BIG TWIST TO PHONETAPPING SCAM,COURT ORDERS FOR REINVESTIGATION:”ಫೋನ್ ಕದ್ದಾಲಿಕೆ” ಪ್ರಕರಣಕ್ಕೆ “ಬಿಗ್ ಟ್ವಿಸ್ಟ್”-ಮರು ತನಿಖೆಗೆ ಕೋರ್ಟ್ ಆದೇಶ-IPS ಅಲೋಕ್ ಕುಮಾರ್ ಗೆ ಸಂಕಷ್ಟ-ಪತ್ರಕರ್ತೆ ಕುಶಾಲಗೂ ಸಂಕಟ..?!

ಎರಡು ವರ್ಷಗಳ ಸಿಬಿಐ ತನಿಖೆಯ ಪಾರದರ್ಶಕತೆಗೆ ಕೋರ್ಟ್ ಅಸಮಾಧಾನ-ಮರು ತನಿಖೆ ಮಾಡಿ ರಿಪೋರ್ಟ್ ಸಲ್ಲಿಸುವಂತೆ ಖಡಕ್ ಆದೇಶ..

0

ಬೆಂಗಳೂರು:ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಅವರಿಗೆ ಸಾಥ್ ಕೊಟ್ಟ ಆರೋಪ ಎದುರಿಸುತ್ತಿರುವ ಮಹಿಳಾ ಪತ್ರಕರ್ತೆ ಕುಶಾಲ ಸತ್ಯನಾರಾಯಣ್ ಗೆ ಸಂಕಷ್ಟ ಎದುರಾಗಿದೆ.ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಒಂದಷ್ಟು ರಿಲೀಫ್ ಸಿಕ್ಕು ರಿಲ್ಯಾಕ್ಸ್ ಆಗಿದ್ದ ಇಬ್ಬರಿಗೂ ಮತ್ತೆ ಸಂಕಟ ಶುರುವಾಗಿದೆ.ಇದಕ್ಕೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ಹೊರಡಿಸಿರುವ ಆದೇಶವೇ ಕಾರಣ.

ಅಲೋಕ್ ಕುಮಾರ್ ಮತ್ತು ಕುಶಾಲ ಸತ್ಯನಾರಾಯಣ ಇಬ್ಬರಿಗೂ ಕ್ಲೀನ್ ಚಿಟ್ ನೀಡುವ ರೀತಿಯಲ್ಲಿ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ನ್ನು ಪ್ರಶ್ನಿಸಿ ಪ್ರಕರಣದಲ್ಲಿ ಆಪಾದಿತರಾಗಿದ್ದ ಮತ್ತೋರ್ವ ಐಪಿಎಸ್ ಭಾಸ್ಕರ ರಾವ್ ಅರ್ಜಿ ಸಲ್ಲಿಸಿದ್ದರು.ಅರ್ಜಿಯ ಪೂರ್ವಾಪರವನ್ನು ಅವಲೋಕಿಸಿದ ನ್ಯಾಯಾಲಯ ಬಿ ರಿಪೋರ್ಟನ್ನು ತಿರಸ್ಕರಿಸಿ ಮರು ತನಿಖೆಗೆ ಆದೇಶಿಸಿದೆ.ಇದರಿಂದಾಗಿ ಅಲೋಕ್ ಹಾಗೂ ಕುಶಾಲ ಅವರಿಗೆ ಸಂಕಷ್ಟ ಶುರುವಾದಂತಿದೆ.

ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ಅಪೂರ್ಣವಾಗಿದೆ.ಪಾರದರ್ಶಕವಾಗಿ ತನಿಖೆ ನಡೆದಂತೆ ತೋರುತ್ತಿಲ್ಲ.ಅವಸರವಸರವಾಗಿ ವರದಿ ಸಲ್ಲಿಸಿದಂತಿದೆ.ಎರಡು ವರ್ಷಗಳ ಕಾಲ ತನಿಖೆ ನಡೆಸಿದ ಸಿಬಿಐ ತಂಡದ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಬಿ ರಿಪೋರ್ಟನ್ನು ರದ್ದು ಮಾಡಿ ಮರು ತನಿಖೆ ಮಾಡಿ ಶೀಘ್ರವೇ ವರದಿ ಸಲ್ಲಿಸುವಂತೆ ಸೂಚಿಸಿದೆ.

ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಭಾಸ್ಕರರಾವ್ ಸಲ್ಲಿಸಿದ್ದ ತಕರಾರು ಅರ್ಜಿ
ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಭಾಸ್ಕರರಾವ್ ಸಲ್ಲಿಸಿದ್ದ ತಕರಾರು ಅರ್ಜಿ
ಮರುತನಿಖೆಗೆ ಆದೇಶಿಸಿ ನ್ಯಾಯಾಲಯ ನೀಡಿರುವ ಆದೇಶ ಪ್ರತಿ
ಮರುತನಿಖೆಗೆ ಆದೇಶಿಸಿ ನ್ಯಾಯಾಲಯ ನೀಡಿರುವ ಆದೇಶ ಪ್ರತಿ

ತಮ್ಮ ಫೋನ್ ಕರೆಯನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ದೂರು ಸಲ್ಲಿಸಿದ್ದ ಹಿನ್ನಲೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು.ಎರಡು ವರ್ಷಗಳ ವಿಚಾರಣೆ ಬಳಿಕ ಸಿಬಿಐ ಅಧಿಕಾರಿಗಳು ಸಿಟಿ ಸಿವಿಲ್ ಕೋರ್ಟ್​ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದಕ್ಕೆ ಅಸಮಾಧಾನಗೊಂಡ ಎಡಿಜಿಪಿ ಭಾಸ್ಕರ್ ರಾವ್ ತಕರಾರು ಅರ್ಜಿ ಸಲ್ಲಿಸಿದ್ದರು.ಮರು ತನಿಖೆಗೆ ಆದೇಶ ನೀಡುವಂತೆ ಮನವಿ ಮಾಡಿದ್ದರು. ಸಿಬಿಐ ಮತ್ತೊಮ್ಮೆ ತನಿಖೆ ನಡೆಸಬೇಕು ಅಥವಾ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು.

ಅಲೋಕ್ ಕುಮಾರ್ ಮತ್ತು ಪತ್ರಕರ್ತೆ ಕುಶಾಲ ಅವರಿಬ್ಬರ ವಿರುದ್ಧ ಸಾಕ್ಷಿಗಳು ಇವೆ,ನನ್ನ ತೇಜೋವಧೆ ಮಾಡೊಕ್ಕೆ ಇಬ್ಬರೂ ಸೇರಿ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ.ಇಲಾಖೆಯಲ್ಲಿ ಇದ್ದುಕೊಂಡೇ ಇಲಾಖೆಯ ಘನತೆ-ಗಾಂಭೀರ್ಯವನ್ನು ಅಲೋಕ್ ಕುಮಾರ್ ಮಣ್ಣುಪಾಲು ಮಾಡಿದ್ದಾರೆ.

ಅದಕ್ಕಾಗಿ ಪತ್ರಕರ್ತೆ  ಕುಶಾಲ ಸತ್ಯನಾರಾಯಣ ಅವರನ್ನು ಬಳಸಿಕೊಂಡಿದ್ದಾರೆ.ಕುಶಾಲ ಕೂಡ ತನ್ನ ವೃತ್ತಿಯ ಪಾವಿತ್ರ್ಯತೆಯನ್ನು ಮಣ್ಣುಪಾಲು ಮಾಡಿದ್ದಾರೆ.ಇವರಿಬ್ಬರು ಸೇರಿ ನಡೆಸಿದ ಮಹಾಪಿತೂರಿಯ ಸತ್ಯ ಜಗಜ್ಜಾಹೀರಾಗಬೇಕು.ಕುಶಾಲ ಬಳಿ ಆ ಫೋನ್ ಕದ್ದಾಲಿಕೆ ಸಾಕ್ಷ್ಯ ಸಿಕ್ಕಿದ್ದಾದರೂ ಹೇಗೆ..?ಅದನ್ನು ನೀಡಿದವರು ಅಲೋಕ್ ಕುಮಾರ್ ಅವ್ರೇ ಎಂಬ ದಾಟಿಯ ತಮ್ಮ ಅಬಿಪ್ರಾಯನ್ನು ತಕರಾರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅಷ್ಟು ಮಾತ್ರವಲ್ಲ ಭಾಸ್ಕರ್ ರಾವ್ ವಕೀಲರು ಕೂಡ ತಮ್ಮ ಫೋನ್ ಕದ್ದಾಲಿಕೆ ಆಗಿದೆ.ಇಷ್ಟೊಂದು ಗಂಭೀರವಾದ ಪ್ರಕರಣದಲ್ಲಿ ಸಿಬಿಐ ಕೂಡ ಗಂಭೀರವಾಗಿ ವರ್ತಿಸಬೇಕು..ಆದ್ರೆ ಅದಾಗಿಲ್ಲ..ಹಾಗಾಗಿ  ಮರು ತನಿಖೆಗೆ ಆದೇಶಿಸಲೇಬೇಕೆನ್ನುವ ಮನವಿಯನ್ನು ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ಫೋನ್ ಕದ್ದಾಲಿಕೆ ವಿಚಾರದಲ್ಲಿ ಮರು ತನಿಖೆಗೆ ನ್ಯಾಯಾಲಯ ಆದೇಶಿಸಿರುವುದು,ಸಿಬಿಐಗೆ ದೊಡ್ಡ ಮುಖಭಂಗ ಉಂಟುಮಾಡಿದೆ.ಸಿಬಿಐ ತನಿಖೆಯ ಪಾರದರ್ಶಕತೆಯೇ ಪ್ರಶ್ನೆಗೀಡಾಗಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ನಾವ್ ಸೇಫ್ ಆದೆವು ಎಂದುಕೊಂಡು ನೆಮ್ಮದಿಯಿಂದ ಇದ್ದ ಅಲೋಕ್ ಕುಮಾರ್ ಮತ್ತು ಪತ್ರಕರ್ತೆ ಕುಶಾಲ ಸತ್ಯನಾರಾಯಣ ಅವರ ನೆಮ್ಮದಿ ಭಂಗವಾಗಿದೆ.

Spread the love
Leave A Reply

Your email address will not be published.

Flash News