರ,ನೊಂದಣಿ ವಿಚಾರಕ್ಕೆ ಸಂಬಂಧಿಸಿದ ಕಚೇರಿಯಲ್ಲಿ 2ವಾರ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿನ ವಿಷಯಗಳ ಬಗ್ಗೆ ಮಾಹಿತಿ ಪಡೆಯುವ ಕಾರ್ಯಕ್ಕೆ 2 ವಾರಗಳ ತರಬೇತಿಗೆ 63  ಪರೀಕ್ಷಾರ್ಥ ತಹಸೀಲ್ದಾರ್ ಗಳನ್ನು ನಿಯೋಜಿಸಲಾಗಿದೆ ಎನ್ನುವ ಸುತ್ತೋಲೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ(ಸೇವೆ-3)ಗಳ ಮೂಲಕ 29-09-2021 ರಂದು ರವಾನೆಯಾಗಿದೆ.

ಒಂದು ಹಂತದಲ್ಲಿ,ಇದನ್ನು ತರಬೇತಿಯ ಭಾಗ ಎಂದೇ  ಪರಿಗಣಿಸೋಣ,ಆದ್ರೆ ಮೇಲ್ಕಂಡ ವಿಷಯಗಳಲ್ಲಿ ತರಬೇತಿಯನ್ನು ಕಳೆದ 1ವರೆ ವರ್ಷದಲ್ಲಿ ನೀಡಿಯಾಗಿದೆಯಲ್ಲ,ಅದನ್ನು ಪುನರಾವರ್ತಿಸುವ ಅಗತ್ಯ ನಿಜಕ್ಕೂ ಇದೆಯೇ..? ಎನ್ನುವುದು 63  ಪರೀಕ್ಷಾರ್ಥ ತಹಸೀಲ್ದಾರ್ ಗಳ ಪ್ರಶ್ನೆ.

ಹಾಗೆ ನೋಡಿದರೆ ಇವರನ್ನು ಅದಾಗಲೇ ವಿವಿಧ ಪ್ರದೇಶಗಳಲ್ಲಿ ನಿರ್ಧಿಷ್ಟ ಹುದ್ದೆಗಳಿಗೆ ನಿಯೋಜಿಸ ಬೇಕಿತ್ತು.ಆದರೆ ಆ ಕೆಲಸ ಮಾಡಬೇಕಾದ ಸಚಿವ ಅಶೋಕ್ ಅವರ ಪ್ರಕಾರ ಹುದ್ದೆಗಳೇ ಖಾಲಿ ಇಲ್ಲವಂತೆ.ಇದೇ ಉತ್ತರ 63  ಪರೀಕ್ಷಾರ್ಥ ತಹಸೀಲ್ದಾರ್ ಗಳಿಗೂ ಸಚಿವರಿಂದಲೇ ದೊರಕಿದೆಯಂತೆ ಎನ್ನಲಾಗಿದೆ. ತರಬೇತಿ ಅವಧಿ ವಿಸ್ತರಣೆ ಮಾಡಿದ ಸರ್ಕಾರದ ಕ್ರಮವನ್ನು ಅವರು ಸಮರ್ಥಿಸಿಕೊಂಡಿ ಯೂ ಇದ್ದಾರಂತೆ.ಅಲ್ಲದೇ ಈ ತಹಸೀಲ್ದಾರ್ ಅಭ್ಯರ್ಥಿಗಳನ್ನು ಕ್ಷುಲ್ಲಕ ಎನ್ನುವಂತೆ ನಡೆಸಿಕೊಂಡಿದ್ದಾರೆನ್ನುವ ಮಾತುಗಳು ಕಂದಾಯ ಇಲಾಖೆಯ ಕ್ಯಾಂಪಸ್ ನಿಂದಲೇ ಕೇಳಿಬಂದಿದೆ.

ಎಮ್ಮೆಲ್ಸಿ ಶ್ರೀಕಂಠೇಗೌಡ ಕೇಳಿದ್ದ ಪ್ರಶ್ನೆಯ ನಮೂನೆ
ಎಮ್ಮೆಲ್ಸಿ ಶ್ರೀಕಂಠೇಗೌಡ ಕೇಳಿದ್ದ ಪ್ರಶ್ನೆಯ ನಮೂನೆ

ಅಶೋಕ್ ಅವರು ಹೇಳಿದಂತೆಯೇ ನಿಯೋಜನೆ ಮಾಡಲು ಹುದ್ದೆಗಳು ಖಾಲಿ ಇಲ್ಲ ಅಂತಲೇ ಇಟ್ಟುಕೊಳ್ಳೋಣ,ಆದ್ರೆ ಇದೇ ಕಂದಾಯ ಸಚಿವರು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ 22-09-2021 ರಂದು ಜೆಡಿಎಸ್ ನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇ ಗೌಡ ಅವರ ಪ್ರಶ್ನಗೆ ಕೊಟ್ಟ ಉತ್ತರದ ಪ್ರತಿಯನ್ನು ಗಮನಿಸಿದ್ರೆ ಸಾಮ್ರಾಟ್ ಅಶೋಕ್ ಹೇಳ್ತಿರುವುದೆಲ್ಲಾ ಸುಳ್ಳು..ಹುದ್ದೆ ಖಾಲಿ ಇಲ್ಲ ಎನ್ನುವುದು ಕೇವಲ ಸಬೂಬು ಅಷ್ಟೇ..ನಿಯೋಜನೆ ಮಾಡಲು ಅವರಿಗೆ ಮನಸಿಲ್ಲ ಎನ್ನುವುದು ಗೊತ್ತಾಗುತ್ತೆ..ನಿಯೋಜನೆ ಮಾಡದಿರುವ ಅವರ ಧೋರಣೆ ಹಿಂದೆ ಯಾವ ಉದ್ದೇಶ ಅಡಗಿದೆ ಎನ್ನುವುದು ಮಾತ್ರ ಅವರಿಗೇ ಗೊತ್ತು.

ಜೆಡಿಎಸ್ ಎಮ್ಮೆಲ್ಸಿ ಶ್ರೀಕಂಠೇಗೌಡ
ಜೆಡಿಎಸ್ ಎಮ್ಮೆಲ್ಸಿ ಶ್ರೀಕಂಠೇಗೌಡ

ಶ್ರೀಕಂಠೇ ಗೌಡ ಅವರು,ಕಂದಾಯ ಇಲಾಖೆಯ ವಿವಿಧ ಸ್ಥರಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎನ್ನುವುದರ ಬಗ್ಗೆ ಪ್ರಶ್ನೆ ಕೇಳಿದ್ದರು.ಅದರ ಭಾಗವಾಗಿ ಅಶೋಕ್ ಅವ್ರೇ ನೀಡಿದ್ದ ಉತ್ತರದ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.

ಸನ್ಮಾನ್ಯ ಅಶೋಕ್ ಅವರು ಶ್ರೀಕಂಠೇಗೌಡ ಅವರಿಗೆ ಲಿಖಿತ ರೂಪದಲ್ಲಿ ಉತ್ತರ ನೀಡುವ ವೇಳೆ.ತಹಸೀಲ್ದಾರ್ ಗ್ರೇಡ್-1 ರಲ್ಲಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗದಲ್ಲಿ 7 ಹುದ್ದೆ,ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿಭಾಗದಲ್ಲಿ  7, ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗದಲ್ಲಿ   3, ಹಾಗೂ ಪ್ರಾದೇಶಿಕ ಆಯುಕ್ತರು ಮೈಸೂರು  ವಿಭಾಗದಲ್ಲಿ 10 ಒಟ್ಟು 27 ಹುದ್ದೆಗಳು ಖಾಲಿ ಇರುವುದಾಗಿ ಹೇಳಿದ್ದರು.

ತಹಸೀಲ್ದಾರ್ ಗ್ರೇಡ್-2 ರಲ್ಲಿ, ಬೆಂಗಳೂರು ಪ್ರಾದೇಶಿಕ ಆಯುಕ್ತರ ವಿಭಾಗದಲ್ಲಿ 33 ಹುದ್ದೆ,ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿಭಾಗದಲ್ಲಿ  27, ಕಲಬುರಗಿ ಪ್ರಾದೇಶಿಕ ಆಯುಕ್ತರು,   ವಿಭಾಗದಲ್ಲಿ   38, ಹಾಗೂ ಮೈಸೂರು  ಪ್ರಾದೇಶಿಕ ಆಯುಕ್ತರು  ವಿಭಾಗದಲ್ಲಿ 37 ಒಟ್ಟು 135  ಹುದ್ದೆಗಳು ಖಾಲಿ ಇರುವುದಾಗಿ ಹೇಳಿದ್ದರು.

ಸನ್ಮಾನ್ಯ ಸಚಿವ ಆರ್.ಅಶೋಕ್ ಅವ್ರೇ ಲಿಖಿತವಾಗಿ ಕೊಟ್ಟಂತ ಉತ್ತರದಲ್ಲಿ ತಹಸೀಲ್ದಾರ್ ಗ್ರೇಡ್-1 ರಲ್ಲಿ 27 ಹಾಗೂ ತಹಸೀಲ್ದಾರ್ ಗ್ರೇಡ್-2 ರಲ್ಲಿ ವಿವಿಧ ಪ್ರಾದೇಶಿಕ ವಿಭಾಗಗಳಲ್ಲಿ 135 ಹುದ್ದೆಗಳು..ಅಂದ್ರೆ ಒಟ್ಟು 162 ಹುದ್ದೆಗಳು ಖಾಲಿ ಇರುವುದಾಗಿ ಹೇಳಿದ್ದರು.

ತಹಸೀಲ್ದಾರ್ ಗ್ರೇಡ್-1 ಹಾಗೂ ಗ್ರೇಡ್-2 ರಲ್ಲಿ ಒಟ್ಟು 162 ಹುದ್ದೆಗಳು ಖಾಲಿ ಇರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಮತ್ತೊಂದು ಬೇಕಾ.. ಸಚಿವ ಅಶೋಕ್ ಅವ್ರೇ..
ತಹಸೀಲ್ದಾರ್ ಗ್ರೇಡ್-1 ಹಾಗೂ ಗ್ರೇಡ್-2 ರಲ್ಲಿ ಒಟ್ಟು 162 ಹುದ್ದೆಗಳು ಖಾಲಿ ಇರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಮತ್ತೊಂದು ಬೇಕಾ.. ಸಚಿವ ಅಶೋಕ್ ಅವ್ರೇ..

ಪರಿಸ್ತಿತಿ ಹೀಗಿರುವಾಗ ಹುದ್ದೆಗಳೇ ಖಾಲಿ ಇಲ್ಲ ಎಂದ್ಹೇಳುವುದು ಅಶೋಕ್ ಅವರಂಥವರಿಗೆ ಗೌರವ-ಶೋಭೆ ತರುವಂತದ್ದೇ..ಖಂಡಿತಾ ಇಲ್ಲ,ಅಶೋಕ್ ಹಾಗೆ ಹೇಳುವುದರ ಹಿಂದಿನ “ಉದ್ದೇಶ..?!” ಏನಿತ್ತೆನ್ನುವುದು ಅವರಿಗೇ ಗೊತ್ತು.ಆದ್ರೆ ಕೆಲಸ ಮಾಡುವ ಉಮೇದಿನಲ್ಲಿರುವ 63 ಉತ್ಸಾಹಿಗಳಿಗೆ ಹುದ್ದೆ ಖಾಲಿ ಇಲ್ಲ..ನಿಮ್ಮ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಹೋಗಿ ಭೇಟಿ ಮಾಡಿ..ನನ್ನ ಬಳಿ ಬರಬೇಡಿ..ಟ್ರೈನಿಂಗ್ ಮುಂದುವರೆಸಲಿಕ್ಕೇನು ಕಷ್ಟ ಎನ್ನುವ ಧಾಟಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂಬುದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಗೌಡ ಅವರ ಅಭಿಪ್ರಾಯ.

ಸಚಿವ ಆರ್.ಅಶೋಕ್ ಅವರ ಧೋರಣೆಯನ್ನು ವಿಪಕ್ಷಗಳು ಕೂಡ ತೀವ್ರವಾಗಿ ಖಂಡಿಸಿವೆ.ಕೆಲಸ ಮಾಡುವ ಉತ್ಸಾಹಿಗಳಿಗೆ ತಣ್ಣಿರೆರಚುವ ಕೆಲಸವನ್ನು ಅಶೋಕ್ ಮಾಡಬಾರದು..ಉಡಾಫೆ-ನಿರ್ಲಕ್ಷ್ಯ ಪ್ರದರ್ಶಿಸುವುದು ಮೊದಲಿಂದಲೂ ಅಶೋಕ್ ಜಾಯಮಾನ,ಸಚಿವ ಸ್ಥಾನಮಾನದ ಘನತೆ-ಗಾಂಭೀರ್ಯವೇ ಗೊತ್ತಿಲ್ಲದ ಅಶೋಕ್ ಅಂಥವರನ್ನು ಸಚಿವರನ್ನಾಗಿಸಿದರೆ ಇನ್ನೇನಾಗುತ್ತೆ..ಇದೇ ಆಗೋದಲ್ವೇ..ಅಶೋಕ್ ಯಾವ ಹಿನ್ನಲೆಯಲ್ಲಿ ಹುದ್ದೆಗಳು ಖಾಲಿ ಇಲ್ಲ ಎನ್ನುತ್ತಿದ್ದಾರೋ ಗೊತ್ತಿಲ್ಲ,ಹಾಗಾದ್ರೆ ಅವರು ಕೊಟ್ಟ ಉತ್ತರವೇ ತಪ್ಪಾ..? ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕೆನ್ನುತ್ತಾರೆ ಕಾಂಗ್ರೆಸ್-ಜೆಡಿಎಸ್ ಎಮ್ಮೆಲ್ಸಿ-ಎಮ್ಮೆಲ್ಲೆಗಳು.

ಎಮ್ಮೆಲ್ಸಿ ಶ್ರೀಕಂಠೇಗೌಡ ಕೇಳಿದ್ದ ಪ್ರಶ್ನೆಗೆ ಕಂದಾಯ ಸಚಿವ ಆರ್.ಅಶೋಕ್ ಕೊಟ್ಟಿದ ವಿವರಣೆಯ ಪ್ರತಿ
ಎಮ್ಮೆಲ್ಸಿ ಶ್ರೀಕಂಠೇಗೌಡ ಕೇಳಿದ್ದ ಪ್ರಶ್ನೆಗೆ ಕಂದಾಯ ಸಚಿವ ಆರ್.ಅಶೋಕ್ ಕೊಟ್ಟಿದ ವಿವರಣೆಯ ಪ್ರತಿ

ಒಟ್ಟಿನಲ್ಲಿ ದಕ್ಷ-ಪ್ರಾಮಾಣಿಕ-ನಿಷ್ಟೆಯಿಂದ ಕೆಲಸ ಮಾಡಬೇಕೆನ್ನುವ ಸಂಕಲ್ಪ-ಉಮೇದಿನಲ್ಲಿದ್ದ 63  ಪರೀಕ್ಷಾರ್ಥ ತಹಸೀಲ್ದಾರ್ ಗಳನ್ನು ತರಬೇತಿ ಅವಧಿ ವಿಸ್ತರಣೆ ನೆವದಲ್ಲಿ ಮಾನಸಿಕ ಹಾಗೂ ನೈತಿಕವಾಗಿ ಕುಗ್ಗಿಸುವ ಕೆಲಸ ಮಾಡಿದ ಆರೋಪಕ್ಕೆ ಅಶೋಕ್ ತುತ್ತಾಗಿರುವುದಂತೂ ಸತ್ಯ.

ಸಹಜವಾಗಿ ಕೆಎಎಸ್ ಪರೀಕ್ಷಾರ್ಥ ತಹಸೀಲ್ದಾರ್ ಗಳಿಗೆ ತರಬೇತಿಗೆ ನಿಗಧಿಯಾಗಿರುವ ಅವಧಿ ಒಂದು ವರ್ಷ,ಪ್ರೊಬೆಷನರಿ ಅವಧಿ 2 ವರ್ಷವಾಗಿರುತ್ತೆ.ಹಾಗೆ ನೋಡಿದ್ರೆ ಕೊವಿಡ್ ಸಂದರ್ಭದಲ್ಲಿ ನಿರ್ವಹಿಸಿದ ಕಾರ್ಯದ ಅವದಿಯೂ ಸೇರಿದಂತೆ ತೆಗೆದುಕೊಂಡಿರುವ ತರಬೇತಿ 1 ವರ್ಷಕ್ಕಿಂತ ಹೆಚ್ಚಾಗಿದೆ. ಏಕೆಂದರೆ 2015ರ ಬ್ಯಾಚ್ ನ ಪರೀಕ್ಷಾರ್ಥಿಗಳು  ಎಂದು 2020ರ ಮೇ-ಜೂನ್ ರಂದು ತರಬೇತಿಗೆ ರಿಪೋರ್ಟ್ ಮಾಡಿಕೊಂಡು ಜೂನ್ ಅಂತ್ಯಕ್ಕೆ ಮೈಸೂರಿನ ಆಡಳಿತಾತ್ಮಕ ತರಬೇತಿ ಕೇಂದ್ರ(ಎಟಿಐ) ಹೋಗಬೇಕಿತ್ತು.ಆದರೆ ಕೊರೊನಾ ಮೊದಲ ಅಲೆಯ ಕಾರಣಕ್ಕೆ ಎಲ್ಲಾ 63  ಪರೀಕ್ಷಾರ್ಥ ತಹಸೀಲ್ದಾರ್  ಗಳನ್ನು ಬಿಬಿಎಂಪಿ ಡ್ಯೂಟಿಗೆ ಹಾಕಲಾಯಿತು.ನವೆಂಬರ್ ಅಂತ್ಯಕ್ಕೆ ಅಲ್ಲಿಂದ ರಿಲೀವ್ ಮಾಡಲಾಯಿತು.ಮೈಸೂರಿನಲ್ಲಿ ಡಿಸೆಂಬರ್-ಜನವರಿ-ಫೆಬ್ರವರಿ-ಮೂರು ತಿಂಗಳು ತರಬೇತಿ ನೀಡಲಾಯಿತು.

ಅಲ್ಲಿ 5 ವಾರ,ಸಾಮಾನ್ಯ ವೃತ್ತಿ ಬುನಾದಿ ತರಬೇತಿ, ನಾಲ್ಲು ವಾರ ಸರ್ವೆ ತರಬೇತಿಯನ್ನು ಮೈಸೂರಿನ ಹಡಜಣ ಕೇಂದ್ರದಲ್ಲಿ ನೀಡಲಾಯಿತು. ಅದೇ ಮೈಸೂರಿನಲ್ಲಿ 2 ವಾರ ಜಾಬ್ ಕೋರ್ಸ್ ತರಬೇತಿ ನೀಡಲಾಯಿತು. ನಂತರ ಫೆಬ್ರವರಿ 22 ರಿಂದ ಸೆಪ್ಟೆಂಬರ್ 29 ರವರೆಗೆ  ಅಂದ್ರೆ 7 ವರೆ ತಿಂಗಳು ಜಿಲ್ಲೆಗಳಲ್ಲಿ ತರಬೇತಿ ನೀಡಲಾಯಿತು. 1 ವರ್ಷಕ್ಕೂ ಮಿಗಿಲಾಗಿ ತರಬೇತಿ ಅವಧಿ ಪೂರ್ಣಗೊಳಿಸಿದರೂ ಮತ್ತೆ ಇನ್ನೊ ಸುಮಾರು 8 ತಿಂಗಳು ತರಬೇತಿಗೆ ನಿಯೋಜಿಸಿರುವುದು ಯಾವ ನ್ಯಾಯ ಎನ್ನುವ ಪ್ರಶ್ನೆ ಸೃಷ್ಟಿಯಾಗುವುದು ಸರ್ವೇ ಸಾಮಾನ್ಯವಲ್ಲವೇ..ಇದಕ್ಕೆ ಸರ್ಕಾರ ಹಾಗೂ ಸಚಿವ ಅರ್.ಅಶೋಕ್ ಅವ್ರೇ ಉತ್ತರಿಸಬೇಕಿದೆಯಷ್ಟೇ..

 

Spread the love
Leave A Reply

Your email address will not be published.

Flash News